Sunday, November 14, 2010

ಮಾಧ್ಯಮಗಳು ಮತ್ತು ಚೆಡ್ಡಿ ಪುರಾಣ.....!

ಕಳೆದ ವಾರ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಖ್ಯಾತ ನಟಿ ರಾಖಿ ಸಾವಂತ್ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆತನನ್ನು ಆಕೆ ಕರೆದಿದ್ದು ನಪುಂಸಕ ಎಂದು. ಈ ಮಾತು ಅವನ ಮೇಲೆ ಎಂತಹ ಪರಿಣಾಮ ಬೀರಿತೆಂದರೆ ಆತ ಆತ್ಮಹತ್ಯೆಗೆ ಮುಂದಾಗಿ ಬಿಟ್ಟ. ಆದರೆ ಈ ಸಾವು ಯಾರನ್ನೂ ಕಾಡಲಿಲ್ಲ. ಚಾನಲ್ಲಿನವರು ಹೇಳಿಕೆಯೊಂದನ್ನು ನೀಡಿ ಕೈತೊಳೆದುಕೊಂಡರು. ರಾಖಿ ಸಾವಂತ್ ಹಿಂದಿನ ರೀತಿಯಲ್ಲೇ ತನ್ನ ಕಾರ್ಯಕ್ರಮವನ್ನು ಮುಂದುವರಿಸಿದಳು.
ನಾನು ಸಂಪೂರ್ಣವಾಗಿ ರಾಖಿ ಸಾವಂತ್ ಅವರ ಕಾರ್ಯಕ್ರಮವನ್ನು ನೋಡಲಿಲ್ಲ. ಆದರೆ ಆತ ಆಕೆಯ ಜೊತೆ ಮಾತನಾಡುತ್ತಿರುವ ಕೆಲವು ಭಾಗಗಳನ್ನು ಮಾತ್ರ ನೋಡಿದೆ. ಆಗ ನನಗೆ ಅನ್ನಿಸಿದ್ದು ಈ ವ್ಯಕ್ತಿ ತುಂಬಾ ಎಮೋಷನಲ್ ಎಂದು. ರಾಖಿ ತನ್ನ ಇನ್ಸಾಫ್ ನಲ್ಲಿ ಇದನ್ನು ಗಮನಿಸಲಿಲ್ಲ. ತನ್ನ ಮುಂದೆ ಕುಳಿತವರನ್ನು ಝಾಡಿಸುವುದು ತನ್ನ ಕರ್ತವ್ಯ ಎಂಬಂತೆ ಅವನ ಮೇಲೆ ಧಾಳಿ ನಡೆಸುತ್ತಿದ್ದಳು. ಆತ ನಪುಂಸಕ ಎಂಬುದು ರಾಖಿಗೆ ಹೇಗೆ ಗೊತ್ತಾಯಿತು ? ಆಕೆ ಆತನ ಪುರುಷತ್ವವನ್ನು ಪರೀಕ್ಷೆ ಮಾಡಿದ್ದಳೆ ? ಅಥವಾ ಆತನ ಹೆಂದತಿ ತನ್ನ ಗುಂಡ ನಪುಂಸಕ ಎಂದು ಹೇಳಿದ್ದಳೆ ? ಒಂದೊಮ್ಮೆ ಡೈವೋರ್ಸ್ ಗೆ ಮುಂದಾದ ಹೆಂಡತಿ ಇಂತಹ ಆರೋಪ ಮಾಡಿದ್ದರೂ ಜವಾಬ್ದಾರಿಯುತ ಚಾನಲ್ಲಿನ ನಿರೂಪಕರು ಅದನ್ನು ನಂಬುವುದು ಸಾಧ್ಯವೆ ? ನಂಬಿದರೂ ಬಹಿರಂಗವಾಗಿ ಹೇಳುವುದು ಎಷ್ಟು ಸರಿ ?
ರಾಖಿಯಲ್ಲಿ ಒಬ್ಬ ಕಾರ್ಯಕ್ರಮ ನಿರೂಪಕನಿಗೆ ಬೇಕಾದ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮವನ್ನು ನಿರೂಪಿಸುವವರಿಗೆ ಎದುರಿಗೆ ಕುಳಿತವರ ಮನಸ್ಸನ್ನು ಓದುವ ಸೂಕ್ಷ್ಮತೆ ಇರಬೇಕಾಗುತ್ತದೆ. ಮನುಷ್ಯ ಎಲ್ಲವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಶಬ್ದಗಳಿಗೆ ಮೀರಿದ್ದನ್ನು ಆತ ತನ್ನ ಬಾಡಿ ಲ್ಯಾಂಗ್ವೇಜ್ ನಲ್ಲಿ ಹೇಳುತ್ತಿರುತ್ತಾನೆ. ಇದನ್ನು ನಿರೂಪಕ ಗೃಹಿಸಬೇಕು. ಪ್ರಾಮಾಣಿಕತೆ, ಸತ್ಯ ಎಲ್ಲವೂ ಶಬ್ದಗಳಲ್ಲಿ ಹಿಡಿದಿಡುವುದು ಸುಲಭವಲ್ಲ. ಯಾಕೆಂದರೆ ಶಬ್ದಗಳು ಕೆಲವೊಮ್ಮೆ ಮುಖವಾಡ ಧರಿಸುತ್ತಿರುತ್ತವೆ.ಆದರೆ ಆತನ ಆಂಗಿಕ ಚಲನೆ ಸತ್ಯವನ್ನು ಹೊರಹಾಕುತ್ತಲೇ ಇರುತ್ತದೆ. ಇದನ್ನು ಒಬ್ಬ ನಿರೂಪಕ ಗೃಹಿಸಬೇಕು.
ರಾಖಿಗೆ ಈ ಕಾರ್ಯಕ್ರಮ ಕೂಡ ಯಾವುದೋ ಚಲನಚಿತ್ರದ ನಟನೆ. ಆಕೆ ಸಿನೆಮಾಗಳಲ್ಲಿ ನಟಿಸುವಂತೆ ಇಲ್ಲಿಯೂ ನಟಿಸುತ್ತಾಳೆ. ಆದರೆ ಇವಳ ಎದುರು ಕುಳಿತವರು ತಮ್ಮ ಬದುಕನ್ನು, ಅಲ್ಲಿನ ಒಳಗುಟ್ಟುಗಳನ್ನು ಬಿಚ್ಚಿಡುತ್ತಿರುತ್ತಾರೆ. ಒಂದೆಡೆ ನಟನೆ ಇನ್ನೊಂದೆಡೆ ತೆರೆದುಕೊಳ್ಳುವ ಸತ್ಯ.
ಸಮಸ್ಯೆ ಪ್ರಾರಂಭವಾಗುವುದು ಇಲ್ಲೇ.
ಈ ಸಾವಿನ ಬಗ್ಗೆ ಯೋಚಿಸುತ್ತಲೇ ರಾಖಿ ಸಾವಂತ್ ಳ ಇನ್ನೊಂದು ಎಪಿಸೋಡ್ ನೋಡಿದೆ. ಈ ಎಪಿಸೋಡಿನಲ್ಲಿ ಜಗಳವಾಡುವ ಗಂಡ ಹೆಂದತಿ ಬಂದು ಕುಳಿತಿದ್ದರು. ಅವರ ಸಂಬಂಧ ಡೈವೋರ್ಸ್ ವರೆಗೆ ಬಂದು ನಿಂತಿತ್ತು. ಆಕೆ ತನ್ನ ಗಂಡನ ಚೆಡ್ದಿಯ ವಿಚಾರವನ್ನು ಪ್ರಸ್ತಾಪಿಸಿದಳು. ನಂತರ ಆತನ ಓಳ ಉಡುಪು ಹರಿದಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಅಲ್ಲಿ ಬಹಳ ಹೊತ್ತು ಚರ್ಚೆ ನಡೆಯಿತು. ಇದನ್ನು ನೋಡಿ ತಲೆ ಚಿಟ್ತು ಹಿಡಿದು ಕನ್ನಡ ಚಾನಲ್ ಗಳತ್ತ ತಿರುಗಿದೆ. ಅಲ್ಲಿನ ಒಂದು ಕಾರ್ಯಕ್ರಮದಲ್ಲಿ ಕಾಡಿಗೆ ಹೋದ ಪೇಟೆ ಮಂದಿ ಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅವರ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಕಾರ್ಯಕ್ರಮದ ನಿರೂಪಕರುಹೊಸ ಬಟ್ಟೆ ಕೊಡಲು ಸಿದ್ಧರಿರಲಿಲ್ಲ. ಆಗ ಅವರು ಪ್ರಸ್ತಾಪಿಸಿದ್ದು ಚಡ್ಡಿಯ ಸಮಸ್ಯೆಯನ್ನೇ ! ತಮ್ಮ ಚಡ್ದಿಯೆಲ್ಲ ಒದ್ದೆಯಾಗಿ ಒಳಗೆ ತುರಿಕೆಯಾಗುತ್ತಿದೆ ಎಂದು ಅವರು ಅಲವತ್ತುಗೊಳ್ಳುತ್ತಿದ್ದರು. ಹುಡುಗಿಯೊಬ್ಬಳು ತನಗೆ ತುರಿಸಿಕೊಳ್ಳುವುದೇ ಕೆಲಸವಾಗಿದೆ ಎಂದರು. ಇನ್ನೊಬ್ಬ ಹುಡುಗ ತನ್ನ ಬಳಿ ಹಿಚ್ ಗಾರ್ಡ್ ಇಲ್ಲದೆ ತೊಂದರೆಯಾಗಿದೆ ಎಂದು ವಿವರಿಸತೊಡಗಿದ. ಒಟ್ಟಿನಲ್ಲಿ ಕನ್ನಡ ಚಾನಲ್ಲಿನಲ್ಲೂ ಇದೇ ಚಡ್ಡಿಯ ಸಮಸ್ಯೆ ! ನಮ್ಮ ಗುಪ್ತಾಂಗಗಳಲ್ಲಿ ಸಂರಕ್ಷಿಸುವ ಚೆಡ್ದಿ ಒಳಕ್ಕೆ ಇರುವಂತಹುದು. ಹೊರಕ್ಕೆ ಕಾಣುವಂತಹುದಲ್ಲ. ಹಾಗೆ ಚಡ್ಡಿಯ ಆಸ್ಥಿತ್ವ ಇರುವುದು ಗುಪ್ತವಾಗಿ ಇರುವುದರಿಂದಲೇ,ಅದಕ್ಕೆ ಬಹಿರಂಗ ಅಸ್ಥಿತ್ವ ಇಲ್ಲ. ಚೆಡ್ದಿಯನ್ನು ಮುಚ್ಚಲು ಏನಾದರೂ ಬೇಕು. ಆಗಲೇ ಚಡ್ದಿಗೂ ಬೆಲೆ, ಚೆಡ್ಡಿಯನ್ನು ಹಾಕಿಕೊಂಡವರಿಗೂ ಬೆಲೆ. ಆದರೆ ನಮ್ಮ ಚಾನಲ್ ಗಳು ಚೆಡ್ಡಿಯನ್ನು ಪ್ರದರ್ಶನಕ್ಕೆ ಇಡುತ್ತಿವೆ !
ಒಂದು ಸಾವು ನಮ್ಮನ್ನೆಲ್ಲ ತಲ್ಲಣಗೊಳಿಸುವುದಿಲ್ಲ. ಸಾವಿಗಿಂತ ಚಡ್ದಿ ಒದ್ದೆಯಾಗಿ ಉಂಟಾಗುವ ತುರಿಕೆ ನಮಗೆ ಮುಖ್ಯವಾಗುತ್ತಿದೆ. ತುರಿಕೆಯಿಂದ ಉಪಶಮನಕ್ಕಾಗಿ ನಾವು ಹಿಚ್ ಗಾರ್ಡ್ ಹುಡುಕಾಟ ನಡೆಸುತ್ತೇವೆ. ಹಾಗೆ ಚಾನಲ್ಲುಗಳೂ ಸಾವಿನಿಂದ ತಲ್ಲಣಗೊಳ್ಳುವುದಿಲ್ಲ. ಅವರಿಗೆ ಟಿಆರ್ ಪಿ ಎಂಬ ತುರಿಕೆಗಾಗಿ ಇಂತಹ ಕಾರ್ಯಕ್ರಮಗಳ ಹಿಚ್ ಗಾರ್ಡ್ ಬೇಕು.
ಕರ್ನಾಟಕದಲ್ಲಿ ಹಲವಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಅಲ್ಲಲ್ಲಿ ಸುದ್ದಿಯಾದರೂ ಕಥೆ ಹುಟ್ಟಿಕೊಳ್ಳುವುದು ಬೇರೆ ಬೇರೆ ಆಯಾಮ ಪಡೆಯುವುದು, ಆತ್ಮಹತ್ಯೆ ನಡೆದ ಮೇಲೆ. ಒಂದು ಸಾವು ಬೀರುವ ಪರಿಣಾಮ ಅಂಥಹುದು. ಸಾವಿನ ನಂತರದ ಕಥೆಯಿದೆಯಲ್ಲ, ಅದರ ಬಗ್ಗೆ ಯಾವ ವಾಹಿನಿಯೂ ತಲೆ ಕೆಡೆಸಿಕೊಳ್ಳುತ್ತಿಲ್ಲ.
ಒಂದು ಸಾವು ನಾಗರಿಕ ಮನುಷ್ಯನನ್ನು ತಲ್ಲಣಗೊಳಿಸದಿದ್ದರೆ, ಅದು ಅಪಾಯಕಾರಿ. ಹಾಗೆ ಸಮೂಹ ಮಾಧ್ಯಮಗಳೂ ಸಹ. ಒಬ್ಬ ವ್ಯಕ್ತಿಗಿಂತ ಒಂದು ವಾಹಿನಿಗೆ ಹೆಚ್ಚಿನ ಸೂಕ್ಷ್ಮತೆ ಬೇಕಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಸೂಕ್ಶ್ಮತೆ ಕಳೆದುಕೊಂಡರೆ ಉಂಟಾಗುವ ಅಪಾಯಕ್ಕಿಂತ ಸಾವಿರ ಪಟ್ಟು ಅಪಾಯ ಮಾಧ್ಯಮ ಸೂಕ್ಷ್ಮತೆ ಕಳೆದುಕೊಂಡರೆ ಉಂಟಾಗುತ್ತದೆ.

