ಹಾವೇರಿಯ ಸರ್ಕಾರಿ ಕೄಪಾಪೋಷಿತ ಸಾಹಿತ್ಯ ಸಮ್ಮೇಳನ ಮತ್ತು ಬೆಂಗಳೂರಿನ ಪ್ರತಿರೋಧದ ಸಾಹಿತ್ಯ ಸಮ್ಮೇಳನ ಎರಡೂ ಮುಗಿದಿವೆ. ಈ ಎರಡೂ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡವರು ಹಿಂತಿರುಗಿದ್ದಾರೆ. ಈ ಸಾಹಿತ್ಯ ಸಮ್ಮೇಳನಗಳಿಂದ ತಮಗೆ ದಕ್ಕಿದ್ದೆಷ್ಟು ಎಂದು ಕೆಲವರಾದರೂ ಯೋಚಿಸುತ್ತಿರಬಹುದುದು. ಕೆಲವರಿಗೆ ಸಾಹಿತ್ಯ ಸಂಭ್ರಮದ ನೆನಪುಗಳು ಉಳಿದಿರಬಹುದು.. ಈ ಎರಡೂ ಸಮ್ಮೇಳನಗಳಲ್ಲಿ ಪಾಲ್ಗೊಂಡವರು ಇನ್ನೊಂದು ಸಾಹಿತ್ಯ ಸಮ್ಮೇಳನ ಬರುವವರೆಗೆ ತಮ್ಮ ಬದುಕಿನ ಝಂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಕೇಂದ್ರ ಸರ್ಕಾರ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಣ್ಣನವರ ಬಗ್ಗ್ರ್ ಯೋಚಿಸುತ್ತ ತಮ್ಮ ಬದುಕಿನ ಕಷ್ಟ ಕೋಟಲೆಗಳನ್ನು ಮರೆತು ಬದುಕಬಹುದು..
ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚಿಸಿದವರು ಭಾಷಣ ಕುಟ್ಟಿದವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಸ್ನೇಹಿತರಿಗೆ ತೋರಿಸಿ ಸಂತೋಷ ಪಡುತ್ತಿರಬಹುದು. ಇಷ್ಟಕ್ಕೆ ಎಲ್ಲವೂ ಮುಗಿದು ಹೋಯಿತೆ ? ಮುಂದೇನು ? ಈ ಪ್ರಶ್ನೆ ಬಹಳಷ್ಟು ಜನರಿಗೆ ಕಾಡಿರಲಿಕ್ಕಿಲ್ಲ. ಕಾಡುವುದೂ ಇಲ್ಲ.. ಯಾಕೆಂದರೆ ಇಂದಿನ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪವನ್ನು ಪಡೆದು ಬಿಟ್ಟಿವೆ.. ಜಾತ್ರೆಗೆ ನಾನು ಹೋಗಿ ಬಂದ ಎಂಬ ಸಂತೋಷ ಮುಂದಿನ ಜಾತ್ರೆ ಬರುವವರೆಗೆ ಇರುತ್ತದೆ.ಆದರೆ ಸಾಹಿತ್ಯ ಸಮ್ಮೇಳನಗಳ ಉದ್ದೇಶವೇನು ? ಈ ಸಾಹಿತ್ಯ ಸಮ್ಮೇಳನ ಸಾಹಿತ್ಯಿಕ ಉದ್ದೇಶಗಳನ್ನು ಎಷ್ಟ್ರರ ಮಟ್ಟಿಗೆ ಈಡೇರಿಸಿದೆ ಎಂಬುದು ಬಹು ಮುಖ್ಯವಾದ ಪ್ರಶ್ನೆ.. ಆದರೆ ಈ ಪ್ರಶ್ನೆಗಳು ಯಾರಿಗೂ ಮುಖ್ಯವಾಗಿಲ್ಲ.. ಇದಕ್ಕೆ ಬಹುಮುಖ್ಯವಾದ ಕಾರಣ ಈ ಸಮ್ಮೇಳನಗಳು ಸಂಪೂರ್ಣವಾಗಿ ಜಾತ್ರೆಯಾಗಿ ಬದಲಾಗಿದ್ದೇ ಆಗಿದೆ,,
