ರಾಘವೇಶ್ವರ ಭಾರತಿ ಸ್ವಾಮೀಜಿ, ಹವ್ಯಕರ ತೊಳಲಾಟ ಮತ್ತು ನನಗಾದ ಜ್ನಾನೋದಯ....!
Add caption |
ನನಗೂ ಈ ಮಠಕ್ಕೂ ಮೊದಲಿನಿಂದಲೂ ಆಗಿ ಬರುವುದಿಲ್ಲ. ನಾನೂ ಈ ಮಠದ ಬಗ್ಗೆ ಮಾತನಾಡುತ್ತಲೇ ಲೇಖನಗಳನ್ನು ಬರೆಯುತ್ತಲೇ ಮಠದಿಂದ ಬಹಿಷ್ಕಾರಕ್ಕೆ ಒಳಗಾದವನು.ನನ್ನನ್ನು ಹವ್ಯಕ ಜಾತಿಯಿಂದ ಹೊರಕ್ಕೆ ಹಾಕಿ ಉಪಕೃತರನ್ನಾಗಿ ಮಾಡಿದವರು ರಾಘವೇಶ್ವರರಲ್ಲ, ಅವರ ಹಿಂದಿನ ಗುರುಗಳಾದ ರಾಘವೇಂದ್ರ ಭಾರತಿ ಸ್ವಾಮಿಗಳು. ಹವ್ಯಕರು ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರಿಂದಲೇ ನಾನು ಊರು ಬಿಟ್ಟು ಬರುವಂತಾಯಿತು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುವಂತಾಯಿತು. ಇದಕ್ಕಾಗಿ ಹಿರಿಯ ಸ್ವಾಮೀಜಿಯವರಿಗೆ ನಾನು ಸದಾ ಕೃತಜ್ನನಾಗಿದ್ದೇನೆ.
ನನಗೆ ಈ ಸ್ವಾಮಿಗಳು ಯಾವಾಗಲೂ ಸರಿ ಬರುವುದಿಲ್ಲ. ಕಾವಿ ಹಾಕಿದ ಸ್ವಾಮಿಗಳನ್ನು ನೋಡಿದ ತಕ್ಷಣ ನನಗೆ ಅವರು ನಗ್ನರಾಗಿ ಕಾಣುತ್ತಾರೆ. ಅವರು ಕಾವಿಯ ಒಳಗೆ ಅಡಗಿ ಕುಳಿತಿರುವ ಕುರೂಪ ಕಾಣತೊಡಗುತ್ತದೆ. ಕಾವಿ ಧರಿಸಿರುವವರ ಇಂದ್ರಿಯ ನಿಗ್ರಹ ಮಾಡುತ್ತಾರೆಯೇ ಮಾಡುವುದಿದ್ದರೆ ಅದಕ್ಕೆ ಅವರು ಅನುಸರಿಸುವ ಮಾರ್ಗೋಪಾಯಗಳು ಯಾವವು ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಕಾವಿಯ ಒಳಗೆ ಅವರಿಗೆ ಒಳ ಉಡುಪುಗಳು ಇರುತ್ತವೆಯೆ ಅಥವಾ ಇಲ್ಲವೇ ಎಂಬ ಸಣ್ಣ ಕುತೂಹಲ ಕೂಡ ನನ್ನನ್ನು ಅಗಾಗ ಕಾಡುವುದುಂಟು. ಇದಕ್ಕೆಲ್ಲ ನನ್ನ ಒಳಗಿನ ಸಿನಿಕತನ ಅಪನಂಬಿಕೆ ಎಲ್ಲವೂ ಕಾರಣ ಇರಬಹುದು. ಹೀಗಾಗಿ ಈ ಬಗ್ಗೆ ನಾನು ಸ್ವಾಮೀಜಿಗಳನ್ನು ದೂರುವುದಿಲ್ಲ. ಇರಲಿ, ರಾಮಚಂದ್ರಾಪುರದ ಅಧಿಕಾರ ಸ್ವೀಕರಿಸಿದ ಮೇಲೆ ರಾಘವೇಶ್ವರರು ತಮ್ಮ ದರ್ಶನ ಮಾಡುವಂತೆ ಎರಡು ಮೂರು