Tuesday, August 27, 2013

ಓಂ ಶ್ರೀ ಗಣೇಶಾಯ ನಮ:..........







ವಿಘ್ನ ವಿನಾಶಕ ಎಂದು ಹಿಂದೂಗಳು ನಂಬಿರುವ ಗಣೇಶ
 ಈಗ  ವಿವಾದದ ಕೇಂದ್ರವಾಗಿದ್ದಾನೆ. ದೇವರನ್ನು ಸೃಷ್ಟಿಸಿದವರು, ಈಗ ತಮ್ಮ ದೇವರನ್ನೇ ವಿವಾದ  ಕ್ಕೆ ಎಳೆದಿದ್ದಾರೆ. ಹಾಗೆ ನೋಡಿದರೆ ನಮ್ಮ ಕೋಟ್ಯಾಂತರ  ದೇವರುಗಳಲ್ಲಿ ಗಣೇಶ ಅಂತಹ ವಿವಾದಾತ್ಮಕ ದೇವರಲ್ಲ. ಆದರೂ ನಾವು ಎಂತಹ ಪ್ರಚಂಡರೆಂದರೆ ಈ ಟೀವಿ ಯುಗದಲ್ಲಿ ಯಾರನ್ನು ಸುಮ್ಮನೆ ಇರಲು ಬಿಡುವವರಲ್ಲ. ದೇವರನ್ನೂ ಸಹ…..!

