Tuesday, January 17, 2023

RAJANATH SINGH ON MEDIA#Shashidharbhat#Sudditv#Karnatakapolitics

ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅತಿ ಹೆಚ್ಚಿನ ಮಾಧ್ಯಮ ಸ್ವಾತಂತ್ರ್ಯವನ್ನು ನೀಡಲಾಗಿದೆ..
ಇದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ,,
ಇದು ನಿಜಾನಾ ? ಇವತ್ತಿನ ಭಾರತೀಯ ಪತ್ರಿಕೋದ್ಯಮ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆಯಾ ?
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ನಡುವೆ ಇರುವ ವ್ಯತ್ಯಾಸ ಯಾವುದು ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
https://studio.youtube.com/video/D_-CfpNTfLQ/edit
WATCH IN YOUTUBE

Wednesday, January 11, 2023

ಸಮ್ಮೇಳನವೆಂಬ ಬಲಪಂಥೀಯ ಜಾತ್ರೆ; ಇದಕ್ಕೊಂದು ಪ್ರತಿರೋಧ;; ಪರಿಷತ್ತಿಗೆ ಮುಕ್ತಿ ಯಾವಾಗ ?


 ಹಾವೇರಿಯ ಸರ್ಕಾರಿ ಕೄಪಾಪೋಷಿತ ಸಾಹಿತ್ಯ ಸಮ್ಮೇಳನ ಮತ್ತು ಬೆಂಗಳೂರಿನ ಪ್ರತಿರೋಧದ ಸಾಹಿತ್ಯ ಸಮ್ಮೇಳನ ಎರಡೂ ಮುಗಿದಿವೆ. ಈ ಎರಡೂ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡವರು ಹಿಂತಿರುಗಿದ್ದಾರೆ. ಈ ಸಾಹಿತ್ಯ ಸಮ್ಮೇಳನಗಳಿಂದ ತಮಗೆ ದಕ್ಕಿದ್ದೆಷ್ಟು ಎಂದು ಕೆಲವರಾದರೂ ಯೋಚಿಸುತ್ತಿರಬಹುದುದು. ಕೆಲವರಿಗೆ ಸಾಹಿತ್ಯ ಸಂಭ್ರಮದ ನೆನಪುಗಳು ಉಳಿದಿರಬಹುದು.. ಈ ಎರಡೂ ಸಮ್ಮೇಳನಗಳಲ್ಲಿ ಪಾಲ್ಗೊಂಡವರು ಇನ್ನೊಂದು ಸಾಹಿತ್ಯ ಸಮ್ಮೇಳನ ಬರುವವರೆಗೆ ತಮ್ಮ ಬದುಕಿನ ಝಂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಕೇಂದ್ರ ಸರ್ಕಾರ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಣ್ಣನವರ ಬಗ್ಗ್ರ್ ಯೋಚಿಸುತ್ತ ತಮ್ಮ ಬದುಕಿನ ಕಷ್ಟ ಕೋಟಲೆಗಳನ್ನು ಮರೆತು ಬದುಕಬಹುದು..

ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚಿಸಿದವರು ಭಾಷಣ ಕುಟ್ಟಿದವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಸ್ನೇಹಿತರಿಗೆ ತೋರಿಸಿ ಸಂತೋಷ ಪಡುತ್ತಿರಬಹುದು. ಇಷ್ಟಕ್ಕೆ ಎಲ್ಲವೂ ಮುಗಿದು ಹೋಯಿತೆ ? ಮುಂದೇನು ? ಈ ಪ್ರಶ್ನೆ ಬಹಳಷ್ಟು ಜನರಿಗೆ ಕಾಡಿರಲಿಕ್ಕಿಲ್ಲ. ಕಾಡುವುದೂ ಇಲ್ಲ.. ಯಾಕೆಂದರೆ ಇಂದಿನ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪವನ್ನು ಪಡೆದು ಬಿಟ್ಟಿವೆ.. ಜಾತ್ರೆಗೆ ನಾನು ಹೋಗಿ ಬಂದ ಎಂಬ ಸಂತೋಷ ಮುಂದಿನ ಜಾತ್ರೆ ಬರುವವರೆಗೆ ಇರುತ್ತದೆ.ಆದರೆ ಸಾಹಿತ್ಯ ಸಮ್ಮೇಳನಗಳ ಉದ್ದೇಶವೇನು ? ಈ ಸಾಹಿತ್ಯ ಸಮ್ಮೇಳನ ಸಾಹಿತ್ಯಿಕ ಉದ್ದೇಶಗಳನ್ನು ಎಷ್ಟ್ರರ ಮಟ್ಟಿಗೆ ಈಡೇರಿಸಿದೆ ಎಂಬುದು ಬಹು ಮುಖ್ಯವಾದ ಪ್ರಶ್ನೆ.. ಆದರೆ ಈ ಪ್ರಶ್ನೆಗಳು ಯಾರಿಗೂ ಮುಖ್ಯವಾಗಿಲ್ಲ.. ಇದಕ್ಕೆ ಬಹುಮುಖ್ಯವಾದ ಕಾರಣ ಈ ಸಮ್ಮೇಳನಗಳು ಸಂಪೂರ್ಣವಾಗಿ ಜಾತ್ರೆಯಾಗಿ ಬದಲಾಗಿದ್ದೇ ಆಗಿದೆ,,

ಯಾಕೆಂದರೆ ಜಾತ್ರೆಯ ಗುಣಧರ್ಮ ಮತ್ತು ಉದ್ದೇಶವೇ ಬೇರೆ. ಜಾತ್ರೆಗಳ ಕೇಂದ್ರ ಬಿಂದು ದೇವರೇ  ಆಗಿದ್ದರೂ ದೇವರು ಕೇವಲ ಮೆರವಣಿಗೆಗೆ ಸೀಮಿತವಾಗಿರುತ್ತಾನೆ. ಜಾತ್ರೆಗೆ ಬಂದವರು ದೇವರಾ ದರ್ಶನ ಮಾಡಿದರೂ ಅವರನ್ನು ಜಾತ್ರೆಗೆ ಸೆಳೆಯುವುದು ಅಲ್ಲಿನ ಸಂಭ್ರಮ.. ಜನರ ನಡುವೆ ಬೆರೆಯುತ್ತ ಬೆಂಡು ಬತ್ತಸು ಖರೀದಿಸಿ ಸಂಭ್ರಮಿಸುವುದೇ ಆಗಿರುತ್ತದೆ, ಇಂತಹ ಸಂಭ್ರಮ ಬಂದ ಭಕ್ತರಿಗೆ ಮನೋಲ್ಲಾಸವನ್ನು ನೀಡುತ್ತದೆ. ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಬೇಕಾದ್ದನ್ನುಕೊಡಿಸುವುದು ದೇವರ ದರ್ಶನಕ್ಕಿಂತ ಬಹುತೇಕ ಸಂದರ್ಭದಲ್ಲಿ ಮುಖ್ಯವಾಗಿರುತ್ತದೆ..ಹೀಗಾಗಿ ಅಲ್ಲಿ ದೇವರು ಅಮುಖ್ಯವಾಗೃತ್ತಾನೆ

