Wednesday, December 25, 2013

ವಿದ್ರೋಹಿ, ೨ನೆಯ ಅಧ್ಯಾಯ

ವಿದ್ರೋಹಿ, ೨ನೆಯ ಅಧ್ಯಾಯ, ಈಗ ಮುಂದುವರಿಯಲಿದೆ

ಅಧ್ಯಕ್ಷರಿಗೆ ತಕ್ಷಣ ಏನು ಹೇಳಬೇಕು ಅಂತ ತಿಳಿಯಲಿಲ್ಲ. ಅದರೆ ಪಕ್ಷದ ವರಿಷ್ಟಿರ ಸೂಚನೆಯನ್ನು ಇವರಿಗೆ ತಿಳಿಸುವುದು ನನ್‍ನ ಕರ್ತವ್ಯ ಎಂಬುದು ನೆನಪಾಗುತ್ತಿದ್ದಂತೆ ಹಾಗಲ್ಲ, ಸಾರ್ ತಾವು ಎಂದಿದ್ದರೂ ಪಕ್ಷದ ಮರ್ಗದರ್ಶಕರು. ನೀವು ಮಾರ್ಗದರ್ಶನ ಮಾಡ್ತಾ ಇರಿ.  ಹೊಸಬರನ್ನ ನಾಯಕರನ್ನಾಗಿ ಆಯ್ಕೆ ಮಾಡೋಣ ಅಂತ ಒಂದೇ ಉಸಿರಿನಲ್ಲಿ ಎಲ್ಲವನ್ನು ಹೇಳಿ ಮುಗಿಸಿದ ಅಧ್ಯಕ್ಷರು ತಾವು ತಮ್ಮ ಕರ್ತವ್ಯವನ್ನು ಮುಗಿಸಿದ ಸಮಾಧಾನದಿಂದ ನಿಟ್ಟುಸಿರು ಬಿಟ್ಟರು.
ಯಾವಾಗ ನಾಯಕತ್ವದ ಬದಲಾವಣೆಯ ಮತು ಬಂತೂ ನಾಯಕರಿಗೆ ಸಿಟ್ಟು ತಡೆಯಲಾಗಲಿಲ್ಲ. ಈ ಮೊದಲು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮಾಡಿದ ಸಂಕಲ್ಪ ಮರೆತೆ ಹೋಯಿತು. ಪಕ್ಕದಲ್ಲಿ ಇಟ್ಟಿದ್ದ ಹೂದಾನಿಯನ್ನು ಕೈಯಲ್ಲಿ ಹಿಡಿದು ಏ ಅಧ್ಯಕ್ಷ ನೀನು ನನ್ನ ಎಂಜಿಲು ತಿಂದು ಬೆಳೆದವನು. ಈಗ ನನ್ನನ್ನ ಇಳಿಸೋ ಮಾತನಾಡ್ತೀಯಾ. ನಿಮ್ಮನ್ನೆಲ್ಲ ಮುಗಿಸಿ ಹಾಕ್ತೀನಿ ಅಂತಾ ಗುಡಿಗಿ ಹೂದಾನಿಯನ್ನು ಅಧ್ಯಕ್ಷರತ್ತ ಎಸೆದರು. ಅಷ್ಟರಲ್ಲಿ ಒಳಗೆ ಬಂದಿದ್ದ ಮೇಡಮ್, ಕೈಗಾರಿಕಾ ಸಚಿವ ಮಾರಣ್ಣ ಗೌಡರು, ನೀರಾವರಿ ಸಚಿವ ಶಂಕರ್ ನಾಯಕ್, ನಾಯಕರನ್ನು ತಡೆದು ಅವರನ್ನು ಅವರ ಸ್ಥಾನದಲ್ಲಿ ಕೂಳೀತುಕೊಳ್ಳುವಂತೆ ನೋಡಿಕೊಂಡರು.
ಸಾರ್, ಸಿಟ್ಟು ಮಾಡಿಕೊಳ್ಳಬೇಡಿ. ನಿಮಗೆ ಬಿಪಿ ಶುಗರ್ ಎಲ್ಲ ಇದೆ. ನಾವೆಲ್ಲ ಮಾತುಕತೆಯಾಡಿ ಸಮಸ್ಯೆಯನ್ನು ಬಗೆ ಹರಿಸೋಣ ಎಂದು ಮಾರಣ್ಣ ಗೌಡರು ನಾಯಕರಿಗೆ ಸಮಾಧಾನ ಹೇಳಿದರು.  ಬುಸು ಬುಸು ಎಂದು ಉಸಿರು ಬಿಡುತ್ತಿದ್ದ ನಾಯಕರು ನಾಯಿಗಾದರೂ ನಿಯತ್ತು ಇರುತ್ತೆ. ಇವನಿಗೆ ನಿಯತ್ತು ಬ್ಯಾಡವಾ ? ಅದು ಯಾವುದ್ರಿ ಹೈ ಕಮಾಂಡು, ನನಗೆ ಗೊತ್ತಿಲ್ಲದಿರೋದು. ಅವರಿಗೆಲ್ಲ ನಾನು ಎನ್ ಎನ್ ಕಳಿಸಿದೀನಿ ಅನ್ನೋದು ನನಗೆ ಗೊತ್ತು. ನನ್ನ ಎಂಜಿಲು ತಿನ್ನೋ ಈ ಹೈಕಮಾಂಡ್ ನನಗೆ ರಾಜೀನಾಮೆ ನೀಡಿ ಅಂತಾ ಹೇಳೋಕೆ ಅದೆಷ್ಟು ಧೈರ್ಯ ? ಎಂದರು.
