Thursday, December 26, 2013

ಪ್ರೀತಿ ಎಂಬ ಮಾಯೆಯನ್ನು ಬೆನ್ನು ಹತ್ತದವರು ಯಾರು ? ನಾನಂತೂ ಪ್ರೀತಿಯ ಪಯಣಿಗ. ಪ್ರೀತಿಯನ್ನು ಹುಡುಕುತ್ತ ಅಲೆದಾಡಿದವನು. ಆ ದಿನಗಳಲ್ಲಿ ನನಗೊಂದು ಪ್ರೀತಿಸುವ ಜೀವ ಬೇಕಾಗಿತ್ತು. ಅದಕ್ಕಾಗಿ ನಾನು ಹಂಬಲಿಸಿದೆ. ಅದನ್ನು ಹುಡುಕಿಕೊಂಡೂ ಅಲೆದೆ.
ಪ್ರೀತಿಯ ಹುಚ್ಚು ಹಿಡಿದ ಆ ದಿನಗಳು. ಕಾಮದ ಮುಖಾಮುಖಿಗಾಗಿ ಕಾದಿದ್ದ ಆ ಕ್ಷಣಗಳು. ನಾನು ಎಲ್ಲರನ್ನೂ ಪ್ರೀತಿಸಿದೆ. ಯಾರೂ ನನ್ನನ್ನು ಪ್ರೀತಿಸಲಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತ್ಡೇನೆ ಎಂದೆ. ನಿನ್ನ ಸಂಬಳ ಎಷ್ಟು ಎಂಬ ಪ್ರಶ್ನೆ ತೂರಿ ಬಂತು. ನಾನು ಹೇಳಿದೆ ೬೦೦ ರೂಪಾಯಿ.
ಈ ಹಣ ನನ್ನ ಸೀರೆಗೂ ಸಾಕಾಗುವುದಿಲ್ಲ...! ಆಕೆ ಹೇಳಿ ನಕ್ಕಳು. ನಾನು ತಲೆ ತಗ್ಗಿಸಿದೆ. ಪ್ರೀತಿ ಕೇಳಿದವನಿಗೆ ಅವಮಾನ. ಅದು ನಿರಾಕರಣೆಯಾಗಿದ್ದರೆ ಸಹಜವಾಗಿರುತ್ತಿತ್ತು.
ಆದರೆ ಗಂಡು ಹೆಣ್ಣಿನ ಸಂಬಂಧದಲ್ಲಿ ಸಹಜತೆಯ ಮಾತೆಲ್ಲಿ ? ಸಹಜವಾದುದರ ನಡುವೆ ಅಸಹಜವಾದುದು ಸಾಮಾನ್ಯ.
ನಾನು ತಲೆ ತಗ್ಗಿಸಿ ನಡೆದೆ. ಆಕೆ ನಗುತ್ತ ಬಾಯ್ ಬಾಯ್ ಎಂದಳು.
ನಾನು ದೇವದಾಸನಾದೆ. ರಮ್ ಕುಡಿದೆ. ಆಕೆ ಇದಕ್ಕೆ ನನಗೆ ಸಂಬಂಧವಿಲ್ಲ ಎಂದು ಹಾಗೆ ನಡೆದೇ ಬಿಟ್ಟಳು.
ನಾನು ಪ್ರೀತಿ ಸಿಗದಿದ್ದಕ್ಕಾಗಿ ಕುಡಿದೆನೆ ? ಅಥವಾ ಅವಳು ಸಿಂಪಥಿಗಾಗಿ ಕುಡಿದೆನೆ ? ಆದರೆ ಬದುಕು ನಿಲ್ಲಲಿಲ್ಲ. ಪ್ರೀತಿ ನಿಲ್ಲುವುದು ಹೇಗೆ ? ಪ್ರೀತಿ ಎಂದರೆ ನದಿ. ಅದು ಹರಿಯಲೇಬೇಕು
. ಈ ಕೆಳಗಿನ ಲಿಂಕ್ ನಲ್ಲಿ ಓದಿ ನನ್ನ ಪ್ರೀತಿಯ ಪಯಣ

http://siddapur.blogspot.com/2013/12/blog-post_4921.html

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...