ಈಗ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಸಮ್ಮೇಳನಗಳು ಇದೇ ಸ್ಥಿತಿಗೆ ಬಂದು ತಲುಪಿವೆ. ಸಾಹಿತ್ಯ ಸಮ್ಮೇಳನ ಎಂಬ ಜಾತ್ರೆಯಲ್ಲಿ ಸಾಹಿತ್ಯ ಸಂಸ್ಕೃತಿಯೇ ದೇವರು.. ಇಲ್ಲಿ ದೇವರ ದರ್ಶನ ಮತ್ತು ಆರಾಧನೆ ನಡೆಯಬೇಕು. ಹಾಗೆ ದೇವರನ್ನು ತರ್ಕಕ್ಕೆ ಬಗ್ಗಿಸಬೇಕು.. ದೇವರ ಜೊತೆ ಮುಖಾಮುಖಿಯಾಗಿ ಅವನನ್ನು ಆರಾಧಿಸುತ್ತಲೇ ಅವನ ತಪ್ಪು ಒಪ್ಪುಗಳ ಬಗ್ಗೆಯೂ ಪ್ರಶ್ನಿಸಬೇಕು.. ಹೀಗೆ ದೇವರನ್ನು ಪ್ರಶ್ನಿಸುವುದು ನಮ್ಮ ನಂಬಿಕೆಯ ಜಗತ್ತಿನಲ್ಲಿ ಬಹುಮುಖ್ಯವಾದ ಅಂಶವೂ ಆಗಿದೆ.. ನಮ್ಮ ಜನಪದ ದೇವರುಗಳು ಮತ್ತು ಶಕ್ತಿ ದೇವತೆಗಳ ಆರಾಧನೆಯಲ್ಲಿ ದೇವರ ಜೊತೆ ಜಗಳವಾಡುವ ಪರಂಪರೆಯೂ ಇದೆ.. ಆದರೆ ನಮ್ಮ ಸಾಹಿತ್ಯ ಸಮ್ಮೇಳನವೆಂಬ ಆರಾಧನೆಯಲ್ಲಿ ಈ ಆಂಶಗಳು ಮಾಯವಾಗಿವೆ. ಅಲ್ಲಿ ಏನನ್ನೂ ಪ್ರಶ್ನಿಸುವಂತಿಲ್ಲ. ಅಧಿಕಾರಸ್ಥರಿಗೆ ವೇದಿಕೆಯ ಮೇಲೆ ಸ್ಥಾನ ಕಲ್ಸಿಸಿ ಅವರನ್ನೇ ದೇವರೆಂದು ಪೂಜೆ ಮಾಡಲಾಗುತ್ತಿದೆ.. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಆದದ್ದೂ ಇದೇ. ಈ ಸಮ್ಮೇಳನದಲ್ಲಿ ಸಾಹಿತಿಗಳು, ಸಾಮಾಜಿಕ ಚಿಂತಕರು, ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವವರಿಗಿಂತ ಹೆಚ್ಚಾಗಿ ರಾಜಕಾರಣಿಗಳೆ ಮಿಂಚಿದರು.. ಸಮ್ಮೇಳನದ ಉಧ್ಘಾಟನಾ ಸಮಾರಂಭದಲ್ಲಿ, ಸಮಾರೋಪ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆಗಳಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರುಗಳೇ ಹೆಚ್ಚಾಗಿದ್ದವು. ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಅಧಿಕಾರಸ್ಥರು ಎಲ್ಲೆಡೆ ವಿಜೃಂಭಿಸುತ್ತಿದ್ದರು.. ಸಾಹಿತ್ಯ ಪರಿಷತ್ತು ಋಣ ಸಂದಾಯ ಮಾಡುವ ತರಾತುರಿಯಲ್ಲಿ ಇದ್ದಂತೆ ಕಾಣುತ್ತಿತ್ತು. ಹಾಗೆ ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲಿ ಪಾಲ್ಗೊಂಡ ಸಾಹಿತಿಗಳು ಕವಿಗಳು ಬರಹಗಾರರು ಸಾಹಿತ್ಯದ ಸ್ವಾಯತ್ತತೆಯನ್ನು  ಸರ್ಕಾರಕ್ಕೆ ಅಡವಿಟ್ಟ ಬಗ್ಗೆ ಧ್ವನಿ ಎತ್ತಲಿಲ್ಲ.. ಅಲ್ಲಿ ವಿಜೃಂಭಿಸುತ್ತಿದ್ದುದೇ ಭಟ್ಟಂಗಿತನ..

ಹಾವೇರಿ ಸಾಹಿತ್ಯ ಸಮ್ಮೇಳನ ಒಂದು ಸುತ್ತು ಮುಗಿಸಿದೆ ಎಂದು ನನಗೆ ಅನ್ನಿಸುತ್ತಿದೆ.. ೧೯೧೫ ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ಅಂಗಳವಾಗಿ ಪರಿವರ್ತಿತವಾಗಿದೆ. ಸಾಹಿತ್ಯ ಸಂಸ್ಕೃತಿ ಎನ್ನುವುದು ರಾಜಕೀಯ ಪಕ್ಷ ಒಂದರ ಪ್ರಚಾರದ ಅಂಗಳವಾಗಿ ಬದಲಾಗಿದೆ.. ಬಲಪಂಥೀಯರ ರಾಜಕೀಯ ಅಜೆಂಡಾದ ಭಾಗವಾಗಿದೆ. ೨೦೧೪ ರ ನಂತರ ದೇಶಭಕ್ತಿ ಮತ್ತಿ ದೇಶೀಯತೆಯ ವಿಕೃತ ರೂಪ ದೇಶದ ಎಲ್ಲೆಡೆ ತಾಂಡವವಾಡತೊಡಗಿದ್ದು ನಮಗೆಲ್ಲ ಗೊತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಸಾಹಿತ್ಯ, ಸಂಸ್ಕೃತಿ ಸಿನಿಮಾ ಎನ್ನುವ ಸೃಜನಶೀಲ ಅಬಿವ್ಯಕ್ತಿ ಮಾಧ್ಯಮಗಳನ್ನು ಬಳಸಿಕೊಳ್ಳುವುದು ತೀವ್ರ ರೂಪದಲ್ಲಿ ಪ್ರಾರಂಭವಾಯಿತು. ಇದರ ಭಾಗವಾಗಿಯೇ ಪುಣಾ ಫೀಲ್ಮ್ ಇನ್ ಸ್ಟೀಟ್ಯೂಟ್, ಮೈಸೂರಿನ ರಂಗಾಯಣದಂತಹ ಸಂಸ್ಥೆಗಳಲ್ಲಿ ಉಗ್ರಗಾಮಿ ಬಲಪಂಥೀಯರನ್ನು ಕೂಡ್ರಿಸಲಾಯಿತು. ಇವರೆಲ್ಲ ಇತಿಹಾಸವನ್ನು ತಿರುಚುತ್ತ, ಮುಸ್ಲೀಮ್ ವಿರೋಧಿ ಕೋಮು ಭಾವನೆಯನ್ನು ಪ್ರಸಾರ ಮಾಡುವ ಕೆಲಸದಲ್ಲಿ ನಿರತರಾದರು.. ಕಾಶ್ಮೀರೀ ಫೈಲ್ಸ್ ನಂತಹ ನಿನಿಮಾಗಳು ಬಂದವು. ಈ ಪ್ರಕ್ರಿಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಮಹೇಶ್ ಜೋಶಿ ಅವರ ರೂಪದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಟೇಕ್ ಓವರ್ ಮಾಡಿತು. ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊ<ಂಡ ಬಿಜೆಪಿ ಮಹೇಶ್ ಜೋಶಿಯವರನ್ನು ಗೆಲ್ಲಿಸಿತು. ಇದರೊಂದಿಗೆ ಸಾಹಿತ್ಯ ಪರಿಷತ್ ಬಲಪಂಥೀಯ ಹಿಂದೂವಾದಿಗಳ ಅಂಗಳವಾಗಿ ಬದಲಾಗಿ ಹೋಯಿತು.

