Friday, January 6, 2023

ಬಿಜೆಪಿಯ ಹಿಂದುತ್ವ ಕಾರ್ಡ್; ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಕಾರ್ಡ್, ಜೆಡಿಎಸ್ ನ ಒಕ್ಕಲಿಗ ಕಾರ್ಡ್; ಕನ್ನಡಿಗರ ಒಲವು ಯಾರ ಕಡೆಗೆ ?

CONGRESS HOPE
REAL PLYER
WEEKEST CM


ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನು ಮೂರು ತಿಂಗಳುಗಳು ಉಳಿದಿವೆ. ರಾಜ್ಯದ ಮೂರು ರಾಜಕೀಯ ಪಕ್ಷಗಳು ಜನರನ್ನು ಎದುರಿಸಲು ಸಿದ್ದವಾಗುತ್ತಿವೆ..ಜಾಥಾಗಳು ಸಭೆಗಳು ಸಮಾರಂಭಗಳು ನಡೆಯುತ್ತಿವೆ.. ನಾಯಕರುಗಳು ಮಾತಿನ ಮಂಟಪ ಕಟ್ಟುತ್ತಿವೆ. ಜನರ ಮನೆ ಬಾಗಿಲು ತಟ್ಟಿತ್ತಿವೆ..ಕರ್ನಾಟಕದ ಜನತೆ ಯಾವ ಪಕ್ಷದತ್ತ ಒಲವು ತೋರಿಸಬಹುದು ? ಯಾರನ್ನು ವಿಧಾನಸೌಧದ ಗದ್ದುಗೆಗೆ ಏರಿಸಬಹುದು ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಎಲ್ಲ ಪಕ್ಷಗಳೂ ತಮ್ಮದೇ ಅದ ಸಮೀಕ್ಶೆಗಳ ಮೊರೆಹೋಗಿವೆ.. ಲಕ್ಶಾಂತರ ರೂಪಾಯಿ ವೆಚ್ಚ ಮಾಡಿ ವರದಿ ಪಡೆದುಕೊಂಡಿವೆ.. ತಾವು ದುರ್ಬಲವಾದ ಕ್ಷೇತ್ರಗಳಲ್ಲಿ ಬಲಗೊಳ್ಳಲು ಬೇಕಾದ ಕಾರ್ಯತಂತ್ರವನ್ನು ಹೆಣೆಯುತ್ತಿವೆ.. ಆದರೆ ಇಂತಹ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಎದೇ ತಟ್ಟಿ ಹೇಳುವ ಪರಿಸ್ಥಿತಿ ಈಗಿಲ್ಲ..

ಭಾರತೀಯ ಜನತಾ ಪಕ್ಷಕ್ಕೆ ಇದು ಅತೀ ಮಹತ್ವದ ಚುನಾವಣೆ ಇದಾಗಿದೆ. ಈ ವರ್ಷದಲ್ಲಿ ದೇಶದ ೫ ರಾಜ್ಯಗಳಲ್ಲಿ ಚಿನಾವಣೆ ನಡೆಯುತ್ತಿದೆ.. ಈ ಐದ್ಉ ರಾಜ್ಯಗಳಲ್ಲಿ ಮಧ್ಯಪ್ರದೇಶ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅಧಿಕಾರ ನಡೆಸುತ್ತಿದ್ದಾರೆ.  ರಾಜಸ್ಥಾನ ಮತ್ತು ಚತ್ತೀಸಗಡದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಹಾಗೆ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದರೂ ಅಲ್ಲಿ ಸ್ವಯಂ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಪರೇಶನ್ ಕಮಲದ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅಂದರೆ ಈ ಹಿಂದಿನ ಚುನಾವಣೆಯಲ್ಲಿ ಈ ಐದು ರಾಜ್ಯದ ಜನ ಬಿಜೆಪಿಯನ್ನು ಆರಿಸಿರಲಿಲ್ಲ. ವಾಮ ಮಾರ್ಗದಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿವೆ. ೨೦೨೪ ರ ಲೋಕಸಭಾ ಚುನಾವಣೆಗೆ ಮೊದಲು ನಡೆಯುವ ಈ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿರ್ವಿವಾದ.. ಹೀಗಾಗಿ ಬಿಜೆಪಿ ಈ ಚುನಾವಣೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರವನ್ನು ರಣೋತ್ಸಾಹದಿಂದ ಪ್ರಾರಂಭಿಸಿದೆ.