ಬಾರಿ ಹೇಳಿ ಕಳಿಸಿದ್ದರು. ನಾನು ಹೋಗಲಿಲ್ಲ. ಆದರೆ ನಾನು ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡುವಾಗ್ ಒಮ್ಮೆ ಸಂದರ್ಶನವೊಂದಕ್ಕೆ ಅವರು ಸ್ಟುಡಿಯೋಕ್ಕೆ ಬಂದಿದ್ದರು. ಆಗ ಮತ್ತೆ ಅವರು ತಮ್ಮನ್ನು ನೋಡುವಂತೆ ಮಠಕ್ಕೆ ಬರುವಂತೆ ಮನವಿ ಮಾಡಿದರು. ಹಿಂದಿನ ಸ್ವಾಮೀಜಿ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವ ಬಗ್ಗೆ ಮಠದ ಪರವಾಗಿ ಕ್ಷಮೆ ಯಾಚಿಸಿ ಹಿಂದಿನ ಸ್ವಾಮೀಜಿ ನನಗೆ ಹಾಕಿದ್ದ ಭಹಿಷ್ಕಾರವನ್ನು ರದ್ದು ಪಡಿಸುವುದಾಗಿ ತಿಳಿಸಿದರು. ನಾನು ಜಾತಿ ವ್ಯವಸ್ಥೆಯನ್ನು ಮಠಗಳನ್ನು ನಂಬದಿರುವುದರಿಂದ ನನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದೆ. ನನಗೆ ಜಾತಿಯಿಂದ ಹೊರಕ್ಕೆ ಇರುವುದು ತುಂಬಾ ಸಂತೋಷದ ಕೆಲಸ ಆಗಿರುವುದರಿಂದ ಮತ್ತೆ ಜಾತಿಯ ಒಳಗೆ ನನ್ನನ್ನು ಎಳೆದುಕೊಳ್ಳಬೇಡಿ. ನೀವು ಎಳೆದರೂ ನಾನು ಬರುವುದಿಲ್ಲ ಎಂದು ಹೇಳಿದೆ. ಈ ಅಧ್ಯಾಯ ಅಲ್ಲಿಗೆ ಮುಗಿದು ಹೋಯಿತು.
ಅಷ್ಟರಲ್ಲಿ ಹವ್ಯಕ ಪತ್ರಕರ್ತರನ್ನು ಕರೆದು ಅವರ ಜೊತೆ ಸಮಾಲೋಚನೆ ನಡೆಸುವುದನ್ನು ರಾಘವೇಶ್ವರರು ಪ್ರಾರಂಭಿಸಿದ್ದರು. ಆಗ ನನಗೂ ಆಹ್ವಾನ ಬಂದರೂ ನಾನು ಹೋಗಲಿಲ್ಲ. ಪತ್ರಿಕೋದ್ಯಮದಲ್ಲಿ ಇರುವ ಹಲವಾರು ಭಟ್ಟರ ಹೆಸರನ್ನು ಅವೠ ಪ್ರಸ್ಥಾಪಿಸಿ ಅವರೆಲ್ಲ ಬರುತ್ತಾರೆ ನೀವು ಬನ್ನಿ ಎಂದರೂ ನಾನು ಹೋಗಲಿಲ್ಲ. ಆ ಸಭೆಗಳಿಗೆ ಆಗಾಗ ಹೋಗುತ್ತಿದ್ದ ಭಟ್ಟ ಪತ್ರಕರ್ತರು ಈಗ ಒಳ್ಳೆಯ ಹುದ್ದೆಗಳಲ್ಲಿದ್ದಾರೆ. ಅವರೆಲ್ಲ ತಮ್ಮ ತಮ್ಮ ಪತ್ರಿಕೆಗಳಲ್ಲಿ ರಾಘವೇಶ್ವರ ಪರವಾಗಿ ಸತತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ದಿನ ಪತ್ರಿಕೆಗಳನ್ನು ನೋಡುವಾಗ ನನಗೆ ಇದೆಲ್ಲ ನೆನಪಾಗುತ್ತದೆ.