ಪಾರ್ವತಿ ಪುತ್ರನಾದ ಗಣೇಶ ಪಿತ್ರವಾಕ್ಯ ಪರಿಪಾಲಕ. ತಂದೆ ತಾಯಿಯರ ಅಚ್ಚುಮೆಚ್ಚಿನ ಮಗ. ಆತ ತುಂಟ ಜಗಳಗಂಟ. ನಂಬಿದವರನ್ನು ಕೈಬಿಡದ ಅವರನ್ನು ಎಲ್ಲ ವಿಘ್ನಗಳಿಂದ ಪಾರು ಮಾಡುವ ಮೊದಲ ಪೂಜೆಗೆ ಅರ್ಹನಾದವನು ವಿನಾಯಕ.
ಪ್ರಾಯಶ ಈ ದೇಶದಲ್ಲಿ ಎಲ್ಲ ಜಾತಿ ಪಂಗಡಗಳನ್ನು ಮೀರಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ದೇವರು ಎಂದರೆ ವಕ್ರ ತುಂಡನೇ. ಬಾಲಗಂಗಾಧರ ತಿಲಕರಿಂದಾಗಿ ಸಾರ್ವಜನಿಕ ಗಣೇಶೋತ್ಸವದ ಆಚರಣೆ ಪ್ರಾರಂಭವಾದ ಮೇಲೆ ವಿನಾಯಕ ವಿಶ್ವ ವಂದ್ಯನಾದ. ಇಂತಹ ದೇವರನ್ನು ವಿವಾದಕ್ಕೆ ಸಿಲುಕಿಸಿದವರು ಯೋಗಿಶ್ ಮಾಸ್ಟರ್. ಅವರ ಬರೆದ ಢುಂಢಿ ಎಂಬ ಕಾದಂಬರಿ ಅರಣ್ಯಕನೊಬ್ಬ ಗಣೇಶನಾದ ಕಥೆ. ಈ ಕಾದಂಬರಿಯಲ್ಲಿ ಬಂದ ವಿಚಾರಗಳ ಬಗ್ಗೆ  ಕಾವಿದಾರಿಗಳು ಕೆಂಡ ಕಾರಿದ್ದಾರೆ. ರಸ್ತೆಗಿಳಿಯುವ ಮಾತನಾಡಿದ್ದಾರೆ. ಯಾಕೆ ಹಿಂದೂ ದೇವತೆಗಳು ಮಾತ್ರ ಈ ರೀತಿ ಅವಹೇಳನಕ್ಕೆ ತುತ್ತಾಗಬೇಕು ಎಂದು ಪ್ರಶ್ನಿಸಿದ್ದಾರೆ, ಅನ್ಯ ಧರ್ಮಗಳ ಬಗ್ಗೆ ಹೀಗೆ ಬರೆಯಿರಿ ಎಂದು ಸವಾಲು ಹಾಕಿದ್ದಾರೆ.
ಆದರೆ ಧರ್ಮ ಎಂದರೆ ಅದು ಜಗಳವಲ್ಲ. ವೀರಾವೇಶದ ಮಾತುಗಳನ್ನು ಅಡುವುದಲ್ಲ. ಅದು ತುಂಬಾ ಖಾಸಗಿಯಾದುದು. ಜೊತೆಗೆ ಧರ್ಮ ಜನರ ಜೊತೆ ಮುಖಾಮುಖಿಯಾಗುತ್ತ ಬೆಳೆಯುತ್ತ ಹೋಗಬೇಕು. ಹಿಂದೂ ಧರ್ಮದ ಶ್ರೇಷ್ಠತೆ ಇರುವುದು ಇಂತಹ ಮುಖಾಮುಖಿಯಲ್ಲೆ. ಒಂದು ಧರ್ಮ ಇನ್ನೊಂದು ಧರ್ಮದ ಜೊತೆ, ವಿಭಿನ್ನ ತಾತ್ವಿಕ ಚಿಂತನೆಗಳ ಜೊತೆ ಮುಖಾಮುಖಿಯಾದಾಗಲೇ ಅದರ ಶೇಷ್ಠತೆಗೆ ಇನ್ನಷ್ಟು ಮೆರಗು ಬರುತ್ತದೆ. ಆದರೆ ಧರ್ಮವನ್ನು ಲಾಭದ ದೃಷ್ಟಿಯಿಂದ ನೋಡುವವರು ಮುಖಾಮುಖಿಗೆ ಅಂಜುತ್ತಾರೆ. ಅವರು ಧರ್ಮ ಗ್ರಂಥಗಳನ್ನು ಹಿಡಿದುಕೊಂಡು ಅದನ್ನು ಗಟ್ಟಿ ಮಾಡಿ ಭಟ್ಟಿ ಇಳಿಸುತ್ತಾರೆ. ಒಷೋ ಹೇಳುವಂತೆ ಧರ್ಮವನ್ನು ಗ್ರಂಥಗಳ ಮೂಲಕ ತಿಳಿದುಕೊಳ್ಳುವವರು ಧರ್ಮ ಪಂಡಿತರು ಆಗಬಹುದೇ ಹೊರತೂ ಧರ್ಮ ಔನ್ನತ್ಯ ಅವರ ಅರಿವಿಗೆ ಬರುವುದಿಲ್ಲ.
