ಇಂದು ನಾವೆಲ್ಲ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಯಾವುದು ? ಈ ಪ್ರಶ್ನೆಯನ್ನು ದಿನಕ್ಕೆ ಒಂದು ಬಾರಿಯಾದರೂ ನನ್ನನ್ನೇ ನಾನೇ ಕೇಳಿಕೊಳ್ಳುತ್ತೇನೆ। ಕೆಲವರಿಗೆ ಅನ್ನದ ಸಮಸ್ಯೆ। ಇನ್ನೂ ಕೆಲವರಿಗೆ ವಸತಿಯ ಸಮಸ್ಯೆ। ಕೆಲವರಿಗೆ, ಹೊಸ್ ಕಾರುಕೊಂಡುಕೊಳ್ಳುವ ಸಮಸ್ಯೆ। ಮಗನಿಗೆ ಅಥವಾ ಮಗಳಿಗೆ ಒಳ್ಳೆಯ ಶಾಲೆಯಲ್ಲಿ ಸೀಟು ದಕ್ಕಿಸಿಕೊಳ್ಳುವ ಸಮಸ್ಯೆ। ಗಂಡನಿಗೆ ಹೆಂಡತಿಯ ಸಮಸ್ಯೆ, ಹೆಂಡತಿಗೆ ಗಂಡನ ಸಮಸ್ಯೆ। ಪ್ರೇಮಿಗೆ ಪ್ರೇಮಿಸುವ ಸಮಸ್ಯೆ। ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ। ಪ್ರಾಯಶಃ ಈ ಜಗತ್ತಿನಲ್ಲಿ ಸಮಸ್ಯೆ ಇಲ್ಲ ಎಂದು ಹೇಳುವವರು ಯಾರೂ ಇಲ್ಲ।
ನನಗೆ ಇದ್ಯಾವುದೂ ಸಮಸ್ಯೆ ಎಂದು ಅನ್ನಿಸುವುದಿಲ್ಲ। ಇವೆಲ್ಲವಕ್ಕಿಂತ ಮುಖ್ಯವಾದ ಸಮಸ್ಯೆ ಎಂದರೆ ಸಂವಹನ ಸಮಸ್ಯೆ ಎನ್ನುವುದು ನನಗೆ ಮನದಟ್ಟಾಗಿದೆ। ನಮಗೆ ಬೇರೆಯವರಿಗೆ ಹೇಳಬೇಕಾದ್ದನ್ನು ಹೇಳಲು ಬರುವುದಿಲ್ಲ। ಬೇರೆಯವರು ಹೇಳಿದ್ದನ್ನು ಕೇಳಲು ಬರುವುದಿಲ್ಲ। ಆದ್ದರಿಂದ ಈ ಸಮಸ್ಯೆಯನ್ನು ಹೇಳುವ ಮತ್ತು ಕೇಳುವ ಸಮಸ್ಯೆ ಎಂದು ನಾನು ಕರೆಯುತ್ತೇನೆ।
ಹೇಳುವ ಸಮಸ್ಯೆಯನ್ನೇ ನೋಡಿ। ನಾವು ದಿನವಿಡೀ ಮಾತನಾಡುತ್ತಲೇ ಇರುತ್ತೇವೆ। ನಮಗೆ ಮಾತನಾಡುವುದು ಇಷ್ಟ। ನಾವು ಹೇಳುವುದನ್ನು ಬೇರೆಯವರು ಕೇಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ಮುಖ್ಯವಲ್ಲ। ನಮಗೆ ನಾವು ಹೇಳುವುದನ್ನು ಹೇಳಲೇ ಬೇಕು। ನಾವು ಹೇಳುವುದನ್ನು ಯಾರಿಗೆ ಹೇಳುತ್ತೇವೆಯೋ ಅವರು ಅದನ್ನು ಕೇಳಿಸಿಕೊಳ್ಳಲೇಬೇಕು। ನಾವೆಂತಹ ಸರ್ವಾಧಿಕಾರಿಗಳು ! ನಮಗೆ ಮನಸ್ಸಿನಲ್ಲಿರುವುದನ್ನು ಕಕ್ಕಲು ಒಂದು ವಾಷ್ ಬೇಸಿನ್ ಬೇಕು। ನಮ್ಮ ದೃಷ್ಠಿಯಲ್ಲಿ ನಮ್ಮ ಎದುರು ಇರುವವರು, ಇಂತಹ ವಾಷ್ ಬೇಸಿನ್ ಗಳು।
