Friday, November 13, 2020

ರವಿ ಬೆಳಗೆರೆ ಮಾಧರಿಯ ಪತ್ರಿಕೋದ್ಯಮ;; ಮಾಂಸದಂಗಡಿಯ ಮುಂದೆ ಕುಳಿತು....

 

ರವಿ ಬೆಳಗೆರೆ ಇನ್ನಿಲ್ಲ. . ಈ ಸುದ್ದಿ ಬರುತ್ತಿದ್ದಂತೆ ರವಿ ಬೆಳಗೆರೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹೊರಬಂದವು, ಕೆಲವರು ರವಿ ಬೆಳಗೆರೆಯೊಂದಿಗೆ ಕನ್ನಡ ಪತ್ರಿಕೋದ್ಯಮ ಮುಗಿದೇ ಹೋಯಿತು ಎಂದರು. ರವಿಗೆ ಸಾಹಿತ್ಯದ ಗಾರುಡಿಗ ಎಂದು ಕರೆದರು. ಟಿವಿ ಚಾನಲ್ ಗಳು ಇಡೀ ದಿನ ರವಿಯ ಗುಣಗಾನದಲ್ಲಿ ನಿರತವಾದವು... ರವಿಯ ಸಾಹಿತ್ಯ ಕೃತಿಗಳ ಬಗ್ಗೆ ಭಾರಿ ಭಟ್ಟಂಗಿ ವಿಮರ್ಶೆಗಳು ನಡೆದವು...

ನಡದೇ ಇತ್ತು ರವಿ ಗುಣಗಾನ... ಅವನಲ್ಲಿ ಇರುವ ಇಲ್ಲದಿರುವ ಎಲ್ಲ ಗುಣಗಳನ್ನು ಆರೋಪಿಸಲಾಯಿತು.. ಹಾಗಿದ್ದರೆ ರವಿ ಎಂಥವನು ? ಆತ ಆತ್ಯುತ್ತಮ ಪತ್ರಿಕೋದ್ಯಮಿ ಆಗಿದ್ದನೆ ? ಆತ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬನೆ,, ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.. ಮೊದಲನೆಯದಾಗಿ ಒಂದು ಮಾತು.. ನಾನು ಅವನನ್ನು ಎಂದೂ ಬಹುವಚನದಲ್ಲಿ ಕರೆದಿಲ್ಲ. ಅವನೂ ನನ್ನನ್ನು ಕರೆಯುತ್ತಿದ್ದುದು ಶಶಿ ಎಂದು ಏಕವಚನದಲ್ಲಿ.ನಾನು ಅವನನ್ನು ರವಿ ಎಂದು ಏಕವಚನದಲ್ಲಿಯೇ ಕರೆಯುತ್ತಿದ್ದೆ. ಹೀಗಾಗಿ ನಾನು ಅವನಿಗೆ ಬಹುವಚನದ ಸಂಬೋಧನೆ ಮಾಡಲಾರೆ...ಕ್ಷಮೆ ಇರಲಿ..

ನಾನು ರವಿ ಬೆಳಗೆರೆಗೆ ಸಂಬಂಧಿಸಿದ ನನ್ನ ಅನುಭವಗಳನ್ನು ಬಿಚ್ಚಿಡುತ್ತಿದ್ದೇನೆ.. ನನ್ನ ಅನುಭವದ ಮೂಲಕ ಅವನನ್ನು ಹುಡುಕುತ್ತಿದ್ದೇನೆ. ನಿಜವಾಗಿ ರವಿ ಬೆಳಗೆರೆ ಎಂಥವನಾಗಿದ್ದ ? ಅವನ ಬದುಕಿನ ನಂಬಿಕೆಗಳು ಏನಾಗಿದ್ದವು ? ಅವನಿಗೆ ಯಾವುದರ ಬಗ್ಗೆ ನಂಬಿಕೆ ಇತ್ತು ? ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಲು ಯತ್ನ ನಡೆಸುತ್ತಿದ್ದೇನೆ. ರವಿ ಒಬ್ಬ ಮಾಂತ್ರಿಕ, ಗಾರುಡಿಗ, ಅಕ್ಷರ ಭ್ರಹ್ಮ ಎಂಬ ಸುಳ್ಳುಗಳನ್ನು ಮಾಧ್ಯಮಗಳು ಹರಡುತ್ತಿರುವ ಈ ಸಂದರ್ಭದಲ್ಲಿ ನಿಜವಾದ ರವಿ ಬೆಳಗೆರೆಯನ್ನು ಹುಡುಕುವ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಜೊತೆಗೆ ಅವನ ಮಾಧರಿಯ ಪತ್ರಿಕೋದ್ಯಮವೇ ನಿಜವಾದ ಪತ್ರಿಕೋದ್ಯಮ ಎಂದು ಇಂದಿನ ಯುವಕರು ನಂಬಿರುವ ಈ ಸಂದರ್ಭದಲ್ಲಿ ಅದಲ್ಲ ಎಂದು ಹೇಳಬೇಕಾದ್ದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಈ ಕರ್ತವ್ಯದಿಂದ ನಾನು ವಿಮುಖನಾಗಲಾರೆ...ಮಾಂಸದಂಗಡಿಯ ವಾರಸುದಾರ ಪತ್ರಿಕೋದ್ಯಮವನ್ನು ತಡೆಯುವ ಉದ್ದೇಶ ಕೂಡ ನನ್ನದಾಗಿದೆ.

ರವಿ ಬೆಳಗೆರೆಯನ್ನು ನಾನು ಮೊದಲು ನೋಡಿದ್ದು ೧೯೮೨ರಲ್ಲಿ.. ಆಗ ಬೆಂಗಳೂರಿನಿಂದ ಮುಂಜಾನೆ ಎಂಬ ಕನ್ನಡ ದಿನ ಪತ್ರಿಕೆ ಬರುತ್ತಿತ್ತು. ಈ ಪತ್ರಿಕೆಯ ಮಾಲಿಕರು ಆರ್. ಗುಂಡೂರಾವ್ ಮತ್ತು ವೀರಪ್ಪ ಮೊಯ್ಲಿ..ಎಸ್. ವಿ. ಜಯಶೀಲರಾವ್ ಈ ಪತ್ರಿಕೆಯ ಸಂಪಾದಕರು. ನಾನು ೬೦೦ ಸಂಬಳ ತೆಗೆದುಕೊಳ್ಳುತ್ತಿದ್ದ ಉಪ ಮುಖ್ಯವರದಿಗಾರ..

ಅದೊಂದು ದಿನ ರವಿ ಬೆಳಗೆರೆ ಎಂಬ ಈ ವ್ಯಕ್ತಿ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿದ್ದ ಮುಂಜಾನೆ ಕಚೇರಿಗೆ ಬಂದಿಳಿದ...ಜಯಶೀಲರಾವ್ ರವಿಗೆ ಕೆಲಸ ನೀಡಿದ್ದರು..

ಇಲ್ಲಿ ಆತ ಕೆಲಸ ಮಾಡಿದ್ದು ಕೆಲವೇ ದಿನಗಳು..ಅಷ್ಟರಲ್ಲಿ ಆತ ಬಹಳಷ್ಟು ಜನರ ತನ್ನ ಪ್ರಭಾವ ಬೀರಿದ್ದ.. ಹಾಗೆ ಹಲವರ ಕಾಲು ಎಳೆಯುತ್ತಿದ್ದ. ರವಿಯಿಂದ ಕಾಲು ಎಳೆಸುಕೊಳ್ಳುತ್ತಿದ್ದವರಲ್ಲಿ ಮುಖ್ಯ ವರದಿಗಾರ ಮುಂಜಾನೆ ಸತ್ಯ ಮುಖ್ಯರು..

ಕೆಲವು ದಿನಗಳ ನಂತರ ಆತ ಮತ್ತೆ ಬಳ್ಳಾರಿಗೆ ತಿರುಗಿ ಹೊರಟ, ಆತನಿಗೆ ಮುಂಜಾನೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಇಷ್ಟ ಇರಲಿಲ್ಲ..ಆತನ ಆದ್ಯತೆಗಳು ಬೇರೆ ಇದ್ದವು. ಅವನಿಗೆ ಆಗಲೇ ಬಹುತೇಕ ಕ್ರೈಮ್ ವರದಿಗಾರರು ಸ್ನೇಹಿತರಾಗಿದ್ದರು. ಬಳ್ಳಾರಿಯಿಂದ ಒಂದು ಕ್ರೈಮ್ ಪತ್ರಿಕೆಯನ್ನು ಹೊರ ತರುವುದು ಅವನ ಉದ್ದೇಶವಾಗಿತ್ತು.. ಅದನ್ನೇ ನಮಗೆಲ್ಲ ಹೇಳಿ ಆತ ಮತ್ತೆ ಬಳ್ಳಾರಿಯ ಬಸ್ ಹತ್ತಿದ..

ಇದಾದ ಮೇಲೆ ಆತ ಬಳ್ಳಾಎರಿಯಿಂದ ವಾರ ಪತ್ರಿಕೆ ತಂದ.. ಅದು ಹಾಯ್ ಬೆಂಗಳೂರು ಮಾದರಿಯಲ್ಲೇ ಇದ್ದ ಪತ್ರಿಕೆ. ಕ್ರೈಮ್ ಸೆಕ್ಸ್, ಭೂಗತ ಜಗತ್ತು ಪತ್ರಿಕೆಯಲ್ಲಿ ವಿಜೃಂಭಿಸುತ್ತಿತ್ತು...

ಇದಾದ ಕೆಲವು ವರ್ಷಗಳ ಒರೆಗೆ ರವಿಯ ಬಳ್ಳಾರಿಯ ಪತ್ರಿಕೋದ್ಯಮದ ಬಗ್ಗೆ ಹಲವು ರಂಜನೀಯ ವರದಿಗಳು ಬರುತ್ತಿದ್ದವು.. ಅಷ್ಟರಲ್ಲಿ ಮುಂಜಾನೆ ಮುಚ್ಚಿ ಹೋಗಿತ್ತು.. ನಾನು ಬೇರೆ ಬೇರೆ ವಾರ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದೆ. ರವಿ ಬೆಳಗೆರೆ ಮರೆತುಹೋಗಿದ್ದ...