ಏ ಶ್ರೀವಾಸ, ಪಕ್ಕದಲ್ಲಿರೋ ಡ್ರಾ ನಲ್ಲಿ ಬಿಳಿ ಬಣ್ಣದ ಗುಳಿಗೆ ಇದೆ ಅದನ್ನ ತಗೊಂಡ್ಬಾ ಅಂತಾ ಕೂಗಿ ಹೇಳಿ ನೆತ್ತಿಯನ್ನು ಒಮ್ಮೆ ಕೈಯಿಂದಲೇ ಒರೆಸಿಕೊಂಡರು.  ಈ ನಾಯಕರಿಗೆ ಗುಳಿಗೆ ತಂದು ಕೊಟ್ಟ ಶ್ರೀನಿವಾಸ, ಹೊರಗಡೆ ಪ್ರೆಸ್ ನವರು ತುಂಬಾ ಜನ ಇದಾರೆ. ಅವರಿಗೆ ನಾಯಕರ ಜೊತೆ ಮಾತನಾಡಲೇ ಬೇಕಂತೆ ಅಂದ.
ನಾಯಕರು ಗುಳಿಗೆಯನ್ನು ಬಾಯಿಗೆ ಒಗೆದುಕೊಂಡು ಒಂದು ಗ್ಲಾಸ್ ನೀರು ಕುಡಿದರು.  ಡರ್ ಅಂತ ತೇಗಿದರು.  ಬಾಯಿಯಿಂದ ತೇಗು ಹೊರಕ್ಕೆ ಬರುತ್ತಿದ್ದಂತೆ ಕೆಳಗಿನಿಂದ ಪುರ್.. ಪುರ್ ಎಂದು ಅಪಾನವಯುವನ್ನು ಹೊರಕ್ಕೆ ಹಾಕಿದರು.
ಗ್ಯಾಸ್ ಟ್ರಬಲ್ ಹಾಗೆ ಸಾರ್. ಅದು ಹೊರಕ್ಕೆ ಹೋದರೆ ಸ್ವರ್ಗ ಸುಖ. ಒಳಗೆ ಇಟ್ಟುಕೊಂಡರೆ ಕಷ್ಟ ಕಷ್ಟ ಎಂದರು ಸಚಿವ ಶಂಕರ್ ನಾಯಕ್.
ಏನೇ ಹೇಳಿ ಗ್ಯಾಸ್ ಟ್ರಬಲ್ ಹಾಗೆ. ಅದು ಯಾವಾಗ ಹೊರಕ್ಕೆ ಬರುತ್ತೆ ಅಂತಾ ಹೇಳಕೇ ಆಗಲ್ಲ.  ಹೊರಕ್ಕೆ ಬಂದರೆ ಸುತ್ತ ಮುತ್ತ ವಾಸನೆ ಬರುತ್ತೆ ಅನ್ನೋದು ನಿಜ. ಆದರೆ ಒಳಗೆ ಇಟ್ಟುಕೊಂಡರೆ ಮೇಲಕ್ಕೆ ಹತ್ತಿ ಬಿಡುತ್ತೆ.  ಅಪಾನವಾಯು ಕೆಳಕ್ಕೆ ಹೋಗಬೇಕೇ ಹೊರತೂ ಮೇಲೆ ಬರಬಾರದು. ಮೇಲೆ  ಬಂದರೆ ಭ್ರಹ್ಮ ರಂದ್ರದ ವರೆಗೂ ಬಂದು ಬಿಡುತ್ತೆ ಎಂದು ಸಚಿವ ಮಾರಣ್ಣ ಗೌಡರು ಎಚ್ಚರಿಕೆಯ ಮಾತುಗಳನ್ನು ಆಡಿದರು.
 ತಮ್ಮ ಮೇಲೆ ನಾಯಕರು ಏರಿ ಬಂದ ಮೇಲೆ ತಣ್ಣಗೆ ಕುಳಿತಿದ್ದ ಅಧ್ಯಕ್ಷರು ಈ ಗ್ಯಾಸ್ ಡಿಸಕಷನ್ ನಲ್ಲಿ ಪಾಲ್ಗೊಳ್ಳಲಿಲ್ಲ. ತಾವು ಹೇಳುವುದನ್ನು ಹೇಳಿ ಆಗಿರುವುದರಿಂದ ತಮ್ಮ ಕೆಲಸ್ ಅಮುಗಿಯಿತು ಎಂದುಕೊಂಡ ಅಧ್ಯಕ್ಷರು ಹೊರಕ್ಕೆ ಹೋಗುವುದಕ್ಕಾಗಿ ಕಾಯುತ್ತಿದ್ದರು.
ಆದ್ರೂ ಸಾರ್ವಜನಿಕವಾಗಿ ಹೂಸು ಬಿಟ್ಟರೆ ಅದು ಒಳ್ಳೆಯದಲ್ಲ. ಆದರೆ ಅದನ್ನು ಬಹಳ ಕಾಲ ಇಟ್ತುಕೊಳ್ಳೋದು ಸಾಧ್ಯವಿಲ್ಲ. ಹೊರಕ್ಕೆ ಹಾಕಲೇ ಬೇಕು ಎಂದು ಹೇಳಿದ ನಾಯಕರು ಅರ್ಥಗರ್ಭಿತವಾಗಿ ಅಧ್ಯಕ್ಷರತ್ತ ನೋಡಿದರು.
ನಾನು ಅದ್ದರಿಂದ ಹೂಸನ್ನು ಒಳಗೆ ಇತ್ತುಕೊಳ್ಳೊದಿಲ್ಲ. ನಾನು ಹೊರಕ್ಕೆ ಹಾಕ್ತೀನಿ ಎಂದು ಅಧ್ಯಕ್ಷರತ್ತಲೇ ನೋಡುತ್ತ ಹೇಳಿದ ನಾಯಕರು “ನೀವು ಹೇಳೋದನ್ನೆಲ್ಲ ಹೇಳಿ ಆಯ್ತಲ್ಲ ಅಧ್ಯಕ್ಷರೆ ” ಅಧ್ಯಕ್ಷರು ಆಯ್ತು ಅಂತಾ ಹೇಳಿ ಅವರತ್ತ ಇನ್ನೊಮ್ಮೆ ಕೈ ಮುಗಿದು ಅಲ್ಲಿಂದ ಹೊರಟರು.
