Friday, January 31, 2025

ನಾನು ಪುನರ್ಜನ್ಮ ಪಡೆದು ಬಂದೆ..

 ಕಳೆದ ಕೆಲವು ತಿಂಗಳುಗಳಿಂದ ನಾನು ಏನನ್ನೂ ಬರೆಯಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಆರೋಗ್ಯ. ಕಳೆದ ಜೂನ್ ತಿಂಗಳು. ನಾನು ಆಸ್ಪತ್ರೆ ಸೇರಿ ಬಿಟ್ಟೆ.. ಸುಮಾರು ೧೫ ದಿನ ಐಸಿಯು ನಲ್ಲಿದ್ದೆ. ನನ್ನ ಆರೋಗ್ಯ ಕೈಕೊಟ್ಟಿತ್ತು. 

ಬ್ರಾಂಕಿಯಲ್ ಆಸ್ತಮಾ ಹೋಗಿ ಕಾರ್ಡಿಯಾಕ್ ಆಸ್ತಮಾ ಕಾಡತೊಡಗಿತ್ತು. ಬಹಳ ವರ್ಷಗಳಿಂದ ನನ್ನನ್ನು ಕಾಡುತ್ತಿದ್ದ ಸಕ್ಕರೆ ಕಾಯಿಲೆ. ಅದೂ ಸುಸ್ತಾಗಿ ಕಿಡ್ನಿ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಶ್ವಾಸ ಕೋಶದಲ್ಲಿ ನೀರು ತುಂಬಿಕೊಂಡಿತ್ತು 

ಮೈಸೂರಿನ ಆಸ್ಪತ್ರೆಯಲ್ಲಿ ಹಲವು ತಿಂಗಳು ಕಾಲ ಚಿಕಿತ್ಸೆ ಪಡದೆ..ನಂತರ ವಿಶ್ರಾಂತಿ..

ಈ ಅವಧಿಯಲ್ಲಿ ಬರೆಯಬೇಕು ಎಂಬ ಒತ್ತಡ. ಆದರೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಒಳಗೆ ಕಾಡುತ್ತಿದ್ದ ಅದೆಷ್ಟೋ ವಿಚಾರಗಳು.. ಅದನ್ನೆಲ್ಲ ಹೊರಹಾಕಬೇಕು. ಎಲ್ಲವನ್ನ್ನು ಹೊರಹಾಕಿ ನಿರಾಳವಾಗಿ ಬಿಡಬೇಕು ಎಂದುಕೊಂಡಿದ್ದೆ.

ಈ ನದುವೆ ಬಹಳಷ್ಟು ಜನ ನನ್ನ ಕಥೆ ಮುಗಿಯಿತು ಎಂದುಕೊಂಡರು. ಇನ್ನೆಷ್ಟು ದಿನ ಈ ಭಟ್ಟ ಹೋಗ್ತಾನೆ ಎಂದು ಮಾತನಾಡಿಕೊಂಡರು ಹಲವರು ಹೋಗುವವನನ್ನು ಕೊನೆಯದಾಗಿ ಮಾತನಾಡಿ ಬರೋಣ ಎಂದು ಬಂದರು.. ಬದುಕಿನ ನಶ್ವರತೆ ಬಗ್ಗೆ ಮಾತನಾಡಿ ಸಾರ್ ಎಲ್ಲರೂ ಹೋಗುವವರೇ. ಕೆಲವರು ಮೊದಲು ಕೆಲವು ನಂತರ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಅವರ ಮಾತಿನ ಅರ್ಥ ನೀನು ಮೊದಲು ಹೋಗ್ತೀಯಾ ಹೋಗಿಬಿಡು ಎನ್ನುವಂತಿತ್ತು.

ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಮನಸ್ಸು ಘಟ್ಟಿಯಾಗಿತ್ತು, ಆದರೆ ನನಗಿದ್ದುದು ಹಣದ ಸಮಸ್ಯೆ. ಹಲವಾರಿ ಸ್ನೇಹಿತರು ಸಹಾಯಕ್ಕೆ ನಿಂತರಿ ಗೆಳೆಯ ಪ್ರಕಾಶ್ ರೈ ಎಲ್ಲ ವೆಚ್ಚ ಭರಿಸುವುದಾಗಿ ಹೇಳಿದ.. ಸರ್ಕಾರ ಕೂಡ ಮುಂದೆ ಬಂತು..

ನನ್ನ ಬಹುತೇಕ ಸಮಸ್ಯೆಗಳು ಬಗೆಹರಿದಿತ್ತು. 

ಈ ನಡುವೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ ಶುಶ್ರೂತ್ ಗೌಡ ಅವರು ಹೆಚ್ಚಿನ ಮುತವರ್ಜಿ ಒಹಿಸಿದರು.

ನಾನು ಸಾವಕಾಶವಾಗಿ ಸುಧಾರಿಸಿಕೊಳ್ಳತೊಡಗಿದೆ..

ಈಗ ಕಿಡ್ನಿ ಶಕ್ತ್ರಿಯುತವಾಗಿದೆ. ಹೃದಯವೂ ಪರ್ಫೆಕ್ಟ್ ಆಗಿದೆ. ಉಸಿರಾಟದ ತೊಂದರೆ ಬಹುಮಟ್ಟಿಗೆ ಗುಣವಾಗಿದೆ,,

ಅದಕ್ಕೆ ಹೇಳಿದ್ದು ಇದು ನನ್ನ ಪುನರ್ ಜನ್ಮ ಅಂತ.

ಇನ್ನೂ ಹೊಸ ಉಮೇದಿಯಿಂದ ಕೆಲಸ ಮಾಡಲು ಸಿದ್ದನಾಗುತ್ತಿದ್ದೇನೆ. ಹಾಗೆ ಬರೆಯಬೇಕಾದ್ದು ತುಂಬ ಇದೆ, ಅದರಂತೆ ನನ್ನ ಸುದ್ದಿ ವಿಶ್ಲೇಷಣೆ.

ಬೆಂಗಳೂರಿನಲ್ಲಿ ಆಫೀಸ್ ಪ್ರಾರಂಭಿಸಬೇಕು.. ಸಣ್ಣ ತಂಡವನ್ನ್ನು ಕಟ್ಟಬೇಕು.. ಮತ್ತೆ ಕೆಲಸ ಮಾಡಬೇಕು.

ಇದಕ್ಕೆಲ್ಲ ತಮ್ಮ ಪ್ರೀತಿ ಬೆಂಬಲ ಬೇಕು.. ತಾವು ಎಂದಿನಂತೆ ನನ್ನನ್ನು ಬೆಂಬಲಿಸಿಸುತ್ತಿರಿ ಎಂದು ನಂಭಿದ್ದ್ದೇನೆ.

ತ್ಯಾಂಕ್ಸ್..

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...