ಇದಾದ ಮೇಲೆ ಬಂದಿದ್ದು ಹಾವೇರಿ ಸಾಹಿತ್ಯ ಸಮ್ಮೇಳನ. ಇಲ್ಲಿ ಅಲ್ಪಸಂಖ್ಯಾತರನ್ನು  ದಮಿನಿತರನ್ನು ನಿರ್ಲಕ್ಶಿದ್ದು ಬಲಪಂಥೀಯ ಅಜೆಂಡಾದ ಭಾಗವೇ. ಇದರಿಂದ ಆಶ್ಚರ್ಯ ಪಡಬೇಕಾಗಿಲ್ಲ. ಇದು ನಿರೀಕ್ಢಿತವೇ. ಒಂದೊಮ್ಮ  ಬಿಜೆಪಿ ನಿಯಂತ್ರಣದಲ್ಲಿರುವ ಮಹೇಶ್ ಜೋಷಿ ಯವರ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೀಗು ಸಮಾನ ಅವಕಾಶ ನೀಡಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಿತ್ತು,

ಇಂತಹ ಮನಸ್ಥಿತಿಯನ್ನು ವಿರೋಢಿಸುವ ಉದ್ದೇಶದಿಂದ ನಡೆದಿದ್ದು ಪ್ರತಿರೋಧ ಸಮಾವೇಶ. ಬೆಂಗಳೂರಿನಲ್ಲಿ ನಡೆದ ಈ ಸಮ್ಮೇಳನವನ್ನು ಸ್ವಾಗತಿಸಬೇಕಾಗಿದೆ. ಯಾಕೆಂದರೆ ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಮತ್ತು ಪ್ರತಿರೋಧ ಬಹುಮುಖ್ಯ, ಇದು ಜನತಂತ್ರವನ್ನು ಜೀವಂತವಾಗಿಡುತ್ತದೆ. ಆದರೆ ಈ ಪ್ರತಿರೋಧ ವ್ಯಕ್ತವಾಗಿದ್ದು ಸ್ವಲ್ಪ ತಡವಾಯಿತು ಎಂದು ನನಗೆ ಅನ್ನಿಸುತ್ತದೆ. ಸಾಹಿತ್ಯ ಪರಿಷತ್ತನ್ನು ಬಿಜೆಪಿ ಟೇಕ್ ಓವರ್ ಮಾಡಿದಾಗಲೇ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗಿತ್ತು.. ಇದಕ್ಕಾಗಿ ಪೆಂಡಾಲ್ ಘಟನೆಯ ವರೆಗೆ ಕಾಯಬೇಕಾಗಿರಲಿಲ್ಲ. ಸಾಹಿತ್ಯ ಪರಿಷತ್ತು ನಿಜ ಅರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಾಗಿ ಇರದೇ ನಾಗಪುರ ಪರಿಷತ್ತಾಗಿ ಬದಲಾಗುತ್ತಿದ್ದಾಲೇ ಪ್ರತಿರೋಧ ಹೊರಬರಬೇಕಾಗಿತ್ತು ಎಂದು ನಂಬಿದವನು ನಾನು. 

ಪ್ರತಿರೋಧ ಕೇವಲ ಒಂದು ಘಟನೆಗೆ ಸೀಮಿತವಾಗಿದ್ದರೆ ಸಾಕೆ ? ಸಾಹಿತ್ಯ ಪರಿಷತ್ ಅನ್ನು ಮತ್ತೆ ಎಲ್ಲ ಕನ್ನಡಿಗರ ಪರಿಷತ್ ಆಗಿ ಬದಲಿಸಬೇಕಾದ ಸಂದರ್ಭದಲ್ಲಿ ಮೂಲ ಉದ್ದೇಶ ಇದೇ ಆಗಿರಬೇಕಲ್ಲವೆ ? ಸಾಹಿತ್ಯ ಪರಿಷತ್ ಅನ್ನು ಈಗ ಜೋಷಿ ಪತ್ತು ಬಿಜೆಪಿಯಿಂದ ಮುಕ್ತಗೊಳಿಸಬೇಕಾಗಿದೆ. ಅದು ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗಾಗಿ ನಡಿಯಬೇಕಾದ ಹೋರಾಟ ಮತ್ತು ಪ್ರತಿರೋಧ. ಇದು ಎಲ್ಲ ಕನ್ನಡಿಗರೂ ಜೊತೆಯಾಗಿ ನಡೆಸಬೇಕಾದ ಹೋರಾಟ. ಇಲ್ಲದಿದ್ದರೆ ಕನ್ನಡ ಸಾಹಿತ್ಯಪರಿಷತ್ತಿಗೆ ನಾಗಪುರದ ಅಂಗ ಸಂಸ್ಥೆಯಂತೆ ಕೆಲಸ ಮಾಡುವುದು ಮುಂದುವರಿಯುತ್ತದೆ. ಸಾಹಿತ್ಯ ಪರಿಷತ್ತಿನ ಮುಕ್ತಿಯೇ ಈಗ ಬಹುದೊಡ್ಡ ಸವಾಲು.. ಅದಕ್ಕಾಗಿ ಪ್ರತಿರೋಧ ತಣ್ಣಗಾಗದಂತೆ ನೋಡಿಕೊಳ್ಳಬೇಕು. ಅದಕ್ಕೊಂದು ದೀರ್ಘಕಾಲೀನ ಕಾರ್ಯ ಸೂಚಿ ಬೇಕು,,

ಈಗ ಮಂಡ್ಯದಲ್ಲಿ ಮುಂದಿನ ಸಮ್ಮೇಳನ ನಡೆಯುವುದಾಗಿ ಪ್ರಕಟಿಸಲಾಗಿದೆ.. ಈ ಸಮ್ಮೇಳನ ಕೂಡ ಹಾವೇರಿ ಸಮ್ಮೇಳನದಂತೆ ನಡೆಯುತ್ತದೆ. ಇದಕ್ಕೂ ಪ್ರತಿರೋಧ ಸಮ್ಮೇಳನ  ನಡೆಯಬಹುದು.. ಆದರೆ ನಾವೂ ಈಗ ಕೇಳಬೇಕಾದ ಪ್ರಶ್ನೆ ಎಂದರೆ ಸಾಹಿತ್ಯ ಪರಿಷತ್ತಿಗೆ ಮುಕ್ತಿ ಯಾವಾಗ ?