ಅದೊಂದು ದಿನ ರವಿ ಮತ್ತೆ ಬೆಂಗಳೂರಿಗೆ ಬಂದಿಳಿದ..ಅವನ ರಾಜಧಾನಿ ಪತ್ರಿಕೋದ್ಯಮ ಮತ್ತೆ ಮುಂದುವರಿಯಿತು..ರಾಜಾಜಿನಗರ ಎಂಟ್ರೆನ್ಸ್ ಬಳಿ ಒಂದು ರೂಮು ಮಾಡಿದ್ದ. ಆಗ ಅವನು ಕೆಲಸ ಮಾಡುತ್ತಿದ್ದುದು ಅಭಿಮಾನಿ ಬಳಗದಲ್ಲಿ... ನಾನು ಅಭಿಮಾನಿಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದೆ..ಹೀಗಾಗಿ ಆತ ನಮ್ಮ ಬಳಗದವನಾಗಿದ್ದ..

ನಾನು ಎಂಬತ್ತರ ದಶಕದ ಕೊನೆಯ ಹೊತ್ತಿಗೆ ಕನ್ನಡ ಪ್ರಭ ಸೇರಿಕೊಂಡಿದ್ದೆ..ಕನ್ನಡ ಪ್ರಭ ಸತ್ಯ ಅವರು ನಮಗೆ ಪತ್ರಿಕೋದ್ಯಮದ ಮಾದರಿಯಾಗಿದ್ದರು.. ಇಮ್ರಾನ್ ಖುರೇಶಿ, ಗಿರೀಷ್ ನಿಕ್ಕಮ್, ಡಿ. ಮಹದೇವಪ್ಪ, ಡಿ. ಉಮಾಪತಿ, ಗರುಡನಗಿರಿ ನಾಗರಾಜ್ ಮೊದಲಾದವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ರಾಜಕೀಯ ವರದಿಗಾರಿಕೆಯತ್ತ ನಾನು ಹೊರಳಿಕೊಂಡಿದ್ದೆ. ರವಿಯ ಪತ್ರಿಕೋದ್ಯಮದ ಮಾದರಿ ಆಗಲೇ ಬೇರೆಯಾಗಿತ್ತು...ಕೆ.ಶಾಮರಾವ್ ಗರಡಿಯಲ್ಲಿ ಆತನಿದ್ದ. ಶಾಮರಾವ್ ಕನ್ನಡದ ಮಹಾನ್ ಪತ್ರಿಕೋದ್ಯಮಿ ಎಂಬುದು ಅವನ ನಂಬಿಕೆಯಾಗಿತ್ತು.. ಆದರೆ ಶಾಮರಾವ್ ದೊಡ್ದ ಪತ್ರಿಕೋದ್ಯಮಿ ಎಂದು ನನಗೆ ಅನ್ನಿಸುತ್ತಿರಲಿಲ್ಲ.ಧ್ವೇಷದ ಪತ್ರಿಕೋದ್ಯಮದಲ್ಲಿ ಶಾಮರಾವ್ ನಂಬಿಕೆ ಇಟ್ಟವರಾಗಿದ್ದರು..

ಹೀಗಿದ್ದರೂ ರವಿಯ ಜೊತೆ ವೈಯಕ್ತಿಕ ಸ್ನೇಹ ಇತ್ತು. ಹಲವು ಬಾರಿ ಇಬ್ಬರೂ ಗುಂಡು ಹಾಕಿ ಚರ್ಚೆ ಮಾಡುತ್ತಿದ್ದೆವು... ಆದರೆ ರವಿಯ ಮನ್ನಸ್ಸಿನ ಒಳಗೆ ಕ್ರೌರ್ಯ ವಿಜೃಂಭಿಸುತ್ತಿದೆ ಎಂದು ನನಗೆ ಅನ್ನಿಸುತ್ತಿತ್ತು.. ಆತ ತನಗೆ ಆಗದವರನ್ನು ಟಾರ್ಗೆಟ್ ಮಾಡುತ್ತಿದ್ದ ರೀತಿ ಅಪಾಯಕಾರಿ ಅನ್ನಿಸುತ್ತಿತ್ತು. ಆತನಿಗೆ ಯಾವುದೇ ಸಿದ್ಧಾಂತ ಮೌಲ್ಯ ಇದೆ ಎಂದು ಅನ್ನಿಸುತ್ತಿರಲಿಲ್ಲ..ಆತನಿಗೆ ಮಹಿಳೆಯರ ಬಗ್ಗೆಯೂ ಅಂತಹ ಗೌರವ ಇರಲಿಲ್ಲ.. ಆತನಿಗೆ ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಇದೆ ಎನ್ನುವುದು ಆತ ಗುಂಡೂ ಹಾಕಿದಾಗ ಹೊರಬಂದು ಬಿಡುತ್ತಿತ್ತು..ಹಾಗೆ ಆತ ಜ್ಯೋತಿಷವನ್ನು ನಂಬುತ್ತಿದ್ದ.. ತನ್ನದು ಮೀನ ರಾಶಿ ಎಂದೂ ಹೇಳುತ್ತಿದ್ದ. ಹಾಗೆ ಮೀನಿನ ಚಿತ್ರವನ್ನು ಹಾಕಿಕೊಳ್ಳುವುದು ಅವನ ಕಾಯ್ಂ ಹವ್ಯಾಸವಾಗಿತ್ತು. ಅಮ್ಮ ಅಮ್ಮ ಎಂದು ಸದಾ ಕನವರಿಸುತ್ತಿದ್ದ ಆತ ನಿಜವಾಗಿ ಅಮ್ಮನನ್ನು ಹುಡುಕುತ್ತಿದ್ದಾನೆಯೇ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಸಿಗುವುದು ಕಷ್ಟವಾಗುತ್ತಿತ್ತು.

ಗುಂಡು ಹಾಕಿದ ಸಂದರ್ಭದಲ್ಲಿ ಆತ ಹಿರಿಯ ಪತ್ರಕರ್ತರನ್ನು ವಾಚಾಮಗೋಚರವಾಗಿ ಬೈಯುತ್ತಿದ್ದ..ಬೇರೆಯವರ ಬಗ್ಗೆ ಅವನ ಬಾಯಲ್ಲಿ ಎಂದೂ ಒಳ್ಳೆಯ ಮಾತು ಬರುತ್ತಿರಲಿಲ್ಲ.  ಹಲವಾರು ಹಿರಿಯ ಪತ್ರಕರ್ತರ ಹೆಸರು ಹೇಳಿ ನಾಯಿಗಳನ್ನು ಹೊಡೆದು ಹಾಕಿದ ಉದಾಹರಣೆಗಳೂ ಇದ್ದವು..ನಾನು ಸಾವಕಾಶವಾಗಿ ಅವನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದೆ. ಜೊತೆಗೆ ಕನ್ನಡ ಪ್ರಭ ಕೆಲಸದಲ್ಲಿ ನಾನು ಮುಳುಗಿ ಹೋದೆ.. ಆಗಲೇ ಆತ ಅಪರಾಧ ಜಗತ್ತಿನ ಒಳಗೆ ಪ್ರವೇಶ ಮಾಡಲು ಪ್ರಾರಂಭಿಸಿದ್ದ. ಕ್ರೈಮ್ ವರದಿಗಾರರು ಅವನಿಗೆ ಆಪ್ತರಾದರು, ಹಾಗೆ ಪ್ರೆಸ್ ಕ್ಲಬ್ ಸ್ನೇಹಿತರೂ ಅವನಿಗೆ ದೊರಕಿದರು..

ಅದೊಂದು ದಿನ ಆತ ಬರಹ ರುಚಿಕಟ್ಟಾಗಿರಬೇಕು ಎಂದು ಬರೆದಿದ್ದು ನೋಡಿ ನನಗೆ ಶಾಕ್.. ಬರಹ ರುಚಿಕಟ್ಟಾಗಿರಬೇಕು ಎಂದು ಉಪ್ಪು ಖಾರ ಸೇರಿಸಬೇಕು. ಹಾಗೆ ಸೇರಿಸಿದರೆ ಅದು ಸತ್ಯಕ್ಕೆ ಮಾಡಿದ ಧ್ರೋಹವಾಗುತ್ತದೆ. ನನಗೆ ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆತ ರುಚಿಕಟ್ಟಾಗಿ ಬರೆಯುವ ದಾರಿ ಹಿಡಿದ,,,

ಕರ್ಮವೀರ ಸಂಪಾದಕನಾದ ಮೇಲೆ ಆತ ಭೂಗತಲೋಕದ ಬಗ್ಗೆ ರುಚಿ ಕಟ್ಟಾಗಿ ಬರೆಯತೊಡಗಿದ...ಹೀಗೆ ಬರೆಯುತ್ತ ಸತ್ಯದ ಮುಖದ ಮೇಲೆ ಹೊಡೆದ....ಆತ ಕಥೆಗಾರನೂ ಆಗಿದ್ದರಿಂದ ವರದಿಯಲ್ಲಿ ಕಥೆ ನುಸುಳತೊಡಗಿತು.. ವಾಸ್ತವಯಾವುದು ಕಲ್ಪನೆಯಾವುದು ಎಂಬುದು ಅರ್ಥವಾಗದ ಸ್ಥಿತಿಯನ್ನು ಆತ ನಿರ್ಮಿಸಿಬಿಡುತ್ತಿದ್ದ.ಈ ರೀತಿಯ ಪತ್ರಿಕೋದ್ಯಮ ಮಾಡಬಹುದು ಎಂಬುದು ನನ್ನಂಥವನಿಗೆ ಊಹಿಸಲೂ ಸಾಧ್ಯವಿಲ್ಲದ ವಿಚಾರವಾಗಿತ್ತು..

