Sunday, July 2, 2023

ಮಹಾರಾಷ್ಟ್ರದಲ್ಲಿ ಭಾನುವಾರದ ಬಂಡಾಯ.. ಎನ್.ಸಿ.ಪಿ ಜೊತೆಗೆ ಶರದ್ ಪವಾರ ಕುಟುಂಬಕ್ಕೂ ಆಪರೇಷನ್ ಕಮಲ ವಿಸ್ತರಿಸಿದ ಕೇಸರಿ ಪಕ್ಷ,,!


 

ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡನೆ ಬಂಡಾಯ.. ಒಂದು ವರ್ಷದ ಹಿಂದೆ ಶಿವಸೇನೆಯಿಂದ ಹೊರಗೆ ಬಂದ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು.. ನಂತರ ತಮದೇ ನಿಜವಾದ ಶಿವಸೇನೆ ಎಂದು ಕಾನೂನು ಹೋರಾಟ ಪ್ರಾರಂಭಿಸಿದ್ದರು.. ಉದ್ದವ ಠಾಕ್ರೆ ವಿರುದ್ಧದ ಈ ಹೋರಾಟದಲ್ಲಿ ಚುನಾವಣಾ ಆಯೋಗ ಶಿಂಧೆ ಅವರ ಜೊತೆ ನಿಂತಂತೆ ಕಂಡು ಬಂದಿತ್ತು.. ಚುನಾವಣಾ ಆಯೋಗ ನಿಶ್ಪಕ್ಷಪಾತ ತೀರ್ಮಾನ ತೆಗೆದುಕೊಂಡಿತ್ತೆ, ಅದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡಿತ್ತೆ ಎಂದು ಚರ್ಚಿಸುವ ಸಂದರ್ಭ ಇದಲ್ಲ. ಆದರೆ ಇವತ್ತು ಭಾನುವಾರ ಮಹಾರಾಷ್ಟ್ರದಲ್ಲಿ ಇನ್ನೊಂದು ರಾಕಕೀಯ ಬಂಡಾಯ ನಡೆದು ಹೋಯಿತು..  ಇಂದು ಬೆಳಿಗ್ಗೆ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಉಳಿದ ಎಂಟು ಜನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ವರ್ಷದಲ್ಲಿ ಎರಡನೆಯ ಬಂಡಾಯ..! ಎರಡನೆಯ ಆಪರೇಷನ್ ಕಮಲ..

ಅಜಿತ್ ಪವಾರ್ ಜೊತೆ ಪಕ್ಷದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಜಗನ್ ಭುಜಬಲ್ ಕೂಡ ಕಮಲದ ಮೋಹಕ್ಕೆ ಒಳಗಾಗಿದ್ದರು..ಶರದ್ ಪವಾರ್ ಅವರ ಜೊತೆ ಎನ್ ಸಿ ಪಿ ಕಟ್ಟಿದವರಲ್ಲಿ ಬಹುತೇಕರು ಪಕ್ಕದ ಮನೆಗೆ ಹೆಜ್ಜೆ ಹಾಕಿಯಾಗಿತ್ತು.. ಈ ಬೆಳವಣಿಗೆ ನಡೆಯಲು ಕಾರಣಗಳೇನು ? ದಿನ ಬೆಳಗಾಗುವದರೊಳಗೆ ಈ ಬೆಳವಣಿಗೆ ನಡೆಯಿತೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ..

ಎನ್ ಸಿ ಪಿ ಯಲ್ಲಿ ಅಧಿಕಾರ ಹಂಚಿಕೆಯ ತಿಕ್ಕಾಟ ನಡೆಯಲು ಪ್ರಾರಂಭವಾಗಿ ಅಟೋ ಕಾಲವಾಗಿತ್ತು.. ಪವಾರ್ ರಾಜಕೀಯವಾಗಿ ತಮ್ಮ ಮಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಳು. ಇದು ಅಜಿತ್ ಪವಾರ್ ಅವರಿಗೆ ಆಶಾಭಂಗಕ್ಕೆ ಕಾರಣವಾಗಿತ್ತು ಎಂಡು ಹೇಳಬಹುದಾದರೂ ಸಂಪೂರ್ಣವಾಗಿ ಇದೊಂದೇ ಕಾರಣ ಅಲ್ಲ. ಉತ್ತಮ ಸಂಘಟಕರಾದ ಅಜಿತ್ ಪವಾರ್ ಅವರಿಗೆ ಬಿಜೆಪಿಯ ಜೊತೆಗೆ ಒಳ ಒಪ್ಪಂದ ಮೊದಲಿನಿಂದಲೂ ಇತ್ತು. ಹಿಂದೊಮ್ಮೆ ಬಿಜೆಪಿ ಜೊತೆ ಒಂದಾಗಿ ಸರ್ಕಾರ ಮಾಡುವ ಅವರ ಯತ್ನ ಸಫಲವಾಗಿರಲಿಲ್ಲ..