ನನ್ನನ್ನ ಹೂಸಿಗೆ ಹೋಲಿಸ್ತಾನಲ್ಲ. ಇವನನ್ನ ಸುಮ್ಮನೆ ಬಿಡಬಾರದು. ಅವನ ಸ್ಥಾನ ಯಾವುದು ಅಂತಾ ತೋರಿಸಿದರೆ ಗೊತ್ತಾಗುತ್ತೆ ಎಂದುಕೊಂಡ ಅವರು ಹೊರಗೆ ಕಾಯುತ್ತಿರುವ ಮಾಧ್ಯಮದವರ ಮುಂದೆ ಏನ್ ಹೇಳಬೇಕು ಅಂತಾ ಯೋಚಿಸುತ್ತ ನಾಯಕರ ಕೊಠಡಿಯಿಂದ ಹೊರಕ್ಕೆ ಬಂದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಎದುರು ಮಾಧ್ಯಮ ಪ್ರತಿನಿಧಿಗಳ ದಂಡು. ಏನ್ರಪಾ ಹೇಗಿದ್ದೀರಿ ಅಂತ ಹೊರಕ್ಕೆ ಬಂದ ಅಧ್ಯಕ್ಷರು ಎಲ್ಲ ಸೂಸೂತ್ರವಾU ನಡೀತಿದೆ ಎನೂ ತೊಂದರೆ ಇಲ್ಲ ಎಂದು ಮಾತಿಗೆ ಪ್ರಾರಂಭಿಸಿದರು.
ಸಾರ್, ಮುಖ್ಯಮಂತ್ರಿಗಳು ರಾಜೀನಾಮೆ ನೀಡೋದಕ್ಕೆ ಒಪ್ಪಿದರಾ ? ಪ್ರಶ್ನೆಯೊಂದು ತೂರಿ ಬಂತು.
ಯಾವ ರಾಜೀನಾಮೆ ? ಯಾರ ರಾಜೀನಾಮೆ ? ಅಂತಾದೇನೂ ಇಲ್ಲ ಎಂದ ಅಧ್ಯಕ್ಷರು ಬರಲಾ ಎಂದು ಹೊರಡುವುದಕ್ಕೆ ಸನ್ನದ್ಧರಾದರು. ಆದರೆ ಬೆಳಗಿನಿಂದ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಸಾರ್, ಏನೂ ಇಲ್ಲ ಅಂದರೆ ಬೆಳಗಿನಿಂದ ಒಳಗೆ ಕುಳಿತು ಏನ್ ಕಡಿದು ಕಟ್ಟೆ ಹಾಕ್ತಾ ಇದೀರಾ ಎಂದು ಪ್ರಶ್ನಿಸಿದರು.
ರೀ ನಾವ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡ್ತ ಇದೀವಿ. ರಾಜಕೀಯ ಚರ್ಚೆ ಮಾಡೋದಕ್ಕೆ ನಾವಿಲ್ಲ ಎಂದು ಹೇಳಿದ ಅಧ್ಯಕ್ಷರು ಒಳಗೆ ನಾಯಕರ ಗ್ಯಾಸ್ ಟ್ರಬಲ್ ಸಮಸ್ಯೆಯ ಬಗ್ಗೆ ಚರ್ಚೆ ನಡೀತಿದೆ ಎಂದು ಮನಸ್ಸಿನಲ್ಲೇ ನಕ್ಕರು. ನೋಡಿ ರಾಜ್ಯದ ಗಂಭೀರ ಸಮಸ್ಯೆಗಳ ಬಗ್ಗೆ  ಅಲ್ಲಿ ಚರ್ಚೆ ನಡೀತಿದೆ. ಆ ಬಗ್ಗೆ ಮುಖ್ಯಮಂತ್ರಿಗಳು ವಿವರ ನೀಡ್ತಾರೆ ಎಂದು ಹೊರನಡೆದರು.
ಅಲ್ಲಿಂದ ಹೊರಟ ಅಧ್ಯಕ್ಷರಿಗೆ ತಲೆ ಕರಡವಾಗಿತ್ತು. ಈತ ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಲು ಹೇಸುವವನಲ್ಲ. ಈತನನ್ನು ಅಧಿಕಾರದಿಂದ ಇಳಿಸುವುದು ಸುಲಭ ಅಲ್ಲ ಎಂದು ಅಧ್ಯಕ್ಷರಿಗೆ ಅನ್ನಿಸಿತು. ಇಲ್ಲಿನ ಬೆಳವಣಿಗೆಯನ್ನೆಲ್ಲ ಪಕ್ಷದ ವರಿಷ್ಠರಿಗೆ ತಿಳಿಸಬೇಕು, ಅವರು ಹೇಳಿದಂತೆ ಮುಂದಿನ ಹೆಜ್ಜೆ ಇಡಬೇಕು ಎಂದು ಅವರು ಅಂದುಕೊಂಡರು.
ಅಧ್ಯಕ್ಷರಿಗೆ ಪಕ್ಷದ ವರಿಷ್ಠರ ಬಗ್ಗೆ ಅಂತಹ ಒಳ್ಳೆ ಅಭಿಪ್ರಾಯ ಇರಲಿಲ್ಲ.  ಈ ದೆಹಲಿ ರಾಜಕಾರಣಿಗಳಿಗೆ ಸರಿಯಾಗಿ ಭಾಷೇನೇ ಬರೋದಿಲ್ಲ. ಬಯ್ ಬಿಟ್ಟರೆ ಹಿಂದಿ ಮಾತನಾಡ್ತಾರೆ. ಇಲ್ಲ ಎಂದ್ರೆ ಇಂಗ್ಲೀಷ್. ಹೀಗಾಗಿ ಅವರು ಹೇಳುವುದು ಸರಿಯಾಗಿ ಅರ್ಥವಗುವುದಿಲ್ಲ. ಹೇಳಬೇಕಾದ್ದನ್ನು ಹೇಳುವುದು ಕಷ್ಟ. ಇಡೀ ಇಂಡಿಯಾಕ್ಕೆ ಒಂದೇ ಭಾಶೇ ಇರಬೇಕಿತ್ತು. ಆಗ ಈ ಸಮಸ್ಯೆ ಇರ್ತಾ ಇರಲಿಲ್ಲ.  ಹೇಳುವುದು ಕೇಳುವುದು ಸುಲಭವಗುತ್ತಿತ್ತು ಎಂದು ಅಧ್ಯಕ್ಷರಿಗೆ ಅನ್ನಿಸತೊಡಗಿತು.

