ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ.. ಈಗಾಗಲೇ ನೂರು ದಿನ ಪೂರೈಸಿದೆ..ಈ ನೂರು ದಿನಗಳಲ್ಲಿ ಈ ಯಾತ್ರೆಯ ಫಲಶ್ರುತಿ ಏನು ಎಂಬುದನ್ನು ಚರ್ಚಿಸಬೇಕಾದ ಸಮಯ,, ಇವತ್ತು ಯಾತ್ರೆ ರಾಷ್ಟ್ರದ ರಾಜಧಾನಿ ದೇಹಲಿಯನ್ನು ಪ್ರವೇಶಿಸಿತು.. ದೆಹಲಿಯ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು,,
ಈ ತಿಂಗಳ ೧೬ ರಂದು ೧೦೦ ದಿನ ಪೂರೈಸಿದ ಈ ಯಾತ್ರೆಗೆ ಒಂದು ವಾರದ ಬಿಡುವು.. ದೆಹಲಿಯಿಂದ ಜನವರಿ ಮೂರರಿಂದ ಹೊರಡುವ ಯಾತ್ರೆಯ ಲಕ್ಷ್ಯ ಜಮ್ಮು ಮತ್ತು ಕಾಶ್ಮೀರದ ಕಡೆಗೆ...
ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಹೊರಟ ಯಾತ್ರೆ..ಆಗ ಪ್ರಾಯಶಃ ಇದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತದೆ ಎಂದು ಬಹಳಷ್ಟು ಜನ ಅಂದುಕೊಂಡಿರಲಿಲ್ಲ... ಕೆಲವು ದಿನ ಯಾತ್ರೆ ಮಾಡಿ ಕೈಬಿಡಬಹುದು ಎಂದು ಬಿಜೆಪಿಯ ಪ್ರಮುಖರು ಅಂದುಕೊಂಡಿದ್ದಹೀರು.. ಯಾಕೆಂದರೆ ಆಗಲೇ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ನಾಶಪಡಿಸಿಯಾಗಿತ್ತು.. ಪಪ್ಪು ರಜಾಕಾಲದ ರಾಜಕಾರಣಿ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಿ ಬಿಜೆಪಿ ಯಶಸ್ವಿಯೂ ಆಗಿತ್ತು. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಿಯಾಯಿತು ಎಂಬ ಭ್ರಮೆಯಲ್ಲಿದ್ದರು. ಆದರೆ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆ ಬಿಜೆಪಿಯ ಭ್ರಮೆಯನ್ನು ಕಳಚುವ ಕೆಲಸವನ್ನು ಮಾಡತೊಡಗಿತ್ತು..
ಯಾತ್ರೆ ತಮಿಳು ನಾಡಿನಿಂದ ಕೇರಳಕ್ಕೆ ಬಂದಾಗ ಆಯ್ಯೋ ಅದು ಕಮ್ಯುನಿಸ್ಟರ ಆಡಳಿತವಿರುವ ರಾಜ್ಯ ಜನ ಬೆಂಬಲ ದೊರಕಿದ್ದರಲ್ಲಿ ಆಶ್ಚರ್ಯವಿಲ್ಲ ಎಂಬು ಬಿಜೆಪಿ ಬೆಂಬಲಿಗರು ಹೇಳತೊಡಗಿದ್ದರು.. ಯಾತ್ರೆ ತಮಿಳು ನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕ್ಕೆ ಬಂದಾಗ ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲೂ ಜನ ಬೆಂಬಲ ದೊರಕಿತು.. ದಕ್ಷಿಣ ರಾಜ್ಯಗಳನ್ನು ಪೂರೈಸಿ ಮಹಾರಾಷ್ಟ್ರವನ್ನು ಪ್ರವೇಶಿಸುವ ಹೊತ್ತಿಗೆ ಒಂದು ಅಂಶ ಸ್ಪಷ್ಟವಾಗಿತ್ತು..ಈ ಯಾತ್ರೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಆದರೆ ಜನ ಬೆಂಬಲ ಮಾತ್ರ ಈ ಯಾತ್ರೆ ಯಶಸ್ವಿ ಎಂದು ಪರಿಗಣಿಸುವಂತೆ ಮಾಡಿರಲಿಲ್ಲ.. ಅದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ತಾವೊಬ್ಬ ಪ್ರಬುದ್ಧ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿ ಬಿಟ್ಟಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಾವರು ಕ್ಷುಲ್ಲಕ ರಾಜಕೀಯ ಭಾಷಣವನ್ನು ಮಾಡಲಿಲ್ಲ. ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾರಣಕ್ಕಾಗಿ ಟೀಕಿಸಲಿಲ್ಲ..ಅವರು ದೇಶದ ಮುಂದೆ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಎಜೆಂಡಾವನ್ನು ದೇಶದ ಜನರ ಮುಂದಿಟ್ಟರು.. ಈ ದೇಶದಲ್ಲಿ ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕೋ ಆ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದರು..
