ಪ್ರೀತಿ ಇರುವಲ್ಲೇ ಬದುಕಿದೆ- ಮಹಾತ್ಮಾ ಗಾಂಧಿ |
ಆತ್ಮ ವಿಶ್ವಾಸದ ಮಾತುಗಳು, |
ಈ ಮಾತುಗಳನ್ನು ಯಾರು ವಿರೋಧಿಸಲು ಸಾಧ್ಯ ? |
ಟೋ ಅದು. ಆದರೆ ನೆಹರೂ ತಲೆಯ ಮೇಲೆ ಮಾತ್ರ ಗರಿ ಗರಿಯಾದ ಟೋಪಿ.
ನನ್ನ ಅಜ್ಜ ತಲೆಯ ಮೇಲೆ ಟೋಪಿ ಹಾಕಿಕೊಳ್ಳುತ್ತಿದ್ದ. ಆದರೆ ಅವನ ತಲೆಯ ಮೇಲಿನ ಟೋಪಿ ಗರಿ ಗರಿಯಾಗಿ ಇರುತ್ತಿರಲಿಲ್ಲ. ಅದು ಅವನ ಹಣೆಯನ್ನು ದಾಟಿ ಹುಬ್ಬಿನ ಬಳಿ ಬಂದು ಕುಳಿತುಕೊಳ್ಳುತ್ತಿತ್ತು. ಹೀಗಾಗಿ ಅವನಿಗೆ ಹಣೆ ಇದೆ ಎಂಬುದು ನನಗೆ ಗ್ಯಾರಂಟಿಯಾಗಲು ಹಲವು ವರ್ಷಗಳೇ ಬೇಕಾದವು. ನನ್ನ ಅಜ್ಜ ಸ್ವಾತಂತ್ರ್ಯ ಸೇನಾನಿ. 1942 ರ ಕರ ನಿರಾಕರಣ ಚಳವಳಿಯಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದವ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮನೆ ಮಠ ಕಳೆದುಕೊಂಡವ. ಕಟ್ಟಾ ಕಾಂಗ್ರೆಸಿಗನಾದ ಅವನಿಗೆ ಗಾಂಧೀಜಿಯ ಬಗ್ಗೆ ಅಂತಹ ಪ್ರೀತಿ ಇರಲಿಲ್ಲ. ನನ್ನ ಅಜ್ಜನ ಗುಣವೇ ಗಾಂಧಿ ತತ್ವಗಳಿಗೆ ವಿರೋಧವಾದುದು. ಆತನಿಗೆ ಜಗಳ ಮಾಡುವುದು ಅಂದರೆ ತುಂಬಾ ಇಷ್ಟ. ಅಕ್ಕ ಪಕ್ಕದ ಮನೆಯವರೋ ಊರಿನವರೋ ಯಾರೂ ಸಿಗದಿದ್ದರೆ ಮನೆಯವರ ಜೊತೆ ಮಕ್ಕಳ ಜೊತೆ ಜಗಳ ಪ್ರಾರಂಭಿಸಿ ಬಿಡುತ್ತಿದ್ದ. ಜಗಳ ವಿಲ್ಲದಿದ್ದರೆ ಅದು ಬದುಕೇ ಅಲ್ಲ ಎಂಬುದು ಅವನ ನಂಬಿಕೆ. ಹೀಗಾಗಿ ಶಾಂತಿ ಸಹನೆ ಬೋಧಿಸುತ್ತಿದ್ದ ಗಾಂಧಿ ಅವನಿಗೆ ಇಷ್ಟವಾಗುತ್ತಿರಲಿಲ್ಲ.
