Monday, July 3, 2023

ನಾನು ಯಾಕೆ ಬಿಜೆಪಿಯನ್ನು ವಿರೋಧಿಸಿದೆ ? ಈಗಲೂ ಯಾಕೆ ವಿರೋಢಿಸುತ್ತಿದ್ದೇನೆ ?

 





ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಹಳಷ್ಟು ಜನ ನನಗೆ ಫೋನ್ ಮಾಡುತ್ತಲೇ ಇದ್ದಾರೆ..

ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಿಮಗೆ ಲಾಟರಿ ಹೊಡೆದಂಗೆ,,

ಸಾರ್ ಇನ್ನು ನಿಮಗೇನು ಸಾರ್, ನಿಮ್ಮ ಕಷ್ಟ ಎಲ್ಲ ಬಗೇಹರಿತು.. ಸ್ವಲ್ಪ ಕಾಸು ಮಾಡಿ ಸೆಟ್ಟಲ್ ಆಗಿ ಬಿಡಿ.. 

ಇವರೆಲ್ಲ ಈ ಮಾತುಗಳನ್ನು ಯಾಕೆ ಹೇಳುತ್ತಾರೆ ? ಇದಕ್ಕೆ ಉತ್ತರ ಸರಳ.. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ವಿರೋಧಿಸಿದ ಬೆರಳೆಣಿಕೆಯ ಪತ್ರಕರ್ತರಲ್ಲಿ ನಾನೂ ಒಬ್ಬ.. ಬಿಜೆಪಿ ಪಕ್ಷ ಅಧಿಕಾರದಿಂದ ತೊಲಗ ಬೇಕು ಎಂದು ಈ ರಾಜ್ಯದ ಮತದಾರನಾಗಿ ನಾನು ಹೇಳಿದ್ದೇನೆ. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ನಾನು ಹೆಚ್ಚಾಗಿ ಟೀಕಿಸಿಲ್ಲ ಎಂಬುದು ಸತ್ಯ,, ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಏನೂ ಇರಲಿಲ್ಲ ಎಂದು ಅರ್ಥವಲ್ಲ.. ಈ ರಾಜ್ಯದ ಸಾಮಾಜಿಕ ಬದುಕಿಗೆ, ಕೋಮುವಾದ ಹೋಗಿ ಧರ್ಮ ನಿರಪೇಕ್ಷವಾದ ಸ್ಥಾಪಿತವಾಗುವುದಕ್ಕೆ ಬಿಜೆಪಿ ಹೋಗುವುದೊಂದೇ ದಾರಿ ಎಂದು ನಾನು ನಂಬಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಟೀಕಿಸಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೆ ಅದು ಬಿಜೆಪಿಗೆ ಲಾಭವಾಗುತ್ತದೆ ಎಂಬ ಜಾಗರೂಕತೆ ಕೂಡ ನನ್ನ ಈ ನಿಲುಯಲ್ಲಿತ್ತು.. ಕುವೆಂಫು ಆವರು ಬಯಸಿದ ಸರ್ವ ಜನಾಂಗದ ಶಾಂತಿಯ ತೋಟ ಈ ನಾಡಾಗಬೇಕು ಎಂದು ನಂಬಿದವನು. ಜೊತೆಗೆ ಬಿಜೆಪಿ ಅಧಿಕಾರಕ್ಕೆ ಬರಲು ಅನಿಸರಿಸಿದ ಮಾರ್ಗ ಕೂಡ ನಾನು ಒಪ್ಪುವಂತಹದಾಗಿಒರಲಿಲ್ಲ. ಹೀಗಾಗಿ ನಾನು ಬಿಜೆಪಿಯನ್ನು ಟೀಕಿಸುತ್ತ ಬಂದ..

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೇಗೆ ಅಧಿಕಾರಕ್ಕೆ ಬಂತು ಎಂಬುದು ಎಲ್ಲರಿಗೂ ನೆನಪಿನಲ್ಲಿದೆ..ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರವನ್ನು ಕೆಡವಲು ೧೭ ಜನ ಶಾಸಕರನ್ನು ಮುಂಬೈಗೆ ಕರೆದೊಯ್ಯಲಾಯಿತು. ಇವರೆಲ್ಲ ಮುಂಬೈ ಫ್ರೆಂಡ್ಸ್ ಎಂದೇ ಕೊನೆಗೆ ಜನಪ್ರಿಯರಾದರು. ಈ ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿ ಮತ್ತೆ ಅವರು ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ಮಾಡಿದ್ದು ನಂತರ ಸರ್ಕಾರ ರಚಿಸಿದ್ದು ಸಂಸದೀಯ ಜನತಂತ್ರವನ್ನು ಗೌರವಿಸುವವರು ಯಾರೂ ಒಪ್ಪುವ ವಿಚಾರ ವಾಗಿರಲಿಲ್ಲ. ಎಲ್ಲ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರ ಹಿಡಿದ ನಾಚಿಕೆಗೇಡಿನ ಪ್ರಸಂಗ ಇದಾಗಿತ್ತು..

ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿದ ಮೇಲೆ ಏನಾಯಿತು ನೋಡಿ.. ರಾಜ್ಯದ ಅಲ್ಪ ಸಂಖ್ಯಾತರನ್ನು ಟಾರ್ಗೆಟ್ ಮಾಡಲಾಯಿತು. ಹಿಜಾಬ್ ವಿವಾದವನ್ನು ಸೃಷ್ಟಿಸಲಾಯಿತು, ಅಜಾನ್ ಸಮಸ್ಯೆಯನ್ನು ದ್ಸೃಷ್ಟಿಸಲಾಯಿತು. ಹಲಾಲ ಮಾಂಸ ಒಂದು ವಿವಾದವಾಗಿ ಪರಿವರ್ತನೆ ಮಾಡಲಾಯಿತು.. ದೇವಾಲಯಗಳ ಸಮೀಪ ವ್ಯಾಪಾರ ಮಾಡುವ ಮುಸ್ಲೀಮ್ ರನ್ನು ಅಲ್ಲಿಂದ ಓಡಿಸಲಾಯಿತು. ಹಿಂದೂ ದೇವಾಲಯಗಳ ಸಮೀಪ ಮುಸ್ಲಿಂ ರು ವ್ಯಾಪಾರ ನಡೆಸದಂತೆ ಆಂದೋಲನ ನಡೆಸಲಾಯಿತು. ಹಲವಾರು ಹೀಂದೂ ದೇವಾಲಯಗಳ ಆಡಳಿಯ ಮಂಡಳಿಗಳು ವಿಶೇಷ ಸಂದರ್ಭಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ಇಲ್ಲ ಎಂಬ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಲಾಯಿತು,,

ಇದರ ಜೊತೆಗೆ  ಟಿಪ್ಪೂ  ಸುಲ್ತಾನ್ ಎಂಬ ಈ ನಾಡಿನ ದೊರೆಯನ್ನು ಟಾರ್ಗೆಟ್ ಮಾಡಲಾಯಿತು.. ಆತ ಮಾಡಿದ ಜನಪರ ಕೆಲಸಗಳನ್ನು ಮರೆ ಮಾಚಿ ಆತ ಧರ್ಮಾಂಧ ಎಂದು ಪ್ರಚಾರ ಮಾಡಲಯಿತು. ಈ ರಾಜ್ಯದ ಜನ ಕೋಮುವಾದದ ಕಣ್ಣಿನಲ್ಲಿ ಎಲ್ಲವನ್ನೂ ನೋಡುವಂಥ ವಾತಾವರಣ ಸೃಷ್ಟಿಸಲಾಯಿತು.

ಪಠ್ಯ ಪುಸ್ತಕಗಳನ್ನು ಬದಲಿಸುವ ದುಸ್ಸಾಹಸಕ್ಕೂ ಬಿಜೆಪಿ ಕೈಹಾಕಿತು, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರೀಟೀಷರಿಗೆ ಬೆಂಬಲ ನೀಡಿ ಅಡುಗೆ ಮನೆಗಳಲ್ಲಿ ಅಡಗಿದ್ದ ಸಂಘದ ಕಾರ್ಯಕರ್ತರನ್ನು ಮಹಾನ್ ನಾಯಕರು ಎಂದು ಬಣ್ಣಿಸುವ ಪಠ್ಯ ಗಳು ಸೇರಿಸಲಾಯಿತು.. ಯಾರ್ಯಾರೋ ವಾಟ್ಸ್ ಅಪ್ ಯುನಿವರ್ಸಿಟಿಯ ಕಾಲಾಳುಗಳು ಬರೆದ ಲೇಖನಗಳು ಪಠ್ಯ ಪುಸ್ತಕದಲ್ಲಿ ಜಾಗ ಪಡೆದುಕೊಂಡವು. ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಬದಲಾಯಿಸುವ ಕೆಲಸವನ್ಣೂ ರಾಜ್ಯ ಸರ್ಕಾರ ಪ್ರಾರಂಭಿಸಿಬಿಟ್ಟಿತು.. ಉತ್ತರ ಪ್ರದೇಶ ಈ ದೇಶದ ಮಾದರಿ ರಾಜ್ಯ ಎಂಬಂತೆ ಸುಳ್ಳುಗಳನ್ನು ಎಲ್ಲೆಡೆ ಹರಡುವ ಕೆಲಸವೂ ನಡೆಯತೊಡಗಿತ್ತು. ಕರ್ನಾಟಕ ಎಂಬ ಬಸವಣ್ಣ, ಸಂತ ಶಿಶುನಾಳ ಷರೀಪರು, ಕುವೆಂಪು ಅವರ ನಾಡು ಬುಲ್ಡೋಜರ್ ರಾಜ್ಯವಾಗಿ ಬದಲಾಗುವ ಲಕ್ಷಣ ಗೋಚರಿಸತೊಡಗಿತ್ತು..

