Sunday, April 20, 2008

ಓಡಬೇಕು, ಓಡುತ್ತಲೇ ಇರಬೇಕು.

ಓಡಿ ಹೋಗೋದು ? ಹಾಗೆಂದರೇನು ? ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಓದಿ ಹೋಗುವುದು ಗೊತ್ತಿಲ್ಲ. ನಾವು ಎಲ್ಲಿದ್ದೆವೆಯೋ ಅಲ್ಲಿಯೇ ನಿಂತು ಬಿಡುತ್ತೇವೆ. ಅಲ್ಲಿನ ರಾಡಿಯಲ್ಲಿ ನಮ್ಮ ಕಾಲುಗಳು ಹುಗಿದು ಹೋಗುತ್ತದೆ. ಅಲ್ಲಿಂದ ಕಾಲನ್ನು ಮೇಲೆ ಎತ್ತುವುದು ನಮಗೆ ಗೊತ್ತಿಲ್ಲ. ನಾನು ಹೇಳಿದ್ದು ನಿಮಗೆ ಅರ್ಥವಾಯಿತೆ ?
ಬದುಕು ಅಂದರೆ ಹಾಗೆ . ಅದು ನಿರಂತರ ಚಲನಶೀಲತೆ. ಬದುಕು ನಿಂತಿದೆ ಎಂದು ನಮಗೆ ಅನ್ನಿಸಿದರೆ ನಾವು ಅಪಾಯದಲ್ಲಿ ಇದ್ದೇವೆ ಎಂದೇ ಅರ್ಥ. ಇದನ್ನು ಇನ್ನಷ್ಟು ಸರಳವಾಗಿ ಹೇಳಲು ನಾನು ಯತ್ನಿಸುತ್ತೇನೆ. ಯಾವುದೇ ಮಗುವನ್ನು ನೋಡಿ. ಅದು ಸದಾ ಒಂದಲ್ಲ ಒಂದು ಆಟದಲ್ಲಿ ತೊಡಗಿಕೊಂಡಿರುತ್ತದೆ. ಒಮ್ಮೆ ರಂಗಾಣಿಯ ಜೊತೆ ಆಟವಾಡುತ್ತಿದ್ದರೆ, ಮತ್ತೊಮ್ಮೆ ಇನ್ನೊಂದು ಆಟಿಗೆಯತ್ತ ಅದರ ಮನಸ್ಸು ಹೋಗುತ್ತದೆ. ಯಾವುದೇ ಒಂದು ಆಟದಲ್ಲಿ ಅದು ಸಂತೋಷ ಪಡುವುದಿಲ್ಲ. ಅದಕ್ಕೆ ಮರೆಯುವುದು ಗೊತ್ತು. ಬಿಡುವುದು ಗೊತ್ತು. ಆದರೆ ನಾವು ಹಾಗಲ್ಲ. ನಾವು ಯಾವುದರಲ್ಲಾದರೂ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತೇವೆ. ಅದರಿಂದ ಹೊರಕ್ಕೆ ಬರುವುದು ನಮಗೆ ಗೊತ್ತಿಲ್ಲ. ಹೊರಕ್ಕೆ ಬರುವುದು ನಮಗೆ ಬೇಕಿಲ್ಲ. ಇದೇ ನಮ್ಮ ಸಮಸ್ಯೆ.
ನಾವು ವಿದ್ಯಾರ್ಥಿಯಾಗಿದ್ದರೆ, ನಮಗೆ ಪ್ರಥಮ ಸ್ಥಾನವೇ ಬೇಕು. ಅದೇ ನಮ್ಮ ಗುರಿ. ನಾವು ಅದರಿಂದ ಹೊರಕ್ಕೆ ಬರಲಾರೆವು. ಹಾಗೆ ನಾವು ಉದ್ಯೋಗಸ್ಥರಾಗಿದ್ದರೆ ? ನಮ್ಮ ಬಾಸು, ನಮ್ಮ ಸಹೋದ್ಯೋಗಿಗಳು, ಅವರ ತರಲೆಗಳು, ಪ್ರಮೋಷನ್ನು ಇತ್ಯಾದಿ. ಇದರಿಂದ ನಮಗೆ ಹೊರಕ್ಕೆ ಬರುವುದು ಗೊತ್ತಿಲ್ಲ. ಈ ಪ್ರಪಂಚವನ್ನು ಬಿಟ್ಟು ನಾವು ಹೊರಕ್ಕೆ ಬರಲಾರೆವು. ಇಂತಹ ಜನರ ಬಳಿ ಹೋಗಿ ಬೇರೆ ಯಾವುದೋ ವಿಚಾರದ ಬಗ್ಗೆ ಮಾತನಾಡಿ. ಅವರು ಹೇಳುತ್ತಾರೆ, ನನಗೆ ನನ್ನದೇ ಸಾಕಷ್ಟು, ಹಾಸಿ ಹೊದ್ದುಕೊಳ್ಳುವಷ್ಟಿದೆ. ಅಂದರೆ ಅವರು ತಾವು ಸಿಕ್ಕಿಕೊಂಡ ವರ್ತುಲದಿಂದ ಹೊರಕ್ಕೆ ಬರಲಾರರು. ಅಲ್ಲಿಂದ ಓಡಿ ಹೋಗಲಾರರು.
ನಾನು ಇಂತಹ ಸ್ಥಿತಿಯಲ್ಲಿ ಹಲವಾರು ಬಾರಿ ಸಿಕ್ಕಿಕೊಂಡಿದ್ದೇನೆ. ಆದರೆ ಅಲ್ಲಿಂದ ಓಡಿ ಬರುವುದನ್ನು ಕಲಿತಿದ್ದೇನೆ.
ನಾನು ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಎಷ್ಟೋ ಬಾರಿ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಿಡಬೇಕು ಎಂದು ಅನ್ನಿಸಿದ್ದುಂಟು. ಆಗೆಲ್ಲ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದೇನೆ. ಆದರೆ, ಮದುವೆ ಮಕ್ಕಳು ಆದ ಮೇಲೆ ನನಗೆ ಅಷ್ಟು ಸುಲಭವಾಗಿ ಓಡಲು ಸಾಧ್ಯವಾಗಿಲ್ಲ. ಪ್ರತಿ ಸಲ ಇರುವುದರಿಂದ ಇರದಿರುವುದರೆಡೆಗೆ ಓಡಬೇಕು ಎಂದುಕೊಂಡಾಗ, ಮನೆ ಹೆಂಡತಿ ಮಕ್ಕಳು ನೆನಪಾಗುತ್ತರೆ. ಆಗ ಇರುವ ಕೆಲಸವನ್ನು ಬಿಟ್ಟು ಓಡಿ ಹೋಗಲು ಸಾಧ್ಯವಾಗುವುದಿಲ್ಲ. ಪ್ರಾ ಯಶಃ ನಾವು ಬದುಕಿನಲ್ಲಿ ಸುರಕ್ಷತೆಯನ್ನು ಬಯಸುತ್ತೇವೆ. ಸುರಕ್ಷತೆಯ ಆಸೆ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಅದು ನಮ್ಮ ಕಾಲನ್ನು ಕಟ್ಟಿ ಹಾಕುತ್ತದೆ.
ಓದಿ ಹೋಗುವುದು ಎಂದರೆ, ಅದು ಬಿಡುಗಡೆ. ಓಡಿ ಹೋಗದೇ ನಿಂತಲ್ಲಿ ನಿಲ್ಲುವುದು ಎಂದರೆ ಅದು ಬಂಧನ. ಬಂಧನ ನಮ್ಮ ಮನಸ್ಸನ್ನು ಕಟ್ಟಿ ಹಾಕುತ್ತದೆ. ಅಲ್ಲಿ ಕ್ರಿಯಾಶೀಲತೆ ಸಾಯುತ್ತದೆ. ಆದ್ದರಿಂದ ನಾವೆಲ್ಲ ಓಡಬೇಕು ಓಡುತ್ತಲೇ ಇರಬೇಕು.

6 comments:

Chamaraj Savadi said...

ಹೌದು ಸರ್‌,

ವಾತಾವರಣ ಉಸಿರು ಕಟ್ಟುವಂತಿದ್ದರೆ ಓಡಿ ಹೋಗದೇ ಬೇರೆ ದಾರಿ ಏನಿದೆ? ನಾನೂ ನಿಮ್ಮ ಹಾಗೆ ಓಡುತ್ತಲೇ ಹೋಗಿದ್ದೇನೆ. ಮದುವೆಯಾದ ಎರಡೇ ತಿಂಗಳಲ್ಲಿ ಈ ಟಿವಿ ಕನ್ನಡ ಚಾನೆಲ್‌ನಿಂದ ನಾನು ಓಡಿದ್ದ ಹಾಗೆ. ತೀರ ಮೊನ್ನೆ ಮೊನ್ನೆ ಪ್ರಜಾವಾಣಿ ಬಿಟ್ಟಿದ್ದು ಇದೇ ಕಾರಣಕ್ಕೆ. ಇದ್ದು ಮಾಡುವುದು ಏನೂ ಇಲ್ಲ ಎಂದು ಬಲವಾಗಿ ಅನ್ನಿಸಿದಾಗ ಎದ್ದು ಹೋಗುವುದೇ ಸೂಕ್ತ.

ಆದರೆ, ಈ ಅಭ್ಯಾಸ ನನ್ನನ್ನು ಸಾಕಷ್ಟು ತೊಂದರೆಗೆ ಈಡು ಮಾಡಿದೆ. ಮದುವೆಯಾದ ನಂತರವೂ ನಾಲ್ಕು ಬಾರಿ ಕೆಲಸ ಬದಲಿಸಿ ಬವಣೆ ಪಟ್ಟ ಭೂಪ ನಾನು. ಒಂದು ಸಂಸ್ಥೆಯಲ್ಲಿ ಕೆಲಸ ಸಿಕ್ಕ ನಂತರವಷ್ಟೇ ಹಳೆಯ ಸಂಸ್ಥೆ ಬಿಟ್ಟಿದ್ದು ಬಹುಶಃ ಇದೇ ಮೊದಲ ಬಾರಿ.

ಕೌಟುಂಬಿಕ ಜವಾಬ್ದಾರಿ ಹೆಚ್ಚಿದಂತೆ, ಓಡುವುದು ಸುಲಭವಾಗಿಲ್ಲ. ಆದರೆ, ಮಾನಸಿಕವಾಗಿ ಓಡಿ ಹೋಗುವುದನ್ನು ಕಲಿತಿದ್ದೇನೆ. ಇಷ್ಟಪಟ್ಟ ಓದು, ಬರಹ ಮಾಡುತ್ತ, ಮಾನಸಿಕವಾಗಿ ಚುರುಕಾಗಿರಲು ಪ್ರಯತ್ನಿಸುತ್ತೇನೆ.

ಇದನ್ನೆಲ್ಲ ಮತ್ತೆ ನೆನಪಿಸಿದಿರಿ. ಥ್ಯಾಂಕ್ಸ್‌ ಸರ್‌.

- ಚಾಮರಾಜ ಸವಡಿ

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Vimala said...
This comment has been removed by the author.
Vimala said...

ನಿರ೦ತರ ಚಲನಶೀಲತೆ,ಬದುಕಿನ ಗುರುತೆ೦ಬುದನ್ನು ನೆನಪಿಸಿದ್ದಕ್ಕಾಗಿ ವ೦ದನೆಗಲು.
ವಿಮಲಾನಾವದ,ಕು೦ದಾಪುರ.

Vimala said...

ನಿರ೦ತರ ಚಲನಶೀಲತೆ,ಬದುಕಿನ ಗುರುತೆ೦ಬುದನ್ನು ನೆನಪಿಸಿದ್ದಕ್ಕಾಗಿ ವ೦ದನೆಗಲು.
ವಿಮಲಾನಾವದ,ಕು೦ದಾಪುರ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...