ನಮಗೆ ಸಂವಹನ ಕ್ರಿಯೆಯ ಪ್ರಾಥಮಿಕ ಲಕ್ಷಣ ಕೂಡ ಗೊತ್ತಿಲ್ಲ। ನಾವು ಏನನ್ನು ಹೇಳುತ್ತೇವೆ ಎಂಬುದರ ಪ್ರಾಥಮಿಕ ಅರಿವು ನಮಗಿರಬೇಕು। ನಾವು ಹೇಳುವುದನ್ನು ಹೇಳಲು ಬೇಕಾದ ಭಾಷಾ ಸಮರ್ಥ್ಯ ನಮಗಿರಬೇಕು। ನಾವು ಏನನ್ನು ಹೇಳಲು ಹೊರಟಿದ್ದೇವೆಯೋ ಅದನ್ನು ಹೇಳಲು ಸರಿಯಾದ ಶಬ್ದಗಳನ್ನು ಆಯ್ಕೆಮಾಡಿಕೊಳ್ಳಬೇಕು। ಆದರೆಬಹುತೇಕ ಸಂದರ್ಭದಲ್ಲಿ ನಾವು ಈ ಬಗ್ಗೆ ಯೋಚಿಸುವುದೇ ಇಲ್ಲ। ಸುಮ್ಮನೆ ಮಾತನಾಡಿ, ಈ ಮಾತುಗಳಿಗೆ ಪ್ರತಿಕ್ರಿಯೆ ಬರದಿದ್ದಾಗ, ಅವನಿಗೆ ಏನು ಗತ್ತು ಮಾರಾಯಾ ಎಂದು ಪ್ರತಿಕ್ರಿಯೆ ನೀಡಿ ಸುಮ್ಮನಾಗಿ ಬಿಡುತ್ತೇವೆ।
ಏನನ್ನಾದರೂ ಹೇಳುವುದಕ್ಕೆ ಮೊದಲು ನಮಗೆ ನೋಡುವುದು ಗೊತ್ತಿರಬೇಕು। ಆದರೆ ನಮಗೆ ನೋಡುವುದೇ ಗೊತ್ತಿಲ್ಲ। ನಾವು ಏನನ್ನೂ ಸರಿಯಾಗಿ ನೋಡುವುದಿಲ್ಲ। ನಮ್ಮ ಜೊತೆಗೆ ಕೆಲಸ ಮಾಡುವವರನ್ನು, ನಮ್ಮ ಜೊತೆಗೆ ಬದುಕುವವರನ್ನು ನಾವು ನೋಡು ಎಷ್ಟೋ ಕಾಲ ಕಳೆದುಹೋಗಿರುತ್ತದೆ। ನಾವು ಪ್ರಥಮ ಸಲ ಅವರನ್ನು ನೋಡಿದ ಮೇಲೆ ಮತ್ತೆ ಅವರನ್ನು ನೋಡುವುದಿಲ್ಲ। ನಾನು ಹೇಳುವುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು। ಆದರೆ ಇದು ನಿಜ। ನೋಡುವುದೆಂದರೆ ಪ್ರೆಶ್ ಆಗಿ ನೋಡುವುದು। ಹೊಸದಾಗಿ ನೊಡುವುದು ಇದೆಯಲ್ಲ, ಅದು ನಮಗೆ ಹೊಸದಾಗಿ ಮಾತನಾಡುವುದನ್ನು ಕಲಿಸುತ್ತದೆ। ನಾವು ಹೊಸದಾಗಿ ಮಾತನಾಡಿದರೆ ಹೊಸದಾಗಿ ಕೇಳುವವರು ಸಿಗುತ್ತಾರೆ।
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
4 comments:
ಹೌದು ಸಾರ್ "ಮಾತನಾಡುವ" ಸಮಸ್ಯೆ ಎಲ್ಲರಿಗೂ ಇರುತ್ತಲ್ವಾ? ಚೆನ್ನಾಗಿ present ಮಾಡಿದ್ದೀರಿ.
