Tuesday, August 11, 2009

ನಾನು ಹೋಗಿ ಬರಲಾ.........

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

21 comments:

Ramesh S Perla said...

Please read your this post once again..

Ramesh S Perla, Mangalore

bharadwaja said...

sir,
it was heart wrenching to read your article. you are one of the journalist whom I respect and admire much. Life must move on. you have left your baby, what next? please let us know of your next project, waiting with baited breath! all the best..

chandru said...

hai namaskara,
nanu obba ptrakartha nimm vahinige yaruu baralu siddarilla emba nimm mathgu thappu. nimage nimmavre bekithu.
parinama?
nijakku channagide.

chandru.

ಸುಶ್ರುತ ದೊಡ್ಡೇರಿ said...

"..ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ"
-ishta aaythu saalu.

supa said...

ನಮಸ್ಕಾರಾ ರೀ ಸರ್‌..ಸರ್‌ ನಿಮ್ಮ ಸ್ನೇಹಶೀಲ ಪ್ರವೃತ್ತಿಯೇ ನಮ್ಮನ್ನ ಇಷ್ಟು ದಿನ ಕಟ್ಟಿಹಾಕಿದ್ದು.ಸರ್‌ ನನಗೆ ಸಾಹಿತ್ಯ ಬರೆಯೋದಕ್ಕೆ ಬರಲ್ಲ.ಆದರೂ "ನಾನು ಹೋಗಿ ಬರಲಾ" ಓದಿ ಸುಮ್ಮನಿರಲು ಆಗಲಿಲ್ಲಾ.ಸರ್‌ ಸಂತೋಷ ಇರಲಿ ದುಃಖ ಇರಲಿ ಸರ್‌ ಅಂತಾ ಬಂದಾಗ ನೆಮ್ಮದಿಯ ಸಾಂತ್ವನದ ಮಾತುಗಳನ್ನ ಹೇಳಿ ಕಣ್ಣೀರು ಒರೆಸಿದ್ದೀರಿ..ಜೀವನದಲ್ಲಿ ಜಿಗುಪ್ಸೆ ಆಗಿ ವೃತ್ತಿನೇ ಬಿಟ್ಟುಬಿಡಬೇಕು ಅಂದುಕೊಂಡಾಗ ಧೈರ್ಯ ತುಂಬಿದ್ರಿ..ಈ ದಿನ ನಾನೇದ್ರೂ ಮಿಡಿಯಾದಲ್ಲಿ ಇದ್ದೀನಿ ಅಂದ್ರೆ ಅದಕ್ಕೆ ನೀವೇ ಕಾರಣ.ಸರ್‌ ತಬ್ಬಲಿ ಆದನಾ ಅನ್ನಿಸ್ತಾ ಇದೆ.. ಆದ್ರೆ ಎನೇ ಬಂದ್ರೂ ಎದುರಿಸೋವಷ್ಟು ಶಕ್ತಿ ತುಂಬಿದ್ದೀರಿ..ಧನ್ಯವಾದ..ಸರ್‌ ನಾನೇನಾದರೂ ತಪ್ಪು ಮಾಡಿದ್ದರೆ, ಮನಸ್ಸು ನೋಯಿಸಿದರೆ ಕ್ಷಮಿಸಿ. ನಿಮ್ಮ ರಾಧಾ ಹಿರೇಗೌಡರ್‌ಳನ್ನ ಮರೀಬೇಡಿ..
ಧನ್ಯವಾದ
ರಾಧಾ ಹಿರೇಗೌಡರ್‍...

nisheetha said...

Dear Sir,

As your envious friends are there in the industry , there are friends who wish always good for you...

Any one can adapt the baby , but mom will be only one. That is you....

ಸಿ ಜಯಕುಮಾರ್ said...

ನಿಮ್ಮ ವೇದನೆ ಅರ್ಥವಾಗುತ್ತೆ... ಬಹುಶ: ಇಂಥಹ ಘಳಿಗೆಗಳು ಪತ್ರಕರ್ತರ ಜೀವನದಲ್ಲಿ ಸಾಮಾನ್ಯ. ನೀವು ಅದನ್ನು ಸಮರ್ಪಕವಾಗಿ ಎದುರಿಸುತ್ತೀರಿ ಆ ನಂಬಿಕೆ ನಮಗಿದೆ.ನಿಮ್ಮ ನೇತೃತ್ವದಲ್ಲಿ ಸುವರ್ಣ ವಾಹಿನಿಗೆ ಸುವರ್ಣ ಚೌಕಟ್ಟು ಸಿಕ್ಕಿದೆ, ವಿನೂತನ ಪ್ರಯೋಗಗಳು ಆಗಿವೆ ಇವುಗಳ ಬೆನ್ನ ಹಿಂದೆಯೇ ಚೋದ್ಯ ಮಾಡುವ ದುಷ್ಟ ಮನಸ್ಸುಗಳು ಇದ್ದೇ ಇರುತ್ತವೆ. ಆದರೆ ನಿಮ್ಮ ದೈತ್ಯಶಕ್ತಿಯ ಮುಂದೆ ಅದು ಏನೇನೂ ಅಲ್ಲ... ನಿಮ್ಮ ಸೇವೆ ಇನ್ನು ಹೆಚ್ಚಿನ ರೀತಿಯಲ್ಲಿ ಪತ್ರಿಕೋಧ್ಯಮಕ್ಕೆ ಸಿಗಲಿ..