5 comments:

PARAANJAPE K.N. said...

ಭಟ್ಟರೇ ನಮಸ್ಕಾರ, " ಒಬ್ಬ ವ್ಯಕ್ತಿ ಸೂಕ್ಶ್ಮತೆ ಕಳೆದುಕೊಂಡರೆ ಉಂಟಾಗುವ ಅಪಾಯಕ್ಕಿಂತ ಸಾವಿರ ಪಟ್ಟು ಅಪಾಯ ಮಾಧ್ಯಮ ಸೂಕ್ಷ್ಮತೆ ಕಳೆದುಕೊಂಡರೆ ಉಂಟಾಗುತ್ತದೆ." ನಿಮ್ಮ ಈ ಮಾತು ನೂರಕ್ಕೆ ನೂರು ನಿಜ. ಆದರೆ ಇ೦ದು TRP ಬೇಟೆಯಲ್ಲಿ ವಾಹಿನಿಗಳು ದಾರಿ ತಪ್ಪುತ್ತಿವೆ ಅನಿಸುತ್ತಿದೆ. ಒ೦ದು ಪ್ರಮುಖ ವಾಹಿನಿಯ ಮುಖ್ಯಸ್ಥರಾಗಿ ನೀವು ಇ೦ತಹ ಸೂಕ್ಷ್ಮ ಗಳನ್ನು ಗಮನಿಸುವ ವ್ಯವಧಾನ ಇಟ್ಟುಕೊ೦ಡಿರುವುದು ಆರೋಗ್ಯಕರ ಬೆಳವಣಿಗೆ. ಧನ್ಯವಾದ.