Saturday, January 7, 2023

 ರೋಗಗ್ರಸ್ತ ಸಾಹಿತ್ಯ ಪರಿಷತ್; ರೋಗವನ್ನು ಗುಣಪಡಿಸುವುದು ಹೇಗೆ ?

ರಾಜಕಾರಣಿಗಳಿಗೆ ವೇದಿಕೆಯಿಂದ ನಿಷೇಧಿಸುವುದು ಸಾಧ್ಯವೆ ? ರಾಜಕಾರಣಿಗಳನ್ನು ವೇದಿಕೆಯ ಮುಂದೆ ಕುಳಿತುಕೊಳ್ಳುವಂತೆ ಮಾಡುವುದು ಸಾಧ್ಯವೆ ?

ಜನ ಸಾಹಿತ್ಯ ಸಮ್ಮೇಳನವನ್ನು ಸ್ವಾಗತಿಸಬೇಕು.. ಪ್ರತಿಭಟನೆ ಬೇಕೇ ಬೇಕು,

ಇದೊಂದೇ ಸಾಹಿತ್ಯ ಪರಿಷತ್ತಿನ ರೋಗಕ್ಕೆ ಮದ್ದಾಗಬಲ್ಲದೇ ?

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ

https://www.youtube.com/watch?v=4dB47smWqm8

Watch and react 

Friday, January 6, 2023

ಬಿಜೆಪಿಯ ಹಿಂದುತ್ವ ಕಾರ್ಡ್; ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಕಾರ್ಡ್, ಜೆಡಿಎಸ್ ನ ಒಕ್ಕಲಿಗ ಕಾರ್ಡ್; ಕನ್ನಡಿಗರ ಒಲವು ಯಾರ ಕಡೆಗೆ ?

CONGRESS HOPE
REAL PLYER
WEEKEST CM


ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನು ಮೂರು ತಿಂಗಳುಗಳು ಉಳಿದಿವೆ. ರಾಜ್ಯದ ಮೂರು ರಾಜಕೀಯ ಪಕ್ಷಗಳು ಜನರನ್ನು ಎದುರಿಸಲು ಸಿದ್ದವಾಗುತ್ತಿವೆ..ಜಾಥಾಗಳು ಸಭೆಗಳು ಸಮಾರಂಭಗಳು ನಡೆಯುತ್ತಿವೆ.. ನಾಯಕರುಗಳು ಮಾತಿನ ಮಂಟಪ ಕಟ್ಟುತ್ತಿವೆ. ಜನರ ಮನೆ ಬಾಗಿಲು ತಟ್ಟಿತ್ತಿವೆ..ಕರ್ನಾಟಕದ ಜನತೆ ಯಾವ ಪಕ್ಷದತ್ತ ಒಲವು ತೋರಿಸಬಹುದು ? ಯಾರನ್ನು ವಿಧಾನಸೌಧದ ಗದ್ದುಗೆಗೆ ಏರಿಸಬಹುದು ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಎಲ್ಲ ಪಕ್ಷಗಳೂ ತಮ್ಮದೇ ಅದ ಸಮೀಕ್ಶೆಗಳ ಮೊರೆಹೋಗಿವೆ.. ಲಕ್ಶಾಂತರ ರೂಪಾಯಿ ವೆಚ್ಚ ಮಾಡಿ ವರದಿ ಪಡೆದುಕೊಂಡಿವೆ.. ತಾವು ದುರ್ಬಲವಾದ ಕ್ಷೇತ್ರಗಳಲ್ಲಿ ಬಲಗೊಳ್ಳಲು ಬೇಕಾದ ಕಾರ್ಯತಂತ್ರವನ್ನು ಹೆಣೆಯುತ್ತಿವೆ.. ಆದರೆ ಇಂತಹ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಎದೇ ತಟ್ಟಿ ಹೇಳುವ ಪರಿಸ್ಥಿತಿ ಈಗಿಲ್ಲ..

ಭಾರತೀಯ ಜನತಾ ಪಕ್ಷಕ್ಕೆ ಇದು ಅತೀ ಮಹತ್ವದ ಚುನಾವಣೆ ಇದಾಗಿದೆ. ಈ ವರ್ಷದಲ್ಲಿ ದೇಶದ ೫ ರಾಜ್ಯಗಳಲ್ಲಿ ಚಿನಾವಣೆ ನಡೆಯುತ್ತಿದೆ.. ಈ ಐದ್ಉ ರಾಜ್ಯಗಳಲ್ಲಿ ಮಧ್ಯಪ್ರದೇಶ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅಧಿಕಾರ ನಡೆಸುತ್ತಿದ್ದಾರೆ.  ರಾಜಸ್ಥಾನ ಮತ್ತು ಚತ್ತೀಸಗಡದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಹಾಗೆ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದರೂ ಅಲ್ಲಿ ಸ್ವಯಂ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಪರೇಶನ್ ಕಮಲದ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅಂದರೆ ಈ ಹಿಂದಿನ ಚುನಾವಣೆಯಲ್ಲಿ ಈ ಐದು ರಾಜ್ಯದ ಜನ ಬಿಜೆಪಿಯನ್ನು ಆರಿಸಿರಲಿಲ್ಲ. ವಾಮ ಮಾರ್ಗದಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿವೆ. ೨೦೨೪ ರ ಲೋಕಸಭಾ ಚುನಾವಣೆಗೆ ಮೊದಲು ನಡೆಯುವ ಈ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿರ್ವಿವಾದ.. ಹೀಗಾಗಿ ಬಿಜೆಪಿ ಈ ಚುನಾವಣೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರವನ್ನು ರಣೋತ್ಸಾಹದಿಂದ ಪ್ರಾರಂಭಿಸಿದೆ.