ಗೋದಿ ಮೀಡಿಯಾ ಬಿಜೆಪಿ ಪಕ್ಷ ಮತ್ತು ಸರ್ಕಾರದ ಗುಣಗಾನ ಮಾಡುವುದರಲ್ಲಿ ನಿರತವಾಗಿತ್ತು.. ಮೋಡಿ ಮತ್ತು ಯೋಗಿ ಗುಣಗಾನದಲ್ಲಿ ತೊಡಗಿದ್ದ ಮಾಧ್ಯಮ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಾತಾವರಣ ಸೃಷ್ಟಿಸಲು ಹೆಣಗಾಡುತ್ತಿತ್ತು. 

ಇಂತಹ ಸಮಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಅಭಿಯಾನವನ್ನು ಪ್ರಾರಂಭಿಸಿದರು. ರಾಜ್ಯದ ಸಾಮಾನ್ಯ ಜನ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದರು. ಅವರು ಸಾಮಾನ್ಯ ಜನರ ಜೊತೆ ಬಾಂಧವ್ಯಕ್ಕೆ ಬುನಾದಿ ಹಾಕುತ್ತಿದ್ದರು.. ಆದರೆ ನಮ್ಮ ಮಾಧ್ಯಮ ಇದಕ್ಕೆ ಸಾಕಷ್ಟು ಪ್ರಚಾರ ನೀಡಲಿಲ್ಲ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಇದ್ದಾಗಲೂ ಬಿಜೆಪಿ ಕಾರ್ಯಕ್ರಮಗಳ ನೇರ ಪ್ರಸಾರದಲ್ಲಿ ನಮ್ಮ ಮಾಧ್ಯಮಗಳು ಮೈಮರೆತಿದ್ದವು. ಸಾಮಾನ್ಯ ಜನ ಯಾಕೆ ರಾಹುಲ್ ಗಾಂಧಿ ಅವರ ಜೊತೆ ಬರುತ್ತಿದ್ದಾರೆ ಎಂದೂ ಯೋಚನೆ ಮಾಡಲಿಲ್ಲ..

ಇಂಥ ಸ್ಥಿತಿಯಲ್ಲಿ ಬಿಜೆಪಿಯನ್ನು ವಿರೋಧಿಸುವುದು ನಮ್ಮಂತಹ ಪತ್ರಕರ್ತರ ಕರ್ತವ್ಯ ಎಂದು ನನಗೆ ಅನ್ನಿಸಿತು..ಎಲ್ಲ ಮಾಧ್ಯಮಗಳೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾಗ ನಾನು ವಿಭಿನ್ನ ಧ್ವನಿಯಲ್ಲಿ ಮಾತನಾಡತೊಡಗಿದೆ. ಆಗ ಭಕ್ತ ಗಣ ನನ್ನನ್ನು ಕಾಂಗ್ರೆಸ್ ಏಜೆಂಟ್ ಎಂದು ದೂಷಿಸಿತು.. ಮಾಧ್ಯಮಗಳಿಗೆ ದುಡ್ಡು ಕೊಡುವುದನ್ನು ಸಂಪ್ರದಾಯವನ್ನಾಗಿ ಮಾಡಿಕೊಂಡವರು ಕಾಂಗ್ರೆಸ್ ನನಗೆ ದುಡ್ದು ನೀಡಿದೆ ಎಂದು ಆರೋಪಿಸತೊಡಗಿದರು.. ಆದರೆ ನಾನು ಏನು ಮಾಡಬೇಕೋ ಅದನ್ನು ಮಾಡಿದೆ. ನನ್ನ ಸುದ್ದಿ ವಿಶ್ಲೇಷಣೆಯನ್ನು ನೋಡುವವರಿಗೆ ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ತುಂಬಾ ಜನ ತಮ್ಮ ಕೈಲಾದಷ್ಟು ಸಹಾಯ ಮಾಡಿದರು.. ನೂರು ಇನ್ನೂರು ಐನೂರು ಹೀಗೆ ನನಗೆ ಹಣ ಕಳಿಸಿದರು. ಈ ಹಣದಿಂದ ನನ್ನ ಖರ್ಚನ್ನು ಹೇಗೋ ನಿಭಾಯಿಸಿದೆ. ಈಗಲೂ ಇಂತಹ ಜನ ಮಾಡುವ ಸಹಾಯವೇ ನನ್ನ ಬದುಕಿಸಿದೆ,,

ನಾನು ಅಧಿಕಾರಸ್ಥರ ಸಂಪರ್ಕ ಇಟ್ಟುಕೊಂಡವನು. ಸಂಬಂಧವನ್ನಲ್ಲ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೌಜನ್ಯಕ್ಕಾಗಿ ಒಮ್ಮೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆ. ಬೇರೆ ರಾಜಕಾರಣಿಗಳನ್ನು ಭೇಟಿ ಮಾಡಿಲ್ಲ.. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ ಸಚಿವರನ್ನು ಇತರ ನಾಯಕರನ್ನೂ ನಾನು ಭೇಟಿ ಮಾದಿಲ್ಲ. ಯಾಕೆಂದರೆ ಬಹುಬೇಗ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಟೀಕಿಸುವ ಸಂದರ್ಭ ಬಂದೇ ಬರುತ್ತದೆ ಎಂಬುದು ನನಗೆ ಗೊತ್ತು.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...