ನನ್ನಂಥವರು ಪತ್ರಿಕೋದ್ಯಮ ಎಂದರೆ ಸತ್ಯದ ಹುಡುಕಾಟ ಎಂದು ನಂಬಿದವರು.. ಅಲ್ಲಿ ಕಲ್ಪನೆಗೆ ಅವಕಾಶ ಇಲ್ಲ. ವಾಸ್ತವಕ್ಕೆ ಭಾಷಾ ಆಭರಣವನ್ನು ತೊಡಿಸಬೇಕಾದ ಅಗತ್ಯವೂ ಇಲ್ಲ... ಆದರೆ ರವಿಯ ವರದಿಗಾರಿಕೆಯಲ್ಲಿ ಸತ್ಯಕ್ಕಿಂತ ಕಲ್ಪನೆಗೆ ಹೆಚ್ಚಿನ ಮಹತ್ವ ದೊರಕುತ್ತಿತ್ತು. ಆತ ತನ್ನ ಭಾಷೆಯ ಮೇಲಿನ ಹಿಡಿತವನ್ನು ಸತ್ಯವನ್ನು ಮರೆಮಾಚುವುದಕ್ಕೆ ಬಳಸುತ್ತಿದ್ದ.. ಭೂಗತ ಜಗತ್ತು ಕುರಿತ ಅವನ ಬಹುತೇಕ ವರದಿಗಳಲ್ಲಿ ಕಮರ್ಶಿಯಲ್ ಸಿನಿಮಾ ಅಂಶಗಳು ಜಾಸ್ತಿ ಇರುತ್ತಿದ್ದವು.. ಭೂಗತ ಜಗತ್ತಿನ ವ್ಯಕ್ತಿಯೊಬ್ಬನನ್ನು ಆತ ವಿಲನ್ ಎಂದು ಹೇಳುತ್ತಲೇ ಆತನನ್ನು ನಾಯಕನನ್ನಾಗಿ ಮಾಡಿಬಿಡುತ್ತಿದ್ದ. ಆ ಮೂಲಕ ಅವರ ಆಂತರಿಕ ವಲಯವನ್ನು ಪ್ರವೇಶಿಸಿಬಿಡುತ್ತಿದ್ದ..

ಭೂಗತ ಜಗತ್ತಿನ ಜೀವಿಗಳು ತಾವು ಮಾಡಿದ ಕೊಲೆ ದೌರ್ಜನ್ಯಗಳನ್ನು, ಅತ್ಯಾಚಾರವನ್ನು  ಹೊರ ಜಗತ್ತಿಗೆ ತಿಳಿಸುತ್ತ  ಸಾಮಾನ್ಯ ಜನರಲ್ಲಿ ಭಯವನ್ನು ಉಂಟು ಮಾಡಲಿ ರವಿ ಬೆಳಗೆರೆಯನ್ನು ಬಳಸಿಕೊಳ್ಳತೊಡಗಿದರು..ಆತ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ತುಂಬು ಸಂತೋಷದಿಂದ ಅವರಿಗೆ ವೇದಿಕೆಯನ್ನು ಒದಗಿಸುತ್ತಿದ್ದ..ಭೂಗತ ಜಗತ್ತಿನ ಆಗು ಹೋಗುಗಳಲ್ಲಿ ಮೂಗು ತೂರಿಸತೊಡಗಿದ ರವಿ. ಆಲ್ಲಿನ ಆಗು ಹೋಗುಗಳನ್ನು ತಾನೇ ನಿಯಂತ್ರಿಸುವವನಂತೆ ವ್ಯವಹರಿಸತೊಡಗಿದ. ಹೀಗಾಗಿ ಸ್ನೇಹಿತರಾಗಿದ್ದ ಭೂಗತ ಜಗತ್ತಿನ ಡಾನ್ ಗಳು ಬೇರೆಯಾದರು. ಯಾರು ಯಾರೋ ಒಂದಾದರು..

ಈ ಕುರಿತು ಮುತ್ತಪ್ಪ ರೈ ಒಮ್ಮೆ ನನ್ನ ಬಳಿ ಹೇಳಿದ್ದರು..

ರವಿ ಒಬ್ಬ ಅಪಾಯಕಾರಿ ಪತ್ರಕರ್ತ....!

ಅಗ್ನಿ ಶ್ರೀಧರ್ ಕೂಡ ರವಿ ಬೆಳಗೆರೆ ಕುರಿತು ತುಂಬಾ ನೋವಿನಿಂದ ಮಾತನಾಡುತ್ತಾರೆ. ಯಾಕೆ ಹೀಗಾದ ಎಂದು ಪ್ರಶ್ನಿಸುತ್ತಿದ್ದವರು ಅಗ್ನಿಶ್ರೀಧರ್...

ರವಿ ಹಾಯ್ ಬೆಂಗಳೂರು ಮಾಡಿದ ಮೇಲೆ ಸಂಪೂರ್ಣವಾಗಿ ಬದಲಾಗಲಿಲ್ಲ,, ಬೆತ್ತಲಾದ... ತನ್ನ ಕಡು ಕಷ್ಟದ ದಿನಗಳನ್ನು ಮರೆತು ಬಡತನಕ್ಕೆ ಸೆಡ್ದು ಹೊಡೆಯುವನಂತೆ ಫೀಲ್ಡ್ ಗೆ ಇಳಿದ...ಅವನ ಪತ್ರಿಕೆಯ ಮೂರನೆಯ ಸಂಚಿಕೆ ಹೊರಬರುವ ಹೊತ್ತಿಗೆ ಅವನ ಮೇಲಿದ್ದ ಅಲ್ಪ ಸ್ವಲ್ಪ ನಂಬಿಕೆಯೂ ನನಗೆ ಹೊರಟು ಹೋಗಿತ್ತು.. ಜಾರಕೀಹೊಳಿ ಸಹೋದರರ ಮೇಲೆದ್ದ ಒಂದು ಕೊಲೆ ಆರೋಪ ಪ್ರಕರಣದಲ್ಲಿ ನಡೆದ ಒಂದು ಒಪ್ಪಂದ ಮತ್ತು ಅದರಿಂದ ರವಿ ಮಾಡಿಕೊಂಡ ಲಾಭ ನನಗೆ ಆಘಾತವನ್ನು ಉಂಟು ಮಾಡಿತ್ತು.. ಕೊಣ್ಣೂರು ಮರ್ಡರ್ ಕೇಸ್ ಎಂಬ ಆ ಪ್ರಕರಣ ರವಿಯ ಜೋಳಿಗೆ ತುಂಬಿಸಿತ್ತು..ಈ ನನಗಾದ ಈ ಆಘಾತವನ್ನು ರವಿಗೂ ಹೇಳಿದ್ದೆ.. ನೀನು ಯಾರಿಗೂ ಹೆದರ ಬೇಡ ಕನಿಷ್ಟ ನಿನ್ನ ಆತ್ಮಕ್ಕಾದರೂ ಹೆದರು ಎಂದು ಹೇಳಿದ್ದೆ.

ಆತ ಮುಂದಿನ ಐದು ವರ್ಷ ನನ್ನ ಜೊತೆ ಮಾತನಾಡಿರಲಿಲ್ಲ....!

ಇವತ್ತಿಗೆ ಇಷ್ಟೇ ಸಾಕು... ಇನ್ನೊಮ್ಮೆ ಮುಂದಿನದನ್ನ ಹೇಳ್ತೀನಿ...


Sunday, August 30, 2020

MEDIA WATCH DEVARA AATA

ನಾಳೆಯಿಂದ ಪಬ್ ಬಾರ್, ಕ್ಲಬ್ ಎಲ್ಲವೂ ಪ್ರಾರಂಭ
ಇದೆಲ್ಲ ದೇವರ  ಆಟ
ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು..
ಇದೆಲ್ಲ ದೇವರ ಆಟ
ಆರ್ಥಿಕ ಸ್ಥಿತಿ ಶೋಚನೀಯ, ನೆಲಕಚ್ಚಿದ ಜಿಡಿಪಿ
ಇದೆಲ್ಲ ದೇವರ ಆಟ..
ನಿರ್ಮಲಾ ಸೀತಾರಾಮನ್ ದೇಶ ಕಂಡ ಅತಿ ಕೆಟ್ಟ ಆರ್ಥ ಸಚಿವರು...
ಇದೆಲ್ಲ ದೇವರ ಆಟ....
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

after 17 weeks what is happening in china border

ಚೀನಾ ಭಾರತದ ಭೂಮಿಯೊಳಗೆ ಪ್ರವೇಶಿಸಿ ೧೭ ವಾರಗಳು ಕಳೆದಿವೆ..
ಈ ಅವಧಿಯಲ್ಲಿ ೫ ರಿಂದ ೧೫ ಕಿಮೀ ಭಾರತದ ಭೂಮಿಯನ್ನು ಚೀನಾ ಕಬಳಿಸಿ ಕುಳಿತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ.
 ಈಗ ಡಿಸ್ ಎಂಗೇಜ್ ಮೆಂಟ್ ಮುಗಿದಿದೆ ಎನ್ನುತ್ತಿದೆ ಚೀನಾ. ನಾವು ಭಾರತದ ಭೂಮಿಯನ್ನು ತೆರವುಗೊಳಿಸಿದ್ದೇವೆ. ಈಗ ನಾವಿರುವುದು ನಮ್ಮ ಭೂಮಿಯಲ್ಲಿ ಎನ್ನುತ್ತಿದೆ ಚೀನಾ.
ಎಕ್ಚುವಲ್ ಕಂಟ್ರೂಲ್ ಅನ್ನು ಬದಲಿಸುವ ಚೀನಾ ಇಚ್ಚೆ. ಇದರಲ್ಲಿ ಚೀನಾ ಯಶಸ್ವಿಯಾಯಿತಾ ?
ಭಾರತದ ಮಾಧ್ಯಮಗಳು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ? ಯಾಕೆ ಮುಚ್ಚಿಕೊಂಡು ಕುಳಿತಿವೆ ?
ಭಾರತ ತಪ್ಪಿದ್ದೆಲ್ಲಿ ?
ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

Sunday, July 19, 2020

MEDIA WATCH EPS 33

ಯಡಿಯೂರಪ್ಪ ಏಕಾಂಗಿ, ಬೆಂಬಲ ನೀಡದ ಹಿರಿಯ ಸಚಿವರು..
ಯಡಿಯೂರಪ್ಪ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಚೆಂದ ನೋಡುತ್ತಿರುವ ಈಶ್ವರಪ್ಪ,, ಜಗದೀಶ್ ಶೆಟ್ಟರ್, ಮತ್ತು ಮೂವರು ಉಪ ಮುಖ್ಯಮಂತ್ರಿಗಳು
ರಾಜಕೀಯ ಬಿಡಿ ಯಡಿಯೂರಪ್ಪನವರಿಗೆ ಬೆಂಬಲ ನೀಡಿ.
ಡಿ.ಕೆ.ಶಿವಕುಮಾರ್ ಅವರದೂ ಕಾಂಗ್ರೆಸ್ ನಲ್ಲಿ ಅದೇ ಸ್ಥಿತಿ. ಅವರೂ ಅವರ ಪಕ್ಷದಲ್ಲಿ ಏಕಾಂಗಿ..
ಕಾಂಗ್ರೆಸ್ ನಲ್ಲಿ ಎಲ್ಲರೂ ಒಂದಾಗದಿದ್ದರೆ, ಡಿಕೆ ಅವರಿಗೆ ಬೆಂಬಲ ನೀಡದಿದ್ದರೆ, ಜನ ಕ್ಷಮಿಸಲಾರರು..
ಇಬ್ಬರು ಅಸಹಾಯಕ ನಾಯಕರು, ಯಡ್ದಿ, ಡಿಕೆ...
ಇದು ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ
 