rama said...

Bhatji, surrogate mother

IT is not fair to claim for Baby Suvarna.
ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ.
It is a baby of Rajeev Chandrashekhar and Gopa Kumar. NOt your baby.You might be the surrogate mother !?
It is immoral to claim legitimate motherhood.

It is ditto copy of ASIANET with quality compromise.
And what about other AYAAS who toiled day and night for 'your' baby.Don't you think that they too have got same right...
(PS:AYAAS-copy editors, reporters etc)

rama said...

PLEASE LIST OUT JAYAKUMAR

ಸಿ ಜಯಕುಮಾರ್ said...ವಿನೂತನ ಪ್ರಯೋಗಗಳು ಆಗಿವೆ..
what are they ? please list it my comrade..!

Have you heard any questions from anchors to reporter on field. They don't have basic political knowledge what NOT TO ASK !!
pls come on C jayakumar

nija said...

RAMA
ಅವರೇ ಕೈ ಬೆರಳುಗಳು ಎಲ್ಲಾ ಒಂದೇ ರೀತಿ ಇರಲ್ಲಾ..ಎಲ್ಲಾ ಚಾನೆಲ್ಲನಲ್ಲೂ ಎಲ್ಲಾ ಆಂಕರ್‌ಗಳು perfect ಇರಲ್ಲಾ..ಇನ್ನೂ ಟಿವಿ೯ ನಲ್ಲೂ ಇಬ್ಬರು ಬಿಟ್ಟರೆ ಎಲ್ಲಾ ಜೊಳ್ಳು ಬೀಜಗಳೇ..ಹಾಗೆ ಸುವರ್ಣದಲ್ಲೂ..ಅದನ್ನೇ ನಿಮಗೆ ನಮ್ಮಂಥವರು ಹೇಳಬೇಕಿಲ್ಲಾ..ಅಲ್ಲಿನ ಸ್ಥಿತಿ ಗತಿಗಳಿಗೆ ಆಂಕರ್‍ಸ್‌ ಮಾಡೋದು ಗ್ರೇಟ್‌..ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಗಾದೆ ನಿಮ್ಮಂಥವರನ್ನಾ ನೋಡೇ ಮಾಡಿರಬೇಕು..

rama said...

mr/ms NIJA,

I am not said PERFECT anchor...but the minimum _commonsense...please understand...

ಅಲ್ಲಿನ ಸ್ಥಿತಿ ಗತಿಗಳಿಗೆ ಆಂಕರ್‍ಸ್‌ ಮಾಡೋದು ಗ್ರೇಟ್‌..
train copy editors/ reporters to anchor news bulletins...
try this...

MADHUSUDNAN said...

ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬುದು ಪ್ರಜ್ಞಾವಂತರಲ್ಲೂ ಮುಂದುವರಿಯುತ್ತಿಲರುವುದಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಯಾವುದೇ ವ್ಯವಸ್ಥೆಯಲ್ಲಿಯೇ ಆಗಲಿ ಧನಾತ್ಮಕ ಹಾಗೂ ರುಣಾತ್ಮಕ ಅಂಶಗಳೆರಡೂ ಇದ್ದೇ ಇರುತ್ತವೆ ಅಂತೆಯೇ ಎಲ್ಲಾ ಛಾನಲ್ ಗಳಲ್ಲೂ ಎಲ್ಲಾ ತರಹದ ಜನರೂ ಇರುತ್ತಾರೆ ಅಂದಹಾಗೆ ವ್ಯಕ್ತತ್ವ ಎಂಬುದೇ ಒಳ್ಳೆಯ ಹಾಗೂ ಕೆಟ್ಟ ಚಿಂತನೆಗಳ,ಆಚರಣೆಗಳ ಸಮ್ಮಿಶ್ರಣ. ಭಟ್ಟರು ವಿಧಾಯ ಹೇಳಿ ಹೊರಟು ನಿಂತಿರುವ ಈ ಹೊತ್ತಿನಲ್ಲಿ ನಮ್ಮ ಚರ್ಚೆ ಅವರಿಗೆ ಸೀಮಿತವಾಗಬೇಕೋ ಹೊರತು ಚಾನಲ್ಲಿಗಲ್ಲ. ಅಂಹಾಗೆ ಚರ್ಚೆಗಳು, ಅಭಿಪ್ರಾಯಗಳು ಮುಕ್ತವಾಗಿರಲಿ

ಸಿ ಜಯಕುಮಾರ್ said...