ಈ ಗಣೇಶನ ಪರವಾಗಿರುವವರು ಮತ್ತು ಆತನನ್ನು ವೈಜ್ನಾನಿಕ ಸಂಶೋಧನೆಗಳಿಗೆ ಒಳಪಡಿಸುವವರನ್ನು ನೋಡಿದ ತಕ್ಷಣ ಪಾಪ ಅನ್ನಿಸುತ್ತದೆ.  ಗಣೇಶ ಎಂದರೆ ಹೀಗೆ ಆತ ಇರುವುದು ಹೀಗೆ ಎಂದು ನಂಬಿಕೊಂಡವರು ಮೂರ್ತಿ ಪೂಜಕರು. ಅವರು ತಾವು ಫುಜಿಸುವ ಮೂರ್ತಿ ಹೀಗೆ ಇದೆ, ಹೀಗೆ ಇರಬೇಕು ಎಂದು ನಂಬಿಕೊಂಡವರು. ಅವರು ಗಣಪತಿಯ ಸೊಂಡಿಲು ಕೊಂಕುವುದಕ್ಕೂ ಬಿಡಲಾರರು. ಇನ್ನು ಗಣೇಶನ ಬಗ್ಗೆ ಆತನ ಹಿನ್ನೆಲೆಯಲ್ಲಿ ಬಗ್ಗೆ ಆತನ ಜಾತಿಯ ಬಗ್ಗೆ ಸಂಶೋಧನೆ ಮಾಡಲು ಹೊರಟವರು ಕೂಡ ಇವರಿಗಿಂತ ಭಿನ್ನವಾಗಿಲ್ಲ. ಮೂರ್ತಿ ಭಂಜನೆ ಅವರ ಕಾಯಕ.
ಗಣೇಶನಿಗೆ ಜನಿವಾರ ಹಾಕಿ ಕುಳ್ಳರಿಸುವವರು ಒಂದೆಡೆಯಾದರೆ, ಆತ ಕೀಳು ಜಾತಿಯಿಂದ ಬಂದವ ಎಂದು ಭಾರಿ ಸಂಶೋಧನೆ ಮಾಡಿ ಹೆಮ್ಮೆಯಿಂದ bI ಗುವ ವೈಚಾರಿಕ ಸಮುದಾಯ. ಅವರಿಗೆ ಎಲ್ಲೆಡೆ ಕಾಣುವುದು ಜಾತಿ ಮತ್ತು ಶೋಷಣೆ ಮಾತ್ರ. ಈ ಎರಡೂ ಪ್ರಕಾರದ ಜನ ಬಣ್ಣದ ಕನ್ನಡ ಹಾಕಿಕೊಂಡವರೆ. ಅವರಿಗೆ  ಎಲ್ಲವೂ ಈಸ್ಟ್ ಮನ್ ಕಲರಿನಲ್ಲೇ ಕಾಣುತ್ತದೆ.
ಗಣೇಶನನ್ನು ಪೂಜಿಸುವವರು ಆತನನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುತ್ತಿಲ್ಲ. ದೇವರು ಎಂದರೆ ಒಂದು ತತ್ವ. ಅದು ಬದುಕಿಗೆ ದಾರಿ ತೋರಿಸುವ ಬೆಳಕು. ಬೆಳಕು ಎಂದರೆ ಬೆಳಕು ಮಾತ್ರ. ಬೆಳಕನ್ನು ನೋಡುವವರಿಗೆ ದಾರಿ ಕಾಣುತ್ತದೆ. ನೋಡದೇ ನಿರಾಕರಿಸುವವರಿಗೆ ಕತ್ತಲಿಂದ ಹೊರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬೆಳಕಿಗೆ ಜಾತಿ ಇದೆಯಾ ? ಬೆಳಕಿನ ಮೂಲವನ್ನು ಕಂಡು ಹಿಡಿಯುವುದು ಹುಚ್ಚುತನವಲ್ಲವೆ ?
