ಕಳೆದ ಹೋದ ನೀನು ಮತ್ತೆ ಇಲ್ಲಿ ಬರುವೆಯಾ ?
ಹಳೆಯ ಕನಸು, ಕ್ರೂರ ನೆನಪು ಎಲ್ಲ ಹೊತ್ತು ತರುವೆಯಾ ?
ನೀನು ಬಿಟ್ಟು ಹೋದುದೆಲ್ಲ ಇಲ್ಲಿ ಉಳಿಯಬಲ್ಲದೆ ?
ನೀನು ಕೊಟ್ಟು ಹೋದುದೆಲ್ಲ, ಇಲ್ಲಿ ತೆರೆಯಬಲ್ಲುದೆ ?
ಹೋಗು ಮತ್ತೆ ಬರಬೇಡ ಗೆಳತಿ,
ನನಗೆ ನಿನ್ನ ನೆನಪು ಮಾಸುವುದಿಲ್ಲ. ಎದೆಯಲ್ಲಿ ನೋವು ಮಡುಗಟ್ಟಿದೆ. ಹೀಗೆ ಬಂದವಳು ಬಂದಂತೆ ಹೊರಟೆ. ಆದರೆ ಬಂದು ಹೋಗುವುದರ ನಡುವೆ ? ನೀನು ಬರುವುದು ಗೊತ್ತಿತ್ತು. ಹೋಗುವುದು ತಿಳಿದಿತ್ತು. ಆದರೆ ಬಂದು ಹೋಗುವುದರ ನಡುವೆ ಎಲ್ಲವೂ ನಡೆದು ಹೋಯಿತು !
ನಿನ್ನನ್ನು ಎಷ್ಟೂ ಪ್ರೀತಿಯಿಂದ ನಿನ್ನನ್ನು ನಾವು ಸ್ವಾಗತಿಸಿದ್ದೆವು. ನಿನ್ನ ಸ್ವಾಗತಕ್ಕೆ ಕನಸುಗಳ ಚಪ್ಪರ ಹಾಕಿದ್ದೆವು. ಈ ಚಪ್ಪರದ ಸುತ್ತ ಪ್ರೀತಿ ಪ್ರೇಮದ ಬೇಲಿ ಹಾಕಿದ್ದೆವು. ಆದರೆ ನೀನು ಬಂದವಳು ಬಂದಂತೆ ಹೋಗಲಿಲ್ಲ. ಹೋಗುವಾಗ ಚೆಪ್ಪರವನ್ನೇ ಕೆಡವಿಬಿಟ್ಟೆ. ಬೇಲಿಯನ್ನೇ ಮುರಿದು ಬಿಟ್ಟೆ. ನಿನ್ನ ಹೆಜ್ಜೆಯ ಗುರುತಿನಲ್ಲಿ ರಕ್ತದ ಕಲೆ. ಮಾಸದ ಗುರುತುಗಳು.
ಯಾರನ್ನೂ ಕಳುಹಿಸುವುದಿದ್ದರೂ ಹೋಗಿ ಬಾ ಎಂದು ಹೇಳುವುದು ನಮ್ಮ ವಾಡಿಕೆ. ಆದರೆ ನೀನಗೆ ಹೋಗಿ ಬಾ ಎಂದು ನಾನು ಹೇಗೆ ಹೇಳಲಿ ?
ಅಲ್ಲಿ ನೋಡು ಅಲ್ಲಿ ಬರುತ್ತಿದ್ದಾಳೆ. ಇನ್ನೊಬ್ಬ ಗೆಳತಿ. ಬಾ ನಿನಗೆ ಸ್ವಾಗತ. ಆದರೆ ನನ್ನದೊಂದು ಮನವಿ. ದಯವಿಟ್ಟು ಕನಸುಗಳ ಚೆಪ್ಪರವನ್ನು ಕಡವಬೇಡ. ಪ್ರೀತಿ ಪ್ರೇಮದ ಬೇಲಿಯನ್ನು ಮುರಿಯಬೇಡ. ಬಾ ಬಂದು ಬಿಡು ಸುಮ್ಮನೆ.
5 comments:
ನಿಜ..ಒಮ್ಮೊಮ್ಮೆ ಅನಿಸುತ್ತೆ ಈ ಗೆಳತಿಯರು ಯಾಕಾದ್ರು ಬರ್ತಾರೋ ಅಂತ.ಆದ್ರೆ ಅದು ಕಾಲನ ಮಹಿಮೆ.ನಿಮ್ಮ ಅನಿಸಿಕೆಗೆ ನನ್ನ ಸಹಮತ ಇದೆ.ಹೊಸ ಗೆಳತಿಯಾದರೂ ಸುಂದರ ನೆನಪುಗಳನ್ನು ಬಿಟ್ಟೂ ಹೋಗಲಿ.ನಮ್ಮ ನಿಮ್ಮೆಲ್ಲರ ನಡುವೆ ಆಕೆ ಬೆಳದಿಂಗಳ ಚೆಲ್ಲುವ ಬಾಲೆಯಾಗಲಿ...
ಈ ಬರಹ ಕಾವ್ಯ+ಆತ್ಮಕ.ಪರಿಕಲ್ಪನೆ ಸೊಗಸು.
gandu makkalu yaake ishtu sensitive???? gelatiyarella chappara kedavuvaralla,geleyara badukalli chapparada mallige,ghama ghamisuva sundara paarijaata aagiruttare.noduva,aasvaadisuva mana ira beku.
ನಾನು ಈ ಲೇಖನ ಬರೆದಿದ್ದು ಡಿಸೆಂಬರ್ ೩೧ ರಂದು. ನಾನು ಗೆಳತಿ ಎಂದು ಹೇಳಿದ್ದು ಕಳೆದ ವರ್ಷಕ್ಕೆ. ಹೊಸ ಗೆಳತಿ ಎಂದು ಹೇಳಿದ್ದು ಹೊಸ ವರ್ಷಕ್ಕೆ. ಕಳೆದ ವರ್ಷದ ನೋವು, ನೆನಪುಗಳ ನಡುವೆ ಹೊಸ ವರ್ಷವನ್ನು ಸ್ವಾಗತಿಸುವ ಲೇಖನ ಅದು.
ಶಶಿಧರ್ ಭಟ್
how sad :)!saar niivu ee riiti heli nammannu adarallu nannannu niraseya kadalige dukibiitaralaa?!! nanage eega jnapakakke barthaayiro haadu
VIDHI VIPARITA .....![EE HAADU NANAGE MAATRA APPLICABLE---note this point your honour:)!!!]
Post a Comment