Monday, June 6, 2022

ಚಡ್ಡಿಯ ರೋಚಕ ಇತಿಹಾಸ, ಚಡ್ಡಿಯ ಬಗ್ಗೆ ಗೊತ್ತಿಲ್ಲದ ಅಂಶಗಳು..ಹಾಗೂ ಚಡ್ದಿ ಪುರಾಣ



 ಕಾಂಗ್ರೆಸ್ ಚಡ್ಡಿ ಸುಡುವ ಚಳವಳಿ ಹಮ್ಮಿಕೊಳ್ಳಲು ಮುಂದಾಗಿದೆ. ಬಿಜೆಪಿ ಚಡ್ಡಿ ಕಳುಹಿಸಿಕೊಡುವ ಮಾತನಾಡಿದೆ. ಒಟ್ಟಿನಲ್ಲಿ ಚೆಡ್ದಿಗೆ ಈಗ ಭಾರಿ ಬೇಡಿಕೆ ಬಂದಿದೆ..

ಚಡ್ದಿ ಹಾಕಿಕೊಳ್ಳುವುದು ಯಾವಾಗ ಪ್ರಾರಂಭವಾಗಿರಬಹುದು ? ಹೇಳುವುದು ಕಷ್ಟ.. ಆದರೆ ಇದು ಭಾರತೀಯ ಉಡುಪಂತೂ ಅಲ್ಲ.. ಪ್ಯಾಂಟಿನ ಜೊತೆಗೆ ಚಡ್ದಿ ಕೂಡ ಈ ದೇಶಕ್ಕೆ ಬಂದಿರಬಹುದು,,

ವಿದೇಶಿಯರು ಬಿಸಿಲಿಗೆ ಮೈಯೊಡ್ಡುವಾಗ ಚಡ್ಡಿ ಹಾಕಿಕೊಳ್ಳುವುದನ್ನು ಇಷ್ಟಪಡುತ್ತಾರೆ.. ಕಾಲಿನ ಭಾಗವನ್ನು ಬಿಸಿಲಿಗೆ ಒಡ್ಡಿ ಮಲಗುವುದು ಅವರಿಗೆ ಖುಷಿ ನೀಡುವಂತಹದು.. ಹಾಗೆ ಸಮುದ್ರ ದಂಡೆಗಳಲ್ಲಿ ಬಿಸಿಲು ಕಾಸುತ್ತ ಮನಗುವಾಗ ಚಡ್ಡಿಯೇ ಪ್ರಾಧಾನ್ಯ..ಚಡ್ಡಿ ಹಾಕಿಕೊಂಡು ಮೈ ಬಿಟ್ಟುಕೊಂಡು ಮಲಗುವುದು, ಕಣ್ಣಿಗೆ ಬಿಸಿಲು ಬೀಳದಂತೆ ಸನ್ ಗ್ಲಾಸ್ ಧರಿಸುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ,

ಪ್ಯಾಂಟಿನ ಜೊತೆ ಚಡ್ಡಿ ಬಂದಿದ್ದರೂ ಇವರೆಡರ ನಡುವೆ ತುಂಬಾ ವ್ಯತ್ಯಾಸವಿದೆ. ಪ್ಯಾಂಟು ಕಾಲನ್ನು ಪೂರ್ಣವಾಗಿ ಆವರಿಸಿಬಿಡುತ್ತದೆ. ಜೊತೆಗೆ ಶಿಸ್ತನ್ನು ಅದು ಹೊತ್ತುಕೊಂಡು ಬಂದಿರುತ್ತದೆ. ಚಡ್ಡಿ ಹಾಗಲ್ಲ. ಅದು ಫ್ರೀ ಎಂಬ ಫಿಲಿಂಗ್ ಕೊಡುತ್ತದೆ.. ಹೀಗಾಗಿ  ವೈಯಕ್ತಿಕವಾಗಿ ನನಗೆ ಚಡ್ದಿ ಎಂದರೆ ಇಷ್ಟ,,ನಮ್ಮ ಹಳ್ಳಿಗಳಲ್ಲಿ ಚಡ್ಡಿಗೆ ವಿಶೇಷ ಮರ್ಯಾದೆ ಇದೆ. ಜೊತೆಗೆ ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ ಚೆಡ್ದಿಯೇ ಒಳ್ಳೆಯದು. ಪಂಚೆ ಆದರೆ ಆಗಾಗ ಎತ್ತಿಕಟ್ಟಿ ಕೆಲಸ ಮಾಡಬೇಕು. ಚೆಡ್ದಿ ಹಾಗಲ್ಲ..