ಯಾಕೆಂದರೆ ಜಾತ್ರೆಯ ಗುಣಧರ್ಮ ಮತ್ತು ಉದ್ದೇಶವೇ ಬೇರೆ. ಜಾತ್ರೆಗಳ ಕೇಂದ್ರ ಬಿಂದು ದೇವರೇ ಆಗಿದ್ದರೂ ದೇವರು ಕೇವಲ ಮೆರವಣಿಗೆಗೆ ಸೀಮಿತವಾಗಿರುತ್ತಾನೆ. ಜಾತ್ರೆಗೆ ಬಂದವರು ದೇವರಾ ದರ್ಶನ ಮಾಡಿದರೂ ಅವರನ್ನು ಜಾತ್ರೆಗೆ ಸೆಳೆಯುವುದು ಅಲ್ಲಿನ ಸಂಭ್ರಮ.. ಜನರ ನಡುವೆ ಬೆರೆಯುತ್ತ ಬೆಂಡು ಬತ್ತಸು ಖರೀದಿಸಿ ಸಂಭ್ರಮಿಸುವುದೇ ಆಗಿರುತ್ತದೆ, ಇಂತಹ ಸಂಭ್ರಮ ಬಂದ ಭಕ್ತರಿಗೆ ಮನೋಲ್ಲಾಸವನ್ನು ನೀಡುತ್ತದೆ. ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಬೇಕಾದ್ದನ್ನುಕೊಡಿಸುವುದು ದೇವರ ದರ್ಶನಕ್ಕಿಂತ ಬಹುತೇಕ ಸಂದರ್ಭದಲ್ಲಿ ಮುಖ್ಯವಾಗಿರುತ್ತದೆ..ಹೀಗಾಗಿ ಅಲ್ಲಿ ದೇವರು ಅಮುಖ್ಯವಾಗೃತ್ತಾನೆ
ಈಗ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಸಮ್ಮೇಳನಗಳು ಇದೇ ಸ್ಥಿತಿಗೆ ಬಂದು ತಲುಪಿವೆ. ಸಾಹಿತ್ಯ ಸಮ್ಮೇಳನ ಎಂಬ ಜಾತ್ರೆಯಲ್ಲಿ ಸಾಹಿತ್ಯ ಸಂಸ್ಕೃತಿಯೇ ದೇವರು.. ಇಲ್ಲಿ ದೇವರ ದರ್ಶನ ಮತ್ತು ಆರಾಧನೆ ನಡೆಯಬೇಕು. ಹಾಗೆ ದೇವರನ್ನು ತರ್ಕಕ್ಕೆ ಬಗ್ಗಿಸಬೇಕು.. ದೇವರ ಜೊತೆ ಮುಖಾಮುಖಿಯಾಗಿ ಅವನನ್ನು ಆರಾಧಿಸುತ್ತಲೇ ಅವನ ತಪ್ಪು ಒಪ್ಪುಗಳ ಬಗ್ಗೆಯೂ ಪ್ರಶ್ನಿಸಬೇಕು.. ಹೀಗೆ ದೇವರನ್ನು ಪ್ರಶ್ನಿಸುವುದು ನಮ್ಮ ನಂಬಿಕೆಯ ಜಗತ್ತಿನಲ್ಲಿ ಬಹುಮುಖ್ಯವಾದ ಅಂಶವೂ ಆಗಿದೆ.. ನಮ್ಮ ಜನಪದ ದೇವರುಗಳು ಮತ್ತು ಶಕ್ತಿ ದೇವತೆಗಳ ಆರಾಧನೆಯಲ್ಲಿ ದೇವರ ಜೊತೆ ಜಗಳವಾಡುವ ಪರಂಪರೆಯೂ ಇದೆ.. ಆದರೆ ನಮ್ಮ ಸಾಹಿತ್ಯ ಸಮ್ಮೇಳನವೆಂಬ ಆರಾಧನೆಯಲ್ಲಿ ಈ ಆಂಶಗಳು ಮಾಯವಾಗಿವೆ. ಅಲ್ಲಿ ಏನನ್ನೂ ಪ್ರಶ್ನಿಸುವಂತಿಲ್ಲ. ಅಧಿಕಾರಸ್ಥರಿಗೆ ವೇದಿಕೆಯ ಮೇಲೆ ಸ್ಥಾನ ಕಲ್ಸಿಸಿ ಅವರನ್ನೇ ದೇವರೆಂದು ಪೂಜೆ ಮಾಡಲಾಗುತ್ತಿದೆ.. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಆದದ್ದೂ ಇದೇ. ಈ ಸಮ್ಮೇಳನದಲ್ಲಿ ಸಾಹಿತಿಗಳು, ಸಾಮಾಜಿಕ ಚಿಂತಕರು, ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವವರಿಗಿಂತ ಹೆಚ್ಚಾಗಿ ರಾಜಕಾರಣಿಗಳೆ ಮಿಂಚಿದರು.. ಸಮ್ಮೇಳನದ ಉಧ್ಘಾಟನಾ ಸಮಾರಂಭದಲ್ಲಿ, ಸಮಾರೋಪ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆಗಳಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರುಗಳೇ ಹೆಚ್ಚಾಗಿದ್ದವು. ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಅಧಿಕಾರಸ್ಥರು ಎಲ್ಲೆಡೆ ವಿಜೃಂಭಿಸುತ್ತಿದ್ದರು.. ಸಾಹಿತ್ಯ ಪರಿಷತ್ತು ಋಣ ಸಂದಾಯ ಮಾಡುವ ತರಾತುರಿಯಲ್ಲಿ ಇದ್ದಂತೆ ಕಾಣುತ್ತಿತ್ತು. ಹಾಗೆ ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲಿ ಪಾಲ್ಗೊಂಡ ಸಾಹಿತಿಗಳು ಕವಿಗಳು ಬರಹಗಾರರು ಸಾಹಿತ್ಯದ ಸ್ವಾಯತ್ತತೆಯನ್ನು ಸರ್ಕಾರಕ್ಕೆ ಅಡವಿಟ್ಟ ಬಗ್ಗೆ ಧ್ವನಿ ಎತ್ತಲಿಲ್ಲ.. ಅಲ್ಲಿ ವಿಜೃಂಭಿಸುತ್ತಿದ್ದುದೇ ಭಟ್ಟಂಗಿತನ..
ಹಾವೇರಿ ಸಾಹಿತ್ಯ ಸಮ್ಮೇಳನ ಒಂದು ಸುತ್ತು ಮುಗಿಸಿದೆ ಎಂದು ನನಗೆ ಅನ್ನಿಸುತ್ತಿದೆ.. ೧೯೧೫ ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ಅಂಗಳವಾಗಿ ಪರಿವರ್ತಿತವಾಗಿದೆ. ಸಾಹಿತ್ಯ ಸಂಸ್ಕೃತಿ ಎನ್ನುವುದು ರಾಜಕೀಯ ಪಕ್ಷ ಒಂದರ ಪ್ರಚಾರದ ಅಂಗಳವಾಗಿ ಬದಲಾಗಿದೆ.. ಬಲಪಂಥೀಯರ ರಾಜಕೀಯ ಅಜೆಂಡಾದ ಭಾಗವಾಗಿದೆ. ೨೦೧೪ ರ ನಂತರ ದೇಶಭಕ್ತಿ ಮತ್ತಿ ದೇಶೀಯತೆಯ ವಿಕೃತ ರೂಪ ದೇಶದ ಎಲ್ಲೆಡೆ ತಾಂಡವವಾಡತೊಡಗಿದ್ದು ನಮಗೆಲ್ಲ ಗೊತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಸಾಹಿತ್ಯ, ಸಂಸ್ಕೃತಿ ಸಿನಿಮಾ ಎನ್ನುವ ಸೃಜನಶೀಲ ಅಬಿವ್ಯಕ್ತಿ ಮಾಧ್ಯಮಗಳನ್ನು ಬಳಸಿಕೊಳ್ಳುವುದು ತೀವ್ರ ರೂಪದಲ್ಲಿ ಪ್ರಾರಂಭವಾಯಿತು. ಇದರ ಭಾಗವಾಗಿಯೇ ಪುಣಾ ಫೀಲ್ಮ್ ಇನ್ ಸ್ಟೀಟ್ಯೂಟ್, ಮೈಸೂರಿನ ರಂಗಾಯಣದಂತಹ ಸಂಸ್ಥೆಗಳಲ್ಲಿ ಉಗ್ರಗಾಮಿ ಬಲಪಂಥೀಯರನ್ನು ಕೂಡ್ರಿಸಲಾಯಿತು. ಇವರೆಲ್ಲ ಇತಿಹಾಸವನ್ನು ತಿರುಚುತ್ತ, ಮುಸ್ಲೀಮ್ ವಿರೋಧಿ ಕೋಮು ಭಾವನೆಯನ್ನು ಪ್ರಸಾರ ಮಾಡುವ ಕೆಲಸದಲ್ಲಿ ನಿರತರಾದರು.. ಕಾಶ್ಮೀರೀ ಫೈಲ್ಸ್ ನಂತಹ ನಿನಿಮಾಗಳು ಬಂದವು. ಈ ಪ್ರಕ್ರಿಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಮಹೇಶ್ ಜೋಶಿ ಅವರ ರೂಪದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಟೇಕ್ ಓವರ್ ಮಾಡಿತು. ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊ<ಂಡ ಬಿಜೆಪಿ ಮಹೇಶ್ ಜೋಶಿಯವರನ್ನು ಗೆಲ್ಲಿಸಿತು. ಇದರೊಂದಿಗೆ ಸಾಹಿತ್ಯ ಪರಿಷತ್ ಬಲಪಂಥೀಯ ಹಿಂದೂವಾದಿಗಳ ಅಂಗಳವಾಗಿ ಬದಲಾಗಿ ಹೋಯಿತು.
ಇದಾದ ಮೇಲೆ ಬಂದಿದ್ದು ಹಾವೇರಿ ಸಾಹಿತ್ಯ ಸಮ್ಮೇಳನ. ಇಲ್ಲಿ ಅಲ್ಪಸಂಖ್ಯಾತರನ್ನು ದಮಿನಿತರನ್ನು ನಿರ್ಲಕ್ಶಿದ್ದು ಬಲಪಂಥೀಯ ಅಜೆಂಡಾದ ಭಾಗವೇ. ಇದರಿಂದ ಆಶ್ಚರ್ಯ ಪಡಬೇಕಾಗಿಲ್ಲ. ಇದು ನಿರೀಕ್ಢಿತವೇ. ಒಂದೊಮ್ಮ ಬಿಜೆಪಿ ನಿಯಂತ್ರಣದಲ್ಲಿರುವ ಮಹೇಶ್ ಜೋಷಿ ಯವರ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೀಗು ಸಮಾನ ಅವಕಾಶ ನೀಡಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಿತ್ತು,
ಇಂತಹ ಮನಸ್ಥಿತಿಯನ್ನು ವಿರೋಢಿಸುವ ಉದ್ದೇಶದಿಂದ ನಡೆದಿದ್ದು ಪ್ರತಿರೋಧ ಸಮಾವೇಶ. ಬೆಂಗಳೂರಿನಲ್ಲಿ ನಡೆದ ಈ ಸಮ್ಮೇಳನವನ್ನು ಸ್ವಾಗತಿಸಬೇಕಾಗಿದೆ. ಯಾಕೆಂದರೆ ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಮತ್ತು ಪ್ರತಿರೋಧ ಬಹುಮುಖ್ಯ, ಇದು ಜನತಂತ್ರವನ್ನು ಜೀವಂತವಾಗಿಡುತ್ತದೆ. ಆದರೆ ಈ ಪ್ರತಿರೋಧ ವ್ಯಕ್ತವಾಗಿದ್ದು ಸ್ವಲ್ಪ ತಡವಾಯಿತು ಎಂದು ನನಗೆ ಅನ್ನಿಸುತ್ತದೆ. ಸಾಹಿತ್ಯ ಪರಿಷತ್ತನ್ನು ಬಿಜೆಪಿ ಟೇಕ್ ಓವರ್ ಮಾಡಿದಾಗಲೇ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗಿತ್ತು.. ಇದಕ್ಕಾಗಿ ಪೆಂಡಾಲ್ ಘಟನೆಯ ವರೆಗೆ ಕಾಯಬೇಕಾಗಿರಲಿಲ್ಲ. ಸಾಹಿತ್ಯ ಪರಿಷತ್ತು ನಿಜ ಅರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಾಗಿ ಇರದೇ ನಾಗಪುರ ಪರಿಷತ್ತಾಗಿ ಬದಲಾಗುತ್ತಿದ್ದಾಲೇ ಪ್ರತಿರೋಧ ಹೊರಬರಬೇಕಾಗಿತ್ತು ಎಂದು ನಂಬಿದವನು ನಾನು.