ಕರ್ನಾಟಕದಲ್ಲಿ ಬಿಜೆಪಿ ಯಾವ ವಿಚಾರವನ್ನು ಮುಂದಿಟ್ಟುಕೊಂಡು ಹೊರಟಿದೆ ? ಇಲ್ಲಿ ಬಿಜೆಲಿಯ ಶಕ್ತಿ ಮತ್ತು ದೌರ್ಬಲ್ಯ ಯಾವುದು ? ಮೊದಲು ಬಿಜೆಪಿಯ ದೌರ್ಬಲ್ಯವನ್ನು ನೋಡೋಣ. ಬೊಮ್ಮಾಯಿ ಸರ್ಕಾರದ ಬಗ್ಗೆ ರಾಜ್ಯದ ಜನರ ಒಳ್ಳೆಯ ಅಭಿಪ್ರಾಯಹೊಂದಿಲ್ಲ. ಬೊಮ್ಮಾಯಿ ಅವರ ದೌರ್ಬಲ್ಯ ಪ್ರದರ್ಶಿತವಾಗುತ್ತಲೇ ಇದೆ.. ಅವರು ಬೆನ್ನೆಲುಬು ಇಲ್ಲದ ನಾಯಕ ಎಂದು ಸಾಮಾನ್ಯ ಜನ ಮಾತನಾಡುತ್ತಿದ್ದಾರೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರನ್ನು ರಿಪ್ಲೇಸ್ ಮಾಡುವ ಶಕ್ತಿಯೂ ಅವರಿಗಿಲ್ಲ. ಹೀಗಾಗಿ ದುರ್ಬಲ ನಾಯಕತ್ವ ಬಿಜೆಪಿಯ ಮೊದಲ ಸಮಸ್ಯೆ.

ಎರಡನೆಯದಾಗಿ ಸರ್ಕಾರದ ಇಮೇಜ್.. ದುರ್ಬಲ ನಾಯಕತ್ವದಿಂದಾಗಿ ಸರ್ಕಾರದ ಇಮೇಜ್ ಹಾಳಾಗಿದೆ. ಈ ಸರ್ಕಾರದ ಮೇಲೆ ಬಂದಿರುವ ೪೦ ಪರ್ಸೇಂಟ್ ಕಮೀಶನ್ ಆರೋಪವನ್ನು ಪರಿಣಾಮಕಾರಿಯಾಗಿ ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈ ಆರೋಪವನ್ನು ಅಲ್ಲಗಳೆಯಲು ಕಾಂಗ್ರೆಸ್ ಮೇಲೆ ಧಾಳಿ ಮಾಡುತ್ತಿರುವ ಬಿಜೆಪಿ ನಾಯಕರು ನಾವು ಕಮಿಷನ್ ತೆಗೆದುಕೊಳ್ಳುತ್ತಿಲ್ಲ ಎಂದು ಪರಿಣಾಮಕಾರಿಯಾಗಿ ಜನರ ಮುಂದೆ ಇಡುವಲ್ಲಿ ವಿಫಲರಾಗಿದ್ದಾರೆ.. ಜೊತೆಗೆ ಕಮೀಶನ್ ಆರೋಪ ಸುಳ್ಳು ಎಂಡು ಬಿಜೆಪಿ ನಾಯಕರು ವಾದ ಮಾಡುತ್ತಿದ್ದರೂ ಸತ್ಯ ಸಾಮಾನ್ಯ ಜನರಿಗೆ ಗೊತ್ತಿದೆ. ರಸ್ತೆ ಬೀದಿಗಳಲ್ಲಿ ಜನ ಮಾತನಾಡುತ್ತಿದ್ದಾರೆ, ಇದು ಬಿಜೆಪಿಯ ಇನ್ನೊಂದು ಸಮಸ್ಯೆ.