ಕರ್ನಾಟಕದಲ್ಲಿ ಬಿಜೆಪಿ ಯಾವ ವಿಚಾರವನ್ನು ಮುಂದಿಟ್ಟುಕೊಂಡು ಹೊರಟಿದೆ ? ಇಲ್ಲಿ ಬಿಜೆಲಿಯ ಶಕ್ತಿ ಮತ್ತು ದೌರ್ಬಲ್ಯ ಯಾವುದು ? ಮೊದಲು ಬಿಜೆಪಿಯ ದೌರ್ಬಲ್ಯವನ್ನು ನೋಡೋಣ. ಬೊಮ್ಮಾಯಿ ಸರ್ಕಾರದ ಬಗ್ಗೆ ರಾಜ್ಯದ ಜನರ ಒಳ್ಳೆಯ ಅಭಿಪ್ರಾಯಹೊಂದಿಲ್ಲ. ಬೊಮ್ಮಾಯಿ ಅವರ ದೌರ್ಬಲ್ಯ ಪ್ರದರ್ಶಿತವಾಗುತ್ತಲೇ ಇದೆ.. ಅವರು ಬೆನ್ನೆಲುಬು ಇಲ್ಲದ ನಾಯಕ ಎಂದು ಸಾಮಾನ್ಯ ಜನ ಮಾತನಾಡುತ್ತಿದ್ದಾರೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರನ್ನು ರಿಪ್ಲೇಸ್ ಮಾಡುವ ಶಕ್ತಿಯೂ ಅವರಿಗಿಲ್ಲ. ಹೀಗಾಗಿ ದುರ್ಬಲ ನಾಯಕತ್ವ ಬಿಜೆಪಿಯ ಮೊದಲ ಸಮಸ್ಯೆ.

ಎರಡನೆಯದಾಗಿ ಸರ್ಕಾರದ ಇಮೇಜ್.. ದುರ್ಬಲ ನಾಯಕತ್ವದಿಂದಾಗಿ ಸರ್ಕಾರದ ಇಮೇಜ್ ಹಾಳಾಗಿದೆ. ಈ ಸರ್ಕಾರದ ಮೇಲೆ ಬಂದಿರುವ ೪೦ ಪರ್ಸೇಂಟ್ ಕಮೀಶನ್ ಆರೋಪವನ್ನು ಪರಿಣಾಮಕಾರಿಯಾಗಿ ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈ ಆರೋಪವನ್ನು ಅಲ್ಲಗಳೆಯಲು ಕಾಂಗ್ರೆಸ್ ಮೇಲೆ ಧಾಳಿ ಮಾಡುತ್ತಿರುವ ಬಿಜೆಪಿ ನಾಯಕರು ನಾವು ಕಮಿಷನ್ ತೆಗೆದುಕೊಳ್ಳುತ್ತಿಲ್ಲ ಎಂದು ಪರಿಣಾಮಕಾರಿಯಾಗಿ ಜನರ ಮುಂದೆ ಇಡುವಲ್ಲಿ ವಿಫಲರಾಗಿದ್ದಾರೆ.. ಜೊತೆಗೆ ಕಮೀಶನ್ ಆರೋಪ ಸುಳ್ಳು ಎಂಡು ಬಿಜೆಪಿ ನಾಯಕರು ವಾದ ಮಾಡುತ್ತಿದ್ದರೂ ಸತ್ಯ ಸಾಮಾನ್ಯ ಜನರಿಗೆ ಗೊತ್ತಿದೆ. ರಸ್ತೆ ಬೀದಿಗಳಲ್ಲಿ ಜನ ಮಾತನಾಡುತ್ತಿದ್ದಾರೆ, ಇದು ಬಿಜೆಪಿಯ ಇನ್ನೊಂದು ಸಮಸ್ಯೆ.

ಈ ಕಾರಣಗಳಿಂದ ಬಿಜೆಪಿ ನಾಯಕತ್ವ ತಮ್ಮ ಪ್ರಚಾರ ತಂತ್ರದಲ್ಲಿ ಮತ್ತೆ ಹಿಂದೂ ಮುಸ್ಲೀಂ ವಿಚಾರವನ್ನು ಪ್ರಧಾನವಾಗಿ ಬಳಸುತ್ತಿದೆ. ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿದ ಹೇಳಿಕೆಯನ್ನು ಗಮನಿಸಬಹುದು. ರಸ್ತೆ ಚಿರಂಡಿಯಂತ ಸಣ್ಣ ವಿಚಾರವನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಚಿಸಿ ಎಂದು ಕರೆ ನೀಡಿದ್ದು ಈ ಕಾರ್ಯತಂತ್ರದ ಭಾಗ. ಹಾಗೆ ಕಳೆದ ಎರಡು ಮೂರು ವರ್ಷಗಳಿಂದ ಬಿಜೆಪಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ.. ಹಿಜಾಬ್ ವಿವಾದದಿಂದ ಪ್ರಾರಂಭವಾಗಿ ಮೈಸೂರಿನಲ್ಲಿ ಬಸ್ ಸ್ಟಾಂಡಿನಲ್ಲಿದ್ದ ಗುಂಬಜ್ ಕೆಡುವ ವರೆಗೆ ನಡೆದ ಎಲ್ಲ ಬೆಳವಣಿಗೆಗಳೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸುವ ತಂತ್ರದ ಭಾಗವೇ ಆಗಿದೆ.

ಜನ ಮೂಲಭೂತ ವಿಚಾರದಿಂದ ವಿಮುಖರಾಗುವಂತೆ ನೋಡೀಕೊಳ್ಳುವ ಯತ್ನ ಇದು. ಇದರ ಜೊತೆಗೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಮೀಸಲಾತಿ ವಿಚಾರಕ್ಕೆ ಕೈಹಾಕಿದ್ದು. ಇದು ಎಷ್ಟರ ಮಟ್ಟಿಗೆ ಬಿಜೆಪಿಗೆ ಸಹಕಾರಿಯಾಗುತ್ತದೆ ಎಂದು ಹೇಳುವುದು ಕಷ್ಟ..ಜೊತೆಗೆ ಈ ಮೀಸಲಾತಿಗೆ ಸಂಬಂಧಿಸಿದಂತೆ ಮಾಡಿದ ಬದಲಾವಣೆಗಳನ್ನು ಜಾರಿಗೆ ತರಲು ಕಾನೂನಾತ್ಮಕ ತೊಡಕುಗಳಿವೆ. ಈ ವಿಚಾರವನ್ನು ವಿಸ್ಟ್ರುತವಾಗಿ ಚರ್ಚಿಸಲು ಇಲ್ಲಿ ಸಾಧ್ಯವಿಲ್ಲ.