Wednesday, July 1, 2020

media watch eps 21

ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕ;; ರಾಜ್ಯಾದ್ಯಂತ ಲಕ್ಷಾಂತರ ಜನ ನೋಡ್ತಾರಂತೆ..
ಕೊರೊನಾ ಸಾವಿನ ಮನೆಯಲ್ಲಿ ಇದೆಲ್ಲ ಬೇಕಿತ್ತಾ ? ಪತ್ರಿಕೆಗಳಿಗೆ ಜಾಹಿರಾತಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಅನಿವಾರ್ಯವಾಗಿತ್ತಾ ?
ಕಾಂಗ್ರೆಸ್ ಅಂದರೆ ಸರಳತೆ. ಗಾಂಗ್ರೆಸ್ ಎಂದರೆ ಮಹಾತ್ಮಾ ಗಾಂಧಿ. ಆದರೆ ಸೋನಿಯಾ ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ.
ಚೀನಾ ಗಡಿ ತಂಟೆ.. ಚೀನಾ ಬಂಡವಾಳ ಹೂಡಿಕೆಗೆ ತಡೆ,,
ಇಷ್ಟು ಇನ್ನಷ್ಟು. ಇವತ್ತಿನ ಮೀಡಿಯಾ ವಾಚ್ ನಲ್ಲಿ
ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

Sunday, June 28, 2020

media watch episode 18

ಭಾರತ ಚೀನಾ ಗಡಿಯಲ್ಲಿ ಹಾರುತ್ತಿವೆ ಯುದ್ಧ ವಿಮಾನಗಳು..
ಯುದ್ಧಗೆ ಸಿದ್ದವಾಗ್ತಿದೆಯಾ ಚೀನಾ ?
ಕೊರೊನಾ ವೈರಸ್; ಪರಿಸ್ಥಿತಿ ಗಂಭೀರ....
ಕಾಂಗ್ರೆಸ್ ಮಾಡುತ್ತಿದೆಯಂತೆ ಸೈಕಲ್ ರ್ಯಾಲಿ..
ಶತಕ ಹೊಡೆದಿರುವ ಪಕ್ಷಕ್ಕೆ ಹೊರಾಟ ದಾರಿ ಸಿಗುತ್ತಾ ?
ಇವೆಲ್ಲ ಈವತ್ತಿನ ಮೀಡಿಯಾ ವಾಚ್ ನಲ್ಲಿ..
ಶಶಿಧರ್ ಭಟ್ ಸುದ್ದಿ ಕ್ಷಕಿರಣ..

Friday, June 26, 2020

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

Thursday, June 25, 2020

MEDIA WATCH EPS 17

ಸರ್ಕಾರದ ಹಠ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವ ಸರ್ಕಾರ
ಈ ಹಠ ಒಳ್ಳೆಯದಲ್ಲ, ಸುರೇಶ್ ಕುಮಾರ್.
ಚೀನಾ ಗಡಿಯಲ್ಲಿ ಮೇ ತಿಂಗಳಲ್ಲೆ ಚೀನಾ ಸೈನ್ಯ ಜಮಾವಣೆ ಮಾಡಿತ್ತಂತೆ...
ಹಳೆಯ ಟಿವಿ  ರೆಡಿಯೋಗಳಿಗೆ ಡಿಮಾಂಡ್ ಅಂತೆ, ಇದು ಹುಚ್ಚರ ಸಂತೆ ಶಿವಾ...!
ಅತ್ಯಾಚಾರ ಗಂಭೀರ ಆರೋಪ ಎನ್ನುವ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಭಂಧಿಸಲಾಗದು
ಹೈಕೋರ್ಟ್ ತೀರ್ಪು !!!
ಇದೆಲ್ಲ ಇವತ್ತಿನ ಮೀಡಿಯಾ ವಾಚ್ ನಲ್ಲಿ... ಸುದ್ದಿಗೆ ಶಶಿಧರ್ ಭಟ್ ಬೀರುವ ಕ್ಷಕಿರಣ..

Saturday, June 20, 2020

BSY KONE AATA

ಬಿ ಎಸ್ ಯಡಿಯೂರಪ್ಪನವರಿಗೆ ವಿದಾಯ ಹೇಳುವ ಪ್ರಕ್ರಿಯೆಗಳು ಬಿಜೆಪಿಯಲ್ಲಿ ಪ್ರಾರಂಭವಾಗಿವೆ
ಆದರೆ ಯಡಿಯೂರಪ್ಪನವರನ್ನು ಬದಲಿಸುವ ಸ್ಥಿತಿ ಈಗಿಲ್ಲ. ಯಡಿಯೂರಪ್ಪನವರಂತಹ ನಾಯಕರೂ ಇಲ್ಲ.
ಇದು ಬಿಜೆಪಿ ನಾಯಕರಿಗೆ ದೊಡ್ದ ತಲೆನೋವು
ಆದರ ಸಂಪುಟ ವಿಸ್ತರಣೆಯ ನಂತರ ಪರಿಸ್ಥಿತಿ ಬದಲಾಗಲಿದೆ. ಭಿನ್ನಮತೀಯ ಚಟುವಟಿಕೆಗಳು ಗರಿಗೆದರಲಿದೆ.
ಇದನ್ನೇ ಬಿಜೆಪಿ ವರಿಷ್ಟರು ಬಳಸಿಕೊಂಡು ಹೊಸ ನಾಯಕರನ್ನು ಪತ್ತೆ ಮಾಡಬಹುದು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Thursday, June 18, 2020

PARISHAT ELECTION; HIGH DRAMA

ಪರಿಷತ್ ಚುನಾವಣೆ;ರಾಜ್ಯ ಘಟಕಗಳ ಹಲ್ಲು ಕಿತ್ತ ಬಿಜೆಪಿ ಕಾಂಗ್ರೆಸ್,
ಜೆಡಿಎಸ್, ಕಾಂಗ್ರೆಸ್ ನಲ್ಲಿ ಕುಟುಂಬ ನಿಷ್ಟೆಯೇ ಪಕ್ಷ  ನಿಷ್ಟೆ, ಬಿಜೆಪಿಯಲ್ಲಿ ಸಂಘ ನಿಷ್ಟೆಯೇ ಪಕ್ಷನಿಷ್ಟೆ,
ಹರಿಪ್ರಸಾದ್ ಎಂಟ್ರಿ; ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಗೊತ್ತಿರಲಿಲ್ಲ.
ಬಿಜೆಪಿ ನಾಯಕ್ ಬಂದ್ರು.. ಯಡಿಯೂರಪ್ಪ ಮತ್ತೆ ಡಮ್ಮಿ; ವಿಶ್ವನಾಥ್ ಗೆ ನೀಡಿದ ಭರವಸೆ ಹುಸಿ.
ಹೈಕಮಾಂಡ್ ಆಟ ಸ್ಥಳೀಯ ನಾಯಕರಿಗೆ ಪ್ರಾಣ ಸಂಕಟ..
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ.

PM SPEACH, CHINA AND AFTER

Tuesday, June 16, 2020

BORDER TENSTION ; INDIA SHOULD BE CAUTIOUS

ಚೀನಾ ದುರಾಕ್ರಮಣ; ನಂಬಿಕೆ ದ್ರೋಹಿ ರಾಷ್ಟ್ರದ ಇನ್ನೊಂದು ಕುತಂತ್ರ.
ಗಡಿಯಿಂದ ಬೀಳ್ಕೊಡಲು ಬಂದ ಯೋಧರನ್ನು ಬಡಿದು ಸಾಯಿಸಿದ ಚೀನಿ ಕೆಂಪು ಸೈನಿಕರು..
ಸರಿಯಾಗಿ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರು
ಈಗ ದೇಶ ಒಗ್ಗಟ್ಟಾಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಜನರ ಮುಂದಿಡಬೇಕು.. ಮುಚ್ಚುಮರೆ ಸಾಕು ಸಾಕು..
ಎಡಪಂಥೀಯರು ಹೊರಕ್ಕೆ ಬರಲಿ. ಚೀನಿ ದುಷ್ಕ್ಕೃತ್ಯವನ್ನು ಬಲವಾಗಿ ಖಂಡಿಸಲಿ..
ಚೀನಾ ಕಮ್ಯುನಿಸಂ ತತ್ವಕ್ಕೂ ದ್ರೋಹ ಮಾಡುತ್ತಿದೆ ಎಂಬುದು ಅರಿವಿರಲಿ..
ಮಾತುಕತೆಗೆ ವೇದಿಕೆ ಸಿದ್ಧವಾಗಲಿ.. ಸಮಸ್ಯೆ ಬಗೆಹರಿಸಲು ಇದೊಂದೇ ಮಾರ್ಗ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್

Monday, June 15, 2020

SCHOOL REOPEN; GOVT CONFUSION

ಶಾಲೆಗಳ ಪುನರಾರಂಭ; ಗೊಂದಲ ಸೃಷ್ಟಿಸಿದ ಸರ್ಕಾರ
ಒಳ್ಳೆಯವರು ಅನ್ನಿಸಿಕೊಳ್ಳುವ ಹಪಹಪಿಕೆಯಲ್ಲಿ ತೀರ್ಮಾನವನ್ನೇ ತೆಗೆದುಕೊಳ್ಳದ ಶಿಕ್ಷಣ ಸಚಿವರು..
ಖಾಸಗಿ ಶಿಕ್ಷಣ ಲಾಬಿಯ ನಿಯಂತ್ರಣದಲ್ಲಿ ಸುರೇಶ್ ಕುಮಾರ್...?
ಸರ್ಕಾರಕ್ಕೆ ಆಟ, ಪೋಷಕರು, ಮಕ್ಕಳಿಗೆ ಪ್ರಾಣ ಸಂಕಟ..
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಮತ್ತು ಶಶಿಧರ್ ಭಟ್

