Thursday, January 22, 2009

ಬೆಳಗಾವಿಯ ನೆನಪುಗಳು....

ಕಳೆದ ಹತ್ತು ದಿನಗಳ ಕಾಲ ನಾನು ಬೆಳಗಾವಿಯಲ್ಲಿದ್ದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಬಿಟ್ತು ಇಷ್ಟು ದಿನ ಹೊರಕ್ಕೆ ಇದ್ದುದು ಇದೇ ಮೊದಲು. ನನಗೆ ಬೆಂಗಳೂರಿನ ಬಗ್ಗೆ ಅಂತಹ ವ್ಯಾಮೋಹವಿಲ್ಲ. ಆದರೆ ಈ ಬೆಂಗಳೂರು ಬಿಟ್ಟು ಓಡಿ ಹೋಗಬೇಕು ಎಂದುಕೊಂಡರೂ ನನಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಮೋಹವೇ ಹಾಗೆ.



ಬೆಳಗಾವಿ ನನಗ್ಎ ಹೊಸತಲ್ಲ. ನಾನು ನನ್ನ ಕಾಲೇಜು ದಿನಗಳನ್ನು ಕಳೆದಿದ್ದು ಬೆಳಗಾವಿಯಲ್ಲಿ. ಹಾಗೆ ಕಾಡಿನ ನಡುವೆ ಬದುಕುತ್ತ ಕಾಡು ಜೀವಿಯಾಗಿದ್ದ ನನಗೆ ನಾಗರೀಕತೆ (?) ಮೊದಲ ಪಾಠ ಸಿಕ್ಕಿದ್ದೂ ಇದೇ ಊರಿನಲ್ಲಿ. ಇಲ್ಲಿಯೇ ಟೆಲಿಫೋನಿನಲ್ಲಿ ಮಾತನಾಡುವುದನ್ನು ಕಲಿತೆ. ಇಂಗ್ಲೀಷಿನಲ್ಲಿ ಮಾತನಾಡಲು ಯತ್ನ ನಡೆಸಿದೆ. ನನಗೆ ಇದನ್ನೆಲ್ಲ ಕಲಿಸಿದವಳು ನನ್ನ ಗೆಳತಿ. ನನಗಾಗ ಇಂಗ್ಲೀಷ್ ಸಿನೆಮಾಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ನಾನಲ್ಲಿ ನೋಡಿದ್ದು ಹಲವಾರು ಖ್ಯಾತ ಇಂಗ್ಲೀಷ್ ಸಿನೆಮಾಗಳನ್ನು. ನನ್ನ ಬದುಕು ರೂಪಗೊಂಡಿದ್ದು ಒಂದು ಆಕೃತಿಯನ್ನು ಪಡೆದಿದ್ದು ಬೆಳಗಾವಿಯಲ್ಲಿ.

ಬಹಳಷ್ಟು ಜನರಿಗೆ ಬೆಳಗಾವಿಯ ಬಗ್ಗೆ ಗೊತ್ತಿರಲಿಕ್ಕಿಲ್ಲ. ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿ ಕನ್ನಡ, ಮರಾಠಿ ಮತ್ತು ಗೋವನ್ ಸಂಸ್ಕ್ರಿತಿಗಳು ಹದವಾಗಿ ಬೆರೆತು ಪಾಕಗೊಂಡ ಊರು. ಇಲ್ಲಿ ಭಾಷೆ ನವೆಂಬರ್ ತಿಂಗಳು ಬಿಟ್ಟರೆ ಬೇರೆ ದಿನಗಳಲ್ಲಿ ಮಹತ್ವದ್ದಾಗಿಲ್ಲ. ಕನ್ನಡ, ಮರಾಠಿ ಭಾಷೆಗಳನ್ನು ಇಲ್ಲಿನ ಜನ ಸಮಾನವಾಗಿ ಬಳಸುತ್ತಾರೆ. ನಾನು ಮರಾಠಿಯಲ್ಲಿ ಕಲಿತ ಮೊದಲ ವಾಕ್ಯ ಎಂದರೆ "ಏ ಮುಲಗಿ ಪಾರ್ ಸುಂದರ್ ಆಯೇ." ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ ಎಂದು.

ಇಂತಹ ಬೆಳಗಾವಿಯಲ್ಲಿ ಈ ಬಾರಿ ವಿಧಾನ ಮಂಡಲದ ಅಧಿವೇಶನ ನಡೆಯಿತು. ಇದಕ್ಕಾಗಿ ರಾಜ್ಯದ ರಾಜ್ಯಧಾನಿಯಿಂದ ಸುಮಾರು ೩೦೦ ಪತ್ರಕರ್ತರು ಆಗಮಿಸಿದ್ದರು. ರಾಜ್ಯ ವಾರ್ತಾ ಇಲಾಖೆ ಇವರಿಗೆಲ್ಲ ವಸತಿ, ಗುಂಡು ತುಂಡಿನ ವ್ಯವಸ್ಥೆ ಮಾಡಿತ್ತು. ಜೊತೆಗೆ ಪ್ರತಿ ದಿನ ಸಚಿವರುಗಳ ಪಾನಗೋಷ್ಠಿ. ಇಂಥಹ ಪಾನಗೋಷ್ಟಿಯೊಂದರಲ್ಲಿ ಪತ್ರಕರ್ತರಿಗೆ ಕೈ ಗಡಿಯಾರದ ಉಡುಗೊರೆಯನ್ನು ನೀಡಲಾಯಿತು.