ಬಿಜೆಪಿಯ ಬಹುಮುಖ್ಯ ಸಮಸ್ಯೆ ಎಂದರೆ ಹಿಂದುತ್ವದ ಕಾರ್ಡ್ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಂತೆ ಮಾರಾಟವಾಗುವುದಿಲ್ಲ. ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಭಿನ್ನವಾದುದು. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳು ಹೆಚ್ಚು ಅಭೀವೃದ್ಧಿಯಾಗಿವೆ. ಇಲ್ಲಿನ ತಲಾ ಆದಾಯ ಉತ್ತರ ಭಾರತಕ್ಕಿಂತ ಹೆಚ್ಚು.. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುವ ವರಮಾನ ಉತ್ತರ ಭಾರತದ ರಾಜ್ಯಗಳಿಗಿಂತೆ ಹೆಚ್ಚು. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡ ದೊಡ್ಡ ಇತಿಹಾಸವೇ ದಕ್ಷಿಣದ ರಾಜ್ಯಗಳಿಗಿವೆ. ಹಾಗೆ ಸಾಕ್ಷರತೆಯ ಪ್ರಮಾಣವೂ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು. ಹೀಗಾಗಿ ಧರ್ಮಾಧಾರಿತ ರಾಜಕಾರಣವನ್ನು ಒಂದು ಮಿತಿಯನ್ನು ಮೀರಿ ಮಾಡುವುದು ಸಾಧ್ಯವಿಲ್ಲ. ಆದರೂ ಕರ್ನಾಟಕವನ್ನೂ ಧರ್ಮಾಧಾರಿತ ರಾಜಕಾರಣದ ಅಂಗಳವನ್ನಾಗಿ ಬದಲಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ರಾಷ್ಟೀಯ ಅಧ್ಯಕ್ಶ ಜೆಪಿ ನಡ್ಡಾ ಕರ್ನಾಟಕದ ಪ್ರವಾಸದ ಸಂದರ್ಭದಲ್ಲಿ ಇದೇ ಯತ್ನವನ್ನು ಮಾಡಿದರು. ತುಕಡೆ ತುಕಡೆ ಗ್ಯಾಂಗ್ ಬೇಕೋ ದೇಶಭಕ್ತರ ಪಕ್ಷ ಬೇಕೋ ತೀರ್ಮಾನಿಸಿ ಎಂದು ಕರೆ ನೀಡಿದ್ದು ಬಿಜೆಪಿ ಯಾವ ಆಧಾರದ ಮೇಲೆ ಚುನಾವಣೆಯನ್ನು ಸ್ಪರ್ಧಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ..

ಈಗ ಕರ್ನಾಟಕದಲ್ಲಿ ಬಿಜೆಪಿಗೆ ಉಳಿದಿರುವುದು ತುಕಡೆ ತುಕಡೆ, ಟಿಪ್ಪೂ ಸುಲ್ತಾನ, ಹಿಜಾಬ್ ವಿಚಾರಗಳು ಮಾತ್ರ.. ಅವರಿಗೆ ಜನರ ಮುಂದಿಡಲು ಬೇರೆ ವಿಚಾರಗಳೇ ಇಲ್ಲ..

ಕಾಂಗ್ರೆಸ್ ಪಕ್ಷದ ಚುನಾವಣಾ ಎಜೆಂಡಾ ಯಾವುದು ? ಅದು ಯಾವ ವಿಚಾರವನ್ನು ಜನರ ಮುಂದಿಡಲಿದೆ.? ಕಾಂಗ್ರೆಸ್ ಭಾರತ ಜೋಡೋ ಎಂಬ ಅಭಿಯಾನದ ಮೂಲಕ ಜನರಿಗೆ ಸಂಬಂಧಿಸಿದ ಕೆಲವೊಂದು ಪ್ರಮುಖ ವಿಚಾರಗಳನ್ನು ಜನರ ಮುಂದಿಡುತ್ತಿದೆ ನಿಜ.. ಆದರೆ ಕಾಂಗ್ರೆಸ್ ಭಾರತ ಜೋಡೋ ಮಾತನಾಡುವ ಸಂದರ್ಭದಲ್ಲೇ ತಮ್ಮ ಪಕ್ಷ ಬಹುಸಂಖ್ಯಾಕ ಹಿಂದೂಗಳ ವಿರೋಧಿಯಲ್ಲ ಎಂದು ಸಾಭೀತು ಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.. ಜೊತೆಗೆ ರಾಜ್ಯದ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರ ಬೆಂಬಲವನ್ನು ಕ್ರೋಡೀಕರಿಸಬೇಕಾಗಿದೆ..ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಾಗಿರುವ ಮತ್ತು ಪ್ರಬಲ ಜಾತಿಗಳ ವಿರೋಧಿ ಪಕ್ಷ ಎಂಬ ಆರೋಪವನ್ನು ಹುಸಿಗೊಳಿಸಬೇಕಾದ ಸಂದಿಗ್ದದಲ್ಲಿದೆ. ಈ ಎರಡೂ ಪ್ರಬಲ ಜಾತಿಗಳಲ್ಲಿ ತಮ್ಮ ಮತದ ಶೇರನ್ನು ಹೆಚ್ಚಿಸಿಕೊಳ್ಳದಿದ್ದರೆ ಅದು ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಉಳಿಯುವ ಸ್ಥಿತಿ ಬರಬಹುದು. ಜೊತೆಗೆ ಹಳೇ ಮೈಸೂರು ಪ್ರದೇಶದಲ್ಲಿ ತಮ್ಮ ಮತ ಬ್ಯಾಂಕನ್ನು ಸುದೃಡ ಗೊಳಿಸುವ ಯತ್ನದಲ್ಲಿ ಜೆಡಿಎಸ್ ತೊಡಗಿದೆ. ಕುಮಾರಸ್ವಾಮಿಯವರು ದಕ್ಷಿಣ ಕರ್ನಾಟಕದಲ್ಲಿ ನಡೆಸುತ್ತಿರುವ ಪಂಚರತ್ನ ಯಾತ್ರೆಗೆ ಜನ ಬೆಂಬಲ ದೊರಕುತ್ತಿದೆ..ಕುಮಾರಸ್ವಾಮಿ ಪ್ರವಾಸ ಮಾಡಿದಲ್ಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದು ಮತವಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ.. ದಕ್ಷೀನ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲವಾದಷ್ಟು ಕಾಂಗ್ರೆಸ್ ದುರ್ಬಲವಾಗುತ್ತಿದೆ..

ಇನ್ನು ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷ ಈಗ ಬರುತ್ತಿರುವ ವರದಿಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶದ ಕೆಲವು ಪಕೇಟ್ ಗಳಲ್ಲಿ ಜನಾರ್ಧನ ರೆಡ್ದಿ ಅವರ ಪ್ರಭಾವವಿದೆ. ಜೊತೆಗೆ ತಮ್ಮದೇ ಆದ ಮುಸ್ಲೀಮ್ ಮತ ಬ್ಯಾಂಕನ್ನು ಅವರು ಸೃಷ್ಟಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಪಕ್ಷದಿಂದ ಬಿಜೆಪಿಗೆ ಆಗುವ ಹಾನಿಗಿಂತ ಕಾಂಗ್ರೆಸ್ ಗೆ ಆಗುವ ಹಾನಿಯೇ ಹೆಚ್ಚು..

ಕೊನೆಯದಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯಾವ ಫಲಿತಾಂಶವನ್ನಾದರೂ ನೀಡಬಹುದು. ಆದರೆ ಯಾವುದೇ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಣದ ಅಂಡರ್ ಕರೆಂಟ್ ಸೃಷ್ಟಿಯಾದರೆ ಅದು ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುತ್ತದೆ. ರಾಜಕೀಯ ತಜ್ನರ ಎಲ್ಲ ವಿಶ್ಲೇಷಣೆಯನ್ನೂ ಸುಳ್ಳು ಮಾಡೀಬಿಡುತ್ತದೆ.

ಈ ಚುನಾವಣೆಯಲ್ಲಿ ಅಂತಹ ಇಶ್ಯೂ ಎಮರ್ಜ್ ಆಗಬಹುದೇ, ಅಂಡರ್ ಕರೆಂಟ್ ಕೆಲಸ ಮಾಡಬಹುದೂ ಈಗಲೇ ಹೇಳಲು ಸಾಧ್ಯವಿಲ್ಲ.


 

Thursday, January 5, 2023

ರಾಜಕಾರಣಿಗಳ ನಾಯಿ ಜಗಳ; ಕುಸಿದ ಬಿದ್ದ ಸಾರ್ವಜನಿಕ ಬದುಕಿನ ಸನ್ನಡತೆ..

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಆ ಮಾತು. ಅದು ತೀವ್ರರೂಪದ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ. ರಾಜಕೀಯ ಟೀಕೆಗಳಿಗೆ ಬಹುತೇಕ ಪ್ರಾಣಿಗಳ ಬಳಕೆ ಯಾಗಿದೆ,, ನಾಯಿಯಿಂದ ಪ್ರಾರಂಭವಾಗಿ ಹಂದಿಯವರೆಗೆ ಇದು ಬಂದು ತಲುಪಿದೆ...

ಸಿದ್ದರಾಮಯ್ಯ ಹೇಳಿದ್ದು; ಮುಖ್ಯಮಂತ್ರಿಗಳು ಪ್ರಧಾನಿಯವರ ಮುಂದೆ ನಾಯಿ ಮರಿಯಂತೆ ಇರುತ್ತಾರೆ,, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ..

ಇದಕ್ಕೆ ಬಿಜೆಪಿಯ ಹಲವು ಸಚಿವರು ಮಾಜಿ ಸಚಿವರು ಇತರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮುಂದೆ ಹೇಗೆ ನಿಲ್ಲುತ್ತಿರಿ ? ರಾಹುಲ್ ಗಾಂಧಿ ನಿಮಗಿಂತ ಹಿರಿಯರಾ ? ಅವರ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ನಿಲ್ಲುತ್ತೀರಾ ? ಆ ಶಕ್ತಿ ನಿಮಗೆ ಇದೆಯಾ ? ಇದು ಬಿಜೆಪಿ ನಾಯಕರ ಪ್ರಶ್ನೆ,, ಈಶ್ವರಪ್ಪನಂತವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು.. ನಾವು ಅವರನ್ನೂ ಹಾಗೆ ಕರೆಯಬಹುದಿತ್ತು ಹಂದಿ ಎಂದೂ ಹೇಳಬಹುದಿತ್ತು ಎಂದಿದ್ದಾರೆ.. ಹಾಗೆ ತಮಗೆ ಸೌಜನ್ಯ, ಸ್ಥಾನ ಗೌರವ ಏನು ಎಂಬುದು ತಿಳಿದಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ, ಕಳೆದ ಎರಡೂ ದಿನಗಳಿಂದ ನಡೆಯುತ್ತಿರುವ ಈ ಫಿಶ್ ಮಾರ್ಕೆಟ್ ಜಗಳದ ನಂತರ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಹೇಳಿದ್ದು ಮುಖ್ಯಮಂತ್ರಿಗಳೂ ದೈರ್ಯ ಪ್ರದರ್ಶಿಸಬೇಕು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು ಎಂಬ ಅರ್ಥದಲ್ಲಿ ಎಂದೂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಯ ಗುಣ ಧರ್ಮವನ್ನು ವಿವರಿಸಿದ್ದಾರೆ. ನಾಯಿ ನಿಷ್ಟೆಯ ಬಗ್ಗೆ ಮಾತನಾಡಿದ್ದಾರೆ. ತಾವು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಾಯಿ ಎಂದು ತಮ್ಮ ಬೆನ್ನನ್ನು ತಾವು ತಟ್ಟಿಕೊಂಡಿದ್ದಾರೆ

ಈ ಮಾತು ಮತ್ತು ಜಗಳ ಸಾರ್ವಜನಿಕ ಬದುಕು ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ,

ಸಿದ್ದರಾಮಯ್ಯ ಈ ಮಾತು ಆಡಿದ್ದು ಸರಿಯೆ ಎಂಬುದು ಮೊದಲ ಪ್ರಶ್ನೆ..ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮುಖ್ಯಮಂತ್ರಿಗಳು ತುಟಿ ಬಿಚ್ಚುತ್ತಿಲ್ಲ ಎಂದು ಅವರು ಹೇಳಬಹುದಾಗಿತ್ತು,. ಈ ಡಬಲ್ ಎಂಜಿನ್ ಸರ್ಕಾರದಲ್ಲಿ ದೆಹಲಿಯ ಎಂಜಿನ್ ಮುಂದೆ ರಾಜ್ಯದ ಎಂಜಿನ್ ನಿಷ್ಕಿಯವಾಗಿದೆ ಎಂದೂ ಟೀಕಿಸಬಹುದಾಗಿತ್ತು..ಆಗ ಅವರ ಮಾತು ಘನತೆಯನ್ನು ಉಳಿಸಿಕೊಳ್ಳುತ್ತಿತ್ತು. ಇದಕ್ಕೆ ಬದಲಾಗಿ ನಾಯಿ ಮರಿಯ ಬಗ್ಗೆ ಮಾತನಾಡಿದ ಅವರು ತಾವು ಗ್ರಾಮಾಂತರ ಪ್ರದೇಶದ ಭಾಷೆಯನ್ನು ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಸರಿಯಾದ ಸಮರ್ಥನೆ ಎಂದು ಹೇಳಲಾಗುವುದಿಲ್ಲ.