ಬ್ರೀಟೀಶರು ಈ ದೇಶಕ್ಕೆ ಬರುವಾಗ ತಂಡ ಚೆಡ್ದಿ ಈ ದೇಶವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಆದರೆ ಸಂಪ್ರದಾಯಸ್ಥರು ಮತ್ತು ಸನಾತನಿಗಳಿಗೆ ಮಾತ್ರ ಚೆಡ್ದಿ ಹೆಚ್ಚು ಇಷ್ಟವಾಗುತ್ತಿರಲಿಲ್ಲ. ಯಾಕೆಂದರೆ ಇದು ಭಾರತೀಯ ಉಡುಪಿನ ಪಟ್ಟಿಯಲ್ಲಿ ಸೇರಿಲ್ಲ.. ಹಿಂದಿನ ಜನ ಚಡ್ದಿಗಿಂತ ಪಂಚೆಗೆ ಹೆಚ್ಚಿನ ಒಲವು ತೋರುತ್ತಿದ್ದರು..

ಹಾಗಿದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್ ಎಸ್ ಎಸ್ ಚಡ್ದಿಯನ್ನು ತನ್ನ ಸಾಂಪ್ರದಾಯಿಕ ಉಡುಪು ಅಥವಾ ಸಮವಸ್ತ್ರವನ್ನಾಗಿ ಯಾಕೆ ಸ್ವೀಕರಿಸಿತು ? ಈ ಪ್ರಶ್ನೆಗೆ ನಾವು ಅಂದಾಜಿನ ಉತ್ತರವನ್ನು ಕೊಡಬಹುದು.. ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೆವಾರ್ ಅವರನ್ನು ಕೇಳೋಣ ಎಂದರೆ ಅವರೀಗ ಬದುಕಿಲ್ಲ. ಈಗಿನ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಅವರನ್ನು ಈ ಬಗ್ಗೆ ಕೇಳಬಹುದು. ಆದರೆ ಅವರು ಚೆಡ್ದಿಯ ಸಮವಸ್ತ್ರವನ್ನು ಪ್ಯಾಂಟಿಗೆ ಬದಲಿಸಿದ್ದರಿಂದ ಅವರಿಗೆ ಚೆಡ್ಡಿಯ ಬಗ್ಗೆ ಅಂತಹ ವಿಶ್ವಾಸ ಇರಲಿಕ್ಕಿಲ್ಲ ಅನ್ನಿಸುತ್ತದೆ. ಹೀಗಾಗಿ ಈ ಪ್ರಶ್ನೆಯನ್ನು ಅವರಿಗೆ ಕೇಳಿ ಪ್ರಯೋಜನ ಇಲ್ಲ..