ಸಾಧಾರಣವಾಗಿ ಇಂತಹ ಪಾನಗೋಷ್ಟಿಗಳೆಂದರೆ ನನಗಾಗುವುದಿಲ್ಲ. ನಾನು ಯಾವುದೇ ಪಾನಗೋಷ್ಟಿಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ನನ್ನ ವಾಹನ ಚಾಲಕ ಮಾತ್ರ ಈ ಗೋಷ್ಟಿಯಲ್ಲಿ ಪಾಲ್ಗೊಳ್ಳುತ್ತಿರುವ ವರ್ತಮಾನ ನನಗೆ ತಲುಪಿತು. ಆತ ಸಚಿವರು ನೀಡಿದ ಕೈಗಡಿಯಾರವನ್ನು ಸ್ವೀಕರಿಸಿದ್ದ. ಅದು ಒಂದಲ್ಲ, ತಾನು ತೆಗೆದುಕೊಂಡಿದ್ದರ ಜೊತೆಗೆ ನಮ್ಮ ಸಾರ್ ಗೆ ಒಂದು ಎಂದು ಹೇಳಿ ಮತ್ತೊಂದನ್ನು ತೆಗೆದುಕೊಂಡಿದ್ದ. ನನಗೆ ಈ ವಿಷಯ ತಿಳಿದಾಗ ಆಘಾತ. ನಾನು ಅವನಿಗೆ ಹೇಳಿದೆ.

"ನಾನು ನನ್ನ ಕಾರ್ಯಕ್ರಮದಲ್ಲಿ ರಾಜಕಾರಣಿಗಳನ್ನು ಟೀಕಿಸುತ್ತೇನೆ. ಅದು ಕೇವಲ ನನ್ನ ಮಾತಲ್ಲ. ಜನರ ಪ್ರತಿನಿಧಿಯಾಗಿ ನಾನು ಅಲ್ಲಿ ಮಾತನಾಡುತ್ತೇನೆ. ಹೀಗಿರುವಾಗ ನನ್ನ ನಡವಳಿಕೆ ಮಾದರಿಯಾಗಿರಬೇಕಾಗುತ್ತದೆ. ಹಾಗೆ ನನ್ನ ವಾಹನ ಚಾಲಕನಾದ ನಿನ್ನ ನಡವಳಿಕೆಕೂಡ. ಇಂದು ನಾನಾಗಲಿ, ನನ್ನ ಸಹಾಯಕನಾದ ನೀನಾಗಲಿ ಮಂತ್ರಿಗಳು ನೀಡಿದ ಗಿಫ್ಟ್ ತೆಗೆದುಕೊಂಡರೆ ಮರು ಕ್ಷಣ ನನ್ನ ಧ್ವನಿ ಬಿದ್ದು ಹೋಗುತ್ತದೆ. ನನ್ನ ಮಾತುಗಳು ಕೃತಕವಾಗುತ್ತದೆ. ನಾನು ಆಡುವ ಮಾತುಗಳು ನೈತಿಕ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ. ಆದ್ದರಿಂದ ನೀನು ತೆಗೆದುಕೊಂಡ ಉಡುಗೊರೆಯನ್ನು ವಾಪಸ್ಸು ಕೊಟ್ಟು ಬಿಡು."

"ನನಗೆ ಹಲವು ರಾಜಕೀಯ ಸ್ನೇಹಿತರಿದ್ದಾರೆ. ನಾನು ಅವರ ಜೊತೆ ಊಟ ಮಾಡಿದ್ದೇನೆ. ಕಾಫಿ ಕುಡಿದಿದ್ದೇನೆ. ಆದರೆ ಈ ಸಂಬಂಧ ನೈತಿಕತೆಯ ಗಡಿಯನ್ನು ದಾಟಲು ನಾನು ಅವಕಾಶ ನೀಡಿಲ್ಲ. ಆದಷ್ಟು ಪ್ರಾಮಾಣಿಕವಾಗಿ ಇರಲು ಯತ್ನ ನಡೆಸಿದ್ದೇನೆ. "