ಶ್ರೀ ಮದ್ ಜಗದ್ಗುರು ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಪ್ರೇಮಲತಾ ದಿವಾಕರ್ ಅವರು ಸತತ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿ ನಾನು ಕಸ್ತೂರಿ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಅವಳ ಕಥೆ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಒಂದನ್ನು ಪ್ರಸಾರ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪ್ರೇಮಲತಾ ದಿವಾಕರ್ ಅವರು ನೀಡಿದ ದೂರುಗಳಿದ್ದವು. ಆದರೆ ಎಲ್ಲಿಯೂ ಸ್ವಾಮಿಯ ಹೆಸರನ್ನು ಹೇಳಿರಲಿಲ್ಲ. ಇದಾದ ಮೇಲೆ ಪ್ರೇಮಲತಾ ದಿವಾಕರ್ ಅವರಿಗೆ ಸಂಬಂಧಿಸಿದ ಇನ್ನೂ ಒಂದೆರಡು ಕಾರ್ಯಕ್ರಮವನ್ನು ನಾನು ಪ್ರಸಾರ ಮಾಡಿದೆ. ಅಷ್ಟರಲ್ಲಿ ಕಸ್ತೂರಿ ವಾಹಿನಿಯ ಮಾಲಿಕರಿಗೂ ನನಗೂ ಭಿನ್ನಾಭಿಪ್ರಾಯ ಉಂಟಾಗಿತ್ತು. ನಾನು ಅಲ್ಲಿ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವಾಗಲೇ ನಾನು ಕೆಲಸ ಬಿಡಬೇಕಾದ ವಾತಾವರಣ ಸೃಷ್ಟಿಯಾಯಿತು. ನಾನು ಕೆಲಸ ಬಿಟ್ಟೆ. ಆದರೆ ರಾಘವೇಶ್ವರ ಸ್ವಾಮೀಜಿಯವರ ಶಿಷ್ಯರು ಸುದ್ದಿಯೊಂದನ್ನು ಹರಡಿದರು. ಸ್ವಾಮೀಜಿಗಳ ವಿರೋಧಿಯಾದ ಶಶಿಧರ್ ಭಟ್ ಕೆಲಸ ಬಿಡುವಂತೆ ಮಾಡಿದ್ದು ನಾವೇ.. ನಾವೇ ಕುಮಾರಸ್ವಾಮಿ ಅವರ ಜೊತೆ ಮಾತನಾಡಿ ಕೆಲಸ ಬಿಡುವಂತೆ ಮಾಡಿದೆವು ಅಂತ.. ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಪ್ರೇಮಲತಾ ದಿವಾಕರ್ ಈ ಬಗ್ಗೆ ತುಂಬಾ ಬೇಜಾರು ಮಾಡಿಕೊಂಡಿದ್ದರು. ನನ್ನಿಂದ ನೀವು ಕೆಲಸ ಕಳೆದುಕೊಳ್ಳುವಂತೆ ಆಯಿತು, ನೀವು ನನಗೆ ಬೆಂಬಲ ನೀಡದಿದ್ದರೆ ನಿಮ್ಮ ಕೆಲಸ ಉಳಿಯುತ್ತಿತ್ತು ಎಂದು ಕಣ್ಣೀರು ತುಂಬಿಕೊಂಡರು.
ನಾನು ಆ ಕೆಲಸ ಬಿಟ್ಟ ಮೇಲೆ ನಾನು ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡು ಈಗ ನೂರಾರು ಹುಡುಗ ಹುಡುಗಿಯರನ್ನು ಕಟ್ಟಿಕೊಂಡು ಹೊಸ ಸಾಹಸಕ್ಕೆ ಕೈಹಾಕಿದ್ದೇನೆ. ಒಂದೊಮ್ಮೆ ರಾಘವೇಶ್ವರರೇ ಕಸ್ತೂರಿಯಿಂದ ಬಿಡುವುದಕ್ಕೆ ಕಾರಣರಾಗಿದ್ದರೆ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ನತೆಗಳು. ಅವರು ಹಾಗೆ ಮಾಡದಿದ್ದರೆ ನಾನು ಹೊಸ ಯೋಜನೆಗೆ ಕೈಹಾಕುತ್ತಿರಲಿಲ್ಲ. ಕುಮಾರಸ್ವಾಮಿ ಮತ್ತು ಅನಿತಕ್ಕನ ಚಾನಲ್ಲಿನಲ್ಲೇ ಕಾಲ ಕಳೆಯುತ್ತಿದ್ದೆ. ಹೀಗಾಗಿ ರಾಘವೇಶ್ವರರು ನನಗೆ ಉಪಕಾರವನ್ನೆ ಮಾಡಿದ್ದಾರೆ. ತಮ್ಮ ಹಿಂದಿನ ಸ್ವಾಮಿಯ ದಾರಿಯಲ್ಲೇ ನಡೆದಿದ್ದಾರೆ. ಈ ಇಬ್ಬರೂ ಸ್ವಾಮಿಗಳಿಗೆ ಆ ರಾಮನೇ ನನಗೆ ಸಹಾಯ ಮಾಡುವ ಬುದ್ದಿಯನ್ನು ಕೊಟ್ಟಿರಬೇಕು. ಹಾಗೆ ನೋಡಿದರೆ ರಾಮನಿಗೂ ನನಗೂ ಅಂತಹ ಒಳ್ಳೆಯ ಸಂಬಂಧ ಇಲ್ಲ. ನಾನು ರಾಮನ ಹಾದಿಯಲ್ಲಿ ನಡೆದವನೂ ಅಲ್ಲ. ಮೆಚ್ಚಿಕೊಂಡವನೂ ಅಲ್ಲ. ನನಗೆ ರಾಮನಿಗಿಂತ ಕೃಷ್ಣ ಹೆಚ್ಚು ಇಷ್ಟ.. ಹೀಗಾಗಿ ರಾಮನಿಗೆ ನನ್ನ ಮೇಲೆ ಸಿಟ್ಟಿ ಇರಬೇಕಿತ್ತು.. ಆದರೆ ರಾಮ ಸ್ವಾಮಿಗಳ ಇಬ್ಬರ ಕೈಯಲ್ಲೂ ನನಗೆ ಸಹಾಯ ಮಾಡಿಸಿ ಬಿಟ್ಟ. ಹೀಗಾಗಿ ರಾಘವೇಂದ್ರ ಭಾರತಿ, ರಾಘವೇಶ್ವರ ಭಾರತಿ ಮತ್ತು ಶ್ರೀರಾಮಚಂದ್ರರಿಗೆ ಹೃದಯಪೂರ್ವಕ ಕೄತಜ್ನತೆಗಳನ್ನು ಸಲ್ಲಿಸಿ ಮುಂದುವರಿಯುತ್ತೇನೆ.
ಈಗ ರಾಘವೇಶ್ವರ ಸ್ವಾಮೀಜಿಗಳಿಂದಾಗಿ ಹವ್ಯಕರು ಎರಡು ಗುಂಪುಗಳಾಗಿ ಒಡೆದು ಹೋಗಿದ್ದಾರೆ. ಕೆಲವರು ಸ್ವಾಮಿಗಳ ಪರವಾಗಿ ಬ್ಯಾಟಿಂಗ್ ಮಾಡಿದರೆ ಇನ್ನೂ ಕೆಲವರು ಸ್ವಾಮಿಗಳ ವಿರುದ್ಧ ಬೌಲಿಂಗ್ ಮಾಡುತ್ತಿದ್ದಾರೆ. ಇದು ಆ ಸಮಾಜದಲ್ಲಿ ತಾತ್ವಿಕ ಪ್ರಶ್ನೆಗಳನ್ನು ಎತ್ತಿದೆ. ಧಾರ್ಮಿಕ ಪ್ರಶ್ನೆಗಳನ್ನು ಎತ್ತಿದೆ. ಹವ್ಯಕರು ಯಕ್ಷಗಾನ ತಾಳ ಮದ್ದಲೆಯ ರೀತಿಯಲ್ಲಿ ಚರ್ಚೆ ಮಾಡತೊಡಗಿದ್ದಾರೆ. ಇದು ಕೂಡ ಆರೋಗ್ಯಪೂರ್ಣ ಬೆಳವಣಿಗೆಯೇ. ಯಾರಿಗೂ ತೊಂದರೆ ಕೊಡದೇ ತಾವೂ ತೊಂದರೆ ಮಾಡಿಕೊಳ್ಳದೆ, ಕೃಷಿ , ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಡುವೆ ಬದುಕುತ್ತಿದ್ದ ಹವ್ಯಕರಿಗೆ ಜಗಳವಾಡುವುದೂ ಮರೆತು ಹೋಗುವ ಗಂಡಾಂತರ ಎದುರಾಗಿತ್ತು. ಈ ಸಂದರ್ಭದಲ್ಲಿ ಜಗಳವಾಡುವುದನ್ನು ನೆನಪು ಮಾಡಿಕೊಟ್ಟ ಕೀರ್ತಿ ರಾಘವೇಶ್ವರಿಗೆ ಸಲ್ಲಬೇಕು. ಶಾಂತ ಸ್ವಭಾವದ ಹವ್ಯಕರಿಗೆ ಜಗಳ, ಮುಷ್ಟಿಯುದ್ಧದ ಮಹತ್ವವನ್ನು ಗುರುಗಳು ತಿಳಿಸಿಕೊಡುತ್ತಿದ್ದಾರೆ. ಇದಕ್ಕಾಗಿಯೂ ನಾನು ಅವರಿಗೆ ಕೃತಜ್ನನಾಗಿದ್ದೇನೆ.
ಸಾಧಾರಣವಾಗಿ ಯಕ್ಷಗಾನ ಮತ್ತು ತಾಳಮದ್ದಳೆಗೆ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನೇ ಬಳಸಲಾಗುತ್ತದೆ.. ಈ ಆಟ ಮತ್ತು ತಾಳಮದ್ದಲೆಯಲ್ಲಿ ಪಾತ್ರ ಮಾಡುವವರು ರಾಮಾಯಣ ಮಹಾಭಾರತವನ್ನೂ ಸಂಪೂರ್ಣವಾಗಿ ಓದಿ ತಿಳಿದುಕೊಂಡಿರುತ್ತಾರೆ.. ಇಡೀ ಆಟದ ಅಂತ್ಯ ಯಾವುದು ಎಂಬುದು ಎಲ್ಲ ಪಾತ್ರಧಾರಿಗಳಿಗೂ ತಿಳಿದಿರುತ್ತದೆ. ಆದರೂ ಪಾತ್ರದ ಮಹತ್ವವನ್ನು ಅರಿತು ಅವರು ವಾದ ಮಾಡುತ್ತಾರೆ.. ಮಹಾಭಾರತ ದುರ್ಯೋಧನಿನಿಗೆ ತನ್ನ ಅಂತ್ಯ ಗೊತ್ತಿಲ್ಲದೇ ಇರಬಹುದು. ಆದರೆ ಈ ಪಾತ್ರ ಮಾಡಿದವನಿಗೆ ತನ್ನ ಪಾತ್ರದ ಅಂತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ ಮಾತನಾದಬೇಕು. ವಾದ ಮಾಡಬೇಕು. ತರ್ಕವನ್ನು ಮಂಡಿಸಬೇಕು. ರಾಘವೇಶ್ವರ ಸ್ವಾಮೀಜಿಯವರ ಪ್ರಕರಣ ಕೂಡ ನನಗೆ ಯಕ್ಷಗಾನ ತಾಳ ಮದ್ದಲೆಯಂತೆ ಕಾಣುತ್ತಿದ್ದೆ. ಈ ಬೃಹತ್ ಆಟದಲ್ಲಿ ತಾಳ ಮದ್ದಲೆಯಲ್ಲಿ ಪಾತ್ರ ಮಾಡಿದ ಎಲ್ಲರಿಗೂ ಈ ಆಟದ ಅಂತ್ಯ ಮತ್ತು ತಿರುಳು ಗೊತ್ತಿದೆ. ಆದರೆ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಘವೇಶ್ವರ ಸ್ವಾಮೀಜಿಗಳ ಆರೋಪದ ಸತ್ಯ ಏನು ಎಂಬುದನ್ನು ಅರಿಯದಷ್ಟು ಹವ್ಯಕರು ದಡ್ದರಲ್ಲ. ಅವರು ಮಹಾನ್ ಬುದ್ದಿವಂತರು. ಆದರೆ ಅವರಿಗೆ ತಮ್ಮ ಪಾತ್ರವೇನು ಎಂಬುದು ತಿಳಿದಿದೆ. ಹೀಗಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜಾಸ್ಥಾನದಲ್ಲಿ ಇರುವವರು ರಾಜನ ಬಹುಪರಾಕ್ ಹೇಳಲೇಬೇಕು. ಭಟ್ಟಂಗಿಗಳು ರಾಜರನ್ನು ಹೊಗಳಿ ಆಟ್ಟಕ್ಕೇರಿಸಲೇ ಬೇಕು. ಅದು ಋಣ.. ಹವ್ಯಕರು ಎಂದೂ ಧ್ರೋಹಿಗಳಲ್ಲ. ಅವರು ಯಾರ ಋಣವನ್ನು ಇಟ್ಟುಕೊಳ್ಳಲಾರರು. ಋಣವನ್ನು ಎಲ್ಲರೂ ತಮ್ಮ ತಮ್ಮ ಅಂತಸ್ಥಿಗೆ ತಕ್ಕದಾಗಿ ತೀರಿಸುತ್ತಿದ್ದಾರೆ. ಹೀಗಾಗಿ ಋಣ ಸಂದಾಯ ಮಾಡಿ ಎಲ್ಲಕ್ಕಿಂತ ನಿಷ್ಠೆ ದೊಡ್ಡದು ಎಂದು ತೋರಿಸಿಕೊಡುತ್ತಿರುವ ಹವ್ಯಕ ಬಾಂಧವರಿಗೂ ನನ್ನ ಕೄತಜ್ನತೆಗಳು ಸಲ್ಲುತ್ತವೆ.ಮಾಧ್ಯಮದಲ್ಲಿ ಕೆಲಸ ಮಾಡಿ ಋಣ ಸಂದಾಯ ಮಾಡುವವರನ್ನೂ ನಾನು ಮರೆಯುವುದಿಲ್ಲ. ನಮ್ಮ ವೄತ್ತಿ ನಿಷ್ಠೆಗಿಂತ ಮಠದ ನಿಷ್ಟೆ ದೊಡ್ಡದು, ಅದು ಬದುಕುವುದಕ್ಕೆ ಅನಿವಾರ್ಯ ಎಂಬ ಸತ್ಯ ದರ್ಶನವನ್ನು ಇವರೆಲ್ಲ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಅವರ ಈ ಬದ್ಧತೆಗಾಗಿ ನಾನು ಹವ್ಯಕ ಮಾಧ್ಯಮ ಮಿತ್ರರನ್ನು ಪ್ರೀತಿಯಿಂದ ನೆನೆಯುತ್ತೇನೆ.