ಸಂಝೆ 6 ಗಂಟೆ. ಅ ಪತ್ರಿಕಾ ಕಚೇರಿಂiÀiಲ್ಲಿ ಚಟುವಟಿಕೆ ತೀವ್ರ ಗೊಳ್ಳುತ್ತಿರುವ ಸಮಯ. ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗರರು ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜೊತೆ ಮರು ದಿನದ ಸಂಚಿಕೆಯ ಬಗ್ಗೆ ಚರ್ಚೆ ನಡೆಸ್ತಾ ಇದ್ದರು. ಯಾವ ಪುಟದಲ್ಲಿ ಯಾವ ಸುದ್ದಿ ಬರಬೇಕು ಎಂಬುದು, ಹಾಗೆ ಯಾವ ಸುದ್ದಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಲ್ಲಿ ನಡೆಯುತ್ತಿದ್ದ ಚರ್ಚೆ.
ಸಾಧಾರಣವಾಗಿ ಪತ್ರಿಕಾ ಕಚೇರಿಗಳಿಗೆ ಜೀವ ಬರುವುದು ಸಂಜೆಯಾದ ಮೇಲೆ. ಎಲ್ಲ ಕಡೆಯಿಂದ ಸುದ್ದಿ ಬಂದು ಬೀಳುತ್ತಿರುವಾಗ ಯಾವ ಯಾವ ಸುದ್ದಿಯನ್ನು ತೆಗೆದುಕೊಳ್ಳಬೇಕು ಎಲ್ಲಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯ. ಸಂಪಾದಕ ನಾರಾಯಣ ರಾವ್ ಈ ವೃತ್ತಿಯಲ್ಲಿ 20 ವರ್ಷ ಮುಗಿಸಿದ್ದಾರೆ.  ಬೇರೇ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅವರು ಈ ಪತ್ರಿಕೆಯ ಸಂಪದಕರಗಿದ್ದು ಅಚಾನಕ್ ಆಗಿ. ಪತ್ರಿಕೋದ್ಯಮ ಬೇಡ ಎಂದುಕೊಂಡಿದ್ದ ಅವರಿಗೆ ಈ ಪತ್ರಿಕೆಯ ಸಂಪಾದಕರಾಗುವ ಅಹ್ವಾನ ಬಂತು. ಅವರುಒಪ್ಪಿಕೊಂಡು ಬಿಟ್ಟರು. ನಂತರದ್ದು ಇತಿಹಾಸ. ಪತ್ರಿಕೆಯ ಪ್ರಸಾರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿತು. ನಾರಾಯಣ್ ರಾವ ರಾಜ್ಯದ  ಖ್ಯಾತ ಸಂಪಾದಕರು ಎನ್ನಿಸಿಕೊಂಡರು.
ನೋಡಿ ಸುದ್ದಿಗಳನ್ನು ರುಚಿ ಕಟ್ಟಾಗಿ ಕೊಡಬೇಕು ಎಂಬ ಅವರ ಮತು ಹಳೇ ತಲೆಮಾರಿನ ಪತ್ರಕರ್ತರಿಗೆ ಪಥ್ಯವಾಗುತ್ತಿರಲಿಲ್ಲ. ಸುದ್ದಿ ಎಂದರೆ ಸುದ್ದಿ. ಅಲ್ಲಿ ನ್ಯಾಯ ನಿಷ್ಠುರತೆ ಇರಬೇಕು ಎಂದು ನಂಬಿಕೊಂಡಿದ್ದ ಈ ಹಳೆಯ ಮಂದಿ ರುಚಿ ಕಟ್ಟಾಗಿ ನೀಡಬೇಕು ಅನ್ನೊದಕ್ಕೆ ಸುದ್ದಿ ಏನು ತಿಂಡಿಯಾ ಎಂದು ಅವರು ತಮ್ಮೊಳಗೆ ಪ್ರಶ್ನಿಸಿಕೊಂಡಿದ್ದು ಉಂಟು. ಆದರೆ ಅದನ್ನು ಸಂಪಾದಕರಿಗೆ ನೇರವಾಗಿ ಕೇಳುವ ಧೈರ್ಯವನ್ನು ಅವರು ಮಾಡಲಿಲ್ಲ.
ಏನ್ರಿ. ಭಿನ್ನಮತದ ಕಥೆ ಏನಾಯಿತು ? ಸಂಪಾದಕರು ಪ್ರಶ್ನಿಸಿದರು.
ಏನ್ ಇಲ್ಲ ಸಾರ್, ಇವತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಯಿತಂತೆ. ಹಾಗಂತ ಪಕ್ಷದ ಅಧ್ಯಕ್ಷ್ರು ಮಾಧ್ಯಮದ ಪ್ರತಿನಿಧಿಗಳಿವೆ ತಿಳಿಸಿದ್ದಾರೆ. ಈ ಕುರಿತು ವರದಿಯೂ ಬಂದಿದೆ ಎಂದರು ಸುದ್ದಿ ಸಂಪಾದಕ ಎಮ್. ಬಿ. ಪಾಟೀಲ್
ಸಂಪಾದಕರು ಒಂದು ಸಿಗರೇಟು ಹಚ್ಚಿ ಪುಸು ಪುಸು ಹೊಗೆ ಬಿಟ್ಟರು.
ವರದಿಗಾರನಾದವನಿಗೆ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡಬೇಕು ಕಣ್ರಿ.  ಅಧ್ಯಕ್ಷರು ಹೇಳಿದ್ದನ್ನೇ ಕೇಳಿಕೊಂಡು ವರದಿ ಮಾಡಲು ನನಗೆ ವರದಿಗಾರರು ಯಾಕೆ ಬೇಕು ? ನಾನು ಸ್ಟೇನೋ ಗಳನ್ನ ನೇಮಿಸಿಕೊಂಡು ವರದಿ ತರಿಸ್ತೀನಿ. ವರದಿಗಾರ ಎಂದರೆ ಸುದ್ದಿಯ ಹಿಂದೆ ಹೋಗಬೇಕು. ಒಳಗೆ ನಡೆದಿದ್ದನ್ನ ಹೊರಕ್ಕೆ ಎಳೆಯಬೇಕು. ಬಿಹೈಂಡ್ ದ್ ಸಿನ್ ಏನು ನಡೆದಿದೆ ಎಂಬುದನ್ನು ರುಚಿಕಟ್ಟಾಗಿ ಹೇಳಿದರೆ ಜನ ಪತ್ರಿಕೆಯನ್ನ್ ಓದ್ತಾರೆ.