Sunday, June 14, 2020

MEDIA WATCH EPS 14

ಚೀನಾ ಕುರಿತು ರಾಜನಾಠ್ ಸಿಂಗ್ ಹೇಳಿಕೆ.
ಪ್ರಜಾವಾಣಿ ವರದಿಗೂ, ಹಿಂದೂ ವರದಿಗೂ ಅಜಗಜಾಂತರ..
ಪಾಕ್ ಆಕ್ರಮಿತ ಕಾಶ್ಮೀರ್ ಮರಳಿ ಭಾರತಕ್ಕೆ ಎಂದು ರಾಜನಾಥ್ ಸಿಂಗ್ ಹೇಳಿದ್ರಾ ?
ಅಥವಾ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಬಹುದು ಎಂದು ಹೇಳಿದ್ರಾ ?
ಪ್ರಜಾವಾಣಿ ವರದಿಯಂತೆ ರಾಜನಾಥ್ ಪಿಒಕೆ ಮರಳಿ ಭಾರತಕ್ಕೆ ಎಂದು ಹೇಳಿದ್ರೆ ಈ ಹೇಳಿಕೆಯ ಅಪಾಯವೇ ಹೆಚ್ಚು..
ಇದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದ್ದರೂ ಅಪಾಯ..
ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದರೆ ಅದು ಭಾರತಕ್ಕೆ ಸಂತೋಷದ ವಿಚಾರವೇ.. ಆದರೆ ಅದು ಹೇಳಿಕೆ ನೀಡಿದಷ್ಟು ಸುಲಭ ಅಲ್ಲ..
ಮೀಡಿಯಾ ವಾಚ್ 
ಶಶಿಧರ್ ಭಟ್ ಅವರಿಂದ ಸುದ್ದಿಯ ಮೇಲೆ ಕ್ಷಕಿರಣ

Saturday, June 13, 2020

MEDIA WATCH EPS 13

ಭಾರತದ ವಿರುದ್ಧ ತೊಡೆ ತಟ್ಟಿದ ನೇಪಾಳ.. ಬದಲಾದ ನಕ್ಷೆಗೆ ಸಂಸತ್ ಅಂಗೀಕಾರ.
ಭಾರತ ವಿದೇಶಾಂಗ ನೀತಿ ಸಂಪೂರ್ಣ ವಿಫಲ; ಈಗ ಭಾರತದ ಸುತ್ತ ಮುತ್ತ ವೈರಿ ರಾಷ್ಟ್ರಗಳ ಪಹರೆ
ನಮ್ಮ ಎಲ್ಲ ಮಿತ್ರರನ್ನು ಕಸಿದುಕೊಂಡ ಚೀನಾ; ತಾಳ ತಪ್ಪಿದ ಮೋದಿ ಸರ್ಕಾರ.
ರಾಜಕೀಯ ಮಾತನಾಡಲು ಪ್ರಾರಂಭಿಸಿದ ಸೇನಾ ಮುಖ್ಯಸ್ಥರು.. ವಿದೇಶಾಂಗ ನೀತಿಯ ಬಗ್ಗೆ ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದವರು ಯಾರು ?
ಮೀಡಿಯಾ ವಾಚ್;
ಶಶಿಧರ್ ಭಟ್, ಸುದ್ದಿಯ ಮೇಲಿನ ಕ್ಷಕಿರಣ

Thursday, June 11, 2020

LAND ACT AMENDMENT

ಭೂಸುಧಾರಣಾ ಕಾನೂನು ತಿದ್ದುಪಡಿ;; ರೈತರ ತಾಯಿ ಭೂತಾಯಿ ಮಾರಾಟ..
ಭೂಮಿ ರೈತರ ಸಂಬಂಧವನ್ನೇ ಅರಿಯದ ಮುಟ್ಠಾಳರು..
ಉದ್ಯಮಗಳಿಗೆ ಭೂಮಿ; ರೈತರಾಗಲಿದ್ದಾರೆ, ಕೂಲಿ ಕಾರ್ಮಿಕರು, 
ನಗರ ಪದೇಶಗಳಲ್ಲಿ ಹೊಟೆಲ್ ತಟ್ಟೆ ತೊಳೆಯುವವರು.
ರೈತರನ್ನು ಭುಮಿಯಿಂದ ಹೊರಹಾಕುತ್ತಿರುವ ಬಿಜೆಪಿ ಸರ್ಕಾರ
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

Wednesday, June 10, 2020

MEDIA WATCH EPS 11

ವಿಧಾನ ಪರಿಷತ್ ಟಿಕೆಟ್ ಗಾಗಿ ಭಾರಿ ಪೈಪೋಟಿ.
ಎಂಟಿಬಿ, ವಿಶ್ವನಾಥ್, ಶಂಕರ್ ಗೆ ಬಿಜೆಪಿ ಟಿಕೆಟ್ ನೀಡುತ್ತಾ ?
ಉಗ್ರಪ್ಪಗೆ ಕಾಂಗ್ರೆಸ್ ಮಣೆ ಹಾಕುತ್ತಾ ?
ಶರವಣ ಮತ್ತೆ ಜೆಡಿಎಸ್ ಟಿಕೆಟ್ ಪಡೀತಾರಾ ?
ಶಿಕ್ಷಣ ಗೊಂದಲ.. ಎಲ್ಲವೂ ಅಯೋಮಯ..
ಬರಲಿದೆ ಕನ್ನಡದಲ್ಲಿ ರಾಮಾಯಣ...
ಇದೆಲ್ಲ ಇವತ್ತಿನ ಮೀಡಾಯಾ ವಾಚ್ ನಲ್ಲಿ.. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ

Tuesday, June 9, 2020

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

MEDIA WATCH EPS10

ರಾಜ್ಯ ಸಭೆ, ವಿಧಾನ ಪರಿಷತ್ ವ್ಯವಸ್ಥೆ ಇರುವುದು ಯಾಕಾಗಿ ?
ಬೇರೆ ಬೇರೇ ಕ್ಷೇತ್ರಗಳ ತಜ್ನರ ಅನುಭವ ಸದನಕ್ಕೆ ದೊರಕಲಿ ಎಂದೋ 
ಅಥವಾ ರಾಜಕೀಯ ಪುನರ್ ವಸತಿಗಾಗಿಯೋ ?
ಉದ್ದೇಶ ಈಡೇರಿಸದ ರಾಜ್ಯಸಭೆ, ವಿಧಾನ ಪರಿಷತ್ ಅನ್ನು ರದ್ದುಪಡಿಸಿ ಬಿಡಿ..
ಮೀಡೀಯಾ ವಾಚ್. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ.

Saturday, June 6, 2020

MEDIA WATCH SUNDAY

ಮೋಸದ ಬ್ಯಾಂಕ್ ಗಳ ವಿರುದ್ಧ ಇಡಿ ತನಿಖೆ.. ಮೋಸಹೋದವರಿಗೆ ಸಿಗಬಹುದಾ ನ್ಯಾಯ ?
ಕೊರೊನೊ ವಿಚಾರದಲ್ಲಿ ಮಾಧ್ಯಮಗಳ ರಾಜಕೀಯ; ಚೀನಾದ ಜೊತೆ ಭಾರತದ ಪೈಪೋಟಿ ಎಂದು ಹೇಳಲು ಸಿದ್ದವಿಲ್ಲದ ಮಾಧ್ಯಮಗಳು.
ಬದಲಿಗೆ ಚೀನಾ ಜೊತೆ ಮಹಾರಾಷ್ಟ್ರ ಪೈಪೋಟಿ ಎಂದು ವರದಿ ಮಾಡಿದ ವಿಜಯವಾಣಿ.. 
ಮೋದಿ ಭಾರತವನ್ನು ಉಳಿಸುವ ಯತ್ನ..
ಪ್ರೀತಿ ಎಂದು ನಂಬಿ ಹಣವನ್ನು ಕಳೆದುಕೊಂಡ ಶಿಕ್ಶಕಿ; ಬಿಬಿಸಿ ವಿಕ್ಷಕವಿವರಣೆಯಿಂದ ಹೊರಬಂದ ಲೆಜಂಡರಿ ಬೈಕಾಟ್..
ಇದೆಲ್ಲ ಇವತ್ತಿನ ಮಿಡೀಯಾ ವಾಚ್ ನಲ್ಲಿ.....
ಸುದ್ದಿ ಮಾಧ್ಯಮದ ಮೇಲೆ ಶಶಿಧರ್ ಭಟ್ ಕ್ಷಕಿರಣ

Friday, June 5, 2020

MEDIA WATCH TV

ಪ್ರೈಮ್ ನ್ಯೂಸ್ ನಲ್ಲಿ ೨೦ ನಿಮಿಷ ಗ್ರಹಣ ಹಿಡಿಸಿದ ಟಿವಿ ೯
ಬಜೆಟ್ ನಲ್ಲಿ ಪ್ರಕಟಿಸಿದ ಯೋಜನೆಗಳನ್ನು  ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ
ಆರ್ಥಿಕವಾಗಿ ಕುಸಿದಿದ್ದನ್ನು ಒಪ್ಪಿಕೊಂಡ ಬಿಜೆಪಿ ಸರ್ಕಾರ.
ಖರ್ಗೆಗೆ  ರಾಜ್ಯಸಭೆ ಟಿಕೆಟ್; ರಾಜ್ಯ ನಾಯಕರನ್ನು ಕತ್ತಲೆಯಲ್ಲಿ ಇಟ್ಟ ಸೋನಿಯಾ.
ಮುಗಿಯಿತಾ ಸಿದ್ದರಾಮಯ್ಯ ಹೈಕಮಾಂಡ್ ಹನಿಮೂನ್?
ಹೈಕಮಾಂಡ್ ನಿರ್ದೇಶನದಲ್ಲಿ ಡಿಕೆ ಪಾತ್ರ ?
ಇದೆಲ್ಲ ಇವತ್ತಿನ ಮಿಡಿಯಾ ವಾಚ್ ನಲ್ಲಿ.
ಮೀಡಿಯಾ ವಾಚ್; ಇದು ಮಾಧ್ಯಮದ ಮೇಲಿ ಶಶಿಧರ್ ಭಟ್ ಕ್ಷಕಿರಣ

Wednesday, June 3, 2020

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

Tuesday, June 2, 2020

SHRIRAMULU SHOULD RESIGN

ಆರೋಗ್ಯ ಸಚಿವ ಬಿ. ಶ್ರೀರಾಮುಲು ಯಾಕೆ ಸಚಿವರಾಗಿ ಮುಂದುವರಿಯಬೇಕು ? ಅವರು ಸಮರ್ಥನೆಗೆ ಒಂದೇ ಒಂದೂ ಕಾರಣವಿದೆಯಾ ?
ಅವರ ಬೇಜವಾಬ್ದ್ರಾರಿ ತನದ ಇನ್ನೊಂದು ಘಟನೆ ಇಂದು ನಡೆದು ಹೋಯಿತು.. ಪರುಶುರಾಮ ಪುರದಲ್ಲಿ ಎತ್ತಿನ ಬಂಡಿ ಮೆರವಣಿಗೆ..
ಸರ್ಕಾರದ ಆದೇಶವನ್ನೇ ಉಲ್ಲಂಘಿಸಿದ ಸಚಿವ,,, 
ಯಡಿಯೂರಪ್ಪನವರೇ, ಶ್ರೀರಾಮುಲು ಆರೋಗ್ಯ ಸಚಿವರಾಗಲು ಯೋಗ್ಯರಲ್ಲ
ಅವರನ್ನು ಸಚಿವ ಸ್ಥಾನದಿಂದ ಎತ್ತಿ ಹಾಕಿ.. ಇಲ್ಲವೇ ಖಾತೆ ಬದಲಿಸಿ.
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