ಮಹೇಶ ಭಟ್ಟ said...

ನಟನೆ ಮತ್ತು ನಿಜಜೀವನಕ್ಕೆ ವ್ಯತ್ಯಾನವೇ ಗೊತ್ತಿಲ್ಲದ, ಕ್ಯಾಮರಾ ಇಲ್ಲದ ಬದುಕೇ ಇಲ್ಲದ ರಾಖಿ ಸಾವಂತರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಚೆಡ್ಡಿಯಂತಹ ವಿಷಯದ ಬಗೆಗೆ ದೃಷ್ಯ ಮಾಧ್ಯಮದಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ ಆರಾಮಾಗಿ ಮಾತನಾಡುತ್ತಿದ್ದಾರೆ. ನಮ್ಮ ಸಮಾಜ ಅದನ್ನು ಸಹಜತೆ ಎನ್ನುವಂತೆ ಒಪ್ಪಿಕೊಳ್ಳುತ್ತಿದೆ. ಸಮಾಜಕ್ಕೆ ಅವು ನಿಜವಾಗಿಯೂ ಬೇಕಾಗಿದೆಯೇ.. ಅಥವಾ ಸಮಾಜ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದ್ದಾರೆಯೇ? ಸಮಾಜ ನಿಂತ ನೀರಲ್ಲ.

Badarinath Palavalli said...

Sir. Nice article. Media should think twice before starting any new program and selecting an anchor. One more thing to see is how far reality shows help out solving inner problems between husband and wife? Sir, in two different languages actress laxmi handled such program with sense. Glamour artist can't be an proper anchor with common sense, body language, authenticity and handling such a situations. Only on t r p shall not measured in all cases.

Thambli said...

priya shashidhar
neenu indu heeliddu nenapayitu.
blog open maadide.
leekhana chennagi muudi bandide.
heegeyee saguttirali.
nanu ooduttalee iruttene.
THANKS.

www.kumararaitha.com said...

ಮಿಮ್ಮ ಈ ಮಾತು ಬಹು ಅರ್ಥಪೂರ್ಣ ಮತ್ತು ಸಕಾಲಿಕ "ಒಂದು ಸಾವು ನಾಗರಿಕ ಮನುಷ್ಯನನ್ನು ತಲ್ಲಣಗೊಳಿಸದಿದ್ದರೆ, ಅದು ಅಪಾಯಕಾರಿ. ಹಾಗೆ ಸಮೂಹ ಮಾಧ್ಯಮಗಳೂ ಸಹ. ಒಬ್ಬ ವ್ಯಕ್ತಿಗಿಂತ ಒಂದು ವಾಹಿನಿಗೆ ಹೆಚ್ಚಿನ ಸೂಕ್ಷ್ಮತೆ ಬೇಕಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಸೂಕ್ಶ್ಮತೆ ಕಳೆದುಕೊಂಡರೆ ಉಂಟಾಗುವ ಅಪಾಯಕ್ಕಿಂತ ಸಾವಿರ ಪಟ್ಟು ಅಪಾಯ ಮಾಧ್ಯಮ ಸೂಕ್ಷ್ಮತೆ ಕಳೆದುಕೊಂಡರೆ ಉಂಟಾಗುತ್ತದೆ" ಮಾಧ್ಯಮ ಮಂದಿ ಮೆಲುಕು ಹಾಕುತ್ತಲೇ ಇರಬೇಕಾದ ಮಾತು. ಆದರೆ ಸದ್ಯದ ಸಂದರ್ಭದಲ್ಲಿ ಮಾಧ್ಯಮದ ಎಷ್ಟು ಮಂದಿಗೆ ಈ ಸೂಕ್ಷ್ಮತೆ ಇದೆ ಎನ್ನುವುದೇ ದೊಡ್ಡ ಪ್ರಶ್ನೆ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...