ಗಣೇಶನನ್ನು ಕೇವಲ ಮೂರ್ತಿಯನ್ನಾಗಿ ನೋಡವವರಿಗೆ ಆತನಿಂದ ಏನೂ ದಕ್ಕುವುದಿಲ್ಲ. ಆತನೂ ಅವರಿಗೆ ದಕ್ಕುವುದಿಲ್ಲ. ಇಂತವರಿಗೆ ಯಾವತ್ತೂ ಗಣೇಶನನ್ನು ಸ್ಪರ್ಶಿಸುವುದು ಸಾಧ್ಯವಿಲ್ಲ. ಆತನನ್ನು ಹಾಗೆ ಪಕ್ಕಕ್ಕೆ ಕರೆದುಕೊಂಡು ತನ್ನವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.  ದೇವರನ್ನಿ ನಮ್ಮವರನ್ನಾಗಿ ಮಾಡಿಕೊಳ್ಳದಿದ್ದರೆ ಯಾವ ಪ್ರಯೋಜನವೂ ಇಲ್ಲ. ಆಗ ದೇವರೆಂದರೆ ಕೇವಲ ಪ್ರತಿಮೆಯಾಗಿ ಉಳಿದು ಬಿಡುತ್ತದೆ.
ಗಣೇಶ ಕಾಡಿನಲ್ಲಿ ವಾಸಿಸುವ ಕೆಳ ಜಾತಿಯ ವ್ಯಕ್ತಿಯಾಗಿದ್ದ ಎಂದು ಹೇಳಿದರೆ ಏನು ಹೇಳಿದಂತಾಯಿತು ? ಆತ ಕಾಡಿನಲ್ಲೇ ವಾಸಿಸಿದ್ದರಬಹುದು. ಕೆಳ ಜಾತಿಯವನೇ ಆಗಿರಬಹುದು. ಈ ಇತಿಹಾಸ ಗಣೇಶನನ್ನು ಬದಲಿಸಲಾರದು. ಹಿಂದೂಗಳ ಮನಸ್ಸಿನಲ್ಲಿ ಗಣೇಶನ ಬಗ್ಗೆ ಇರುವ ಸ್ಥಾನಕ್ಕೆ ಚ್ಯುತಿ ಬರಲಾರದು. ಗಣೇಶ ಈಗ ಏನು ಎಂಬುದು ನಮಗೆ ಮುಖ್ಯ. ಜೊತೆಗೆ ಕೆಳ ಜಾತಿಯ ವ್ಯP್ತಯೊಬ್ಬ ದೇವರಾದರೆ ನಾವೆಲ್ಲ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ಇದಕ್ಕೆ ಬದಲಾಗಿ ಗಣೇಶ ಕೆಳ ಜಾತಿಯವ ಆತನನ್ನು ಪೂಜಿಸಬೇಡಿ ಎಂದು ಮೇಲ್ಜಾತಿಯ ಜನರಿಗೆ ಹೇಳಲು ಹೊರಟರೆ ಅದು ವಿಕೃತಿ.
ಗಣೇಶನ ದೇಹವೇ ಒಂದು ವಿಸ್ಮಯ. ಆತನ ದೇಹದ ಕೆಳಭಾಗ ಮನುಷ್ಯನದು. ತಲೆ ಆನೆಯದು. ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆ. ಆತ ನಡೆಯುವಾಗ ಮನುಷ್ಯನ ದೇಹವನ್ನು ಆನೆಯ ತಲೆಯನ್ನು ಹೊತ್ತು ಒಯ್ಯುತ್ತಾನೆ  ಆತನಲ್ಲಿ ಆನೆ ಮರಿಯ ತುಂಟತನವಿದೆ. ಜೊತೆಗೆ ವೈಚಾರಿಕ ಪ್ರಜ್ನೆಯಿದೆ. ವಿಶ್ವ ಪರ್ಯಟನ ಮಾಡು ಎಂದರೆ ತಂದೆ ತಾಯಿಯ ಸುತ್ತ ಬಂದು ಅಪ್ಪ ಅಮ್ಮನೇ ಸರ್ವಸ್ವ ಎಂದು ತೋರಿದ ಜಾಣ ಮಗ. ಹೀಗಾಗಿ ಎಲ್ಲರೂ ಗಣೇಶನಂತಹ ಮಗ ನನಗೆ ಬೇಕು ಎಂದು ಆಸೆ ಪಟ್ಟರೆ ಅಶ್ಚರ್ಯವಿಲ್ಲ.