CHINA ,INDIA ; WAR OR PEACE

ಚೀನಾ ಗಡಿಯಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಭಾರತ ದೃಡ ನಿಲುವು ಪ್ರಕಟಿಸಿದೆ. ಇದು ಸ್ವಾಗತಾರ್ಹ.. ಆದರೆ ಮುಂದೇನು ? ಚೀನಾ ಭಾರತದ ಮೇಲೆ ಯುದ್ಧ ಮಾಡುತ್ತಾ ? ೮೦ ಬಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರವನ್ನು ಚೀನಾ ಬಲಿ ಕೊಡುತ್ತಾ ?
ಭಕ್ತರು ಹೇಳುವಂತೆ ಚೀನಾ ವಸ್ತುಗಳನ್ನು ನಾವು ನಿಷೇಧಿಸುವುದು ಸಾಧ್ಯವಾ ? 
ಸುದ್ದಿ ಸಂವಾದ
ಭಾರತ- ಚೀನಾ ಮುಂದೇನು ?
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Saturday, May 30, 2020

CONGRESS SHASHTRATYAGA AND NO ANSWER TO BJP ATTACK

ನೆಹರೂ, ಇಂದಿರಾ ಮಾನ ಹರಾಜು ಹಾಕುತ್ತಿರುವ ಬಿಜೆಪಿ, ಸಂಘ ಪರಿವಾರ..
ಶಸ್ತ್ರತ್ಯಾಗ ಮಾಡಿ ಸುಮ್ಮನೆ ಕುಳಿತಿರುವ ಕಾಂಗ್ರೆಸ್,
ಇಂದಿರಾ ನೆಹರೂ ಸಾಧನೆಯ ಪಟ್ಟಿಯನ್ನು ಕಾಂಗ್ರೆಸ್ ಜನರ ಮುಂದೆ ಯಾಕೆ ಇಡುತ್ತಿಲ್ಲ ?
ಇಂದಿರಾ ಅವರ ಬಡತನ ನಿರ್ಮೂಲನೆ, ವಸತಿ, ಬ್ಯಾಂಕ್ ರಾಷ್ಟೀಕರಣ, ರಾಜಧನ ರದ್ಧತಿ, ಉಳೂವವನೆ ಹೊಲದೊಡೆಯದಂತಹ ಯೋಜನೆಗಳನ್ನು ಜನರಿಗೆ ಯಾಕೆ ನೆನಪು ಮಾಡಿಕೊಡುತ್ತಿಲ್ಲ ?
ಇಂಥಹ ಒಂದು ಯೋಜನೆಯನ್ನು ಮೋದಿ ಯಾಕೆ ಮಾಡಿಲ್ಲ ? ಎಂದು ಕಾಂಗ್ರೆಸ್ ನಾಯಕರು ಯಾಕೆ ಪ್ರಶ್ನಿಸುತ್ತಿಲ್ಲ ?
ವಿಫಲ ಕಾಂಗ್ರೆಸ್ 
ಸುದ್ದಿ ವಿಶ್ಲೇಷಣೆ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Tuesday, May 26, 2020

TAX ON CARODPATIS; IS IT SOLUTION OR REVIVAL O ECONOMY ?

ಭಾರತದಲ್ಲಿ ಶತಕೋಟ್ಯಧೀಶರ ಸಂಖ್ಯೆ 119.. ಇಪ್ಪತ್ತು ವರ್ಷಗಳ ಹಿಂದೆ ಇವರ ಸಂಖ್ಯೆ ಬರೀ 9 ಇತ್ತು.
 ಈ ಶತಕೋಟ್ಯಧೀಶರ ಸಂಪತ್ತು ಕಳೆದ ಒಂದು ದಶಕದಲ್ಲಿ ಹತ್ತು ಪಟ್ಟು ಹೆಚ್ಚು. ಅವರ ಒಟ್ಟೂ ಸಂಪತ್ತು ದೇಶದ ವರ್ಷದ ಬಜೆಟ್ಟಿಗಿಂತ ಹೆಚ್ಚಿಗ
 ಮೇಲ್ವರ್ಗದ ಶೇಕಡಾ 10 ಜನರಲ್ಲಿ ಇಡೀ ದೇಶದ ಸಂಪತ್ತಿನ ಶೇ. 77 ಭಾಗ ಕೇಂದ್ರೀಕೃತ.  ಧಾರ್ಮಿಕ ಸಂಸ್ಥೆಗಳಲ್ಲೂ ಅಪಾರ ಸಂಪತ್ತು. ಇವರಿಗೆಲ್ಲ ಕರೋನಾ ವಿಶೇಷ ತೆರಿಗೆ ವಿಧಿಸಿ. ಅದನ್ನು ಆರ್ಥಿಕತೆ ಸುಧಾರಣೆಗೆ ಬಳಸಿ. 
ಕುಂಬದಲ್ಲಿ ಬೆಳೆದ ಕೌರವವರಿಗೆ ಅಂತಃಕರಣ ಇಲ್ಲ. ಇದೇ ಇಂದಿನ ಪ್ರಭುತ್ವದ ಮನಸ್ಥಿತಿ
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಔಡ
ಇದು ಸುದ್ದಿ ಟಿವಿ ವಿಶೇಷ

Thursday, May 21, 2020

WHAT IS MODIJI NOW IT IS NEPAL

ಭಾರತದ ವಿರುದ್ಧವೇ ಗುಡುಗಿದ ಗುಬ್ಬಚ್ಚಿ ರಾಷ್ಟ್ರ ನೇಪಾಳ,
ನೇಪಾಳಕ್ಕೂ ನಮ್ಮನ್ನು ಬೆದರಿಸುವ ಶಕ್ತಿ ನೀಡಿಬಿಟ್ಟಿರಲ್ಲ ?
ಎಲ್ಲಿ ಹೋಯಿತು ನಮ್ಮ ವಿದೇಶಾಂಗ ನೀತಿ.. ಎಲ್ಲಿ ಹೋಯಿತು ೫೬ ಇಂಚು ಎದೆ ?
ಎಲ್ಲ ರಾಷ್ಟ್ರಗಳು ನಮ್ಮ ವಿರುದ್ಧ ತಿರುಗಿ ಬೀಳುವ ಹಾಗೆ ಮಾಡಿ ಬಿಟ್ಟಿರಲ್ಲ ? 
ನಮ್ಮ ಸ್ನೇಹಿತರನ್ನೆಲ್ಲ ವಿರೋಧಿಗಳನ್ನಾಗಿ ಮಾಡಿ ಬಿಟ್ಟೀರಲ್ಲ ಸ್ವಾಮಿ ?
ಸುದ್ದಿ ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟುವಿ ವಿಶೇಷ

Wednesday, May 20, 2020

STATE CONGRESS; WHETHER DK WILL WIN THE BATTLE

ಕರ್ನಾಟಕ ಕಾಂಗ್ರೆಸ್ ಗೆ ಈಗ ಡಿ.ಕೆ. ಶಿವಕುಮಾರ್ ಹೊಸ ಸಾರಥಿ.
ಅವರ ಕಾರ್ಯವೈಖರಿಗೆ  ಪಕ್ಷದ ವರಿಷ್ಟರೂ ಮೆಚ್ಚಿದ್ದಾರೆ ಎಂಬ ವರದಿಯೂ ಇದೆ.
ಹಾಗೆ ಡಿಕೆ ತುಂಬಾ ಯಾಕ್ಟೀವ್ ಆಗಿ ಕೆಲಸ ಮಾಡುತ್ತಿರುವುದು ನಿಜ.
ಆದರೆ ಪಕ್ಷದ ಒಳಗಿನ ಕೆಲವು ನಾಯಕರು ಡಿ,ಕೆ, ಯವರಿಗೆ ಅಡ್ಡಗಾಲು ಹಾಕಬಹುದೆ ?
ಸಿದ್ದರಾಮಯ್ಯ ಸಹಕಾರ ನೀಡಬಹುದೆ ?
ಡಿಕೆ ಎಂಬ ಓಡುವ ಕುದುರೆಯನ್ನು ತಡೆಯುವವರು ಯಾರು ?
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Wednesday, May 13, 2020

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

Monday, May 11, 2020

BHAIRAPPAS OLD STATEMENT AND NEW CONTRAVERSY

ಇನ್ನೊಂದು ವಿವಾದಕ್ಕೆ ಸಿಕ್ಕಿಕೊಂಡ ಎಸ್. ಎಲ್. ಭೈರಪ್ಪ.
ಯಾವುದೋ ಪುರಾತನ ಕಾಲದಲ್ಲಿ ನೀಡಿದ್ದ ಹೇಳಿಕೆ ಈಗ ವಿವಾದದ ಕೇಂದ್ರ,
ಪತ್ರಕರ್ತ ಬಶೀರ್ ಹೇಳಿಕೆಗೂ ವಿವಾದ.. ಕೇಸು,,
ಅಭಿವ್ಯಕ್ತಿ ಸ್ವಾತಂತ್ರ, ವಿಮರ್ಶೆ ಮತ್ತು ವ್ಯಕ್ತಿಗತ ಟೀಕೆಯ ವ್ಯತ್ಯಾಸ ತಿಳಿಯದ ಜಾಲ ವೀರರು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

BHAIRAPPAS OLD STATEMENT AND NEW CONTRAVERSY

ಇನ್ನೊಂದು ವಿವಾದಕ್ಕೆ ಸಿಕ್ಕಿಕೊಂಡ ಎಸ್. ಎಲ್. ಭೈರಪ್ಪ.
ಯಾವುದೋ ಪುರಾತನ ಕಾಲದಲ್ಲಿ ನೀಡಿದ್ದ ಹೇಳಿಕೆ ಈಗ ವಿವಾದದ ಕೇಂದ್ರ,
ಪತ್ರಕರ್ತ ಬಶೀರ್ ಹೇಳಿಕೆಗೂ ವಿವಾದ.. ಕೇಸು,,
ಅಭಿವ್ಯಕ್ತಿ ಸ್ವಾತಂತ್ರ, ವಿಮರ್ಶೆ ಮತ್ತು ವ್ಯಕ್ತಿಗತ ಟೀಕೆಯ ವ್ಯತ್ಯಾಸ ತಿಳಿಯದ ಜಾಲ ವೀರರು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Saturday, May 9, 2020