ಸುದ್ದಿಸಮ್ಪಾದಕ ಪಾಟಿಲರು ರುಚಿಕಟ್ಟಾಗಿ ಸುದ್ದಿಯನ್ನು ಕೊಟ್ಟರೆ ಸತ್ಯಕ್ಕೆ ಅಪಚಾರ ಮಡಿದಂತೆ ಅಗೋಲ್ವೆ ಎಂದು ಕೇಳಬೇಕು ಎಂದುಕೊಂಡರು. ಆದರೆ ಈ ತಲೆ ಕೆಟ್ಟ ಸಂಪಾದಕರ ಜೊತೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳೆಯದು ಎಂದುಕೊಂಡರು.
ಸಂಪಾದಕರು ಮೀಟೀಂಗ್ ಮುಗಿಸಿ ಅವರನ್ನೆಲ್ಲ ಹೊರಕ್ಕೆ ಕಳುಹಿಸಿದರು. ಕಳುಹಿಸುವಾಗ ನಾನೊಂದು ಸುದ್ದಿಕೊಡ್ತೀನಿ. ಅದನ್ನ ಆಂಕರ್ ಸ್ಟೋರಿ ಮಾಡಿಕೊಳ್ಳಿ. ಮುಖ್ಯಮಂತ್ರಿಗಳ ಪೆÇೀಟೋನೂ ಇರಲಿ ಎಂದರು.
ಸಂಪಾದಕರು ಕಿಡಕಿಯ ಹತ್ತಿರ ಬಂದು ಒಂದು ಸಿಗರೇಟು ಹಚ್ಚಿದರು.ಸಿಗರೇಟಿನ ಹೊಗೆ ಬಾಯಿಯ ಮೂಲಕ ಇಳಿದು ಅಂಗಾಂಗಗಳೆಲ್ಲ ಒಂದು ಸುತ್ತು ಹಾಕಿದಾಗ ಮನಸ್ಸಿಗೆ ಹಾಯೆನಿಸಿತು. ಸಿಗರೇಟು ಕಂಡು ಹಿಡಿದವ ಯಾರಿರಬಹುದು ಎಂದು ಯೋಚಿಸತೊಡಗಿದರು. ಇದಕ್ಕಿರುವ ಅದ್ಬುತ ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಅನ್ನಿಸಿ ಇನ್ನೊಂದು ದಮ್ ಎಳೆದರು. ಅಷ್ಟರಲ್ಲಿ ಫೆÇೀನ್ ಕರೆ.
ಸರಿ ಸರಿ, ಮಾಡ್ತೀನಿ ಬಿಡಿ. ಈ ಮುಖ್ಯಮಂತ್ರಿ ಅವರ ಬೆಂಬಲಿಗರು ಮುಕಳಿ ಮುಟ್ಕಂಡು ನೋಡ್ಕಬೇಕು ಹಾಂಗ್ ಮಾಡ್ತೀನಿ. ನೋಡ್ತಾ ಇರಿ. ಹೌದು ಹೌದು ಮುಖ ಪುಟದಲ್ಲೇ ಬರುತ್ತೆ….
ಫೆÇೀಣ್ ಇಟ್ಟವರು ನಿರಾಳವಾಗಿ ಉಸಿರಾಡಿದರು. ಕಂಪ್ಯುಟರ್ ಮುಂದೆ ಕುಳಿತು ವರದಿ ಬರೆಯಲು ಸಿದ್ಧರಾದರು. ವರದಿಯ ಶೀರ್ಷಿಕೆಯನ್ನು ಮೊದಲು ಬರೆದರು.
ಪಕ್ಷದ ಸಭೆಯಲ್ಲಿ ಹೂಸಿನ ಬಗ್ಗೆ ಗಂಭೀರ ಚರ್ಚೆ.. ನಾಯಕರ ಹೂಸಿಗೆ ಪರಿಹಾರ ಕಂಡುಕೊಳ್ಳುವ ಯತ್ನ…..!
ಸ್ವಲ್ಪ ವ್ಯಂಗ್ಯ ಬೆರಸಿ ಟಿಕಿಸಿದ ವರದಿ ಸಿದ್ಧವಾಯಿತು.  ವರದಿಯ ಕೊನೆಯ ಪ್ಯಾರಾ ಹೀಗಿತ್ತು.
ಈ ರಾಜ್ಯದ ಜನ ಬರಗಾಲದಿಂದ ತತ್ತರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಮಿತಿ ಮೀರಿದೆ. ನಿರುದ್ಯೋಗ ತಾಂಡವಾಡುತ್ತಿದ್ದೆ. ಗ್ರಾಮಾಂತರ ಪ್ರದೇಶದ ರಸ್ತೆಗಳು ಹಾಳು ಬಿದ್ದಿವೆ. ಈ ಬಗ್ಗೆ ಚರ್ಚೆ ಮಾಡಬೇಕಾದವರು ನಾಯಕರ ಹೂಸಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವರು ಈ ಹೂಸು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪಸರಿಸಿ ಜನ ಮೂಗು ಮುಚ್ಚುಕೊಂಡು ತಿರುಗಾಡುವಂತಾಗಿದೆ. ಇಂತಹ ಸ್ಥಿತಿಯನ್ನು ಸರ್ಕಾರವನ್ನು ಕಿತ್ತೊಗೆಯುವ ಮೂಲಕ ರಾಜ್ಯವನ್ನು ರಕ್ಷಿಸಬೇಕಾಗಿದೆ.
ಸಂಪಾದಕರು ವರದಿಯನ್ನು ಇನ್ನೊಮ್ಮೆ ಓದಿದರು. ಮನಸ್ಸಿಗೆ ಸಮಾಧಾನವಾಯಿತು. ಹುಡುಗರನ್ನು ಕರೆದು ಈ ವರದಿಯನ್ನು ಮುಖಪುಟದಲ್ಲಿ ಆಂಕರ್ ಸ್ಟೋರಿಯನ್ನಾಗಿ ತೆಗೆದುಕೊಳ್ಳುವಂತೆ ಸೂಚಿಸಿ ಇನ್ನೊಂದು ಸಿಗರೇಟು ಹಚ್ಚಿದರು.

ಆ ದಿನ ನಾಯಕರ ಪಾಲಿಗೆ ಎಂದಿನ ದಿನವಾಗಿರಲಿಲ್ಲ. ಅಂದಿನ ಪತ್ರಿಕೆಗಳಲ್ಲಿ ತಮ್ಮ ಹೂಸಿನ ಬಗ್ಗೆ ಇಂತಹ ವರದಿ ಬಂದಿದ್ದು ನೋಡಿ ಅವರಿಗೆ ಮೊದಲು ಬೇಸರವಾದರೂ ನಂತರ ಈ ಬೇಸರ ಉಳಿಯಲಿಲ್ಲ. ಸಂಪುಟ ಸಹೋದ್ಯೋಗಿಗಳು ಎಲ್ಲ ವಿಚಾರವನ್ನು ಬಿಟ್ಟು ಹೂಸಿನ ಬಗ್ಗೆ ಚರ್ಚೆ ನಡೆಸಿದ್ದು ಸರಿ ಅಲ್ಲ ದಿರಬಹುದು ಆದರೂ ನನ್ನ ಬಗ್ಗೆ ಮಾತ್ರವಲ್ಲ ನನ್ನ ಹೂಸಿನ ಬಗ್ಗೆಯೂ ಚರ್ಚೆ ನಡೆದಿರುವುದು ತಮಗೆ ಶಾಸಕರ ಮೇಲೆ ಎಷ್ಟು ಹಿಡಿತವಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಮನಸ್ಸಿಗೆ ಸಮಾಧಾನ ಅನ್ನಿಸಿತು. ಈ ರಾಜ್ಯದಲ್ಲಿ ತಾವು ಏಕಮೇವಾದ್ವಿತಿಯ ನಾಯಕ. ನನ್ನ ನಾಯಕತ್ವವನ್ನು ಪ್ರಶ್ನಿಸುವ ಧೈರ್ಯ್ ಯಾರಿಗೂ ಇಲ್ಲ ಎಂದೂ ಅನ್ನಿಸಿತು.
ಆದರೂ ಮನಸ್ಸಿನ ಒಳಗೆ ಒಂದು ರೀತಿಯ ದುಗುಡ. ಜೊತೆಗೆ ತಣಿಯದ ಬಾಯಾರಿಕೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುವುದೇ ಇಲ್ಲ. ಈ ಬಾಯಾರಿಕೆ ತನ್ನನ್ನು ಹೈರಾಣಾಗಿಸಿದೆ ಎಂದುಕೊಂಡ ನಾಯಕರು, ಇದು ದೈಹಿಕ ಮಾತ್ರವಲ್ಲ ಒಂದು ರೀತಿಯ ಮಾನಸಿಕ ದಣಿವು ಎಂದುಕೊಂಡರು. ಆದರೆ ಯಾಕೋ ಗೊತ್ತಿಲ್ಲ. ಯಾವುದಕ್ಕೂ ಕೈಚೆಲ್ಲಿ ಕುಳಿತುಕೊಳ್ಳಲು ಮನಸ್ಸಾಗುವುದಿಲ್ಲ. ಎಲ್ಲವನ್ನೂ ಜೈಸಬೇಕು ಎಂಬ ಹಠ. ಕಷ್ಟಪಟ್ಟು ಗಳಿಸಿದ ಈ ಸ್ಥಾನವನ್ನು ಬಿಟ್ಟುಕೊಡಲು ಮನಸ್ಸಾಗುವುದಿಲ್ಲ. ಸದಾ ಅಧಿಕಾರದಲ್ಲಿ ಇರಬೇಕು ಅಂತಾ ಅನ್ನಿಸುತ್ತೆ. ಇದು ಸಹ ತೀರದ ದಾಹ..

                                                          ಅಧ್ಯಾಯ 2
ರಾಜಧಾನಿಯ ಜನ ನಿಬಿಡ ರಸ್ತೆಯಲ್ಲಿರುವ ಹಳೆಯ ಕಟ್ಟಡ. ಅದಕ್ಕೆ ಸುಣ್ಣ ಬಣ್ಣ ಮಾಡಿ ಯಾವ ಕಾಲವಾಗಿದೆಯೋ ಗೊತ್ತಿಲ್ಲ. ಈ ಮೂರಂತಸ್ತಿನ ಕಟ್ಟಡದಲ್ಲಿ  ಔಷಧಿಗೆ ಬೆಕೆಂದರೂ ಒಂದು ಕುರ್ಚಿಯಿಲ್ಲ. ಇಲ್ಲಿ ಎಲ್ಲ ನಡೆಯುವುದು ಚಾಪೆಯ ಮೇಲೆ.  ಜೊತೆಗೆ ಇದರ ಹೆಸರು ಕೂಡ ಚಾಪೆ ಸಂಘಟನೆ ಎಂದೇ.  ನೆಲದ ಮೇಲೆ ಕುಳಿತೇ ಈ ಸಂಘಟನೆಯ ಜನ ಚರ್ಚೆ ನಡೆಸುತ್ತಾರೆ.  ಚಾಪೆಯ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಗೊಡೆಯ ಮೇಲೆ ಭಾರತ ಮಾತೆಯ ದೊಡ್ಡ ಫೆÇೀಟೊವೊಂದನ್ನು ಹಾಕಿ ಅದಕ್ಕೆ ಹೂ ಮಾಲೆ ಹಾಕಲಾಗಿದೆ.
