Saturday, July 1, 2023

ರಾಜ್ಯ ಬಿಜೆಪಿ ಬಿಕ್ಕಟ್ಟು. ಯಡಿಯೂರಪ್ಪ ಅವರಿಗೆ ದೆಹಲಿಗೆ ಬುಲಾವ್; ಸಮಸ್ಯೆಯ ಮೂಲ ಬಿ. ಎಲ್. ಸಂತೋಷ್ ಬದಲಾಗುವರೆ ?



ಮಳೆ ಹೊಯ್ದು ಹೋದ ಮೇಲೆ ಮಳೆ ಹನಿಗಳು ಬೀಳುತ್ತಲೇ ಇರುತ್ತವೆ,, ಮೋಡ ಮುಚ್ಚಿರುತ್ತದೆ. ಯಾವಾಗ ಮತ್ತೆ ಮಳೆ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ.. ಮತ್ತೆ ಗುಡುಗು ಸಿಡಿಲು.. ದೊಡ್ದ ಮಳೆ ಬರಬಹುದು.ಪ್ರವಾಹವೂ ಸೃಷ್ಟಿಯಾಗಬಹುದು. ಹೀಗೆಂದು ಹೇಳುವುದು ಸಾಧ್ಯವಿಲ್ಲ.. ನಿಜ ಹೀಗೆಂದು ಹೇಳುವುದು ಸಾಧ್ಯವಿಲ್ಲ..

ರಾಜ್ಯ ಬಿಜೆಪಿಯ ಇಂದಿನ ಸ್ಥಿತಿಯನ್ನು ನೋಡುವಾಗ ಇದೆಲ್ಲ ನೆನಪಾಗುತ್ತಿದೆ.. ಚುನಾವಣೆ ಎಂಬ ಮಹಾ ಮಳೆ ಬಂದು ಹೋಗಿದೆ.. ಬಿಜೆಪಿ ಕೊಚ್ಚಿಕೊಂಡು ಹೋಗಿದೆ. ಅದಾದ ಮೇಲೆ ಮತ್ತು ಗುಡುಗು ಸಿಡಿಲು... ಆಗಾಗ ಮಿಂಚು..

ಬಿಜೆಪಿ ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿ ನಾಯಕರಿಗೆಲ್ಲ ಆಘಾತ. ಅಧಿಕಾರ ಕಳೆದುಕೊಂಡ ನೋವು.. ಆಗ ಸಿ.ಟಿ. ರವಿ ಪ್ರತಾಪ ಸಿಂಹ ಈಶ್ವರಪ್ಪ ಮೊದಲಾದವರು ಪರಸ್ಪರ ದೋಷಾರೋಪಣೆ ಪ್ರಾರಂಭಿಸಿದರು.. ಸೋಲಿಗೆ ಬೆರೆಯವರನ್ನು ಹೊಣೆಯಾಗಸುವ  ಬ್ರಹನ್ನನಾಟಕವೂ ಪ್ರಾರಂಭವಾಯಿತು.. ಈ ಸೋಲಿಗೆ ನನ್ನನ್ನು ಬಿಟ್ಟು ಉಳಿದವರು ಕಾರಣ ಎಂದು ಹೋಣೆಗಾರಿಕೆಯನ್ನು ಫಿಕ್ಸ್ ಮಾಡುವ ಕಾರ್ಯಾಚರಣೆ.. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ಒಹಿಸಿದವರಲ್ಲಿ ಮೈಸೂರು ಸಂಸದ ಪ್ರತಾಪ ಸಿಂಹ, ಸಿ.ಟಿ. ರವಿ  ಈಶ್ವರಪ್ಪ ಇವರೇ ಪ್ರಮುಖರಾಗಿದ್ದರು. ಈ ನಡುವೆ ಹೊಂದಾಣಿಕೆ ರಾಜಕಾರಣದ ಬಾಣವನ್ನು ಬಿಟ್ಟಾಗಿತ್ತು. ಈ ಬಾಣದ ಗುರಿ ಯಾರು ಎಂಬ ಬಗ್ಗೆ ಯಾರಿಗೂ ಅನುಮಾನ ಇರಲಿಲ್ಲ..