AFTER CORONA; CAMMUNAL VIRUS WILL RULE

ಮಾನವ ಸಂತತಿಯನ್ನೇ ನಾಶ ಪಡಿಸಲು ಹೊರಟ ಕೊರೊನಾ
ಈ ಕಣ್ಣಿಗ್ಗೆ ಕಾಣದ ಜೀವಿ ಅಮೇರಿಕ ಅಧ್ಯಕ್ಷರನ್ನು ರಷ್ಯಾ ಆಧ್ಯಕ್ಷರನ್ನೂ ನಡುಗಿಸಿ ಬಿಟ್ಟಿದೆ,
ಮನುಷ್ಯ ಎಂಬ ಕ್ಷುಲ್ಲಕ ಜೀವಿಯ ಅಹಂಕಾರವನ್ನೂ ನಾಶ ಮಾಡುತ್ತಿದೆ,
ಆದರೆ ಧರ್ಮಾಂಧರ ಅಹಂಕಾರ ಇಳಿದಿಲ್ಲ, ಇಲ್ಲಿಯೂ ಕೋಮುವಾದದ ವಿಷ ಭಿತ್ತಲಾಗುತ್ತಿದೆ,
ಹಾಗಿದ್ದರೆ ಕೊರೊನಾಕ್ಕೆ ಮದ್ದು ಸಿಕ್ಕರೂ ಕೋಮುವಾದಕ್ಕೆ ಮದ್ದು ಸಿಗುವುದು ಕಷ್ತ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Wednesday, May 6, 2020

DISINVESTMENT AND MODI GOVT AFTER COVID 19

ಕೊವಿಡ್ ೧೯ ಪರಿಣಾಮ ಕರಗುತ್ತಿದೆ ಉದ್ಯಮಪತಿಗಳ ಸಂಪತ್ತು.. ಬಡವರಾಗುತ್ತಿರುವ ಶ್ರೀಮಂತರು.
ದೇಶದ ಆರ್ಥಿಕತೆಯನ್ನು ಈಗಲೂ ಉಳಿಸುತ್ತಿರುವುದು ಸಾರ್ವಜನಿಕ ಉದ್ದಿಮೆಗಳು.
ನೆಹರೂ ಅಧಿಕಾರಾವಾಧಿಯಲ್ಲಿ ಪ್ರಾರಂಭವಾದ ಲಾಭದಾಯಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟ ಕೇಂದ್ರ ಸರ್ಕಾರ
ತನ್ನ ನಿರ್ಧಾರವನ್ನು ಈಗಲಾದರೂ ಬದಲಿಸುತ್ತಾ ? ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಾ ? 
ಲಾಭ ಗಳಿಸುತ್ತಿರುವ ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪುರೇಷನ್, ಮತ್ತು ಕಂಟೇನರ್ ಕಾರ್ಪುರೇಷನ್, 
ಪ್ರಭುತ್ವ ಸ್ನೇಹಿ ಉದ್ಯಮಪತಿಗಳ ಜೇಬು ಸೇರುತ್ತಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Tuesday, May 5, 2020

RG NEW INTIATIVE AND GOOD BEGAINING

ಅಬಿಜಿತ್ ಬ್ಯಾನರ್ಜಿ ಜೊತೆ ರಾಹುಲ್ ಗಾಂಧಿ ಮಾತುಕತೆ.
ಪತ್ರಕರ್ತರಿಗಿಂತ ಚೆನ್ನಾಗಿ ಚರ್ಚೆ ನಡೆಸಿಕೊಟ್ಟ ರಾಹುಲ್. ನಮ್ಮ ಕೂಗು ಮಾರಿಗಳಿಗೆ ಇದು ಮಾದರಿ
ಮೋದಿ ಪೂಜೆಯಲ್ಲಿ ನಿರತವಾದ ಮಾಧ್ಯಮ; ಆಡಳಿತ ಪಕ್ಷದ ಭಜನಾಮಂಡಳಿ ಸದಸ್ಯರಾದ ಕೂಗು ಮಾರಿಗಳು
ದೆಹಲಿಯಲ್ಲಿ ಗುಂಡಿನ ಮೇಲೆ ಕೊರೊನಾ ತೆರಿಗೆ; ಪಾನ ವಿರೋಧಿ ಕೇಜ್ರಿವಾಲ್ ಕೈ ಹಿಡಿದ" ಗುಂಡೂ " ರಾಯರು !
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಇದು ಸುದ್ದಿ ಟಿವಿ ವಿಶೇಷ

Monday, May 4, 2020

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

Sunday, May 3, 2020

ANTI POOR GOVERNMENT AND HUNGER

ರಾಜ್ಯಗಳ ಜೊತೆ ವ್ಯಾಪಾರಕ್ಕೆ ಇಳಿದ ಕೆಂದ್ರ ಸರ್ಕಾರ; ದುಡ್ಡು ಕೊಟ್ಟು ಆಹಾರ ಧಾನ್ಯಗಳನ್ನು ಖರೀದಿಸಲು ಸೂಚನೆ.
ಒಂದೆಡೆ ಸೈನ್ಯದಿಂದ ಕೊರೊನಾ ವೀರರರಿಗೆ ಕೃತಜ್ನತೆ. ಪುಷ್ಪವೃಷ್ಟಿ. ಇನ್ನೊಂದೆಡೆ ಕಾಶ್ಮೀರದಲ್ಲಿ ಐವರು ಯೋಧರ ಹತ್ಯೆ...
ಸೈನ್ಯಕ್ಕೂ ರಾಜಕಾರಣದ ನೆರಳು ?
ಹಸಿವಿನ ಪ್ರಶ್ನೆಗೆ ಉತ್ತರ ನೀಡದೇ ವ್ಯಾಪಾರಕ್ಕೆ ಇಳಿಯಿತಾ ಕೇಂದ್ರ ಸರ್ಕಾರ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Thursday, April 30, 2020

CORONA AND STORIES OF STARVATION

ಕೊರೊನಾ ಹಸಿವಿನ ಕಥೆಗಳು..ಭವಿಷ್ಯದ ಕತ್ತಲೆಯಲ್ಲಿ ಕಳೆದು ಹೋಗುತ್ತಿರುವ ಜನ.
ಹಸಿವನ್ನೇ ಮಾರಾಟ ಮಾಡುತ್ತಿರುವ ರಾಜಕಾರಣಿಗಳು, ಸಮಾಜ ಸೇವಕರು.
ಇವರ ಜೊತೆ ಶಾಮೀಲಾದ ಮಾಧ್ಯಮಗಳು..ಜಾಹೀರಾತು ಸುದ್ದಿ ನಡುವಿನ ವ್ಯತ್ಯಾಸ ಮರೆತ ಪತ್ರಿಕೆಗಳು.
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಸುದ್ದಿ ಟಿವಿ ವಿಶೇಷ

CORONA AND STORIES OF STARVATION

ಕೊರೊನಾ ಹಸಿವಿನ ಕಥೆಗಳು..ಭವಿಷ್ಯದ ಕತ್ತಲೆಯಲ್ಲಿ ಕಳೆದು ಹೋಗುತ್ತಿರುವ ಜನ.
ಹಸಿವನ್ನೇ ಮಾರಾಟ ಮಾಡುತ್ತಿರುವ ರಾಜಕಾರಣಿಗಳು, ಸಮಾಜ ಸೇವಕರು.
ಇವರ ಜೊತೆ ಶಾಮೀಲಾದ ಮಾಧ್ಯಮಗಳು..ಜಾಹೀರಾತು ಸುದ್ದಿ ನಡುವಿನ ವ್ಯತ್ಯಾಸ ಮರೆತ ಪತ್ರಿಕೆಗಳು.
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಸುದ್ದಿ ಟಿವಿ ವಿಶೇಷ

Monday, April 27, 2020

STORY OF MAHARAJA AND MONKEY; ARE WE LOOSING JOBS IN GJLF ?

ಭಾರತದ ವಿರುದ್ಧ ತಿರುಗಿ ಬಿದ್ದ ಕೊಲ್ಲಿ ರಾಷ್ಟ್ರಗಳು’ ಇಸ್ಲಾಮಿಫೋಬಿಯಾ ವಿರುದ್ಧ ಆಕ್ರೋಶ
ಲಕ್ಷಾಂತರ ಜನರಿಗೆ  ಉದ್ಯೋಗ ಕಳೆದುಕೊಳ್ಳುವ ಭೀತಿ.
ಮಹಾರಾಜ ಕೋತಿ ಸಾಕಿದ ಕಥೆ..
ಸತ್ಯವನ್ನು ಹೇಳುವ ನಾಲಿಗೆಗಳ ಕ್ಷಾಮ: ಎ, ನಾರಾಯಣ್ ಆತಂಕ
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..
ಸುದ್ದಿ ಟಿವಿ ವಿಶೇಷ

Sunday, April 26, 2020

ANSWER TO PUBLIC RANGANATH

ಪಬ್ಲಿಕ್ ಟಿವಿ ರಂಗ ನನ್ನ ಪುರಾತನ ಸ್ನೇಹಿತ,, ನಾನೆಂದೂ ಅವನ ಕಾಂಪಿಟೇಟರ್ ಅಲ್ಲ.
ಆದರೆ ಎರಡು ದಿನಗಳ ಹಿಂದೆ ರಂಗ ನನ್ನನ್ನು ಬೈದ ಎಂದು ಸಂಘಿಗಳು ಪ್ರಚಾರ ನಡೆಸುತ್ತಿದ್ದಾರೆ.
ನನ್ನನ್ನು ವಿರೋಢಿಸುವವರಿಗೆ ರಂಗನಾಠ್ ಮಾತು ಸಂತೋಷವನ್ನು ನೀಡಿದೆ.
ಆದರೆ ರಂಗ ನನ್ನನ್ನು ಗುರಿಯಾಗಿ ದಾಳಿ ನಡೆಸಿದ್ಡಾನೆ ಎಂಬುದನ್ನು ನಾನೂ ಈಗಲೂ ನಂಬಲಾರೆ..’
ಹೀಗಾಗಿ ಅವನನ್ನೇ ಕೇಳುತ್ತೇನೆ..
ರಂಗಾ ನೀನು ನನ್ನನ್ನು ಬೈದೆಯಾ ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ ? 
ಯಾಕೆ ನನ್ನ ಮೇಲೆ ನಿನ್ನ ಗಧಾ ಪ್ರಹಾರ ?