ಬದಲಾವಣೆಯ ಕನಸುಗಾರ |
ಇಂದಿರಾ ಗಾಂಧಿ ಇಲ್ಲದಿದ್ದರೆ ನಾವೆಲ್ಲ ಭೀಕ್ಷೆ ಬೇಡಿ ಬದಕಬೇಕಿತ್ತು ತಿಳ್ಕ ಎಂದು ಹೇಳುತ್ತಿದ್ದ ಅಜ್ಜ ಇಂದಿರಾ ವಿರೋಧಿಯಾದ ನನಗೆ ಮನೆ ಬಿಟ್ಟು ಹೋಗು ಎಂದು ಹಲವು ಬಾರಿ ಹೇಳಿದ್ದ. ಇಂತಹ ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದಾಗ ಮನೆಯ ಹೆಂಗಸರು ಮಧ್ಯ ಪ್ರವೇಶ ಮಾಡಿ ನನ್ನನ್ನು ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋಗುತ್ತಿದ್ದರು. ವಿಚಿತ್ರ ಸಿಟ್ಟು ಜಗಳ ಹೋರಾಟದ ಮನೋಭಾವದ ಅಜ್ಜ ಗಾಂಧಿಜಿಯವರನ್ನ್ ವಿರೋಧಿಸುತ್ತಿದ್ದ ಕಾರಣದಿಂದಲೇ ನಾನು ಗಾಂಧಿಜಿಯವ ಬಗ್ಗೆ ಓದಲು ಪ್ರಾರಂಭಿಸಿದೆ. ಜ್Éತೆಗೆ ಖಾದಿ ನಮ್ಮ ಮನೆಯ ಅಡಿಕೃತ ವಸ್ತ್ರವಾಗಿತ್ತು. ಅಜ್ಜ ಮತ್ತು ಅಪ್ಪ ಖಾದಿಯನ್ನು ಬಿಟ್ಟು ಬೇರೆ ಬಟ್ಟೆಯನ್ನು ಧರಿಸುತ್ತಿರಲಿಲ್ಲ.
ಅಪ್ಪನೂ ಅಜ್ಜನಂತೆ ತಲೆಯ ಮೇಲೆ ಟೋಫಿ ಹಾಕಿಕೊಳ್ಳುತ್ತಿದ್ದ. ಆದರೆ ಅಪ್ಪನ ಟೋಪಿಯ ಮಧ್ಯದ ಗೆರೆ ಎಂದು ಅಳಿಸುತ್ತಿರಲಿಲ್ಲ. ಅವನ ಬಳಿ ಇದ್ದ ಹತ್ತಾರು ನೆಹರೂ ಜುಬ್ಬಾ ಮತ್ತು ಪಂಜೆಯನ್ನು ದೋಬಿಯ ಬಳಿ ತೊಳೆಸಿ ಅದಕ್ಕೆ ಗಂಜಿ ಹಾಕಿ ಇಸ್ತ್ರಿ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ. ಅವನ ಬಟ್ಟೆಯ ಇಸ್ತ್ರೀ ಎಂದೂ ಅಳಿಸುತ್ತಿರಲಿಲ್ಲ. ಎಂದೂ ಗರಿಗರಿಯಾಗಿ ಇರುತ್ತಿತ್ತು ಅವನ ಖಾದಿ ಬಟ್ಟೆ. ಜೊತೆಗೆ ಅಪ್ಪ ಬಿಳಿಯ ಬಣ್ಣದ ಖಾದಿ ಬಿಟ್ಟು ಬೇರೆ ಹಾಕಿಕೊಂಡವನಲ್ಲ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದ ಮೇಲೆ ಅಪ್ಪ ಟೋಪಿಯನ್ನು ಹಾಕಿಕೊಳ್ಳುವುದನ್ನು ನಿಲ್ಲಿಸಿಬಿಟ್ಟ. ಆದರೆ ಖಾದಿಯನ್ನು ಮಾತ್ರ ಬಿಡಲಿಲ್ಲ.