ರಾಮ/ರಮ, I agree, what u said about anchors and reporters of Suvarna...! But u should remember what i am talking about ok? ವಿನೂತನ ಪ್ರಯೋಗಗಳ ಬಗ್ಗೆ ಹೇಳಿದ್ರಿ ಯಾವು ಅವು ಲಿಸ್ಟ್ ಮಾಡಿ ಅಂತಕೇಳಿದಿರಿ ಆಗಲಿ'ನಿಗೂಢ ಜಗತ್ತು', 'ನ್ಯೂಸ್ ಅಂಡ್ ಯೂಸ್' ಈ ಥರದ ಕಾಯಕ್ರಮಗಳು ವಿಭಿನ್ನವಾಗಿ ಮೂಡಿಬಂದಿವೆ ಅದಕ್ಕೆ ಹಾಗೆಂದೆ.ಇವು ಮಲಯಾಳಂಕಿರುತೆರೆಯ ಅನುಕರಣೆಯೇ ಇರಬಹುದು, ಆದರೆ ಕನ್ನಡಕ್ಕೆ ಹೊಸತಲ್ಲವೇ, ಹೋಗಲಿ ಆ ಛಾನಲ್ ನೋಡುಗರಿಗೆ ಹೊಸತಲ್ಲವೇ? ನೋಡಿ ಯಾರಾದರೂ ಎಡವೋದು ಸಹಜ ಹಾಗಂತ ಆಳಿಗೊಂದು ಕಲ್ಲು ಎಸೆಯೋದು ಎಷ್ಟು ಸರಿ? ವೈಯುಕ್ತಿಕ ನಿಂದನೆಗಳಿಗೆ ಆಸ್ಪದ ಬೇಡ.. ಇದು ನನ್ನ ಮನವಿ. ಅಂದಹಾಗೆ ತಮ್ಮ ಪತ್ರಿಕೆ/ಛಾನಲ್ ಯಾವುದು ತಿಳಿಲಿಲ್ಲ ಹಾಗೆಯೇ ನೀವು ರಾಮ/ರಮ ಯಾವುದು ಅಥವಾ? ಕ್ಷಮಿಸಿ ಅನ್ಯತಾ ಭಾವಿಸಬೇಡಿ ನಿಮ್ಮ ಬಗ್ಗೆ ಗೌರವವಿದೆ...ಆರೋಗ್ಯಕರ ಪತ್ರಿಕ್ರಿಯೆ ಮುಂದುವರೆಯಲಿ..

rama said...

KRURA. KETTA, BHAYANKARA
jayakumarji,

I am not for personal criticism. As a journalist Mr. Bhat is from a band of very rare..
You remember his some of the questions in debate. He is very much professional and secular there..
Most of you failed to list out his qualities..
Certainly he failed as a team leader. But, as a anchor(forget about his red-lips)he is very much professional journalist without any type of bias or ill will.

And, it is ditto copy of Asianet. The tag line also copy.
Nera. Ditta. nirantara

BUt what happened here is
KRURA. KETTA, BHAYANKARA

nija said...