Friday, April 24, 2020

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

attack on go swamy

ಅರ್ನಾಬ್ ಗೋಸ್ವಾಮಿ ಅವರ ಮೇಲಿನ ಹಲ್ಲೆ ಖಂಡನೀಯ. ಹಿಂಸೆ ಯಾವುದಕ್ಕೂ ಉತ್ತರ ಅಲ್ಲ.
ಆದರೆ ಅವರೊಬ್ಬರೆ ರಾಷ್ಟೀಯವಾದಿ ಪತ್ರಕರ್ತರಾ ? ಮೋದಿ ಬೆಂಬಲಿಗರು, ಬಿಜೆಪಿ ಚೇಲಾಗಳು ರಾಷ್ಟೀಯವಾದಿಗಳಾ ?
ಹಲ್ಲೆಗೆ ಸೋನಿಯಾ ಗಾಂಧಿ ಅವರನ್ನ ಟೀಕಿಸುವುದು  ಅಯೋಗ್ಯತನ ಅಲ್ಲವಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಸುದ್ದಿ ಟಿವಿ ವಿಶೇಷ

Tuesday, March 31, 2020

DELHI BECAME HOT BED FOR CARONA

ಕರೊನಾ ಹಾಟ್ ಬೆಡ್ ಆದ ದೆಹಲಿಯ ನಿಜಾಮುದ್ದೀನ್ ಮಸೀದಿ.
ಅಲ್ಲಿ ನಡೆದ ಧಾರ್ಮಿಕ ಸಮಾವೇಶ.. ಪಾಲ್ಗೊಂಡ ೩೦೦ ಕ್ಕೂ ಹೆಚ್ಚು ವಿದೇಶಿಯರು.
ಇವರಿಗೆಲ್ಲ ವೀಸಾ ನೀಡಿದವರು ಯಾರು ? ಕೇಂದ್ರ ಸರ್ಕಾರದ ಗೂಡಚಾರಿಕೆ ವೈಫಲ್ಯ ಇದಲ್ಲವೆ ?
ಕೇವಲ ಧಾರ್ಮಿಕವಾಗಿ ಇದನ್ನು ನೋಡುವುದು ಸರೀನಾ ? ಇದು ಕೇವಲ ತಬಲಿಕಿ ಜಮಾತ್ ನ ವೈಫಲ್ಯವಾ ?
ಕೇಂದ್ರ ಸರ್ಕಾರವೂ ಹೊಣೆ ಹೊರಬೇಕಲ್ಲವಾ ?
ಸುದ್ದಿ ವಿಶ್ಲೇಷಣೆ- ಶಶಿಧರ್ ಭಟ್
ಸುದ್ದಿ ಟಿವಿ ವಿಶೇಷ

corona and love

ಕೊರೊನಾ ರುದ್ರ ತಾಂಡವ.. ಸಾವಿನ ಭಯ..
ಆತ ೯೫ ವರ್ಷದ ವೃದ್ಧ. ಆಕೆ ೮೭ ರ ಅಜ್ಜಿ. ಇಬ್ಬರಿಗೂ ಕೊರೊನಾ ಸೊಂಕು..
ಇಬ್ಬರನ್ನು ಪ್ರತ್ಯೇಕ ವಾರ್ಡ್ ಗಳಲ್ಲಿ ಇಡಲಾಗಿತ್ತು. ಅವರು ಒಬ್ಬರ ಮುಖ ಒಬ್ಬರು ನೋಡಲು ಬಯಸಿದರು..
ಮುಖ ನೋಡುತ್ತಲೇ ಅವರು ಕೊರೊನಾ ವೈರಾಣುವನ್ನು ಸೋಲಿಸಿದರು.
ಇಲ್ಲಿ ಅವರ ಪ್ರೀತಿ ಗೆದ್ದಿತ್ತು. ಪ್ರೀತಿ ವೈರಾಣುವನ್ನೇ ಓಡಿಸಿತ್ತು.
ಇದು ಪ್ರೀತಿ ಗೆದ್ದ ಕಥೆ. ಎಲ್ಲರ ಹೃದಯಗಳಲ್ಲಿ ಪ್ರೀತಿ ಮನೆ ಮಾಡಿದರೆ ಎಂತಹ ವೈರಾಣುವನ್ನೂ ಸೋಲಿಸಬಹುದು ಎಂದು ಹೇಳುವ ಕಥೆ..
ನೋಡಿ ಪ್ರೀತಿ ಗೆದ್ದ ಕಥೆಯನ್ನ...
ಇದು ಸುದ್ದಿ ಟಿವಿ ವಿಶೇಷ

Sunday, March 8, 2020

is india lost its friends

ಭಾರತ ಸ್ನೇಹಿತರನ್ನು ಕಳೆದುಕೊಳ್ಳುತ್ತಿದೆಯೆ ?
ಅಂತಾರಾಷ್ಟಿಯ ಸಮುದಾಯಕ್ಕೆ ಭಾರತದ ಮೇಲೆ ಯಾಕೆ ಸಿಟ್ಟು ?
ಭಾರತದ ಸುತ್ತ ವೈರಿ ರಾಷ್ಟ್ರಗಳು ಹೆಚ್ಚುತ್ತಿರುವುದು ಯಾಕೆ ?
ಪ್ರಧಾನಿ ಮೋದಿ ವಿದೇಶ ಪ್ರವಾಸ ಕದಿಮೆ ಮಾಡಿದ್ದು ಯಾಕೆ ?
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Saturday, March 7, 2020

YES BANK CRISIS

ಸಂಕಷ್ಟದಲ್ಲಿ ಎಸ್ ಬ್ಯಾಂಕ್; ಆತಂಕದಲ್ಲಿ ಠೇವಣಿದಾರರು..
ಕಾರ್ಪುರೇಟ್ ಕುಳಗಳಿಗೆ ಸಾಲ ದಾನ..
೨೦೧೪ ರ ನಂತರವೇ ೧ ಲಕ್ಷ ಕೋಟಿ ಸಾಲ ನೀಡಿದ ಬ್ಯಾಂಕ್
ಅನಿಲ್ ಅಂಬಾನಿ, ಸುಭಾಷ್ ಚಂದ್ರ ಸಾಲ ಪಡೆದು ಕೈಕೊಟ್ಟರು.
ಇದಕ್ಕೆ ಯಾರು ಹೊಣೆ ?
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Thursday, February 27, 2020

who is responsible for Delhi riots

ರಕ್ತಪಾತ, ಲೂಟಿ, ಹಿಂಸಾಚಾರ,
ಮುರಿದು ಬಿದ್ದ ಮನೆ ಮನ,, ವಾಹನಗಳಿಗೆ ಬೆಂಕಿ...!
ಸಾವು ನೋವು ಅಸಹಾಯಕತೆ, ಒಡೆದ ಮನ...
ದೆಹಲಿ ರಕ್ತಪಾತಕ್ಕೆ ಯಾರು ಹೊಣೆ ?
ಎತ್ತ ತಿರುಗುತ್ತಿದೆ ಸಂಶಯದ ಮುಳ್ಳು ?
ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ,,
ಇದು ಸುದ್ದಿ ಟೀವಿ ವಿಶೇಷ

Saturday, February 22, 2020

Sedition act; Media and Amulya

ಮಾಧ್ಯಮಗಳ ಬೇಜವಾಬ್ದಾರಿತನ. ಅಮೂಲ್ಯ ಎಂಬ ಹೆಣ್ಣು ಮಗಳ ಮೇಲೆ ಸತತ ’ಅತ್ಯಾಚಾರ".
ಆರೋಪ ಸಾಬೀತಿಗೆ ಮೊದಲೇ ತೀರ್ಪು, ಶಿಕ್ಷೆ ನೀಡಿದ ಮಾಧ್ಯಮಗಳು.
ಕ್ರಿಮಿ, ಸೈತಾನ ಎಂದು ಕರೆಯಲು ಮಾಧ್ಯಮಗಳಿಗೆ ಅಧಿಕಾರ ನೀಡಿದವರು ಯಾರು ?
ಸೆಡಿಶನ್ ಕೇಸ್, ಮಾಧ್ಯಮ ಮತ್ತು ಅಮೂಲ್ಯ
ಸಂವಾದ
ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ
ಇದು ಶಿವರಾತ್ರಿಯ ವಿಶೇಷ.. ಸುದ್ದಿ ಟಿವಿ ವಿಶೇಷ.

Tuesday, February 11, 2020

wow it is aam admi

ವಾಹ್.....ದೆಹಲಿಗೆ ಆಮ್ ಆದ್ಮಿ...
ಕೋಮು ರಾಜಕಾರಣದ ತಿರಸ್ಕಾರ
ಅಭಿವೃದ್ಧಿ ರಾಜಕಾರಣಕ್ಕೆ ಪುರಸ್ಕಾರ
ಮುಗಿಯಿತಾ ರಾಜ್ಯಗಳಲ್ಲಿ ಮೋದಿ ಷಾ ಹವಾ ?
ಸಂವಾದ  
ಶಶಿಧರ್ ಭಟ್  ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Tuesday, January 21, 2020

THEORY OF CONSPIRACY

ಎನ್ ಆರ್ ಸಿ ವಿರುದ್ಧದ ಪ್ರತಿಭಟನೆ ತಡೆಯಲು ಷಡ್ಯಂತ್ರ
ಸೂಲಿಬೆಲೆ, ತೇಜಸ್ವಿ ಕೊಲೆ ಯತ್ನದ  ಸುದ್ದಿ ಭಿತ್ತರ
ಮಾಧ್ಯಮ ಪೊಲೀಸ್ ಸರ್ಕಾರ ಸೇರಿ ಹಾರಿಸಿದ ಹುಸಿ ಬಾಂಬ್ !
CONSPIRACY THEORY 
ಸಂವಾದ
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

RAJANATH SINGH ON MEDIA#Shashidharbhat#Sudditv#Karnatakapolitics

ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅತಿ ಹೆಚ್ಚಿನ ಮಾಧ್ಯಮ ಸ್ವಾತಂತ್ರ್ಯವನ್ನು ನೀಡಲಾಗಿದೆ.. ಇದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವ...