Friday, December 9, 2011

ಹೀಗೊಂದು ಮಾತುಕತೆ ........

ಮಾತುಕತೆ, ಅಲ್ಲಲ್ಲಿ ನಗು ಮತ್ತು ಅಳು
ಕ್ಷಯವಿಲ್ಲದ್ದು ಅಕ್ಷರ, ಅಕ್ಷರ ಅಕ್ಷರಗಳನ್ನು ಪೊಣಿಸಿ ಮಣಿಸಿ
ಕಟ್ಟಿದ ಕಾವ್ಯ.
ವಾಕ್ಯವೇ ಕಾವ್ಯವಾಗುವ ಅದ್ಭುತ
ಅಕ್ಷರಕ್ಕೆ ಕ್ಷಯಿಸುವ ಗುಣ ಇಲ್ಲದಿದ್ದರೆ.
ಆದರೆ ಇಲ್ಲಿ ಆಗುತ್ತಿರುವುದೇ ಬೇರೆ
ಮಾತಿನ ಭರಾಟೆಯಲ್ಲಿ ಅಕ್ಷರಕ್ಕೆ ಕ್ಷಯಿಸುವ ಗುಣ
ಮಾತಿನ ಶಕ್ತಿಯೇ ಕ್ಷಯ.
ಮೊದಲು ಹುಟ್ಟಿದ್ದು ನಾದವಂತೆ
ನಾದದ ಅಪ್ಪ ಸ್ವರ, ಎಲ್ಲವೂ ಅಪಸ್ವರ.
ಹೀಗಾದರೆ ನಗು ಅಳುವಿಗೆ, ವ್ಯತ್ಯಾಸ ಇರುವುದಾದರೂ ಹೇಗೆ ?
ನಾವೆಲ್ಲ ಮಾತನಾಡುವ ಹಾಗೆ.
ಅಳುವವನಿಗೆ ಕಳೆದುಕೊಂಡ ನೋವು
ನಗುವವನಿಗೆ ಶಕ್ತಿ ತುಂಬುವ ಕಾವು
ಆದರೆ ಅಳುವಿನಲ್ಲಿ ಏನೂ ಹುಟ್ಟುವುದಿಲ್ಲ, ಅದು ವ್ಯರ್ಥ ಭಾವೋಧ್ವೇಗ.
ನಗುವಿಲ್ಲ ಎನೂ ಇರುವುದಿಲ್ಲ ಅದು,ಇರುವವನ ಅಹಂಕಾರ.
ಆದರೂ ಶಬ್ದಕ್ಕೆ ಶಕ್ತಿ ಇಲ್ಲದದ್ದರೆ ?
ಸ್ವರಕ್ಕೆ ಮಾಂತ್ರಿಕತೆ ಇಲ್ಲದಿದ್ದರೆ ?
ನಾದಕ್ಕೆ ಲಾಲಿತ್ಯ ಇಲ್ಲದಿದ್ದರೆ ?
ಇಲ್ಲದಿರುವಲ್ಲಿ ತುಂಬಬೇಕು
ಹಾಗಿದ್ದರೆ ಇರುವಲ್ಲಿ ?
ಅಕ್ಷರ ಕ್ಷಯಿಸಕೂಡದು, ಸ್ವರಕ್ಕೆ ಮಾಂತ್ರಿಕತೆ ಬೇಕು
ಬದುಕು ನಾದಮಯವಾಗಬೇಕು
ಇದೆಲ್ಲ ಆಗುವುದೆಲ್ಲಿ ?

ಶಶಿಧರ್ ಭಟ್

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...