ರಮಾನೋ ರಾಮಾನೋ ನಿಮ್ಮ ಮನಸ್ಸು ಘೋರ ಕೆಟ್ಟ ಭಯಂಕರ..ಎಂಥಾ ಆಲೋಚನೆ ರೀ ನಿಮ್ಮದು ವ್ಹಾ..ಸೂಪರ್‌..ನಿಮ್ಮಂಥವರಿದ್ರೆ ಹಗ್ಗಾನೂ ಹಾವಾಗುತ್ತೆ..ಅರಳೋ ಹೂವು ಬಾಡುತ್ತೆ..ಅಂದ ಹಾಗೆ ನೇರ ದಿಟ್ಟ ನಿರಂತರ ಏಷ್ಯಾನೆಟ್‌ನಿಂದ ಸುವರ್ಣ ಕಾಪಿ ಹೊಡೆದಿಲ್ಲಾ..ಸುವರ್ಣಾದಿಂದ ಅವರು ಕಾಪಿ ಮಾಡಿದ್ದು..ಹುಳುಕು ಸುವರ್ಣದಲ್ಲಷ್ಟೇ ಇಲ್ಲಾ..ನೀವು ಅಂಥಾ ವಿಮರ್ಶಕರಾಗಿದ್ದರೆ ಬೇರೆ ಚಾನೆಲ್ಲಗಳತ್ತ ಗಮನಹರಿಸಿ..ಕಾಮಾಲೆ ಕಣ್ಣಿಗೆ ಕಾಣೊದೆಲ್ಲಾ ಹಳದಿ..ಮೊದಲು ನಿಮಗೆ ಕಾಮನ್‌ ಸೆನ್ಸ್‌ ಇದ್ದಂತೆ ಇಲ್ಲಾ..ಇಂಗು ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ..ಅದಿಲ್ಲದಿದ್ದರೆ??????

rama said...

Bhat baby is just one and a half year old...

who is first...
who copied...

rama said...

I am not a ವಿಮರ್ಶಕ.
which other channel can I watch ?

I like Bhat and expected a lot from Bhat thats why I watch SUVARNA. OK.

rama said...

Actually I am SATHYAaaa

no seccond name so I put ramaa

It shows only second name.
NOw, you are all happy.

Be happy always. dont angry.
BP cases increasing in India..

nija said...

ಸತ್ಯಾ ಅವರೇ..ಮಗುನ ಚೂಟಿ ಅಳಬೇಡಾ ಅಂದ ಹಾಗೇ ಆಯಿತು,ನಿಮ್ಮ ಮಾತು..ನಿಮ್ಮಂತವರಿಂದಲೇ ಎಲ್ಲರಿಗೂ ಬಿಪಿ ಸ್ಟಾರ್ಟ ಆಗಿರಬೇಕು..ಎಷ್ಯಾನೆಟ್‌ನಲ್ಲಿ ಮೊದಲು ನೇರ ದಿಟ್ಟ ನಿರಂತರ ಇರಲಿಲ್ಲಾ..ಸುವರ್ಣದಲ್ಲಿ ಬಂದ ಮೇಲೆ ಅವರು ಕಾಪಿ ಹೊಡೆದಿದ್ದು..ಇರಲಿ ವಾಕ್ಸಮರ ಸಾಕು ಅನ್ನಿಸುತ್ತೆ..ಆಲ್‌ ದಿ ಬೆಸ್ಟ್....

rama said...

Thank you..

Sandesh The Tiger said...

SIR NAMASTHE.NANU YARU,YENU,HEGE BANDE YENDU NIMGE TILIDIDE.AADRE NANU YEDU STHALANTARA NADENO AAVAGINDA NANNANNA NANU KALAKONDE.NANU INDU ELECTRONIC MEDIADALLI BADUKIDDENE MTTU BADUKUTIDDENE ANDRE ADAKKE KARANA NEEVU.NANU TINNO ONDU TUTTU ANNANU NIMMANNA NENAPISUTTE.NIMME MELE GOWRAVA,PREETI,BHAYA YERADU IDE.NANU SWALPA OPEN MINDED PERSON.SO KELAVOMME ITARARA MANASIGE NOVAGUVANTE NADAKONDIDDENE.NAN NATNRA BANDU SORRY KOODA KELIDDENE ANTA ANDKONDIDDENE.NANNA YESHTONDU SIDDANTAGALU NIMMA SIDDANTAGALIGE HOLUTTE.SO NIMMANNA YENDENDIGU LOVE MADTENE.OMME SANJE GECYALLI NAN IROVAGA DESKNALLI KUTU "NANU GANESH TARAHA AAGODU YAVAGAPPA" ANDAGA "NANU BELEYODU YAVAGA" ANTA ANDHKOLLI ANTA HELIDRI.ADU INDIGU NENAPIDE.NIMMA JOTE KALEDA YELLA DINAGALU NANGE NENAPIVE.YESHTO SALA NIMMALLI YENO HELBEKU ANTA BARTENE.ADRE YENO ONDU REETHIYA ADE-TADEGALU BARUTTIDDAVU.EEGALU BARATANE IVE.SO SORRY SIR.NANGE MANASINA AALADA NANNA ONDISTHU VICHARAGALANNA YENO HELBEKU ANTA ANSTA IDE.AADRE HELAKKE AAGTA ILLA.KSHAMISI.NIMGE OLLEDAGALI ANTA DEVARANNA BEDKOTENE.NANNA BHAVISHYA OLLEDAGALI ANTA AASHIRVADISI.