ಗ‹ಣೇಶನ ಕಿವಿ ದೊಡ್ದದು. ಅಂದರೆ ಎಲ್ಲವನ್ನೂ ಕೇಳುವುದಕ್ಕೆ ಆತ ಸಿದ್ಧ. ಕೇಳುವಿಕೆಯೇ ಒಂದು ಅದ್ಭುತ. ಯಾಕೆಂದರೆ ಕೇಳುವುದು ಸುಲಭವಲ್ಲ. ಹೇಳುವುದು ಸುಲಭ. ನಾವೆಲ್ಲ ಹೇಳುವವರು, ಕೇಳುವವರಲ್ಲ. ಕೇಳುವುದಕ್ಕೆ ತಾಳ್ಮೆ ಬೇಕು. ಹೇಳುವುದಕ್ಕೆ ತಾಳ್ಮೆ ಬೇಕಾಗಿಲ್ಲ. ನಮ್ಮ ಒಳಗಿರುವುದನ್ನು ಹೊರಹಾಕುವುದು ಸುಲಭ. ಆದರೆ ಹೇಳಿದ್ದನ್ನು ಕೇಳಿಸಿಕೊಳ್ಳುವುದು ಕಷ್ಟ. ದೊಡ್ಡ ಕಿವಿಯ ಗಣೇಶ ಸಾವಿರಾರು ಭಕ್ತರು ಹೇಳಿದ್ದನ್ನು ಏಕಕಾಲದಲ್ಲಿ ಕೇಳಿಸಿಕೊಳ್ಳಬಲ್ಲ. ಅವನ ಕಿವಿ ಅಷ್ಟು ದೊಡ್ಡದು.
ಗಣೇಶನ ವಾಹನ ಇಲಿ. ನೀವು ಎಂದಾದರೂ ಇಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ ? ಅದು ಎಂದೂ ಸಹ ಸುಮ್ಮನೆ ಕುಳಿತುಕೊಳುವುದಿಲ್ಲ ಚಾಂಚಲ್ಯವೇ ಅದರ ಪ್ರವೃತಿ. ಇಂತಹ ಪ್ರಾಣಿಯನ್ನು ವಾಹನವನ್ನಾಗಿ ಗಣೇಸ ಯಾಕೆ ಮಾಡಿಕೊಂಡ ? ಚಂಚಲತೆಯನ್ನು ನಿಯಂತ್ರಣದಲ್ಲಿ ಇಟ್ತುಕೊಳ್ಳುವ ತತ್ವ ಇದರಲ್ಲಿ ಅಡಗಿರಬಹುದೇ ?
ಈ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ನಮ್ಮ ದೇವರುಗಳು ಪ್ರಾಣಿಗಳನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡಿರುವುದು ಅಪರಾಧ. ಇದು ಅರಣ್ಯ ಕಾನೂನಿಗೆ ವಿರುದ್ಧ ಎಂದು ಮಾತನಾದಿದರೆ ? ಕಾನೂನು ಪ್ರಕಾರ ಈ ವಾದ ಸರಿ ಇರಬಹುದು. ಆದರೆ ನಮ್ಮ ಕಾನೂನಿಗೆ ದೇವರನ್ನು ಒಳಪಡಿಸುವುದು ಮೂರ್ಖತನ. ದೇವರಿಗೆ ಮನುಷ್ಯ ನಿರ್ಮಿತ ಕಾನೂನು ಅನ್ವಯವಾಗುವುದಿಲ್ಲ ಯಾಕೆಂದರೆ ಆತ ದೇವರು. ಹಾಗೆ ನಮ್ಮ ಜಾತಿ ಪದ್ಧತಿ ಜಾತಿ ಸಂಘರ್ಷ ದೇವರಿಗೆ ಸಂಬಂಧವಿಲ್ಲ.
ದೇವರು ಮನುಷ್ಯನ ಅಸಹಾಯಕತೆಯಲ್ಲಿ ದು:ಖದಲ್ಲಿ ಹುಟ್ಟುತ್ತಾನೆ. ಕೆಲವೊಮ್ಮೆ ನಡುವಿನ ಅಸಮಾನ್ಯ ವ್ಯಕ್ತಿಗಳು ದೇವರಾಗುತ್ತಾರೆ. ಹೀಗೆ ದೇವರಾಗುವ ಪ್ರಕ್ರಿಯೆ ಒಮ್ಮೆಲೆ ಆಗುವುದಲ್ಲ.  