ಈ ಕಾರಣಗಳಿಂದ ಬಿಜೆಪಿ ನಾಯಕತ್ವ ತಮ್ಮ ಪ್ರಚಾರ ತಂತ್ರದಲ್ಲಿ ಮತ್ತೆ ಹಿಂದೂ ಮುಸ್ಲೀಂ ವಿಚಾರವನ್ನು ಪ್ರಧಾನವಾಗಿ ಬಳಸುತ್ತಿದೆ. ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿದ ಹೇಳಿಕೆಯನ್ನು ಗಮನಿಸಬಹುದು. ರಸ್ತೆ ಚಿರಂಡಿಯಂತ ಸಣ್ಣ ವಿಚಾರವನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಚಿಸಿ ಎಂದು ಕರೆ ನೀಡಿದ್ದು ಈ ಕಾರ್ಯತಂತ್ರದ ಭಾಗ. ಹಾಗೆ ಕಳೆದ ಎರಡು ಮೂರು ವರ್ಷಗಳಿಂದ ಬಿಜೆಪಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ.. ಹಿಜಾಬ್ ವಿವಾದದಿಂದ ಪ್ರಾರಂಭವಾಗಿ ಮೈಸೂರಿನಲ್ಲಿ ಬಸ್ ಸ್ಟಾಂಡಿನಲ್ಲಿದ್ದ ಗುಂಬಜ್ ಕೆಡುವ ವರೆಗೆ ನಡೆದ ಎಲ್ಲ ಬೆಳವಣಿಗೆಗಳೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸುವ ತಂತ್ರದ ಭಾಗವೇ ಆಗಿದೆ.

ಜನ ಮೂಲಭೂತ ವಿಚಾರದಿಂದ ವಿಮುಖರಾಗುವಂತೆ ನೋಡೀಕೊಳ್ಳುವ ಯತ್ನ ಇದು. ಇದರ ಜೊತೆಗೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಮೀಸಲಾತಿ ವಿಚಾರಕ್ಕೆ ಕೈಹಾಕಿದ್ದು. ಇದು ಎಷ್ಟರ ಮಟ್ಟಿಗೆ ಬಿಜೆಪಿಗೆ ಸಹಕಾರಿಯಾಗುತ್ತದೆ ಎಂದು ಹೇಳುವುದು ಕಷ್ಟ..ಜೊತೆಗೆ ಈ ಮೀಸಲಾತಿಗೆ ಸಂಬಂಧಿಸಿದಂತೆ ಮಾಡಿದ ಬದಲಾವಣೆಗಳನ್ನು ಜಾರಿಗೆ ತರಲು ಕಾನೂನಾತ್ಮಕ ತೊಡಕುಗಳಿವೆ. ಈ ವಿಚಾರವನ್ನು ವಿಸ್ಟ್ರುತವಾಗಿ ಚರ್ಚಿಸಲು ಇಲ್ಲಿ ಸಾಧ್ಯವಿಲ್ಲ.