ಈ ಹೊಂದಾಣಿಕೆಯ ಅನುಮಾನ ಚುನಾವಣಾ ಸಂದರ್ಭದಲ್ಲೇ ಮೂಡಿತ್ತು. ಇದಕ್ಕೆ ಕೆಲವು ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು.. ಉದಾಹರಣೆಗೆ ಶಿಕಾರಿ ಪುರ ಕ್ಷೇತ್ರದಿಂದ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಹಾಗೆ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡದೇ ಇರುವುದು ಜೊತೆಗೆ ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ. ಕೆ,ಶಿವಕುಮಾರ್ ಅವರ ಜೊತೆ ಯಡಿಯೂರಪ್ಪ ಹೊಂದಿದ ಆತ್ಮೀಯ ಸಂಬಂಧ.. ಹಾಗೆ ರಾಜಕಾರಣದಲ್ಲಿ ಇದೆಲ್ಲ ಸಹಜ ಕ್ರಿಯೆ.. ಜೊತೆಗೆ ಇಂತಹ ಆರೋಪಗಳು ಸತ್ಯ ಎಂದಾಗಲಿ ಸುಳ್ಳು ಎಂದಾಗಲಿ ಸಾಕ್ಷ್ಯ ಸಮೇತ ಸಾಭಿತು ಮಾಡುವುದು ಸಾಧ್ಯವಿಲ್ಲ. ಆದರೆ ಇಂತಹ ರಾಜಕೀಯ ಅಸ್ತ್ರವಾಗಿ ಬಳಕೆಯಾಗುವುದು ಮಾತ್ರ ನಿಜ. ಜೊತೆಗೆ ಆರೋಪಕ್ಕೆ ಒಳಗಾದವರು ಮತ್ತು ಆರೋಪ ಮಾಡಿದವರ ವೈಯಕ್ತಿಕ ಸಂಬಂಧ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ. 

ಬಿಜೆಪಿಯಲ್ಲಿ ಯಡೀಯೂರಪ್ಪ  ವಿರೊಧಿಗಳು ಎಂದು ಗುರುತಿಸಲ್ಪಡುವುವವರು ಇದೇ ಸಿ>ಟಿ. ರವಿ, ಪ್ರತಾಪ ಸಿಂಹ ಬಸವರಾಜ ಪಾಟೀಲ್ ಯತ್ನಾಳ ಮೊದಲಾದವರು. ಇವರೆಲ್ಲ ಬಿ.ಎಲ್.ಸಂತೋಷ ಅವರ ಮನೆ ಅಂಗಳದ ಮಕ್ಕಳು. ಇವರ ಬೆನ್ನಿಗೆ ಮೊದಲಿನಿಂದ ನಿಂತವರು ಬಿ. ಎಲ್. ಸತೋಷ್. 

ಬಿ.ಎಲ್ ಸ>ತೋಷ್ ಅನಂತಕುಮಾರ್ ಅವರ ಬದುಕಿದ್ದಾಗ ಅವರ ವಿರುದ್ಧ ರಾಜಕಾರಣ ಮಾಡುತ್ತ ಬಂದಿದ್ದರು. ಆಗ ಸಂತೋಷ ಯಡಿಯೂರಪ್ಪ ಅವರನ್ನು ದಾಳವಾಗಿ ಬಳಸಿಕೊಂಡಿದ್ದರು.ಅನಂತಕುಮಾರ್ ಅವರು ಅಸು ನೀಗಿದ ಮೇಲೆ ಸಂತೋಷ್ ಅವರ ರಾಜಕಾರಣದ ದಾರಿ ಬದಲಾಯಿತು.. ಅವರು ಯಡಿಯೂರಪ್ಪ ಅವರ ಮೇಲೆ ತಿರುಗಿ ಬಿದ್ದರು.. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವರೆಗೆ ಬಿಡಲಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಸಂತೋಷ ಯುದ್ಧ ಸಾರಿದಾಗ ಅವರು ಇದೇ ಸಿ>ಟಿ. ರವಿ, ಪ್ರತಾಪ ಸಿಂಹ ಮತ್ತು ಯತ್ನಾಳ್ ಅವರನ್ನು ಕಾಲಾಳಾಗಿ ಬಳಸಿಕೊಂಡರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ರಾಜ್ಯ ಬಿಜೆಪಿ ಲಿಂಗಾಯತ ನಾಯಕತ್ವದ ಸಮಸ್ಯೆಯಿಂದ ಬಳಲತೊಡಗಿತು.. ಯಡಿಯೂರಪ್ಪ ಅವರನ್ನು ರಿಪ್ಲೇಸ್ ಮಾಡುವ ಇನ್ನೊಬ್ಬ ನಾಯಕ ಕೇಸರಿ ಪಕ್ಷಕ್ಕೆ ದೊರಕಲಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮತ್ತೆ ಯಡೀಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬೇಕಾದ ಸ್ಥಿತಿಗೆ ಬಿಜೆಪಿ ತಲುಪಿತ್ತು.  ಅಧಿಕಾರ ವಿರೋಧಿ ಅಲೆ ಯಾವ ಮಟ್ಟದಲ್ಲಿ ಇತ್ತೆಂದರೆ ಯಡಿಯೂರಪ್ಪ ಏನೇ ಮಾಡಿದರೂ ಈ ಅಲೆಯನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಜೊತೆಗೆ ಜಗದೀಶ್ ಶೆಟ್ಟರ್ ಅಂತಹ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಬದಲಾಗುತ್ತಿರುವ ಲಿಂಗಾಯತ ರಾಜಕಾರಣದ ಮುನ್ಸೂಚನೆ ಆಗಿತ್ತು. 

ಸಂತೋಷ ಕರ್ನಾಟಕದ ರಾಜಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದರು.. ತಮ್ಮ ವೈಫಲ್ಯವನ್ನು ಗುರುತಿಸುವುದರಲ್ಲಿಯೂ ಸಂತೋಷ್ ವಿಫಲರಾಗಿದ್ದರು. ಸಂಘ ಪರಿವಾರದ ಪ್ರತಿನಿಧಿಯಾಗಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾದ ಅವರಿಗೆ ವ್ಯಕ್ತ ಕೇಂದ್ರಿತವಾದ ನಾಯಕತ್ವದ ದ ನಂಬಿಕೆ ಇರಲಿಲ್ಲ. ಅವರ ಗುರಿ ಸಂಘ ಪರಿವಾರದ ನಂಭಿಕೆ ಮತ್ತು ತತ್ವಾದರ್ಶದ ಆಧಾರದ ಮೇಲೆ ಪಕ್ಷವನ್ನು  ಅಧಿಕಾರದಲ್ಲಿ ತರುವುದು ಎಂದಾಗಿತ್ತು.. ಹಾಗೆ ಬಿಜೆಪಿ ಲಿಂಗಾಯತರ ಪಕ್ಷ ಎಂಬ ನಂಬಿಕೆ ಮತ್ತು ವಾಸ್ತವವನ್ನು ಬದಲಿಸಬೇಕು ಎಂದು ಅವರು ನಂಬಿಕೊಂಡಿದ್ದರು. ಈ ಕಾರಣದಿಂದಲೇ ಸಂತೋಷ ಅವರ ಕಾರ್ಯಪಡೆಯ ಸಿ<ಟಿ. ರವಿ ನಮಗೆ ಲಿಂಗಾಯತರ ಮತ ಬೇಕಾಗಿಲ್ಲ ಎಂಬ ಅರ್ಥದ ಮಾತುಗಳನ್ನು ಆಡಿ ಮರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರು..