ಈ ಮೊದಲ ಮಹಡಿಯ ಬಲ ಬದಿಯಲ್ಲಿ ಒಂದು ಕೊಠಡಿ ಇದೆ. ಆ ಕೊಠಡಿಯಲ್ಲಿ ಚಾಪೆಯ ಮೇಲೆ ಕುಳಿತ ಈ ವಯೋವೃದ್ಧರು ಈ ಸಂಘಟನೆಯನ್ನು ಬೆಳೆಸಿದವರು. ಇವರಿಗೆ ಈಗ ನೂರರ ಸಮೀಪ ವಯಸ್ಸು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಚಳವಳಿಗೆ ಧುಮುಕಿದ್ದ ಇವರು ಗಾಂಧಿಜಿ ಜೊತೆ ಜಗಳವಾಡಿದ್ದು ಐತಿಹಾಸಿಕ ಘಟನೆ. ನಮಗೆ ಶಾಂತಿಯ ಮೂಲಕ ಸ್ವಾತಂತ್ರ್ಯ ಬೇಡ. ರಕ್ತ ಕ್ರಾಂತಿಯ ಬೇಕು ಎಂದು ಕಾಂಗ್ರೆಸನಾಯಕ್‍ರ ಮುಖದ ಮೇಲೆ ಹೊಡೆದಂತೆ ಹೇಳಿಬಂದವರು ಇವರು. ಇವರ ಹೆಸರು ನರೇಂದ್ರ ಶರ್ಮ.
ನರೇಂದ್ರ ಶರ್ಮ ಅವರ ಹೆಸರು ಗೊತ್ತಿಲ್ಲದವರಿಲ್ಲ. ಅವರು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರಂತ್ ಸಂತೋಷ ಪಡಲಿಲ್ಲ. ಶಾಂತಿಯಿಂದ ಪಡೆದ ಈ ಸ್ವಾತಂತ್ರ್ಯ ನಮ್ಮನ್ನು ನರ ಸತ್ತವರನ್ನಾಗಿ ಮಾಡುತ್ತದೆ ನಮಗೆ ಈ ಸ್ವಾತಂತ್ರ್ಯ ಬೇಡ ಎಂದು ಹೇಳಿಕೆ ನೀಡಿ ಆಗಲೇ ವಿವಾದ ಸೃಷ್ಟಿಸಿದವರು ನರೇಂದ್ರ ಶರ್ಮ.
ಇದಾದ ಮೇಲೆ ತಮ್ಮ ಹುಟ್ಟೂರಿಗೆ ಬಂದ ಅವರು ಈ ಸಂಘಟನೆಯನ್ನು ಕಟ್ಟಿದರು.ಆಗ ಊರ ಹೊರಗೆ ನಾಲ್ಕು ಎಕರೆ ಜಾಗ ತೆಗೆದುಕೊಂಡು ಚಾಪೆ ಸಂಘಟನೆಯನ್ನು ಹುಟ್ಟು ಹಾಕಿದರು. ಅದನ್ನು ಪ್ರಬಲ ಸಂಘಟನೆಯನ್ನಾಗಿ ಬೆಳೆಸಿದರು. 60 ವರ್ಶಗಳ ಹಿಂದೆ ಕಟ್ಟಿದ ಈ ಕಟ್ಟದ ಈಗಲೂ ಹಾಗೇ ಇದೆ.  ಈ ಕಟ್ಟಡದ ಗೊಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಆದರೆ ಇದರ ತಳಪಾಯ ಗಟ್ತಿ ಇರುವುದರಿಂದ ಏನೂ ಆಗುವುದಿಲ್ಲ ಎಂದು ನರೇಂದ್ರ ಶರ್ಮ ನಂಬಿಕೊಂಡಿದ್ದಾರೆ.
ಅವರು ತಮ್ಮ ಸಂಘಟನೆಗೆ ಚಾಪೆ ಸಂಘಟನೆ ಎಂದು ಹೆಸರು ನೀಡಿದ್ದಕ್ಕೂ ತಾತ್ವಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಚಾಪೆ ಸದಾ ನೆಲವನ್ನು ಅಂಟಿಕೊಂಡಿರುತ್ತದೆ. ಅದಕ್ಕೆ ಅಹಂಕಾರವಿಲ್ಲ. ಜೊತೆಗೆ ಚಾಪೆಯ ಮೇಲೆ ಕುಳಿತುಕೊಂಡವರು ತಮ್ಮ ಅಹಂಕಾರವನ್ನು ಕಳೆದುಕೊಳ್ಳುತ್ತಾರೆ. ಎಲ್ಲರ ಜೊತೆ ಸಮಾನತೆಯನ್ನು ಸಾಧಿಸುವಲ್ಲಿಯೂ ಚಾಫೆಯ ಪಾತ್ರವಿದೆ.  ವಿದೇಶಿ ಉಡುಪಾದ ಪ್ಯಾಂಟು ಹಾಕಿಕೊಂಡರೆ ಚಾಪೆಯ ಮೇಲೆ ಕುಳಿತು ಕೊಳ್ಳುವುದು ಕಷ್ಟ. ಚಾಪೆಯ ಮೇಲೆ ಕುಳಿತುಕೊಳ್ಳುವಾಗ ಅಡ್ಡ ಪಂಜೆ ಉಟ್ಟರೆ ಉತ್ತಮ.  ಹೀಗಾಫಿû ಚಾಪೆ ಎನ್ನುವುದು ದೇಶಿಯತೆಯನ್ನು ಪ್ರತಿಬಿಂಬಿಸುತ್ತದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಚಾಪೆ ಸಂಘಟನೆ ಅದರ ವಿರುದ್ಧ ನಡೆಸಿದ ಹೋರಾಟ ಕೂಡ ಸಣ್ಣದಲ್ಲ. ಸಂಘಟನೆಯ ಕಾರ್ಯಕರ್ತರು ತಂಡೋಪ ತಂಡವಾಗಿ ಜೈಲು ಸೇರಿದರು. ಹೊರಗಿನಿಂದ ಸರ್ಕಾರದ ವಿರುದ್ಧ ರಕ್ತ ಕ್ರಾಂತಿ ಮಾಡಬೇಕು ಎಂದು ನರೇಂದ್ರ ಶರ್ಮ ನಿರ್ಧರಿಸಿದ್ದರು. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅವರು ಮುಂದಾಗಿದ್ದರು.  