ನನ್ನ ಚಾಲಕ ತಪ್ಪನ್ನು ಒಪ್ಪಿಕೊಂಡ. ಉಡುಗೊರೆಯನ್ನು ವಾಪಸು ನೀಡುವುದಾಗಿ ಹೇಳಿದ

ಸುಮಾರು ಎಂಟು ದಿನಗಳ ಕಾಲ ನಾನು ಬೆಳಗಾವಿಯಲ್ಲಿ ಮಹಾಯುದ್ಧ ಕಾರ್ಯಕ್ರಮವನ್ನು ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಲ್ಲುಗಳಲ್ಲಿ ರಸ್ತೆಗಳಲ್ಲಿ ಸಿಕ್ಕವರು ನನ್ನನ್ನು ಗುರುತಿಸಿದರು. ನೀವು ಬೆಳಗಾವಿಯವರಂತೆ ಹೌದಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ನನಗೆ ನೀಡಿದ ಸಂತೋಷ ಅಷ್ಟಿಷ್ಟಲ್ಲ. ನಾನು ಉತ್ತರ ಕನ್ನಡದವನಾ ? ಬೆಳಗಾವಿಯವನಾ ? ಅಥವಾ ಬೆಂಗಳೂರಿನವನಾ ? ನನಗೆ ಗೊತ್ತಿರಲಿಲ್ಲ. ಆದರ ನನ್ನೊಳಗಿನ ಭಯವನ್ನು ಹೊರ ಹಾಕಿದ ನನ್ನ ಆ ಗೆಳತಿ ನೆನಪಾದಳು. ಅವಳ ಜೊತೆ ಸುತ್ತಿದ ಗಲ್ಲಿಗಳಲ್ಲಿ ಸುತ್ತಿದೆ. ಹಾಗೆ ನಾನು ಇಂಗ್ಲಿಷ್ ಸಿನೆಮಾಗಳನ್ನು ನೋಡಿದ ಥೇಯಟರ್ ಮುಂದೆ ಬಂದು ನಿಂತೆ. ಅಲ್ಲಿ ಶಾಪಿಂಗ್ ಕಾಂಪ್ಲೇಕ್ಸ್ ಬಂದಿತ್ತು.

5 comments:

NiTiN Muttige said...

ಹೇಳುವುದು ಒಂದು ಮಾಡುವುದು ಒಂದು ಆಗಬಾರದು. ಆಗ ನಮ್ಮ ಮಾತನ್ನು ಕೇಳುವವರು ಯಾರು ಇರುವುದಿಲ್ಲ. ಉತ್ತಮ ಕಾರ್ಯ.

http://santasajoy-vasudeva.blogspot.com said...

Aa mogavu enta naguvu manava seleva bangaarada huvu..sir
haagaadare chappara kedavida bagge naanu coment maadidare niivu maatu balisiddu yaake?(: so haleya sundara nenapugalu nimmannu kaaditu anta aayitu.nodi niivu belagaavige hogi banda mele tunbaa smart aagi bittiddiri.Wel KEEP IT UP...:):):):):):):):):):):)

Unknown said...

woderfull marayare.
poor driver. The driver, inspired by your parama_shisya-eesha took the watch-one for himself and another for his boss as one of your reporter do?!

I find it very difficult to understand why different set of rules for these two humanbeings wotking under you, the great socialist journalsit...
You are never cared for roadside HARAJU of your chanel by your parama aptha shisya? why ? why?

Why a gift of watch is big thing?
whats wrong. acepting a gift t/h driver or by a porter? or or else

remember (assembly) election time rumours..

Unknown said...

Please dont post this type of MISTER CLEAN type of posts.

Unknown said...

ಪ್ರತಿಯೊಬ್ಬರಿಗೂ ಅವರಿಗೆ ಬೇಕಾದಂತೆ ಬದುಕುವ ಹಕ್ಕಿದೆ. ಎಂದು ಅವರಿಗೆ ಮನಸ್ಸಿಗೆ ಬಂದ ಹಾಗೆ ಬದುಕುವುದು ಸರಿ ಅಲ್ಲ. ಅದು ನಮ್ಮ ಸಂಸ್ಕ್ರತಿ ಅಲ್ಲ. ಯಾರೂ ಕೂಡಾ ಅವರವರ ಸಂಸ್ಕ್ರತಿಯನ್ನು ಬಿಡುವುದಿಲ್ಲ. ಮುಸ್ಲೀಮರು ನೋಡಿ ಅವರು ಬುರುಕಾ ಹಾಕದೆ ರಸ್ತೆಗೆ ಇಳಿಯುವುದಿಲ್ಲ. ಹಾಗೆಯೇ ಪ್ರತಿಯೊಬ್ಬರು ಕೂಡಾ ತಮ್ಮ ತಮ್ಮ ಸಂಸ್ಕ್ರತಿಯನ್ನು ಅನುಸರಿಸುತ್ತಾರೆ. ನಮಗೆ ಅಂದರೆ ಹಿಂದುಗಳಿಗೆ ಮಾತ್ರ ಯಾವುದು ಇಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...