ಇಡೀ ಪ್ರಕರಣ ಇನ್ನೊಂದು ಸತ್ಯವನ್ನು ಅನಾವರಣ ಗೊಳಿಸಿದೆ. ಅದೆಂದರೆ ಮಠಾಧಿಪತಿಗಳು ಎನು ಮಾಡಿದರು ಅದನ್ನು ಪ್ರಸಾದ ಎಂದು ಸ್ವೀಕರಿಸಬೇಕು. ಗಂಡ ಹೆಂಡತಿ, ಪ್ರೇಮಿ ಯಾರ ಜೊತೆಗಾದರೂ ಸಂಬಂಧ ಹೊಂದಿದ್ದರೆ ಅದು ಮಾನವ ಸಂಬಂಧ.ಸ್ವಾಮೀಜಿಗಳು, ಧರ್ಮ ಬೋಧಕರ ಜೊತೆ ಸಂಬಂಧ ಹೊಂದಿದ್ದರೆ ಅದು ದೈವಿಕ,, ಭೂಲೋಕದಲ್ಲಿ ಸ್ವಾಮಿಗಳೆ ದೇವರ ಪ್ರೀತಿನಿಧಿಗಳಾಗಿರುವುದರಿಂದ ಅವರ ಜೊತೆ ದೈಹಿಕ ಸಂಬಂಧ ಹೊಂದುವುದು ದೈವಿಕವಾದುದು. ಪವಿತ್ರವಾದುದು. ನಾವು ಮನುಷ್ಯ ಸಂಬಂಧವನ್ನು ಪ್ರಶ್ನಿಸಬಹುದೇ ಹೊರತೂ ದೈವಿಕ ಸಂಬಂಧವನ್ನಲ್ಲ.;..ನಮಗೆ ದೇವರ ಸಾಮಿಪ್ಯ ದೊರಕುವುದು ದೇವ ಪ್ರತಿನಿಧಿಗಳಾಗಿರುವ ಸ್ವಾಮೀಜಿಗಳಿಂದ.. ಮನುಷ್ಯ ಮನುಷ್ಯರ ನಡುವಿನ ಎಲ್ಲ ರೀತಿಯ ಸಂಬಂಧಗಳು ಸಂತೋಷ ನೀಡುತ್ತವೆ. ಹೀಗಿರುವಾಗ ದೇವರ ಪ್ರತಿನಿಧಿಗಳಾಗಿರುವ ಸ್ವಾಮೀಜಿಗಳ ಜೊತೆಗೆ ಇಟ್ಟುಕೊಳ್ಳುವ ಎಲ್ಲ ರೀತಿಯ ಸಂಬಂಧಗಳೂ ಇನ್ನಷ್ಟು ದೈವಿಕ ಸಂತೋಷವನ್ನು ನೀಡುತ್ತವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಬುದ್ಧನಿಗೆ ಯಾವುದೋ ಮರದ ಕೆಳಗೆ ಜ್ನಾನೋದಯವಾಯಿತಂತೆ. ಬಸವನಿಗೆ ಇನ್ನೆಲ್ಲೋ ಜ್ನಾನೋದವಾಯಿತು. ಆದರೆ ಹುಲು ಮಾನವನಾದ ನನಗೆ ರಾಘವೇಶ್ವರ ಸ್ವಾಮಿಗಳ ಲೈಂಗಿಕ ಹಗರಣದ ಆರೋಪದಿಂದ ಜ್ನಾನೋದಯವಾಯಿತು. ಮನುಷ್ಯ ಸಂಬಂಧ ಮತ್ತು ದೈವಿಕ ಸಂಬಂಧದ ನಡುವಿನ ವ್ಯತ್ಯಾಸವನ್ನು ತಿಳಿಯುವಂತಾಯಿತು. ಇದಕ್ಕಾಗಿ ರಾಘವೇಶ್ವರ ಸ್ವಾಮಿಗಳು ಅವರ ಶಿಷ್ಯರು ಮತ್ತು ಸಮಸ್ತ ಹವ್ಯಕ ಬಾಂಧವರಿಗೆ ನಾನು ಕೃತಜ್ನನಾಗಿದ್ದೇನೆ...
ಮರೆತಿದ್ದೆ.. ಮಹಿಳಾ ಆಯೋಗದ ಸದಸ್ಯೆಯಾಗಿರುವ ಹವ್ಯಕ ಸಮುದಾಯಕ್ಕೆ ಸೇರಿದ ಸುಮಾ ಹೆಗಡೆಯವರಿಗೂ ನನ್ನ ಕೃತಜ್ನತೆಗಳು ಸಲ್ಲಬೇಕು. ಅವರೂ ಸಹ ಅಪ್ರತ್ಯಕ್ಷವಾಗಿ ನನ್ನ ಜ್ನಾನೋದಯಕ್ಕೆ ಸಹಕಾರಿಯಾಗಿದ್ದಾರೆ. ಹಾಗೆ ಪ್ರಮಿಳಾ ನೇಸರ್ಗಿಯವರನ್ನು ನಾನು ನೆನೆಯುತ್ತೇನೆ..ಹಾಗೂ ಈ ಲೈಂಗಿಕ ಹಗರಣಕ್ಕೂ ನನ್ನ ಕೃತಜ್ನತೆಗಳು ಸಲ್ಲುತ್ತವೆ.
