ಈಗ ಎರಡು ಮೂರು ದಿನಗಳ ಹಿಂದೆ;; ಟೈಂಸ್ ನೌ ಎಂಬ ವಾಹಿನಿಯಲ್ಲಿ ಚರ್ಚೆಯೊಂದು ನಡೆಯುತ್ತಿತ್ತು.. ಈ ಚರ್ಚೆ ನಡೆಸಿಕೊಡುತ್ತಿದ್ದವರು ನಾವಿಕಾ ಕುಮಾರ್ ಎಂಬ ಯಾಂಕರ್. ಚರ್ಚೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಪ್ರಮುಖರೆಂದರೆ ಬಿಜೆಪಿಯ ಪ್ರಭಾವಿ ವಕ್ತಾರರಾದ ನೂಪುರ್ ಶರ್ಮಾ..
ಯಾಂಕರ್ ಮತ್ತು ಬಿಜೆಪಿ ವಕ್ತಾರಿಬ್ಬರೂ ಸೇರಿ ಮುಸ್ಲೀಂ ರ ಮೇಲೆ ದಾಳಿ ನಡೆಸುತ್ತಿದ್ದರು.. ಇಬ್ಬರೂ ತಮಗೆ ತಾವೇ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಈ ವಾಹಿನಿಯಲ್ಲಿ ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಾಗಿರಲಿಲ್ಲ. ಇಂತಹ ಚರ್ಚೆಗಳಿಗೆ ಈ ವಾಹಿನಿ ಹೆಸರುವಾಸಿ.. ಗೋದಿ ಮೀಡಿಯಾದ ಪ್ರಮುಖ ವಾಹಿನಿಯಾಗಿರುವ ಟೈಂಸ್ ನೌ ಸ್ಪರ್ಧೆ ನಡೆಸುತ್ತಿರುವುದು ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯ ಜೊತೆ,,
ಇಂತಹ ಚರ್ಚೆಗಳನ್ನು ನಡೆಸುತ್ತ ಬಿಜೆಪಿ ವಲಯದಲ್ಲಿ ತಮ್ಮನ್ನು ಗುರುತಿಸಕೊಂಡ ನಾವಿಕಾ ಕುಮಾರ್ ಈ ಬಾರಿ ಇಂತಹ ವಿವಾದ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ,,
ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗೆ ತುಂಬಾ ಹತ್ತಿರವಾಗಿದ್ದವರು ನಾವಿಕಾ ಕುಮಾರ್. ಅವರ ನಿಧನದ ನಂತರ ಈ ನಾವಿಕಾ ಕುಮಾರ್ ಗೃಹ ಸಚಿವ ಅಮಿತ್ ಶಾ ಅವರಿಗೆ ಹತ್ತಿರವಾಗಿದ್ದರು,, ಆಗಾಗ ಅಮಿತ್ ಶಾ ಅವರ ಸಂದರ್ಶನ ಮಾಡುತ್ತಿದ್ದ ನಾವಿಕಾ ಯಾವ ಸಂದರ್ಭದಲ್ಲೂ ತಾವೊಬ್ಬ ಪತ್ರಕರ್ತ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡವರೇ ಅಲ್ಲ.. ಸದಾ ಅಮಿತ್ ಶಾ ಅವರನ್ನು ಸಂತೋಷ ಪಡುವ ರೀತಿಯಲ್ಲೇ ಸಂದರ್ಶನ ಮಾಡುತ್ತಲೇ ಬಂದವರು.
ಇನ್ನು ಈ ನೂಪುರ್ ಶರ್ಮಾ.. ಬಿಜೆಪಿಯ ವಕ್ತಾರರಾದ ಇವರು ಬಿಜೆಪಿಯ ಹಲವು ನಾಯಕರಿಗೆ ಆಪ್ತರಾದವರು.. ಅವರೇ ಹೇಳಿಕೊಂಡಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಗೃಹ ಸಚಿವ ಅಮಿತ್ ಶಾ ತಮ್ಮ ಬೆಂಬಲಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು
ಇವರಿಬ್ಬರು ತಮ್ಮ ಚರ್ಚೆ ಎಂಬ ಮುಸ್ಲೀಂ ವಿರೋಧಿ ಭಾಷಣದ ಕಾರ್ಯಕ್ರಮವನ್ನು ಮುಂದುವರಿಸಿದ್ದರು,, ಆದರೆ ಈ ಬಾರಿ ಇವರಿಬ್ಬರ ಈ ದಾಳಿಯಿಂದ ತೊಂದರೆಗೆ ಸಿಲುಕಿಕೊಂಡವರು ಪ್ರಧಾನಿ ನರೇಂದ್ರ ಮೋದಿ, ಗೄಹ ಸಚಿವ ಅಮಿತ್ ಶಾ, ಕೇಸರಿ ಪಕ್ಷ ಬಿಜೆಪಿ.. ಇವಲ್ಲಕ್ಕಿಂತ ಮುಖ್ಯ ಎಂದರೆ ಈ ಮೂರ್ಖರಿಂದಾಗಿ ಭಾರತ ತಮ್ಮ ಆಪ್ತ ಸ್ನೇಹಿತರ ಬೇಸರಕ್ಕೆ ಕಾರಣವಾದದ್ದು,
ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು.. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕೋಮುವಾದಿ ವಕ್ತಾರರು ಮತ್ತು ಯಾಂಕರ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಜೊತೆಗೆ ಸೌದಿ ಅರೇಬಿಯಾ, ಕುವೈತ್, ಒಮಾನ್, ಮೊದಲಾದ ಟ್ರಗರಾಯಭಾರಿಗಳನ್ನು ಕರೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇಮಾನ್ ಧರ್ಮಗುರು ಹೇಳಿಕೆಯೊಂದನ್ನು ನೀಡಿ ಪ್ರವಾದಿ ಮೊಹಮ್ಮದ್ ಅವರಿಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಆಗ ಜಾಗೃತವಾದ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿತು,,ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಲಹೆ ನೀಡಿತು.. ಕೋಮುವಾದಿ ರಾಜಕಾರಣದಲ್ಲಿ ನಿರತರಾಗಿದ್ದ ಬಿಜೆಪಿಗೆ ಇದರಿಂದ ಉಂಟಾದದ್ದು ಮುಜುಗರ. ಪ್ರಧಾನಿ ನರೇಂದ್ರ ಮೋದಿ ಅವರ ಬುಡಕ್ಕೆ ಇದು ಬಂದಿತ್ತು.. ಬಹುತೇಕ ಕೊಲ್ಲಿ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸಹಾಯಕರು ಎಂದು ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಅವರಸ್ನು ಗುರುತಿಸಿದ್ದರು.. ಇದು ನಿಜವೂ ಆಗಿತ್ತು,
ಹೀಗಾಗಿ ಬಿಜೆಪಿ ತೆಗೆದುಕೊಂಡ ತೀರ್ಮಾನ ನವೀನ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಮತ್ತು ನೂಪುರ್ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಅಮಾನತಿನಲ್ಲಿ ಇಡುವುದು.. ಅದರೆ ಹಿಂದಿನ ತರ್ಕ ಏನು ? ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರಿಗೆ ಅವಮಾನ ಮಾಡಿದ್ದು ಪಕ್ಷದ ವಕ್ತಾರರಾದ ನೂಪುರ್ ಶರ್ಮಾ. ಇವಳಿಗೆ ಪಕ್ಕ ವಾದ್ಯ ನುಡಿಸಿದ್ದು ಟೈಂಸ್ ನೌ.. ನೂಪುರ್ ಶರ್ಮಾ ಅವರ ಅಭಿಪ್ರಾಯಗಳಿಗೆ ಟ್ವೀಟ್ ಮೂಲಕ ಸಹಮತ ವ್ಯಕ್ತಪಡಿಸಿದ್ದು ದೆಹಲಿ ಬಿಜೆಪಿ ಮಾಧ್ಯಮ ಸಂಘಟಕ ನವೀನ್ ಕುಮಾರ್. ಆದರೆ ನೂಪುರ್ ಶರ್ಮಾ ಅವರಸ್ನು ಅಮಾನತಿನಲ್ಲಿ ಮಾತ್ರ ಇಡಲಾಗಿದೆ. ನಿಜವಾಗಿ ಈ ಮುಜುಗರಕ್ಕಾಗಿ ಶರ್ಮಾ ಅವರನ್ನು ಉಚ್ಚಾಟನೆ ಮಾಡಬೇಕಿತ್ತು,,ನವೀನ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಟ್ಟರೂ ಸಾಕಿತ್ತು.. ಆದರೆ ನೂಪುರ್ ಅವರನ್ನು ಅಮಾನತಿನಲ್ಲಿ ಮಾತ್ರ ಇಟ್ಟಿರುವುದು ಆಕೆ ಎಷ್ಟು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಡುತ್ತದೆ.
ಈ ರೀತಿಯ ಕೋಮು ರಾಜಕಾರಣ ಎಲ್ಲಕಾಲದಲ್ಲೂ ನಿರಿಕ್ಷಿತ ಲಾಭವನ್ನು ತಂದುಕೊಡುವುದಿಲ್ಲ...ಅದು ನಮ್ಮ ಸ್ನೇಹಿತರನ್ನು ದೂರಮಾಡುತ್ತದೆ. ವೈರಿಗಳನ್ನು ಪ್ರಬಲರನ್ನಾಗಿ ಮಾಡುತ್ತದೆ.. ದೇಶದಲ್ಲಿ ಬಿಜೆಪಿ ಮತ ಬ್ಯಾಂಕ್ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡ ಬಿಜೆಪಿಗೆ ಇಂತಹ ಘಟನೆಗಳು ತಮ್ಮ ವೈರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂಬುದು ಅರ್ಥವಾದಂತಿಲ್ಲ..ಈಗಾಗಲೇ ಪಾಕಿಸ್ಥಾನದಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ನಮ್ಮ್ ಸ್ನೇಹಿತರರಾದ ಕೊಲ್ಲಿ ರಾಷ್ಟ್ರಗಳು ಮತ್ತು ಪಾಕಿಸ್ಥಾನದ ನಿಲುಮೆ ಒಂದೇ ಆಗಿದೆ.. ಅಂದರೆ ನೂಪುರ್ ಶರ್ಮಳ ಮೂರ್ಖತನ ಪಾಕಿಸ್ಥಾನವನ್ನು ಕೊಲ್ಲಿ ರಾಷ್ಟ್ರಗಳನ್ನು ಒಂದು ಮಾಡಿದೆ.
ಈ ಕೋಮುವಾದಿಗಳಿಂದಾಗಿ ಭಾರತ ತಲೆ ತಗ್ಗಿಸುವಂತೆ ಆಗಿದೆ. ಭಾರತ ತಲೆ ತಗ್ಗಿಸುವಂತೆ ಆಗಿದೆ...ಒಟ್ಟಿನಲ್ಲಿ ಇವರು ದೇಶವನ್ನು ಉಳಿಸುವುದಿಲ್ಲ.. ತಮ್ಮ ಅಧಿಕಾರಕ್ಕಾಗಿ ದೇಶವನ್ನು ಇನ್ನಷ್ಟು ಸಂಕಟಕ್ಕೆ ಸಿಲುಕಿಸುತ್ತಾರೆ..
No comments:
Post a Comment