ಈ ದಿನಗಳಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಂಡಿದ್ದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವುದು ನನ್ನ ಜಾಯಮಾನ.
ಅಂದು ನಾನು ಕಚೇರಿಯಲ್ಲಿ ಕುಳಿತಿದ್ದಾಗ ನನ್ನ ಸ್ನೇಹಿತರೊಬ್ಬರು ಒಂದು ವಾರ ಪತ್ರಿಕೆಯೊಂದನ್ನು ತಂದು ಕೊಟ್ಟರು. ಆ ಪತ್ರಿಕೆಯನ್ನು ಅದುವರೆಗೆ ನಾನು ನೋಡಿರಲಿಲ್ಲ. ಅದರ ಹೆಸರನ್ನು ಕೇಳಿರಲಿಲ್ಲ. ಆ ಪತ್ರಿಕೆಯನ್ನು ನನ್ನ ಬಗ್ಗೆ ಅದೇನನ್ನೂ ಬರೆದಿದ್ದರು. ನಾನು ಅದನ್ನು ನೋಡಿ ನಕ್ಕು ಬಿಟ್ಟೆ. ಇದೆಲ್ಲ ಸಹಜ ಅನ್ನಿಸಿತು.
ಈಗ ಒಂದು ವಾರದ ಹಿಂದಿನ ಮಾತು. ಇನ್ನೊಂದು ವಾರ ಪತ್ರಿಕೆ ನನ್ನ ಟೇಬಲ್ಲಿನ ಮೇಲಿತ್ತು. ಆ ಪತ್ರಿಕೆಯಲ್ಲೂ ನನ್ನ ಬಗ್ಗೆ ಪ್ರಸ್ತಾಪವಿತ್ತು. ಈ ಪ್ತತ್ರಿಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಯಾರೋ ಹೇಳಿದರು; ಇದನ್ನೆಲ್ಲ ನಿಮ್ಮ ಜೊತೆ ಕೆಲಸ ಮಾಡುತ್ತಿದ್ದವರೆ ಬರೆಸುತ್ತಿದ್ದಾರೆ !
ನಾನು ಇರಬಹುದು ಇಲ್ಲದೆಯೋ ಇರಬಹುದು ಎಂದು ಸುಮ್ಮನಾದೆ. ಆದರೆ ಮಾಧ್ಯಮ ಜಗತ್ತು ನನ್ನದು. ಇಲ್ಲಿಯೇ ನನ್ನ ಬದುಕನ್ನು ರೂಪಿಸಿಕೊಂಡವನು ನಾನು. ಹೀಗಾಗಿ ಹೇಳಿದ್ದನ್ನೆಲ್ಲ ಹೇಳಿಸಿಕೊಂಡು ಇರುವುದು ಸಾಧ್ಯವಿಲ್ಲ. ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೇಬೇಕು. ಯಾಕೆಂದರೆ ಅದು ನನ್ನ ಕರ್ತವ್ಯ. ಈ ಕಾರಣದಿಂದಲೇ ನನ್ನ ಅನುಭವವನ್ನು ಹೇಳಲೇಬೇಕು ಅನ್ನಿಸಿತು. ಹಾಗೆ ನೋಡಿದರೆ ನನ್ನ ಪತ್ರಿಕೋದ್ಯಮದ ಅನುಭವವನ್ನು ನಾನು ಒಂದೆರಡು ವರ್ಷಗಳ ಹಿಂದೆ ಬರೆಯುವುದಕ್ಕೆ ಪ್ರಾರಂಭಿಸಿದ್ದೆ. ಅದು ಸುಮ್ಮಾರು ೧೦೦ ಪುಟಗಳನ್ನು ತಲುಪಿತ್ತು. ಆದರೆ ಕಂಪ್ಯೂಟರ್ ತೊಂದರೆ ಇಂದಾಗಿ ಬರೆದಿದ್ದೆಲ್ಲ ಹೊರಟು ಹೋಯಿತು. ಈಗ ಮತ್ತೊಮ್ಮೆ ಬರೆಯಲು ಪ್ರಾರಂಭಿಸಬೇಕು. ಅದು ನನ್ನೊಬ್ಬನ ಅನುಭವ ಮಾತ್ರ ಆಗಿರದೇ ಒಂದು ಕಾಲ ಘಟ್ಟದ ಪತ್ರಿಕೋದ್ಯಮದ ದಾಖಲೆಯೂ ಆಗಬೇಕು.
ಹೀಗೆ ಯೋಚಿಸುತ್ತಿರುವಾಗ ನನಗೆ ಅನ್ನಿಸಿದ್ದು, ನನ್ನ ಇತ್ತೀಚಿನ ಅನುಭವದಿಂದಲೇ ನನ್ನ ಬರೆಹವನ್ನು ಪ್ರಾರಂಭಿಸಬೇಕು ಎಂದು. ನಾನು ಕಾರ್ಯಕ್ರಮ ಮಾಡಿಕೊಂಡು ಬದುಕುತ್ತಿದ್ದವನು, ಚಾನಲ್ ಒಂದರ ಮುಖ್ಯಸ್ಥನಾಗಿದ್ದು, ಅಲ್ಲಿನ ನನ್ನ ಅನುಭವ ಎಲ್ಲವನ್ನು ದಾಖಲಿಸುತ್ತೇನೆ. ಹಾಗೆ ಇಂದಿನ ಮಾಧ್ಯಮಗಳ ಸ್ಥಿತಿ, ಕೆಲಸ ಮಾಡುವವರ ಮನಸ್ಥಿತಿ ಎಲ್ಲವನ್ನೂ ತೆರೆದಿಡುತ್ತೇನೆ.
ಕತ್ತಲಲ್ಲಿ ನಿಂತು ಕಲ್ಲು ಹೊಡೆಯುವವರಿಗೂ ಉತ್ತರ ನೀಡುತ್ತೇನೆ.
3 comments:
baravanigeya arthavannu thumba saralavagi hididittiddira.
You explained the meaning of writing very well i admired it.
you explaind the meaning of writing of very well i am really admired it
Post a Comment