ಇನ್ನೂ ಬಿಜೆಪಿ ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸೋಣ.. ಮೊದಲನೇಯದಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರನ್ನು ನಾಯಿ ಮರಿ ಎಂದು ಕರೆದಿಲ್ಲ.. ನಾಯಿಮರಿಯಂತೆ ವರ್ತಿಸುತ್ತಿದ್ದೀರಿ ಎಂದಿದ್ದಾರೆ.. ನೀವು ನಾಯಿ ಮರಿ ಎನ್ನುವುದಕ್ಕೂ ನಾಯಿ ಮರಿಯಂತೆ ವರ್ತಿಸುತ್ತಿದ್ದೀರಿ ಎಂಬುದಕ್ಕೂ ವ್ಯತ್ಯಾಸವಿದೆ. ಹೀಗಿರುವಾಗ ಈ ಹೇಳಿಕೆ ಮುಖ್ಯಮಂತ್ರಿಗಳ ಸ್ಥಾನ ಗೌರವಕ್ಕೆ ಚ್ಯುತಿ ತಂದಿದೆ ಎಂಬ ಬಿಜೆಪಿ ಪ್ರತ್ಯಾರೋಪ ಬಾಲಿಶವಾದದ್ದು.. ಮುಖ್ಯಮಂತ್ರಿಗಳ ವರ್ತನೆಗೆ ಯಾವುದೋ ಪ್ರಾಣಿಗೆ ಹೋಲಿಸಿದರೆ ಅದು ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ತಂದಂತೆ ಆಗುವುದಿಲ್ಲ..ಆದರೆ ಬೆಜೆಪಿಯ ಎಲ್ಲರೂ ಮುಖ್ಯಮಂತ್ರಿಗಳ ಸ್ಥಾನಗೌರವದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸ್ಥಾನ ಗೌರವದ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ತಮ್ಮನ್ನು ಟಗರು ಎಂದು ಕರೆಯುವುದು ಯಡಿಯೂರಪ್ಪ ಅವರನ್ನು ರಾಜಾ ಹುಲಿ ಎಂಬ ವಿಶೇಷಣದಿಂದ ಕರೆಯುವುದನ್ನು ನೆನಪಿಸಿದ್ದಾರೆ. ಇದೇನು ಅಸಂವಿಧಾನಿಕ ಶಬ್ದವೇ ಎಂದು ಕೇಳಿದ್ದಾರೆ. ಅದರಂತೆ ನಾಯಿ ಮರಿಯಂತೆ ಇರುತ್ತಾರೆ ಎಂದರೆ ಅದು ಅಸಂವಿಧಾನಿಕ ಶಬ್ದವಲ್ಲ ಎಂಬ ವಾದವನ್ನೂ ಸಿದ್ದರಾಮಯ್ಯ ಮಾಡಿದ್ದಾರೆ,

ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು, ಸಾಕಪ್ಪ ಎಂದು ಹೇಳುವಷ್ಟು ಪ್ರಚಾರ ದೊರಕಿದೆ, ಇನ್ನೂ ಕೆಲವು ದಿನ ಈ ಬಗ್ಗೆ ಚರ್ಚೆ ನಡೆಯಬಹುದು..

ಆದರೆ ಘಟನೆ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ, ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಚರ್ಚೆ ಮಾಡಬೇಕಾದ ಗಂಭೀರ ವಿಚಾರಗಳು ಕರೆಯಾಗುತ್ತಿವೆ. ಅದಕ್ಕೆ ಬದಲಾಗಿ ಜನರಿಗೆ ಮನರಂಜನೆ ನೀಡುವ ವಿಚಾರಗಳೇ ಮಹತ್ವ ಪಡೆಯುತ್ತಿವೆ.. ಹೇಳಬೇಕಾದ ವಿಚಾರಗಳನ್ನು ಲಘುವಾಗು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ರಾಜಕಾರಣಿಗಳು ನಿರತರಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕ ಬದುಕಿನಲ್ಲಿ ಚರ್ಚಿಸ ಬೇಕಾಗಿರುವ ಪ್ರಮುಖ ವಿಚಾರಗಳು ನೇಪಥ್ಯಕ್ಕೆ ಸರಿದು ಹೋಗುತ್ತಿವೆ..

ಅಧಿಕಾರರೂಡ ಬಿಜೆಪಿಗೆ ಇದರಿಂದ ಲಾಭವಾಗುತ್ತಿದೆ. ಬೆಲೆ ಏರಿಕೆ ನಿರುಧ್ಯೋಗ,,ಕೋಮುವಾದ ಮೊದಲಾದ ವಿಚಾರಗಳು ಚರ್ಚೆಗೆ ಬರದೇ, ಲಘು ಚರ್ಚೆಗಳು ಎಲ್ಲವನ್ನು ಕೊಚ್ಚಿಕೊಂಡು ಹೋಗಿ ಬಿಡುತ್ತಿದೆ..ಜನ ಯಾರು ನಾಯಿ, ಯಾರು ಹುಲಿ,, ಯಾರು ಹಂದಿ ಎನ್ನುವ ಬಗ್ಗೆ ಚರ್ಚಿಸುತ್ತ, ಕೆಲವೊಮ್ಮೆ ಎಂಜಾಯ್ ಮಾಡುತ್ತ ತಮ್ಮ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ. ತಮಗೆ ಮನೆಯಿಲ್ಲ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ, ಬೆಲೆ ಏರಿಕೆಯಿಂದ ಬದುಕುವುದು ದುಸ್ತರವಾಗಿ ಎಂಬುದು ಅವರಿಗೆ ನೆನಪಾಗುವುದಿಲ್ಲ.. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಜನರಿಗೆ ಬೋಧನೆ ಮಾಡಿದ ವಿಚಾರಗಳ ಪ್ರಭಾವಕ್ಕೆ ಸಾಮಾನ್ಯ ಜನ ಒಳಗಾಗುತ್ತಾರೆ.. ನೀವು ರಸ್ತೆ ಚಿರಂಡಿಯಂತ ಸಣ್ಣ ಸಣ್ಣ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಲವ್ ಜಿಹಾದ್ ಬಗ್ಗೆ ವಿಚಾರ ಮಾಡಿ ಇದನ್ನು ತಡೆಯುವುದು ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾತ್ರ ಸಾಧ್ಯ ಎಂಬ ಕಟೀಲ್ ಹೇಳಿಕೆ ಸಾಮಾನ್ಯರಿಗೆ ಆಕರ್ಶಿಕವಾಗಿ ಕಾಣುತ್ತದೆ. ಲವ್ ಜಿಹಾದ್ ಎಂಬ ಭ್ರಮೆ ಅವರನ್ನು ಆವರಿಸಿಕೊಂಡ ತಮ್ಮ ಬದುಕಿನ ನೈಜ ಸಮಸ್ಯೆಗಳನ್ನು ಅವರು ಮರೆತುಬಿಡುತ್ತಾರೆ,

ಬಿಜೆಪಿಗೆ ಬೇಕಾದ್ದು ಇದೇ.. ಇದೇ ಅವರ ತಂತ್ರ..ಅವರು ಹೆಣೆದ ಈ ಬಲೆಗೆ ಕಾಂಗ್ರೆಸ್ ಸಿಕ್ಕಿಕೊಳ್ಳುತ್ತದೆ.

ಈಗ ಬಿಜೆಪಿ ಧರ್ಮದ ಆಧಾರದ ಈ ಖೆಡ್ಡಾವನ್ನು ತೋಡಿಯಾಗಿದೆ. ಈ ಖೆಡ್ಡಾಕ್ಕೆ ಕಾಂಗ್ರೆಸ್ ನಾಯಕರನ್ನು ಕೆಡವಲು ಕಾಯುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ತಾವಾಗಿಯೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ,

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...