ಅದು ಕಾಲ ಕ್ರಮೇಣ ನಡೆಯುವ ಪ್ರಕ್ರಿಯೆ. ದೇವರು ಶಕ್ತಿ ತುಂಬಿಕೊಳ್ಳುವುದು ಹಾಗೆ. ನಮ್ಮಲ್ಲಿ ಪ್ರಜಾಪಾಲಕ ದೇವರಾದ ಹಲವು ಉದಾಹರಣೆಗಳಿವೆ. ಹಾಗೆ ಸಿನೆಮಾ ನಟ ನಟಿಯರೂ ದೇವರಾದದ್ದಿದೆ. ಒಮ್ಮೆ ದೇವರಾದ ಮೇಲೆ ಆತ ತನ್ನ ರೂಪವನ್ನು ಕಳೆದುಕೊಂಡು ತತ್ವವಾಗುತ್ತಾನೆ. ಹೀಗೆ ತತ್ವವಾಗಿ ಬೆಳೆದ ದೇವರು ತತ್ವ ರೂಪದಲ್ಲಿ ಕಾಣುತ್ತಾನೆಯೇ ಹೋರತೂ ದೈಹಿಕವಾಗಿ ಅಲ್ಲ.
ಗಣೇಶ ಕೂಡ ಒಂದು ತತ್ವ. ಆತನ ತತ್ವವನ್ನು ನಾನು ಗಣ ತತ್ವ ಎಂದು ಕರೆಯುತ್ತೇನೆ. ಈ ತತ್ವ ಉಳಿದೆಲ್ಲ ತತ್ವಕ್ಕಿಂತ ಭಿನ್ನವೂ ಶತಿಯುತವೂ ಆಗಿದೆ. ಯಾಕೆಂದರೆ ಮನುಷ್ಯರೂ ಮತ್ತು ಪ್ರಾಣಿಗಳ ಸಹಬಾಳ್ವೆ ಇಲ್ಲಿ ಅಡಗಿದೆ. ಜೊತೆಗೆ ಆತ ಯೋನಿಜನಲ್ಲ. ಆತ ಹುಟ್ಟಿದ್ದು ಮಣ್ಣಿನಿಂದ. ಮಣ್ನು ಎಂದರೆ ಭೂಮಿ. ಹೀಗಾಗಿ ಆತ ಭೂಮಿ ಪುತ್ರನೂ ಕೂಡ. ಇದು ಭೂಮಿ ನಮ್ಮ ತಂದೆ ತಾಯಿ ಎಂಬ ತತ್ವವನ್ನು ಒಳಗೊಂಡಿದೆ. ಭೂಮಿ ಪೂಜೆ ಮಾಡುವ ಈ ದೇಶದಲ್ಲಿ ಭೂಮಿಯಿಂದ ಹುಟ್ಟಿದ ಎಂದರೆ ಆತ ಕೆಳ ಜಾತಿಯವನಿರಬೇಕು ಎಂದು ಕುತರ್ಕ ಮಾಡಬೇಕಾದ ಅಗತ್ಯವಿಲ್ಲ.  ಆತ ಮಣ್ಣಿನ ಮಗ ಎಂದುಕೊಂಡರೆ ಸಾಕು.
ಗಣೇಶ ಮನುಷ್ಯರನ್ನು ಪ್ರತಿನಿಧಿಸುತ್ತಾನೆ. ಪ್ರಾಣಿ ಸಂಕುಲದ ಪ್ರತಿನಿಧಿಯಾಗುತ್ತಾನೆ. ಈ ಭೂಮಿಯ ಮಗನಾಗುತ್ತಾನೆ. ಶಿವ ತತ್ವದ ಮುಂದುವರಿಕೆಯಾಗುತ್ತಾನೆ. ಹೀಗಾಗಿಯೇ ಅವನಿಗೆ ದೈವ ಪಟ್ಟ ಸಿಕ್ಕಿದ್ದು ಸ್ವಾಭಾವಿಕವೇ ಹೊರತೂ ಅಸ್ವಾಭಾವಿಕವಲ್ಲ.
ಶಿವ ನಟರಾಜನಾದರೆ ಗಣೇಶ ನರ್ತನಪ್ರಿಯ. ಜೊತೆಗೆ ಆತ ಮದುವೆಯಾಗದವ. ಆತನಿಗೆ ಸಿದ್ಧಿ ಬುದ್ಧಿ ಎಂಬ ಇಬ್ಬರು ಹೆಂಡಿರು ಎಂದು ಹೇಳಲಾಗುತ್ತಿದೆಯಾದರೆ ಇದಕ್ಕೆ ಹೆಚ್ಚಿನ ಆಧಾರವಿಲ್ಲ್ ಜೊತೆಗೆ ಗಣೇಶನ ಹೆಂಡಂದಿರು ಕೈಲಾಸದಲ್ಲ್ಲಿ ಕಾಣುಸಿಕೊಂಡ ಉದಾಹರಣೆಯೂ ಇಲ್ಲ. ಆದ್ದರಿಂದ ಆತನನ್ನು ಬ್ರಹ್ಮಚಾರಿ ದೇವರು ಎಂದೂ ಪರಿಗಣಿಸಬಹುದು. ಆತ ಬ್ರಹ್ಮಚಾರಿ ದೇವರಾದ್ದರಿಂದ ಆತನಿಗೆ ಹೆಂಡಂದಿರ ಕಾಟವೂ ಇಲ್ಲ.
ಗಣೇಶನ ಹುಟ್ಟನ್ನು ಸಂಶೋಧನೆ ಮಾಡಿರುವ ಯೋಗಿಶ್ ಮಾಸ್ಟರ್ ಆತನ ಕೈಯಲ್ಲಿ ಕತ್ತಿ ಮಚ್ಚು ನೀಡಿದ್ದಾರೆ ಎಂಬುದು ಇನ್ನೊಂದು ಆರೋಪ. ಆದರೆ ಗಣೇಶ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಾಗಿ ಬುದ್ದಿಯನ್ನು ಪ್ರತಿನಿಧಿಸುವ ದೇವರು. ಆತ ಜಾಣತನಕ್ಕೆ ಹೆಸರು ವಾಸಿ. ಆತ ಲೋಕ ಕಲ್ಯಾಣಕ್ಕಾಗಿ ಮಾಡಿದ ಯಾವುದೇ ಕೆಲಸವೂ ಆಗಿದ್ದು ಜಾಣತನದಿಂದ. ಆತ ನೇರ ಯುದ್ಧ ಮಾಡಿದ್ದಕ್ಕಿತ ಪರೋಕ್ಷ ಯುದ್ಧ ಮಾಡಿದ್ದೇ ಹೆಚ್ಚು.
ಗಣೇಶ£ ದೇಹ ಕೂಡ ಬೃಹತ್ ಅದುದು. ಆತನದು ಸಿಕ್ಸ್ ಪ್ಯಾಕ್ ದೇಹವಲ್ಲ. ವಿಷ್ಣುವಿನಂತೆ ಸುಕೋಮಲ ದೇವವನ್ನಾಗಲಿ, ಅವನ ಅಪ್ಪ ಶಿವನಂತಹ ಕಾಠಿಣ್ಯವನ್ನು ಹೊರಸೂಸುವ ದೇಹವನ್ನು ಆತ ಹೊಂದಿಲ್ಲ. ಅವನ ಮನುಷ್ಯ ದೇಹದ ಭಾಗದಲ್ಲಿ ಬೊಜ್ಜು ಕಂಡು ಬಂದರೆ ವಿನಾಯಕನ ತಲೆಯ ಭಾಗ ಸದಾ ಜಾಗೃತ
ಇದಕ್ಕೆ ಪೂರಕವಾದ ಕಥೆಯೊಂದಿದೆ. ಅದು ಕೇವಲ ಪುರಾಣವೇ ಆಗಿರಬಹುದು, ಆದರೆ ಅದು ನಮಗೆ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸನಿಗೆ ಬರವಣಿಗೆಯಲ್ಲಿ ಅಂತಹ ಪ್ರಾವಿಣ್ಯತೆ ಇತ್ತೊ ಇಲ್ಲವೋ ಅಂತೂ ಮಹಾಭಾರತವನ್ನು ಬರೆಯಲು ಆತ ನಿಯೋಜಿಸಿಕೊಂಡಿದ್ದು ಗಣೇಶನನ್ನು. ವ್ಯಾಸ ಮಹಾಭಾರತದ ಕಥೆಯನ್ನು ವ್ಯಾಸ ಬಾಯಲ್ಲಿ ಹೇಳಿತ್ತಿದ್ದರೆ, ಹೇಳಿ ಮುಗಿಸುವುದಕ್ಕಿಂತ ಮೊದಲು ಗಣೇಶ ಬರೆದು ಮುಗಿಸಿ ಬಿಡುತ್ತಿದ್ದನಂತೆ. ಈ ಕಥೆ ಅಥವಾ ಪುರಾಣ ಒಪ್ಪಿಕೊಳ್ಳುವುದೆಂದರೆ ಗಣೇಶನ ಬುದ್ದಿ ಮತ್ತೆಯನ್ನು. ಆತ ಬರೆಹದಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದ ಎಂಬುದನ್ನು.
ನಮ್ಮ ನಂಬಿಕೆಯ ಪ್ರಕಾರ ಸರಸ್ವತಿ ವಿದ್ಯಾ ದೇವತೆ. ಆದರೆ ಸರಸ್ವತಿ ಸದಾ ವೀಣೆಯನ್ನು ಭಾರಿಸುತ್ತ ಕುಳಿತಿರುವವಳು. ಹೀಗಾಗಿ ಈ ಪೋರ್ಟ್ ಫೋಲಿಯೋ ಗಣೇಶನ ಪಾಲಿಗೆ ಬಂದಿದೆ. ಆತ ವಿದ್ಯಾ ದೇವತೆಯೂ ಆಗಿಬಿಟ್ಟಿದ್ದಾನೆ