ಆದರೆ ತಕ್ಷಣ ಈ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣ ಕೇವಲ ಅಜಿತ್ ಪವಾರ್ ಅಲ್ಲ.. ಬಿಜೆಪಿ ಬಹುಮುಖ್ಯ ಕಾರಣ.. ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಲು ಪಾಟ್ನಾದಲ್ಲಿ ಸಭೆ ನಡೆಸಿದ ನಂತರ ಆತಂಕಕ್ಕೆ ಒಳಗಾಗಿದ್ದು ಬಿಜೆಪಿ.. ಲೋಕಸಭಾ ಚುನಾವಣೆ ಬರಲು ಸುಮಾರು ಒಂಬತ್ತು ತಿಂಗಳು ಇರುವಾಗ ಪ್ರತಿ ಪಕ್ಷಗಳು ಒಂದಾಗಲು ಹೊರಟಿರುವುದು ಬಿಜೆಪಿಯ ಪಾಲಿಗೆ ಸ್ವಾಗತಾರ್ಹ ಬೆಳವಣಿಗೆ ಆಗಿರಲಿಲ್ಲ. ಜೊತೆಗೆ ಈ ಪ್ರತಿ ಪಕ್ಷಗಳ ಹೊಂದಾಣಿಕೆಯ ಯತ್ನದಲ್ಲಿ ಮುಂಚೋಣಿಯಲ್ಲಿ ಇದ್ದವರು ಶರದ್ ಪವಾರ್,,  ಶರದ್ ಪವಾರ್ ಅವರು ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿ ಇರದಂತೆ ಮಾಡಲು ಅವರನ್ನು ಮಹಾರಾಷ್ಟ್ತ್ರದಲ್ಲಿ ಕಟ್ಟಿ ಹಾಕಬೇಕು.. ಇದನ್ನು ಸಾಧಿಸಲು ಎನ್ ಸಿ ಪಿ ಪಕ್ಷವನ್ನೇ ಒಡೆದು ಬಿಡುವುದು ಎಂಬ ತೀರ್ಮಾನಕ್ಕೆ ಬಂತು..ಈ ತೀರ್ಮಾನಕ್ಕೆ ಬಂದ ಮೇಲೆ ಹೆಚ್ಚಿನ ಸಮಯ ಉಳಿಯಲಿಲ್ಲ.. ಸೈಡ್ ವಿಂಗ್ ನಲ್ಲಿ ಕಾಯುತ್ತಿದ್ದ ಅಜಿತ್ ಪವಾರ್ ಅವರಿಗೆ ಬಿಜೆಪಿ ಗಾಳ ಹಾಕಿತು. ಉಪ ಮುಖ್ಯಮಂತ್ರಿ ಸ್ಥಾನದ ಆಮಿಷವನ್ನು ಒಡ್ಡಲಾಯಿತು.. ಅಜಿತ್ ಪವಾರ್ ನಗು ನಗುತ್ತ ಬಿಜೆಪಿಯತ್ತ ಹೊರಟೇ ಬಿಟ್ಟರು.

ಅಜಿತ್ ಪವಾರ್ ಇಂದು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆ ಇನ್ನೂ ಎಂಟು ಜನ ಸಚಿವರಾದರು..

ಶರದ್ ಪವಾರ್ ಅವರನ್ನು ಹೆಣೆಯುವ ಯತ್ನದಲ್ಲಿ ಬಿಜೆಪಿ ಯಶಸ್ವಿಯಾಯಿತು ನಿಜ..ಆದರೆ ಶರದ್ ಪವಾರ್ ಉದ್ದವ್ ಠಾಕರೆ ಅಲ್ಲ.. ಅವರ ರಾಜಕೀಯ ನಡೆಯನ್ನು ಊಹಿಸುವುದೂ ಕಷ್ಟ.. ಈ ಬೆಳವಣಿಗೆಯ ನಂತರ ಪ್ರತಿಕ್ರಿಯೆ ನೀಡಿದ ಶರದ್ ಪವಾರ್ ಶಾಂತವಾಗಿಯೇ ಇದ್ದರು.. ಯಾರನ್ನೂ ಟೀಕಿಸಲಿಲ್ಲ. ಆದರೆ ಮೋದಿಯವರನ್ನು ತಮ್ಮದೇ ಆದ ರೀತಿಯಲ್ಲಿ ಟೀಕಿಸಲು ಮರೆಯಲಿಲ್ಲ..

ನಮ್ಮನ್ನು ಭ್ರಷ್ಟರು ಎನ್ನುತ್ತಿದ್ದಿರಿ.. ನೀರಾವರಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಅವ್ಯವಹಾರ ಅಕ್ರಮ ನಡೆಸಿದ್ದೇವೆ ಎಂದು ಎರಡು ದಿನಗಳಾ ಹಿಂದೆ ನಮ್ಮ ಮೇಲೆ ಅರೋಫ ಮಾಡಿದ್ದಿರಿ.. ಈಗ ನಮ್ಮ ಸಹೋದ್ಯೋಗಿಗಳನ್ನು ಕರೆದುಕೊಳ್ಳುವ ಮೂಲಕ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದ್ದಿರಿ ಎಂದು ಪ್ರತಿಕ್ರಿಯೆ ನೀಡಿದರು ಶರದ್ ಪವಾರ್.

ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅಜಿತ್ ಪವಾರ ಅವರು ನೀಡಿದ ಪ್ರತಿಕ್ರಿಯೆ;

. ಇದು ನನ್ನ ರಾಜಕೀಯ ಬದುಕಿನಲ್ಲಿ ಹೊಸದಲ್ಲ.. ಕೆಲವು ದಿನ ಕಾಯಿತಿ ಎಂದವರು ಶರದ್ ಪವಾರ್.

ಬಂಡಾಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ..ನಾವು ಪಕ್ಶ್ಃಅವನ್ನು ಬಲಪಡಿಸಲು ಕೆಲಸ ಮಾಡುತ್ತೇವೆ.. ಪಕ್ಶ್ಃಅದ ಶಾಸಕರು ಮತ್ತುಅ ನಾಯಕರು ಕುಳೀತು ಚರ್ಚೆ ಮಾಡುತ್ತೇನೆ,, ನಾನು ಪಕ್ಶ್ಃಅದ ಅಧ್ಯಕ್ಶ್ಃಅನಾಗಿ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಲ್ಕೆರೆ ಅವರಿಗೆ ಜವಾಬ್ದಾರಿಯನ್ನು ನೀಡಿದ್ದೆ , ಅವರು ಆ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ.

ಕಳೆದ ಎರಡು  ದಿನಗಳ ಹಿಂದೆ ಪ್ರಧಾನಿ ನರೇಂಡ್ರ ಮೋದಿ ಅವರು ಎನ್ ಸಿ ಪಿ ಯ ಬಗ್ಗೆ ಮಾತನಾಡಿದ್ದರು. ಎನ್ ಸಿ ಪಿ ಮುಗಿದ ಪಕ್ಷ ಎಂದೂ ಹೇಳಿದ್ದರು,, ನೀರಾವರಿ ಹಾಗೂ ಇನ್ನಿತರ ಇಲಾಖೆಗಳಲ್ಲಿ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು, ಆದರೆ ಈಗ ನನ್ನ ಸಹೋದ್ಯೋಗಿಗಳನ್ನು ಪಕ್ಷಕ್ಕೆ ತೆಗೆದುಕೊಳ್ಳುವ ಮೂಲಕ ಅವರನ್ನು ಭ್ರಷ್ಟಾಚಾರ ಮುಕ್ತರನ್ನಾಗಿ ಮಾಡಿದ್ದಾರೆ. ಅವರಿಗೆ ನಾನು ಕೃತಜ್ನನಾಗಿದ್ದೇನೆ..

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ಹೇಳಿದ್ದೇನು ನೋಡಿ..

Modi, addressing partymen in Bhopal, slammed the Opposition parties. Targeting them days after the Patna conclave, Modi said that the Opposition parties can only “guarantee” corruption, and accused them of being involved in scams worth “at least 20 lakh crore”. He also accused the Opposition parties of being family-run, which only worked to keep their families relevant.

ಶರದ್ ಪವಾರ್ ನಾಳೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ.

೨೮೮ ಸದಸ್ಯರ ವಿಧಾನ ಸಭೆ,, ಎನ್ ಸಿ ಪಿ ೫೪ ಸ್ಥಾನಗಳನ್ನು ಹೊಂದಿತ್ತು. ಈಗ ಎಷ್ಟು ಜನ ಅಜಿತ್ ಪವಾರ್ ಜೊತೆ ಹೋಗುತ್ತಿದ್ದಾರೆ ಎಂಬ ವಿವರಗಳು ಹೊರಬರಬೇಕಾಗಿದೆ,, ಪಕ್ಶ್ಃಅವನ್ನು ಒಡೆಯಲು ಕನಿಷ್ಟ ೨೯ ಶಾಸಕರ ಬೆಂಬಲ ಅಜಿತ್ ಪವಾರ್ ಗೆ ಬೇಕಾಗಿದೆ,,

ಒಂದು ವರ್ಶದ ಹಿಂದೆ ಶಿವಸೇನೆಯಲ್ಲಿ ಬಂಡಾಯ ಮಾಡಿದ  ಶಿಂದೆ ಮಹಾ ವಿಕಾಸ್ ಅಗಾಡಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಜ್ಪೊತೆ ಸರ್ಕಾರ ಮಾಡಿದ್ದರು.. ಈಗ ಬಂಡಾಯ ನಡೆಸಿದ್ದು ಎನ್ ಸಿ ಪಿ ಯಲ್ಲಿ,,

ಡಬಲ್ ಎಂಜಿನ್ ಸರ್ಕಾರ ಈಗ ಟಿಪಲ್ ಎಂಜಿನ್ ಸರ್ಕಾರವಾಗಿದೆ ಏಕನಾಥ್ ಶಿಂಧೆ,,

ಕಾಂಗ್ರೆಸ್ ಪ್ರತಿ ಕ್ರಿಯೆ::

ಬಿಜೆಪಿಯ ವಾಶಿಂಗ್ ಮಿಷನ್ ಮತ್ತೆ ಕೆಲಸ ಪ್ರಾರಂಭಿಸಿದೆ,,,ಈಗ ಹೊಸದಾಗಿ ಬಿಜೆಪಿಯ ಜೊತೆ ಕೈಜೋಡಿಸಿದವರು ಇಡಿ, ಸಿಬಿಐ, ಎನ್ಕಂ ಟ್ಯಾಕ್ಸ್ ಪ್ರಕರಣಗಳನ್ನು ಎದುರಿಸುತ್ತಿರುವವರು,, ಇನ್ನು ಮುಂದೆ ಅವರು ಶುದ್ಧರಾಗಿ ಹೊರಕ್ಕ್ಕೆ ಬರುತ್ತಾರೆ.. ಕಾಂಗ್ರೆಸ್ ಮಹಾರಾಷ್ಟ್ರವನ್ನು ಬ್ ಇಜೆಪಿ ಮುಕ್ತ ಮಾಡಲು ಹೋರಾಡುತ್ತದೆ,,.

ಪ್ರಧಾನಿ ಮೋದಿ ಅವರ ಪ್ರಕಾರ ಎನ್ ಸಿ ಪಿ ಭ್ರಷ್ಟರ ಪಕ್ಷ.. ಅವರದು ಕುಟುಂಬ ರಾಜಕೀಯ ಇವರೆಲ್ಲ ಲಕ್ಶಾಂತರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ.. ಹಾಗಿದ್ದರೆ ಶರದ್ ಪವಾರ ಕುಟುಂಬದ ಸದಸ್ಯರಾಗಿರುವ ಅಜಿತ್ ಪವಾರ್ ಅವರನ್ನು ಯಾಕೆ ಉಪ ಮುಖ್ಯಮಂತ್ರಿ ಮಾಡಿದಿರಿ ?

ಭ್ರಷ್ಟರು ಬಿಜೆಪಿಗೆ ಬಂದ ತಕ್ಷಣ ಶುದ್ಧರಾಗುತ್ತಾರೆಯೆ ?

ಇವರೆಲ್ಲರ ಮೇಲೆ ಇರುವ ಭ್ರಷ್ಟಾಚಾರದ ಪ್ರಕರಣಗಳು ಏನಾಗುತ್ತವೆ ? ಈ ಪ್ರಕರಣಗಳನ್ನು ಮುಚ್ಚಿ ಹಾಕುತ್ತೀರಿ ಅಲ್ಲವೆ ?

ಆಸ್ಸಾ ಮುಖ್ಯಮಂತ್ರಿಯಾಗಿ ನೀವೇ ಮಾಡಿರುವ ಶರ್ಮಾ ನನ್ನು ಭ್ರಷ್ಟಾಚಾರ ಆರೋಪದಿಂದ ಮುಕ್ತಗೊಳಿಸಿದಂತೆ ಅಜಿತ್ ಪವಾರ್ ರನ್ನು ಮುಕ್ತಗೊಳೀಸುತ್ತೀರಾ, 

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಬೇಕಾಗಿದೆ, ಆದರೆ ಒಂದಂತೂ ನಿಜ ಆಪರೇಷನ್ ಕಮಲ ಪಕ್ಷದ ಹಂತದಿಂದ ನಾಯಕರ ಕುಟುಂಬದ ಹಂತದ ವರೆಗೆ ಬಂದು ತಲುಪಿದೆ.



No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...