ನಿರುದ್ಯೋಗ ಬೆಲೆ ಏರಿಕೆ, ಧರ್ಮ ರಾಜಕಾರಣದ ಅಪಾಯ, ಇವತ್ತಿನ ಯುವಕರು, ರೈತರು, ಸಣ್ಣ ಪುಟ್ಟ ಉದ್ಯಮಿಗಳು ಎದುರಿಸುತ್ತಿರುವ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸತೊಡಗಿದರು.. ಯುವಕರು ಮಕ್ಕಳ ಜೊತೆ ಸಾಮಾನ್ಯರಂತೆ ಬೆರತರು,ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವಿಚಾರಗಳ ಬಗ್ಗೆ ಚರ್ಚೆಯೇ ನಿಂತು ಹೋಗಿತ್ತು. ಪಾಕಿಸ್ಥಾನ, ಭಯೋತ್ಪಾದನೆ, ಬುರ್ಖ್ಝಾ, ಮುಸ್ಲೀಂ ವ್ಯಾಪಾರ ನಿಷೇಧ ಇಂತಹ ವಿಚಾರಗಳನ್ನು ಬಿಟ್ಟು ಬೇರೇ ಮಾತೇ ಇರಲಿಲ್ಲ..ಹೀಗಾಗಿ ರಾಹುಲ್ ಅವರ ಮಾತುಗಳು ಹೊಸದಾಗಿದ್ದವು.. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹೊಸ ಅನುಭವ ನೀಡತೊಡಗಿತ್ತು.
ಈ ಯಾತ್ರೆ ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು.. ರಾಹುಲ್ ಎಂಬ ನೆಹರೂ ಕುಟುಂಬದ ಕುಡಿ ನಿಜ ಭಾರತವನ್ನು ಅರ್ಥ ಮಾಡಿಕೊಳ್ಳತೊಡಗಿದ್ದರು.. ಹಾಗೆ ಪಪ್ಪು ಎಂಬ ಇಮೇಜ್ ನಲ್ಲಿದ್ದ ರಾಹುಲ್ ಅವರನ್ನು ಈ ದೇಶದ ಜನ ಸಾಮಾನ್ಯರೂ ಅರ್ಥ ಮಾಡಿಕೊಳ್ಳತೊಡಗಿದ್ದರು.. ನಾವು ಅಂದುಕೊಂಡಂತೆ ರಾಹುಲ್ ಪಪ್ಪು ಅಲ್ಲ ಎಂದು ಜನರು ಅಂದುಕೊಳ್ಳತೊಡಗಿದ್ದರು. ರಾಹುಲ್ ಸಾಮಾನ್ಯ ಜನರಿಗೆ ಹತ್ತಿರವಾಗತೊಡಗಿದ್ದರು.
ಈ ಯಾತ್ರೆ ದೆಹಲಿ ಪ್ರವೇಶಿಸುವ ಸಮಯ ಬಂದಾಗ ಬಿಜೆಪಿಗೆ ನಿಜವಾಗಿ ಭಯ ಪ್ರಾರಂಭವಾಗಿತ್ತು.. ಹೀಗೆ ಮುಂದುವರಿದರೆ ಇದು ಬಿಜೆಪಿಯ ಯಶಸ್ಸಿನ ನಾಗಾಲೋಟಕ್ಕೆ ತಡೆ ಉಂಟಾಗಬಹುದು ಎಂಬ ಆತಂಕ.. ಅಷ್ಟ್ರರಲ್ಲಿ ಅವರ ಸಹಾಯಕ್ಕೆ ಬಂದಿದ್ದು ವಿಶ್ವದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಕೊರೋನಾದ ಬಿಎಫ್ ೭ ತಳಿ..
ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಡಿಸೆಂಬರ್ ೨೨ ರಂದು ರಾಹುಲ್ ಗಾಂಧಿ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರಿಗೆ ಪತ್ರವೊಂದನ್ನು ಬರೆದರು. ಕೊರೋನಾ ಮಾರ್ಗದರ್ಶಿ ಸೂತ್ರವನ್ನು ಪಾಲಿಸಿ ಇಲ್ಲವೇ ಯಾತ್ರೆಯನ್ನು ನಿಲ್ಲಿಸಿಬಿಡಿ ಎಂದರು . ಆದರೆ ಕಾಂಗ್ರೆಸ್ ಗೆ ಈ ಪತ್ರ ಬರೆದ ಸಚಿವರು ಸದಾ ಯಾತ್ರೆಗಳನ್ನು ನಡೆಸುತ್ತಲೇ ಇರುವ ಬಿಜೆಪಿಗೆ ಯಾವ ಸೂಚನೆಯನ್ನೂ ನೀಡಲಿಲ್ಲ... ಜೊತೆಗೆ ಕೊರೋನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಎಂಬ ಸೂಚನೆ ನೀಡುವ ಅಧಿಕಾರ ಅವರಿಗಿದೆ..ಆದರೆ ಯಾತ್ರೆಯನ್ನು ನಿಲ್ಲಿಸಿ ಎಂಬ ಸೂಚನೆಯನ್ನು ನೀಡುವ ಅಧಿಕಾರ ಆರೋಗ್ಯ ಸಚಿವರಿಗೆ ಇದೆಯೆ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ..
ಏನೇ ಇರಲಿ ಸಚಿವರ ಈ ಸೂಚನೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸರ್ಕಾರ ಭಾರತ್ ಜೋಡೋ ಯಾತ್ರೆಯಿಂದ ಭಯಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ..
ರಾಹುಲ್ ಗಾಂಧಿ ಅವರ ಈ ನೂರು ದಿನಗಳ ಪೂರೈಸಿದ ಯಾತ್ರೆಯಲ್ಲಿ ಅವರು ಆಡಿದ ಒಂದು ಮಾತು ಬಹಳ ಮುಖ್ಯವಾದುದು..
ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಈ ಮಾತು ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಬಹಳ ಮುಖ್ಯವಾದುದು ಎಂದು ನನಗೆ ಅನ್ನಿಸುತ್ತದೆ..ಇವತ್ತು ದ್ವೇಷದ ಮಾರುಕಟ್ಟೆ ತುಂಬಾ ಪ್ರಬಲವಾಗಿದೆ.. ಈ ದ್ವೇಷ ವಿಶ್ವರೂಪ ತಾಳಿ ಭಾರತವನ್ನು ಆಕ್ರಮಿಸಿದೆ. ಭಾರತದ ರಾಜಕಾರಣವನ್ನು ತನ್ನ ವಶ ಮಾಡಿಕೊಂಡಿದೆ..ಪ್ರತಿ ದಿನ ರಾಜಕಾರಣಿಗಳು ವಿಷ ಬೀಜ ಬಿತ್ತ ಅಧಿಕಾರದ ಬೆಳೆ ತೆಗೆಯುತ್ತಿದ್ದಾರೆ..ಬಹುಸಂಖ್ಯಾತರು, ಅಲ್ಪ ಸಂಖ್ಯಾತರಲ್ಲಿ ಭಯವನ್ನು ಹರಡಲಾಗುತ್ತಿದೆ..ದೇಶ ಪ್ರೇಮ ಮತ್ತು ದೇಶದ್ರೋಹದ ವ್ಯಾಖ್ಯೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ,,
ಇಂತಹ ಸಂದರ್ಭದಲ್ಲಿ ಇರುವುದೆಂದರೆ ಪ್ರೀತಿಯ ಅಂಗಡಿಯನ್ನು ತೆರೆಯುವುದೇ ಆಗಿದೆ,, ದ್ವೇಷದ ಮಾರುಕಟ್ಟೆ ತೆರೆದವರು ಈ ಬಗ್ಗೆ ಯೋಚಿಸಲಿ.. ಭಾರತೀಯರೆಲ್ಲ ಪ್ರೀತಿಯ ಅಂಗಡಿ ತೆರೆಯಲು ಮುಂದಾಗಲಿ
No comments:
Post a Comment