ಬಿಜೆಪಿಯ ಬಹುಮುಖ್ಯ ಸಮಸ್ಯೆ ಎಂದರೆ ಹಿಂದುತ್ವದ ಕಾರ್ಡ್ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಂತೆ ಮಾರಾಟವಾಗುವುದಿಲ್ಲ. ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಭಿನ್ನವಾದುದು. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳು ಹೆಚ್ಚು ಅಭೀವೃದ್ಧಿಯಾಗಿವೆ. ಇಲ್ಲಿನ ತಲಾ ಆದಾಯ ಉತ್ತರ ಭಾರತಕ್ಕಿಂತ ಹೆಚ್ಚು.. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುವ ವರಮಾನ ಉತ್ತರ ಭಾರತದ ರಾಜ್ಯಗಳಿಗಿಂತೆ ಹೆಚ್ಚು. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡ ದೊಡ್ಡ ಇತಿಹಾಸವೇ ದಕ್ಷಿಣದ ರಾಜ್ಯಗಳಿಗಿವೆ. ಹಾಗೆ ಸಾಕ್ಷರತೆಯ ಪ್ರಮಾಣವೂ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು. ಹೀಗಾಗಿ ಧರ್ಮಾಧಾರಿತ ರಾಜಕಾರಣವನ್ನು ಒಂದು ಮಿತಿಯನ್ನು ಮೀರಿ ಮಾಡುವುದು ಸಾಧ್ಯವಿಲ್ಲ. ಆದರೂ ಕರ್ನಾಟಕವನ್ನೂ ಧರ್ಮಾಧಾರಿತ ರಾಜಕಾರಣದ ಅಂಗಳವನ್ನಾಗಿ ಬದಲಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ರಾಷ್ಟೀಯ ಅಧ್ಯಕ್ಶ ಜೆಪಿ ನಡ್ಡಾ ಕರ್ನಾಟಕದ ಪ್ರವಾಸದ ಸಂದರ್ಭದಲ್ಲಿ ಇದೇ ಯತ್ನವನ್ನು ಮಾಡಿದರು. ತುಕಡೆ ತುಕಡೆ ಗ್ಯಾಂಗ್ ಬೇಕೋ ದೇಶಭಕ್ತರ ಪಕ್ಷ ಬೇಕೋ ತೀರ್ಮಾನಿಸಿ ಎಂದು ಕರೆ ನೀಡಿದ್ದು ಬಿಜೆಪಿ ಯಾವ ಆಧಾರದ ಮೇಲೆ ಚುನಾವಣೆಯನ್ನು ಸ್ಪರ್ಧಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ..

ಈಗ ಕರ್ನಾಟಕದಲ್ಲಿ ಬಿಜೆಪಿಗೆ ಉಳಿದಿರುವುದು ತುಕಡೆ ತುಕಡೆ, ಟಿಪ್ಪೂ ಸುಲ್ತಾನ, ಹಿಜಾಬ್ ವಿಚಾರಗಳು ಮಾತ್ರ.. ಅವರಿಗೆ ಜನರ ಮುಂದಿಡಲು ಬೇರೆ ವಿಚಾರಗಳೇ ಇಲ್ಲ..