ಜೊತೆಗೆ ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಲಾಠಿ ಮತ್ತು ಕೇರಳದ ಕಲಾಯಿ ಪಟ್ಟಿನಂತಹ ಸಮರ ಕಲೆಯನ್ನು ಅವರು ಕಲಿಸಿದ್ದರು. ಇದೆಲ್ಲ ಆಗಿ ಚಾಪೆ ಸಂಘಟನೆ ಸಿದ್ಧವಾಗುವಷ್ಟರಲ್ಲಿ ತುರ್ತು ಪರಿಸ್ಥಿತಿ ಹೋಗಿತ್ತು. ಇಂದಿರಾ ಗಾಂಧಿ ನೆಲಕಚ್ಚಿದರು. ಹೀಗಾಗಿ ನರೇಂದ್ರ ಶರ್ಮ ಎರಡನೆಯ ಬಾರಿ ರಕ್ತ ಕ್ರಾಂತಿ ಮಾಡುವ ಅವಕಾಶವನ್ನು ಕಳೆದುಕೊಂಡರು. ಈ ಬಗ್ಗೆ ಅವರಿಗೆ ಈಗಲೂ ಬೇಸರವಿದೆ. ತುರ್ತು ಪರಿಸ್ಥಿತಿಯ ವಿರುದ್ಧ ರಕ್ತ ಕ್ರಾಂತಿ ನದೆದಿದ್ದರೆ ಈಗಿನ ಸ್ಥಿ ಬರುತ್ತಿರಲಿಲ್ಲ. ಭ್ರಷ್ಟಾಚಾರ ಸರ್ವ ವ್ಯಾಪಿಯಾಗುತ್ತಿರಲಿಲ್ಲ. ರಾಜಕಾರಣಿಗಳು ಜನ ವಿರೋಧಿಗಳಾಗುತ್ತಿರಲಿಲ್ಲ ಎಂದು ಶರ್ಮ ತಮ್ಮ ಬಳಿ ಬರುವವರ ಮುಂದೆ ಹೇಳುವುದಿದೆ.
ಚಾಪೆಯ ಮೇಲೆ ಕುಳಿತು ಯೋಚಿಸುತ್ತಿದ್ದ ನರೇಂದ್ರ ಶರ್ಮ ಅವರಿಗೆ ತಮ್ಮ ಕಾರ್ಯಕರ್ತರ ಹೋರಾಟದಿಂದ ಹಾಗೂ ಬೆಂಬಲದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನೆನಪಾಗುತ್ತದೆ.  ಆದರೆ ಈ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂಬುದು ಬೇಸರವನ್ನು ಉಂಟು ಮಾಡುತ್ತದೆ.
ನರೇಂದ್ರ ಶರ್ಮ ಎದ್ದು ಬಾತ್ ರೂಮಿನತ್ತ ನಡೆದರು.  ಬಕೇಟಿನಲ್ಲಿ ತುಂಬಿಟ್ಟಿದ್ದ ನೀರನ್ನು ಮೊಗೆದು ಒಂದೊಂದೇ ತಂಬಿಗೆ ನೀರನ್ನು ತಲೆಗೆ ಸುರಿದುಕೊಂಡರು. ರಾಮಾಯ ರಾಮಚಂದ್ರಾಯ… ರಾಮ ಭದ್ರಾಯ ವೇದಸೆ ಎಂದು ಶ್ಲೋಕವನ್ನು ಹೇಳುತ್ತ ಕಲ್ಲಿನಿಂದ ಮೈ ಉಜ್ಜಿಕೊಂಡರು.  ಬಹುಬೇಗ ಸ್ನಾನವನ್ನು ಮುಗಿಸಿ ದೇವರ ಕೊಣೆಯ ಒಳಗೆ ನಡೆದರು. ಅಲ್ಲಿ ಸಂಧ್ಯಾವಂದನೆ ಮಾಡಿ, ಧ್ಯಾನ ಮಾಡಿ ಅವರು ಹೊರಕ್ಕೆ ಬರುವುದು ಯಾವಾಗ ಎಂದು ಹೇಳುವುದು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಅವರನ್ನು ನೋಡಲು ಬರುವವರು ಪೂಜೆ ಸಂಧ್ಯವಂದನೆ ಮುಗಿಯಿತೆ ಎಂದು ಕೇಳಿಕೊಂಡು ಇತ್ತ ಬರುತ್ತಾರೆ.  ಒಂದೊಮ್ಮೆ ಅವರ ಪೂಜೆಯ ಸಂದರ್ಭದಲ್ಲಿ ಬಂದರೆ ಅವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ.
ನಿಮಗೆ ಸಮಯದ ಪ್ರಜ್ನೆಯೇ ಇಲ್ಲ. ಇಲ್ಲಿ ಬಂದು ವಕ್ರಿಸಿ ಬಿಟ್ಟಿದ್ದೀರಲ್ಲ ? ಅಂತಾ ಬಂದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.  ಮುಖ್ಯಮಂತ್ರಿಗಳು, ಮಂತ್ರಿಗಳು ರಾಜ್ಯಪಾಲರು, ಪತ್ರಕರ್ತರು ಯಾರೇ ಇರಲಿ ಅವರು ಕಾಯಲೇಬೇಕು. ಕಾದು ಬೈಸಿಕೊಳ್ಳಲೇ ಬೇಕು. ಹೀಗೆ ಬೈಸಿಕೊಂಡವರ ಪಟ್ಟಿ ಬಹಳದೊಡ್ಡದು.
ನರೇಂದ್ರ ಶರ್ಮ ನಿತ್ಯ ಕರ್ಮವನ್ನು ಮುಗಿಸಿ ಹೊರಕ್ಕೆ ಬರುವಷ್ಟರಲ್ಲಿ ಸಮಯ ಹನ್ನೊಂದು ಗಂಟೆ ದಾಟಿತ್ತು. ಆಗಲೇ ಹಲವರು ಬಂದು ಕಾಯುತ್ತಿದ್ದರು.
(ಮುಂದುವರಿಯುವುದು)

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...