Sunday, June 5, 2022

 ನಾನು ಕಳೆದ ಕಲವು ತಿಂಗಳುಗಳಿಂದ ಏನನ್ನೂ ಬರೆದಿಲ್ಲ.. ಬರೆಯುವುದು ಎಂದರೆ ಅದು ಹೃದಯವನ್ನು ಬಸಿಯುವ ಕೆಲಸ..ನಾನು ಸುದ್ದಿ ಟಿವಿ ಡಿಜಿಟಲ್ ವಾಹಿನಿಯ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದರಿಂದ ಬರೆಯಲು ಸಾಧ್ಯವಾಗಿರಲಿಲ್ಲ.

ಆದರೆ ಬರವಣಿಗೆ ನನ್ನ ಮೂಲ ಪ್ರವೃತ್ತಿ.. ನಾನು ಬರೆಯುತ್ತಲೇ ಇದ್ದವನು.. ನನ್ನ ಕಾಲೇಜು ದಿನಗಳಲ್ಲಿ ಕಥೆ ಕವನಗಳನ್ನು ಬರೆಯುತ್ತಿದ್ದೆ.. ೮೦ ರ ದಶಕದಲ್ಲಿ ನಾನು ಬರೆದ ಕಥೆ ಸಾವು ಮಯೂರ ಮಾಸಿಕದಲ್ಲಿ ಪ್ರಕಟವಾಗಿತ್ತು. ಆಗ ನಾನು ಸಂಭ್ರಮ ಪಟ್ಟಿದ್ದು ನನಗೆ ನೆನಪಿದೆ. ನನ್ನ ಮೊದಲ ಕವನ ಪ್ರಕಟವಾಗಿದ್ದು ಸಂಕ್ರಮಣ ಮಾಸಿಕದಲ್ಲಿ..ಚಂದ್ರಶೇಖರ ಪಾಟೀಲರು ಇದರ ಸಂಪಾದಕರಾಗಿದ್ದರು.. ಬುದ್ದಣ್ಣ ಹಿಂಗಮಿರೆ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಅವರೂ ಚಂದ್ರಶೇಖರ್ ಪಾಟೀಲ್ ಅವರ ಜೊತೆಗಿದ್ದರು,

ಇದಾದ ಮೇಲೆ ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟೆ.. ಮೊದಲು ನಮ್ಮೂರಿನಿಂದ ಬರುತ್ತಿದ್ದ ಕಡಲಧ್ವನಿ ಪತ್ರಿಕೆಯಲ್ಲಿ ವಾರದ ಅಂಕಣ ಬರೆಯುತ್ತಿದ್ದೆ. ಆ ಪತ್ರಿಕೆಯಲ್ಲಿ ಬರೆದ ಭ್ರಷ್ಟಾಚಾರ ಪ್ರಕರಣದ ವರದಿಯಿಂದಾಗಿ ನಾನು ಮಾನಹಾನಿ ಕಟ್ಲೆ ಎದುರಿಸಬೇಕಾಯಿತು..ಆಗ ನನ್ನ ಪರವಾಗಿ ವಾದಿಸಿದವರು ಧಾರೇಶ್ವರ ವಕೀಲರು. ಅವರು ಏನನ್ನೂ ತೆಗೆದುಕೊಳ್ಳದೇ ವಾದ ಮಾಡಿ ನನ್ನನ್ನು ಗೆಲ್ಲಿಸಿದರು.

ಇದೇ ಸಂದರ್ಭದಲ್ಲಿ ಹೋರಾಟಗಳಲ್ಲಿ ಪಾಲ್ಗೊಂಡು ನಾನು ಊರು ಬಿಡಬೇಕಾಯಿತು.. ಊರು ಬಿಟ್ಟವನು ಬೆಂಗಳೂರಿಗೆ ಬಂದೆ.. ಆಕಾಶವಾಣಿ ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಅಲ್ಲಿಂದ ನನ್ನ ಪತ್ರಿಕೋದ್ಯಮದ ಜರ್ನಿ ಪ್ರಾರಂಭವಾಯಿತು.. ಪತ್ರಿಕೋದ್ಯಮದ ಅವಸರದ ಸಾಹಿತ್ಯದಲ್ಲಿ ಕಳೆದು ಹೋದೆ.. ನನ್ನ ಕ್ರಿಯಾಶೀಲ ಬರವಣಿಗೆಗೆ ತಡೆ ಉಂಟಾಯಿತು,, ಆಗಾಗ ಬರೆಯುತ್ತಿದ್ದೆ. ಕುಮ್ರಿ ಬ್ಲ್ಲಾಗ್ ಗೆ ಅಗಾಗ ಬರೆಯುತ್ತಿದ್ದರೂ ಅಲ್ಲಿ ಶಿಸ್ತು ಇರಲಿಲ್ಲ,, 

ಈಗ ಮತ್ತೆ ಬರೆಯಬೇಕು ಅಲ್ಲಿಸುತ್ತಿದೆ..

ಯಾಕೆಂದರೆ ದೃಶ್ಯ ಮಾಧ್ಯಮ ಬರೆಯುವ ಸುಖ ನೀಡಲಾರದು..ಇದು ಈಗ ನನಗೆ ಅರ್ಥವಾಗುತ್ತಿದೆ, ನಾನು ಮತ್ತೆ ಬರೆಯಲು ಪ್ರಾರಂಭಿಸುತ್ತಿದ್ದೇನೆ.. ನನ್ನೊಳಗೆ ಇರುವುದಕ್ಕೆ ಅಕ್ಷರ ರೂಪ ಕೊಡುತ್ತೇನೆ,,

ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಸದಾ ಇರಲಿ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...