ಕಾಂಗ್ರೆಸ್ ಪಕ್ಷದ ಚುನಾವಣಾ ಎಜೆಂಡಾ ಯಾವುದು ? ಅದು ಯಾವ ವಿಚಾರವನ್ನು ಜನರ ಮುಂದಿಡಲಿದೆ.? ಕಾಂಗ್ರೆಸ್ ಭಾರತ ಜೋಡೋ ಎಂಬ ಅಭಿಯಾನದ ಮೂಲಕ ಜನರಿಗೆ ಸಂಬಂಧಿಸಿದ ಕೆಲವೊಂದು ಪ್ರಮುಖ ವಿಚಾರಗಳನ್ನು ಜನರ ಮುಂದಿಡುತ್ತಿದೆ ನಿಜ.. ಆದರೆ ಕಾಂಗ್ರೆಸ್ ಭಾರತ ಜೋಡೋ ಮಾತನಾಡುವ ಸಂದರ್ಭದಲ್ಲೇ ತಮ್ಮ ಪಕ್ಷ ಬಹುಸಂಖ್ಯಾಕ ಹಿಂದೂಗಳ ವಿರೋಧಿಯಲ್ಲ ಎಂದು ಸಾಭೀತು ಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.. ಜೊತೆಗೆ ರಾಜ್ಯದ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರ ಬೆಂಬಲವನ್ನು ಕ್ರೋಡೀಕರಿಸಬೇಕಾಗಿದೆ..ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಾಗಿರುವ ಮತ್ತು ಪ್ರಬಲ ಜಾತಿಗಳ ವಿರೋಧಿ ಪಕ್ಷ ಎಂಬ ಆರೋಪವನ್ನು ಹುಸಿಗೊಳಿಸಬೇಕಾದ ಸಂದಿಗ್ದದಲ್ಲಿದೆ. ಈ ಎರಡೂ ಪ್ರಬಲ ಜಾತಿಗಳಲ್ಲಿ ತಮ್ಮ ಮತದ ಶೇರನ್ನು ಹೆಚ್ಚಿಸಿಕೊಳ್ಳದಿದ್ದರೆ ಅದು ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಉಳಿಯುವ ಸ್ಥಿತಿ ಬರಬಹುದು. ಜೊತೆಗೆ ಹಳೇ ಮೈಸೂರು ಪ್ರದೇಶದಲ್ಲಿ ತಮ್ಮ ಮತ ಬ್ಯಾಂಕನ್ನು ಸುದೃಡ ಗೊಳಿಸುವ ಯತ್ನದಲ್ಲಿ ಜೆಡಿಎಸ್ ತೊಡಗಿದೆ. ಕುಮಾರಸ್ವಾಮಿಯವರು ದಕ್ಷಿಣ ಕರ್ನಾಟಕದಲ್ಲಿ ನಡೆಸುತ್ತಿರುವ ಪಂಚರತ್ನ ಯಾತ್ರೆಗೆ ಜನ ಬೆಂಬಲ ದೊರಕುತ್ತಿದೆ..ಕುಮಾರಸ್ವಾಮಿ ಪ್ರವಾಸ ಮಾಡಿದಲ್ಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದು ಮತವಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ.. ದಕ್ಷೀನ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲವಾದಷ್ಟು ಕಾಂಗ್ರೆಸ್ ದುರ್ಬಲವಾಗುತ್ತಿದೆ..

ಇನ್ನು ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷ ಈಗ ಬರುತ್ತಿರುವ ವರದಿಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶದ ಕೆಲವು ಪಕೇಟ್ ಗಳಲ್ಲಿ ಜನಾರ್ಧನ ರೆಡ್ದಿ ಅವರ ಪ್ರಭಾವವಿದೆ. ಜೊತೆಗೆ ತಮ್ಮದೇ ಆದ ಮುಸ್ಲೀಮ್ ಮತ ಬ್ಯಾಂಕನ್ನು ಅವರು ಸೃಷ್ಟಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಪಕ್ಷದಿಂದ ಬಿಜೆಪಿಗೆ ಆಗುವ ಹಾನಿಗಿಂತ ಕಾಂಗ್ರೆಸ್ ಗೆ ಆಗುವ ಹಾನಿಯೇ ಹೆಚ್ಚು..

ಕೊನೆಯದಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯಾವ ಫಲಿತಾಂಶವನ್ನಾದರೂ ನೀಡಬಹುದು. ಆದರೆ ಯಾವುದೇ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಣದ ಅಂಡರ್ ಕರೆಂಟ್ ಸೃಷ್ಟಿಯಾದರೆ ಅದು ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುತ್ತದೆ. ರಾಜಕೀಯ ತಜ್ನರ ಎಲ್ಲ ವಿಶ್ಲೇಷಣೆಯನ್ನೂ ಸುಳ್ಳು ಮಾಡೀಬಿಡುತ್ತದೆ.

ಈ ಚುನಾವಣೆಯಲ್ಲಿ ಅಂತಹ ಇಶ್ಯೂ ಎಮರ್ಜ್ ಆಗಬಹುದೇ, ಅಂಡರ್ ಕರೆಂಟ್ ಕೆಲಸ ಮಾಡಬಹುದೂ ಈಗಲೇ ಹೇಳಲು ಸಾಧ್ಯವಿಲ್ಲ.


 

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...