ಚುನಾವಣೆ ಸೋತ ಮೇಲೆ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಎಷ್ಟು ಅವಲಂಬಿತವಾಗಿದೆ ಎಂಬ ಅರಿವು ಪಕ್ಷದ ವರಿಷ್ಠರಿಗೆ ಆಗತೊಡಗಿತ್ತು.. ಆದರೆ ಈ ಜ್ನಾನೋದಯ ಸಂತೋಷ್ ಅವರ ತಂಡಕ್ಕೆ ಆಗಲೇ ಇಲ್ಲ..ಹೀಗಾಗಿ ಸಂತೋಷ್ ಪಡೆ ಯಡಿಯೂರಪ್ಪ ಅವರ ವಿರುದ್ಧದ ರಾಜಕಾರಣವನ್ನು ಮುಂದುವರಿಸಿತು.. ಇದಕ್ಕೆ ಪ್ರತಿಯಾಗಿ ರೇಣುಕಾಚಾರ್ಯ ಅವರಂತಹ ಯಡಿಯೂರಪ್ಪ ಅವರ ಶಿಷ್ಯರು ತೊಡೆ ತಟ್ಟಿ ನಿಂತರು.. ಇದರಿಂದಾಗಿ ಪಕ್ಷ ಗೊಂದಲದ ಗೂಡಾಯಿತು.. ರಾಜಯ್ ಬಿಜೆಪಿ ಅಧ್ಯಕ್ಷರನ್ನಾಗಲಿ ಪ್ರತಿ ಪಕ್ಷದ ನಾಯಕರನ್ನಾಗಲೀ ನೇಮಕ ಮಾಡುವುದೂ ಸಾಧ್ಯವಾಗಲೇ ಇಲ್ಲ..

ಈಗ ಪಕ್ಷದ ವರಿಷ್ಠರು ಈ ಸಮಸ್ಯೆಯನ್ನು ಬಗೆ ಹರಿಸಲು ಮುಂದಾಗಿದ್ದಾರೆ..ಆದರೆ ಇದು ಕೂಡ ಸುಲಭವಾಗಿಲ್ಲ.. ಆದರೆ ಯಡೀಯೂರಪ್ಪ ಅವರೊಬ್ಬರನ್ನೇ ದೆಹಲಿಗೆ ಕರೆಸಿರುವ ಮೂಲ್ಲಕ ಪಕ್ಷದ ವರಿಷ್ಠರು ಕರ್ನಾಟಕದಲ್ಲಿ ಯಡೀಯೂರಪ್ಪನವರೇ ಮುಖ್ಯ ಎಂಬ ಸಂದೇಶವನ್ನು ನೀಡಿದ್ದಾರೆ.. ಯಡೀಯೂರಪ್ಪ ಅವರ ಜೊತೆ ಚರ್ಚಿಸಿ ಕರ್ನಾಟಕದ ಸಮಸ್ಯೆಯನ್ನು ಬಗೆ ಹರಿಸಲು ಯತ್ನ ನಡೆಸಲಿದ್ದಾರೆ. ಆದರೆ ಈ ಸಮಸ್ಯೆಯ ಮೂಲ ಇರುವುದು ವರಿಷ್ಠ ಪಕ್ಕದಲ್ಲೇ ದುಷ್ಮನ್ ಕಹಾ ಹೈ ಅಂದರೆ ಬಗಲ್ ಮೇ ಎಂಬಂತೆ ಆಗಿದೆ. ಕರ್ನಾಟಕದ ಬಿಜೆಫ಼್ಪಿಯ ಸಮಸ್ಯೆ ಬಿ. ಎಲ್ ಸ<ತೋಷ್ ಅವರೇ ಆಗಿದ್ದಾರೆ.. ಅವರು ಸೃಷ್ಟಿ ಮಾಡಿದ ಮಾಡುತ್ತಿರುವ ಸಮಸ್ಯೆ ಬಗೆ ಹರಿಯದೇ ರಾಜ್ಯ ಬಿಜೆಪಿಯ ಸಮಸ್ಯೆ ಬಗೆಹರಿಯಲಾರದು.. ಮದುವೆಯಾದ ಹೊರತೂ ಹುಚ್ಚು ಬಿಡೋಲ್ಲ, ಹುಚ್ಚು ಬಿಡದ ಹೊರತೂ ಮದುವೆಯಾಗಲ್ಲ ಎಂಬ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇದೆ.


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...