ಸರ್್,
ಮಾತು ಆಡುವುದು ಎಷ್ಟು ಕಷ್ಟವೋ, ಆಡದೇ ಇರುವುದೂ ಅಷ್ಟೇ ಕಷ್ಟ. ಇನ್ನು ಫ್ರೆಶ್ ಆಗಿ ನೋಡುವುದು ಕಡು ಕಷ್ಟ. ವ್ಯಕ್ತಿಯೊಬ್ಬನನ್ನು ಅಳೆಯುವ ನಮ್ಮ ಮಾನದಂಡಗಳೇ 'ದಂಡ'ಎಂದು ಎಷ್ಟೋ ಸಾರಿ ಅನ್ನಿಸುತ್ತದೆ.
ಒಂಚೂರು ವಿವೇಕ, ಕಡಿಮೆ ಅಹಂ, ಹೀಗೂ ಇರಲು ಸಾಧ್ಯ ಎಂಬ ನಮ್ರತೆ ನಮ್ಮನ್ನು ಹಲವಾರು ಸಮಸ್ಯೆಗಳಿಂದ ಕಾಪಾಡುತ್ತದೆ. ಅಷ್ಟೇ ಅಲ್ಲ, ನಾವು ಇತರರ ಪಾಲಿಗೆ ಸಮಸ್ಯೆಯಾಗುವುದನ್ನು ತಪ್ಪಿಸುತ್ತದೆ.
ವಿಚಾರ ಪ್ರಚೋದಕ ಬರಹ ಸರ್.
- ಚಾಮರಾಜ ಸವಡಿ
ಬಹುಶ: ಮಾಧ್ಯಮ ಹಲವು ಆಯಾಮಗಳನ್ನು ನೋಡಿರುವ ಕಾರಣಕ್ಕೆ ಇದೊಂದು ಸಮಸ್ಯೆ ಅನ್ನಿಸುತ್ತದೆ. ಆದರೆ ಮಾತಿನೊಳಗೂ ಹಲವು ಸಮಸ್ಯೆಗಳನ್ನು ಬೇಕು ಅಂತಲೇ ಅಥವಾ ಗೊತ್ತಿದ್ದೆ ಸೃಷ್ಟಿಸುವ ಮಂದಿ ಸಾಕಷ್ಟಿದ್ದಾರೆ.
ಇತರರ ಮಾತುಗಳನ್ನು ತೀಕ್ಷ್ಣವಾಗಿ ಗ್ರಹಿಸುವುದು, ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ನೋಡುವುದು, ಮಾಮುಲು ಎಂಬ ಸಂಗತಿಯಲ್ಲೂ ವಿಶೇಷತೆಯನ್ನು ಕಂಡು ಕೊಳ್ಳುವುದು,ಕಂಡಂತಹ ಆ ವಿಶೇಷತೆಗಳಿಗೆ ತನ್ನ ಅನುಭವ/ಕಲ್ಪನೆಯ ರಂಗು ಹಾಕಿ ಇನ್ನಷ್ಟು ಮೆರುಗು ಮಾಡುವುದು ಇವೆಲ್ಲಾ ಸಾಧ್ಯವಾಗುವುದು ಬರಹಗಾರರಿಗೆ ಮಾತ್ರ ಸಾಧ್ಯ.
Post a Comment