ಇಂಗ್ಲೀಷ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದ ಅಪ್ಪ ಎಂದೂ ಗಾಂಧಿಯ ಬಗ್ಗೆ ಮಾತನಾಡಲಿಲ್ಲ. ಅವನಿಗೂ ಗಾಂಧಿ ಎಂದರೆ ಇಂದಿರಾ ಗಾಂಧಿ ಮಾತ್ರವೇ. ಇವರ ಈ ದಿವ್ಯ ಮೌನದಿಂದಾಗಿಯೇ ನಾನು ಗಾಂಧಿಯ ಬಗ್ಗೆ ಹೆಚ್ಚು ಆಸಕ್ತನಾದೆ. ಅವರತ್ತ ಆಕರ್ಷಿತನಾದೆ. ನಾನು ಕಾಲೇಜಿಗೆ ಹೋಗುವಾಗಲೂ ಅಪ್ಪ ನನಗೆ ಖಾದಿ ಪ್ಯಾಂಟು ಮತ್ತು ಶರ್ಟನ್ನೇ ಕೊಡಿಸಿದ್ದ. ಬಹುಶಃ ಖಾಲಿಜೆಗೆ ಖಾದಿ ಹಾಕಿಕೊಂಡು ಹೋಗುತ್ತಿದ್ದವ ನಾನೊಬ್ಬನೇ.
ನಾನು ಎಂದೂ ಗಾಂಧಿ ಆರಾಧಕನಾಗಲಿಲ್ಲ. ನಾನು ಆರಾಧನೆ ಮತ್ತು ಅಭಿಮಾನದ ವಿರೋಧಿ. ನಾವು ಯಾರನ್ನಾದರೂ ಆರಾಧಿಸಲು ಪ್ರಾರಂಭಿಸಿದ ತಕ್ಷಣ ಅವರನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಗಾಂಧಿಜಿಯವರ ಹಲವಾರು ವಿಚಾರಗಳ ಬಗ್ಗೆ ನನಗೆ ಸಹಮತ ಇಲ್ಲದಿದ್ದರೂ ಅವರ ನಂಬಿಕೆಯಲ್ಲಿನ ಪ್ರಾಮಾಣಿಕತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಕೆಲವೇ ಕೆಲವು ಜನರಲ್ಲಿ ಗಾಂಧೀಜಿ ಕೂಡ ಒಬ್ಬರು. ಅವರ ಗ್ರಾಮ ಸ್ವರಾಜ್, ಅಹಿಂಸೆ ಮತ್ತು ಸತ್ಯ ನನಗೆ ಎಂದೂ ಆದರ್ಶಪಾಯ. ತಮ್ಮ ಬದುಕನ್ನು ಪ್ರಯೋಗಶಾಲೆ ಎಂದುಕೊಂಡ ಗಾಂಢಿಜಿಯವರಲ್ಲೂ ಪ್ರಯೋಗಶೀಲತೆ ಬದುಕಿನ ಭಾಗವಾಗಿ ಬಂದಿರಲಿಲ್ಲ. ಅದಕ್ಕಿಂತ ಅವರಿಗೆ ಹಿಡಿದಿದ್ದ ಬ್ರಹ್ಮಚರ್ಯದ ಹುಚ್ಚು. ತಾವು ಭ್ರಹ್ಮಚಾರಿಯಾಗಿ ಇರಲು ಯತ್ನಿಸುತ್ತಿದ್ದ ಅವರು ಎಲ್ಲರ ಮೇಲೂ ಅದನ್ನು ಹೇರುತ್ತಿದ್ದರು. ಇಂತಹ ಕೆಲವು ನಂಬಿಕೆಗಳು ಗಾಂಧೀಜಿಯವರ ಬದುಕಿನ ಕಪ್ಪು ಚುಕ್ಕೆಗಳು.
ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಸಂಪೂರ್ಣ P್ಫ್ರಂತಿಯ ಕಹಳೆ ಊದಿ ಎರಡನೆಚಿiÀು ಸ್ವಾತಂತ್ರ್ಯ ಹೋರಾಟದ ಮುಂಚೋಣಿಯಲ್ಲಿದ್ದ ಜಯಪ್ರಕಾಶ್ ನಾರಾಯಣ್ ಅವರೂ ಗಾಂಧೀಜಿಯವರ ಸಾಮಿಪ್ಯವನ್ನು ಪಡೆದಿದ್ದವರು. ಜಯಪ್ರಕಾಶ್ ನಾರಾಯಣ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಇ ವಿದೇಶಕ್ಕೆ ಹೋದಾಗ ಜಯಪ್ರಕಾಶ ಅವರ ಪತ್ನಿ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲೇ ಉಳಿದುಕೊಳ್ಳುತ್ತಾರೆ. ಗಾಂಧೀಜಿ ಅವರಿಗೆ ಬ್ರಹ್ಮಚರ್ಯೆಯನ್ನು ಬೋಧಿಸುತ್ತಾರೆ. ಜಯಪ್ರಕಾಶರು ವಿದೇಶದಿಂದ ಹಿಂತಿರುಗಿ ತಮ್ಮ ಹೆಂಡತಿಯನ್ನು ನೋಡಲು ಆಶ್ರಮಕ್ಕೆ ಬಂದಾಗ ಅವರನ್ನು ಪ್ರೀತಿಯಿಂದ ಬರ ಮಾಡಿಕೊಳುವ ಮಹಾತ್ಮಾ ಗಾಂಧಿ ಬ್ರಹ್ಮಚರ್ಯೆಯನ್ನು ಮುಂದುವರಿಸುವಂತೆ ಸೂಚನೆ ನೀಡಲು ಮರೆಯುವುದಿಲ್ಲ. ಹೊಸದಾಗಿ ಮದುವೆಯಾಗಿ ಮಧುಚಂದ್ರವನ್ನು ನಡೆಸದ ಯುವ ದಂಪತಿಗಳಿಗೆ ಇಂತಹ ಸಲಹೆ ನೀಡುವುದು ಜೀವ ವಿರೋಧಿ ಎಂದು ಗಾಂಧೀಜಿಯವರಿಗೆ ಅನ್ನಿಸುವುದಿಲ್ಲ.
ಗಾಂಧೀಜಿಯವರ ನಂಬಿಕೆಯ ನಿಷ್ಟೆ ಅಂತಹದು. ಆ ವಿಚಾರದಲ್ಲಿ ಅವರು ಕಠೋರ ಹೃದಯಿ. ಗಾಂಧೀಜಿ ಇಂದಿನ ಅರ್ಥದಲ್ಲಿ ರಾಜಕಾರಣಿ ಅಲ್ಲ. ಆದರೆ ಅವರೂ ರಾಜಕಾರಣಿಯೇ. ಅದು ತಮ್ಮ ಗುರಿಯನ್ನು ತಲುಪಲೇ ಬೇಕು ಎಂಬ ನಿಷ್ಟೆಯಿಂದ ಬಂದ ರಾಜಕಾರಣ. ಗಾಂಧಿ ಮತ್ತು ನೆಹರೂ ನಡುವಿನ ಸಂಬಂಧ ವ್ಯಕ್ತಿಗತ ನೆಲೆಯ ಸಂಬಂಧವಾಗಿದ್ದರೂ ಅದು ರಾಜಕಾರಣದ ಆಯಾಮವನ್ನು ಹೊಂಡಿತ್ತು. ಈ ಕಾರಣದಿಂದಾಗಿಯೇ ತಮ್ಮ ವ್ಯಕ್ತಿತ್ವ ಮತ್ತು ನಂಬಿಕೆಗೆ ವಿರೋಢವಾದ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ರೂಢಿಸಿಕೊಂಡಿದ್ದ ನೆಹರೂ ಅವರನ್ನು ಗಾಂಧಿ ಒಪ್ಪಿಕೊಂಡಿದ್ದರು. ಲಿಬರಲ್ ಆಗಿದ್ದ ನೆಹರೂ ಸರ್ಹಾರ್ ಪಟೇಲ್ ರಾಜಗೋಪಾಲ್ ಆಚಾರಿ ಅವರಂತೆ ಇರಲಿಲ್ಲ. ನೆಹರು ಆಧುನಿಕತೆಯ ಜೊತೆ ಸಂವಾದ ಮತ್ತು ಸಂವಹನ ನಡೆಸಬಲ್ಲವರಾಗಿದ್ದರು. ಆಧುನಿಕತೆ ಮತ್ತು ಮನುಷ್ಯ ಪ್ರೀತಿಯ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ಮೀರಬಲ್ಲವರಾಗಿದ್ದ ನೆಹರೂ ಗಾಂಧಿಜಿಯವರ ಆಯ್ಕೆಯಾಗಿದ್ದು ರಾಜಕಾರಣವೇ. ಗಾಂಧೀಜಿಯವರಿಗೆ ಸ್ವತಂತ್ರ ಭಾರತ ಆಧುನಿಕತೆಯ ಜೊತೆ ಸಂವಾದ ನಡೆಸೇಕು, ಆ ಮೂಲಕ ಅಭಿವೃದ್ಧಿ ಹೊಂದಬೇಕು ಎಂಬ ಒಳ ಆಸೆ ಇತ್ತು. ಅದಕ್ಕಾಗಿ ಅವರು ಆರಿಸಿಕೊಂಡಿದ್ದು ನೆಹರೂ ಅವರನ್ನು.