ಪ್ರತಿರೋಧ ಕೇವಲ ಒಂದು ಘಟನೆಗೆ ಸೀಮಿತವಾಗಿದ್ದರೆ ಸಾಕೆ ? ಸಾಹಿತ್ಯ ಪರಿಷತ್ ಅನ್ನು ಮತ್ತೆ ಎಲ್ಲ ಕನ್ನಡಿಗರ ಪರಿಷತ್ ಆಗಿ ಬದಲಿಸಬೇಕಾದ ಸಂದರ್ಭದಲ್ಲಿ ಮೂಲ ಉದ್ದೇಶ ಇದೇ ಆಗಿರಬೇಕಲ್ಲವೆ ? ಸಾಹಿತ್ಯ ಪರಿಷತ್ ಅನ್ನು ಈಗ ಜೋಷಿ ಪತ್ತು ಬಿಜೆಪಿಯಿಂದ ಮುಕ್ತಗೊಳಿಸಬೇಕಾಗಿದೆ. ಅದು ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗಾಗಿ ನಡಿಯಬೇಕಾದ ಹೋರಾಟ ಮತ್ತು ಪ್ರತಿರೋಧ. ಇದು ಎಲ್ಲ ಕನ್ನಡಿಗರೂ ಜೊತೆಯಾಗಿ ನಡೆಸಬೇಕಾದ ಹೋರಾಟ. ಇಲ್ಲದಿದ್ದರೆ ಕನ್ನಡ ಸಾಹಿತ್ಯಪರಿಷತ್ತಿಗೆ ನಾಗಪುರದ ಅಂಗ ಸಂಸ್ಥೆಯಂತೆ ಕೆಲಸ ಮಾಡುವುದು ಮುಂದುವರಿಯುತ್ತದೆ. ಸಾಹಿತ್ಯ ಪರಿಷತ್ತಿನ ಮುಕ್ತಿಯೇ ಈಗ ಬಹುದೊಡ್ಡ ಸವಾಲು.. ಅದಕ್ಕಾಗಿ ಪ್ರತಿರೋಧ ತಣ್ಣಗಾಗದಂತೆ ನೋಡಿಕೊಳ್ಳಬೇಕು. ಅದಕ್ಕೊಂದು ದೀರ್ಘಕಾಲೀನ ಕಾರ್ಯ ಸೂಚಿ ಬೇಕು,,
ಈಗ ಮಂಡ್ಯದಲ್ಲಿ ಮುಂದಿನ ಸಮ್ಮೇಳನ ನಡೆಯುವುದಾಗಿ ಪ್ರಕಟಿಸಲಾಗಿದೆ.. ಈ ಸಮ್ಮೇಳನ ಕೂಡ ಹಾವೇರಿ ಸಮ್ಮೇಳನದಂತೆ ನಡೆಯುತ್ತದೆ. ಇದಕ್ಕೂ ಪ್ರತಿರೋಧ ಸಮ್ಮೇಳನ ನಡೆಯಬಹುದು.. ಆದರೆ ನಾವೂ ಈಗ ಕೇಳಬೇಕಾದ ಪ್ರಶ್ನೆ ಎಂದರೆ ಸಾಹಿತ್ಯ ಪರಿಷತ್ತಿಗೆ ಮುಕ್ತಿ ಯಾವಾಗ ?
No comments:
Post a Comment