3 comments:
ಅದ್ಭುತವಾದ ಬರೆಹ
Suppr sir . ivarella devaru endu mereyuva swamigalu ...naachike agbeku ivara janmakke....
ಆತ್ಮೀಯ ಭಟ್ಟರೇ, ಹವ್ಯಕರಲ್ಲಿ ಎರಡು ಗುಂಪಾಗಿರುವುದೂ ಮತ್ತು ನೀವು ಬಾಲನ್ನು ಸ್ವಾಮಿಗಳ ಮೇಲೆ ಎಸೆಯಲು ಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಚಾನಕ್ಕಾಗಿ ಒಬ್ಬ ಗಂಡು ಒಂದು ಹೆಣ್ಣನ್ನು ಆಕೆಯ ಅಸಹಾಯಕತೆಯನ್ನು ಬಳಸಿ ತನ್ನ ಲೈಂಗಿಕ ಸುಖಕ್ಕಾಗಿ ಆಕೆಯ ಇಚ್ಚೆಯ ವಿರುದ್ದ ಬಳಸಿಕೊಳ್ಳುವುದು ಅತ್ಯಾಚಾರ ಎಂದು ನನ್ನ ನಂಬಿಕೆ. ಒಂದು ಹೆಣ್ಣು ಹಲವಾರು ವರ್ಷಗಳ ಕಾಲ ಹಲವು ಹತ್ತು ಬಾರಿ ಅದೇ ಗಂಡಿನ ಬಳಿ ಮತ್ತೆ ಮತ್ತೆ ಹೋಗಿ ಆತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುಗುವುದು ಹೇಗೆ ಅತ್ಯಾಚಾರ ಆಗುತ್ತದೆ?/ ಅದು ಇಲ್ಲಾ ಸಾಂಸಾರಿಕ ಬಂಧನ ಆಗಿರಬೇಕು ಇಲ್ಲವೇ ಲೈಂಗಿಕ ವ್ಯಾಪಾರ ಆಗಿರಬೇಕು.
ಇಲ್ಲಿ ನಾನು ಸ್ವಾಮಿಗಳು ನಿರಪರಾಧಿ ಎಂದು ವಾದಿಸುತ್ತಿಲ್ಲಾ ಅದು ನನ್ನ ಕೆಲಸವೂ ಅಲ್ಲಾ ನನ್ನ ಉದ್ದಿಶ್ಯವೂ ಅಲ್ಲಾ ಒಂದು ಗೌರವಾನ್ವಿತ ಪಪಂಪರೆಗೆ ಸೇರಿದ ಮಠದ ಗುರುವಾಗಿ ಅವರು ಆಕೆಯೊಂದಿಗೆ ಒಪ್ಪಿಗೆಯ ಸಂಭಂದ ಇಟ್ಟುಕೊಂಡರೂ ಸಹಾ ಅದು ತಪ್ಪೇ...
ಆದರೆ ವರ್ಷಗಳ ಕಾಲ ಆತನೊಂದಿಗೆsahakarisida ಆ ಮಹಿಳೆ ಮತ್ತು ತನ್ನ ಹೆಂಡತಿಯ ಬಗ್ಗೆ ತಿಳಿದಿದ್ದರೂ ಸಹಾ ಯಾವುದೋ ದೌರ್ಭಲ್ಯಕ್ಕೆ ಒಳಗಾಗಿ ತಲೆಹಿಡುಕನಂತೆ ವರ್ತಿಸಿದ ಆಕೆಯ ಗಂಡ ಇಬ್ಬರೂ ಸಹಾ ಅಷ್ಟೇ ತಪ್ಪಿತಸ್ತರು ಎಂಬುದನ್ನು ಮರೆಯಬೇಡಿ.
Post a Comment