ಗಾಂಧೀಜಿ ಮತ್ತು ಅವರ ಹೆಂಡತಿ ಕಸ್ತೂರಿ ಬಾ ಅವರ ಸಂಬಂಧವನ್ನು ನೋಡಿ. ಗಾಂಧೀಜಿಯವರ ಹೆಜ್ಜೆ ಗುರುಗಳಲ್ಲೇ ಹೆಜ್ಜೆ ಇಡುತ್ತ ಬಂದವರು ಎಂದು ಅವರನ್ನು ಶ್ಲಾಘಿಸಲಾಗುತ್ತದೆ. ಗಾಂಧೀಜಿಯವರ ಯಶಸ್ಸಿನಲ್ಲಿ ಅವರ ಹೆಂಡತಿಯ ಪಾತ್ರ ದೊಡ್ಡದು ಎಂದು ಹೇಳಲಾಗುತ್ತದೆ. ಆದರೆ ಇವರ ದಾಂಪತ್ಯದ ಮೂಲಕ ಅವರಿಗೆ ಮಕ್ಕಳಾದರು ಎಂಬುದನ್ನು ಬಿಟ್ಟರೆ ಅವರದು ನಿಜವಾದ ದಾಂಪತ್ಯವಾಗಿರಲಿಲ್ಲ. ಗಾಂಧೀಜಿಯವರ ಬದ್ಧತೆ ಎಂತಹ ವಿಪರೀತ ಎಂದರೆ ತಮ್ಮ ಹೆಂಡತಿಗೆ ಪ್ರತ್ಯ್ರೇಕ ಅಸ್ಥಿತ್ವವಿದೆ ಎಂದು ಅವರು ಪರಿಗಣೀಸಲೇ ಇಲ್ಲ. ತನ್ನ ಹೆಂಡತಿಯನ್ನು ತನ್ನ ನಂಬಿಕೆಗಾಗಿ ಅಗ್ನಿಪರೀಕ್ಷೆಗೆ ಒಡ್ಡಿದ ರಾಮ ಕೂಡ ಸೀತೆಯ ಪ್ರತ್ಯೇಕ ಅಸ್ಥಿತ್ವವನ್ನು ಪರಿಗಣನೆಗೆ ತೆಗೆದುಕೊಂಡವನಲ್ಲ. ಇಂತಹ ರಾಮ ಗಾಂಧೀಜಿಗೆ ತುಂಬಾ ಇಷ್ಟ. ಇದು ಅವರ ಮನಸ್ಥಿತ್ಯ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆ ರಾಮನನ್ನು ಆರಾಧಿಸುವ ಗಾಂಧೀಜಿ ಅವರನ್ನು ರಾಮ ಮಂದಿರ ಕಟ್ಟಲು ಇಟ್ಟಿಗೆ ಹೊತ್ತ ಸಂಘ ಪರಿವಾರ ಮತ್ತು ಬಿಜೆಪಿಯವರಿಗ್ ಸ್ವೀಕಾರಾರ್ಹರಾಗಿರಲಿಲ್ಲ. ಇವರೆಲ್ಲ ಮಂದಿರದಲ್ಲಿ ಇಟ್ಟಿಗೆಗಳಲ್ಲಿ ರಾಮನನ್ನು ಕಾಣುತ್ತಿದ್ದರೆ ಗಾಂಧಿಜಿ ಮನುಷ್ಯನ ಹೃದಯಗಳಲ್ಲಿ, ನಡವಳಿಕೆಯಲ್ಲಿ ರಾಮನನ್ನು ಕಾಣಲು ಯತ್ನಿಸುತ್ತಿದ್ದರು.