9 comments:

ಕಾವ್ಯಾ ಕಾಶ್ಯಪ್ said...

Well said sir....

ಕಾವ್ಯಾ ಕಾಶ್ಯಪ್ said...

Well said Sir....

mitra said...

New approach in understanding the concept of God and religion. But problem in our society will never end until people stop politicizing God and religions for their benefit. Religion is way of life which is personal and God is personal belief people making personal thing public are those spooling harmony is society which is making God and religion loose its basic meaning and respect and they are forgetting it!! Krushik AV

mitra said...

Very insightful article gave new direction to understand God and religions. But people who play politics in the name of God and religion failed to understand this and create puss spoil harmony in society. Religion is supposedly way of life and God is personal belief but people brought both into streets and made it public. Also fighting for those features which is need to be loved and believed which is ridiculous! Krushik

mitra said...

Very insightful article gave new direction to understand God and religions. But people who play politics in the name of God and religion failed to understand this and create puss spoil harmony in society. Religion is supposedly way of life and God is personal belief but people brought both into streets and made it public. Also fighting for those features which is need to be loved and believed which is ridiculous!

Cartoonist Keshav said...

Uttama vishleshane Nididdiri sir

Swarna said...

ಬುಧ್ಧಿ ಜೀವಿಗಳ ಅವಾಂತರಗಳಿಗೆ ಕೊನೆ ಇಲ್ಲ. ಯಾವ ದೇವರು ಯಾವ ಗುರುವನ್ನೂ ಅವರು ಬಿಡಲಿಲ್ಲ. ಆದರೆ ಇದರ ಪರಿಣಾಮ ಜನ ಸಾಮಾನ್ಯರ ನಂಬಿಕೆಯ ಮೇಲೇ ಅಷ್ಟೇನೂ ಆಗಿಲ್ಲ ಬಹುಶಃ ಆಗೋಲ್ಲ . ಉತ್ತಮ ಬರಹ Pictud

Pradeep H said...

ಪುರಾಣಗಳನ್ನು ಇತಿಹಾಸದಲ್ಲಿ ಹುಡುಕುವ ಇವರ ಪ್ರಯತ್ನದ ಬಗ್ಗೆ ಎಂತೋ...

Raghav said...

Well, it is a timely article just before Ganesh chouti. Critisising our god has become easy way to get publicity for some so called intellectuals.If every body understand the truth behind every symbol, many will die starving!!!Not only Ganesh but whole hinduism represents so many values of life & very exist
ence of this universe itself.Thanks for good article

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...