ಗಾಂಧೀಜಿಯವರು ದೇವರಾಗಿರಲಿಲ್ಲ. ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು. ಎಲ್ಲ ಮನುಷ್ಯ ಸಹಜವಾದ ದೌರ್ಬಲ್ಯಗಳ ನಡುವೆ ಎಲ್ಲರು ಮೆಚ್ಚಬಹುದಾದ ನಿಜವಾದ ಮಹಾ ನಾಯಕರು ಗಾಂಧೀಜಿ. ಧಾರ್ಮಿಕ ಮನಸ್ಥಿತಿಯನ್ನು ಹೊಂದಿದ್ದ ಕೋಮುವಾದಿ ಜಾತೀಯವಾದಿ ಅವರಾಗಿರಲಿಲ್ಲ. ಭಾರತದ ಶಕ್ತಿ ಎಲ್ಲಿದೆ ಎಂಬುದು ಅವರಿಗೆ ಗೊತ್ತಿತ್ತು. ಕಾಂಗ್ರೆಸ್ ಎಂಬ ಪುರಾತನ ಪಕ್ಷಕ್ಕೇ ಮಹಾತ್ಮಾ ಗಾಂಧಿ ನೆನಪಿನಲ್ಲಿ ಇದ್ದಿದ್ದರೆ ದೇಶಕ್ಕೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ. ಗಾಂಧಿ ಸ್ವಾವಲಂಬನೆಯ ಮಾತನಾಡಿದವರು. ಅಹಿಂಸೆಯನ್ನು ನಂಬಿದವರು. ಶಾಂತಿಯ ಪ್ರತಿಪಾದಕರಾಗಿದ್ದವರು. ಮನುಷ್ಯ ದೌರ್ಬಲ್ಯಗಳ ನಡುವೆ ಅದನ್ನು ಮೀರಲು ಯತ್ನಿಸಿದವರು.
ಕೆಲವು ತಿಂಗಳುಗಳ ಹಿಂದೆ ಊರಿಗೆ ಹೋದಾಗ ನಮ್ಮ ಮೂಲ ಮನೆಯ ವರಾಂಡಾದ ಗೋಡೆಯ ಮೇಲೆ ಇದ್ದ ಈ ಮಹಾತ್ಮರ ಫೆÇೀಟೋಗಳನ್ನೆಲ್ಲ ನೋಡಿದೆ. ಅದರೆ ಈ ಫೆÇೀಟೋಗಳಲ್ಲಿ ಮೊದಲಿನ Œಜೀವ ಕಳೆ ಕಂಡುಬರಲಿಲ್ಲ. ನಮ್ಮ ಮನೆಯಲ್ಲಿದ್ದ ಇಂಡೀನ ತಲೆ ಮಾರಿನ ಹುಡುಗರಿಗೆ ಗಾಂಧಿ ಗೊತ್ತಿರಬಹುದು ಎಂದು ಅನ್ನಿಸಲಿಲ್ಲ. ಗಾಂಧಿಯ ಬಗ್ಗೆ ಮಾತನಾಡುವವರು ಈ ಬಗ್ಗೆ ಜಗಳವಾಡುವವರು ಇರಲಿಲ್ಲ.
ನಮ್ಮ ಚಿಕ್ಕಪ್ಪ ಇರುವ ಈ ಹಳೆಯ ಮನೆಯ ವರಾಂಡದಲ್ಲಿ ಕುಳಿತಿರುತ್ತಿದ್ದ ನನ್ನ ಅಜ್ಜ ಕೊನೆಯ ದಿನಗಳಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ. ಕಾಲಿಗೆ ಕಸ ಎಂದು ಹೇಳುತ್ತ ಯಾವುದೋ ಎಣ್ಣೆ ತಿಕ್ಕಿಸಿಕೊಂಡು ತೆವಳುತ್ತಿದ್ದ ಆಗಲೂ ಆತ ಗಾಂಧೀಜಿಯನ್ನು ಬೈಯುವುದನ್ನು ನಿಲ್ಲಿಸಿರಲಿಲ್ಲ. ನಾನು ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲ ನನ್ನ ಮತ್ತು ಅವನ ನಡುವೆ ಕಾಂಗ್ರೆಸ್ ವಿಚಾರವಾಗಿಯೇ ಜಗಳವಾಗುತ್ತಿತ್ತು. ಅವನು ಎಂತಹ ವ್ಯಕ್ತಿ ಎಂದರೆ, ನಾನು ಪತ್ರಕರ್ತನಾಗಿ ಹೆಗಡೆ ದೇವೇಗೌಡರ ಪತ್ರಿಕಾಗೋಷ್ಠಿಗೆ ಹೋದರೂ ಆತ ಸಹಿಸುತ್ತಿರಲಿಲ್ಲ. ಕಾಂಗ್ರೆಸ್ ವಿರೋಧಿಗಳ ಜೊತೆ ನಾನು ಸಂಪರ್ಕ ಇಟ್ಟುಕೊಳ್ಳುವುದನ್ನು ಬಯಸದ ನನ್ನ ಅಜ್ಜ ಗಾಂಧೀಜಿಯವರನ್ನು ಟೀಕಿಸುವವರನ್ನು ಮಾತ್ರ ಇಷ್ಟ ಪಡುತ್ತಿದ್ದ. ಆದರೆ ಗಾಂಧೀಜಿಯವರ ವಿಚಾರದಲ್ಲಿ ತಾತ್ವಿಕವಾಗಿ ತಾರ್ಕಿಕವಾಗಿ ಜಗಳವಾಡುವವರೂ ಇಲ್ಲ.
ಜಾಗತೀಕರಣದ ಹುಸಿ ಮತ್ತು ಭ್ರಮೆಯ ನಡುವೆ ಗಾಂಧಿ ಎಷ್ಟು ದೊಡ್ಡ ಮನುಷ್ಯರಾಗಿದ್ದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆ ನಮ್ಮ ಇಂದಿನ ಯುವಕರು ಗಾಂಧಿ ಏನು ಹೇಳಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಬೇಕು. ಆದರೆ ಇಂದು ಸಾಮಾಜಿಕ ತಾಣಗ¼ಲ್ಲಿ ಗಾಂಧೀಜಿಯವರನ್ನು ಅವಹೇಳನ ಮಾಡುವಂಥಹ ಮಾತುಗಳು ಹರಿದಾಡುತ್ತಿವೆ. ಅವರೊಬ್ಬ ಟೆರಿರಿಸ್ಟ್ ಎಂದು ಯಾರೋ ಒಬ್ಬರು ಹಾಕಿದ್ದ ಅಪ್ ಡೆಟ್ ನೋಡಿ ಮನಸ್ಸಿಗೆ ನೋವಾಯಿತು.
ಹೊಸ ಗಾಂಧಿಗಳನ್ನು ಹಿಡಿದುಕೊಂಡಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರನ್ನು ಕೈ ಬಿಟ್ಟಿದೆ. ನಾಥೂರಾಮ್ ಗೋಡ್ಸೆ ಅವರ ನಂಬಿಕೆಯನ್ನೇ ಹೊಂದಿರುವ ಬಿಜೆಪಿಗೆ ಗಾಂಧಿ ಪರಮ ಶತ್ರು. ಬಿಜೆಪಿಯ ಅಜೆಂಡಾದ ಅನುಷ್ಠಾನಕ್ಕೆ ಇರುವ ದೊಡ್ಡ ಅಡ್ಡಿ ಎಂದರೆ ಗಾಂಧಿ ಮತ್ತು ಅವರ ತತ್ವಾದರ್ಶಗಳು.
ಹೀಗಾಗಿ ಭಾರತದಲ್ಲೇ ಗಾಂಧಿ ಅನಾಥರಾಗಿದ್ದಾರೆ…