ಆರ್ ಎಸ್ ಎಸ್ ಸದಾ ಬ್ರಿಟೀಷರನ್ನು ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಸಂಘದ ಕಾರ್ಯಕರ್ತರು ಸ್ವಾತಂತ್ರ್ಯ ಚಳವಳಿಯಲ್ಲಿ ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ. ಜೊತೆಗೆ ಬಹಳಷ್ಟು ಸಂಘದ ಕಾರ್ಯಕರ್ತರು ಬ್ರಿಟೀಷರ ಎಜೆಂಟರಾಗಿ ಕೆಲಸಮಾಡಿದವರು. ಹೀಗಾಗಿ ಅವರಿಗೆ ಬ್ರಿಟೀಷರ ಬಗ್ಗೆ ಅಂತರಿಕ ಪ್ರೀತಿ ಇರುವ ಸಾಧ್ಯತೆ ಇದೆ..ಹೀಗಾಗಿ ಬ್ರಿಟೀಷರ ಉಡುಪಾದ ಪ್ಯಾಂಟಿಗೆ ಬದಲಾಗಿ ಚಡ್ದಿಯನ್ನು ಒಪ್ಪಿಕೊಂಡಿರಬಹುದು.ಅದು ದೇಶೀಯ ಉಡುಪಿನಂತೆಯೂ ಅವರಿಗೆ ಕಂಡಿರಬಹುದು..

ಇದರ ಜೊತೆಗೆ ಬ್ರಿಟೀಷ್ ಕಾಲದಿಂದ ಪೊಲೀಸರು ಚಡ್ದಿಯನ್ನೇ ಹಾಕಿಕೊಳ್ಳುತ್ತಿದ್ದರು..ಅಧಿಕಾರಿಗಳಿಗೆ ಮಾತ್ರ ಪ್ಯಾಂಟು. ಇದನ್ನು ಗಮನಿಸಿದ ಸಂಘದ ಸಂಸ್ಥಾಪಕರು ತಮ್ಮ ಕಾರ್ಯಕರ್ತರು ಪೊಲೀಸರಂತೆ ಕಂಡರೆ ಒಳ್ಳೆಯದು ಎಂದು ಈ ಸಮವಸ್ತ್ರ ಧರಿಸುವ ತೀರ್ಮಾನಕ್ಕೆ ಬಂದಿರಬಹುದು..ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘದ ಕಾರ್ಯಕರ್ತರೇ ಮಾಡಲಿ ಎಂಬುದು ಅವರ ಮನಸ್ಸಿನಲ್ಲಿ ಇದ್ದುದು ಇದಕ್ಕೆ ಕಾರಣವಿರಬಹುದು..ಇತ್ತೀಚಿನ ದಿನಗಳಲ್ಲಿ ನೈತಿಕ ಮತ್ತು ಅನೈತಿಕ ಪೊಲೀಸ್ ಗಿರಿ,, ದಾದಾಗಿರಿಯನ್ನು ಮಾಡುವುದರಿಂದ ಈ ಸಮವಸ್ತ್ರ ಅವರಿಗೆ ಹೊಂದುತ್ತದೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ..

ಈಗ ಹಲವು ವರ್ಷಗಳ ಹಿಂದೆ ಪೊಲೀಸರಿಗೆ ಸಮವಸ್ತ್ರದ ವಿಚಾರದಲ್ಲಿ ಪ್ರಮೋಷನ್ ನೀಡಿ ಪ್ಯಾಂಟಿಗೆ ಬಡ್ತಿ ನೀಡಲಾಯಿತು.. ಇದನ್ನು ಬಹಳ ವರ್ಷಗಳ ಕಾಲ ಮೌನವಾಗಿ ಅಧ್ಯಯನ ಮಾಡಿದ ಸರಸಂಘ ಚಾಲಕರು ತಮ್ಮ ಕಾರ್ಯಕರ್ತರಿಗೂ ಬಡ್ತಿ ನೀಡುವ ನಿರ್ಧಾರಕ್ಕೆ ಬಂದರು.. ಅವರೂ ಬದಲಾದರು.

ಪೊಲೀಸರಾಗಲಿ ಸಂಘದ ಕಾರ್ಯಕರ್ತರಾಗಲಿ ಚೆಡ್ದಿ ಧರಿಸಿದಾಗ ಕೆಲವೊಮ್ಮೆ ಅವರನ್ನು ನೋಡಲು ಕಷ್ಟವಾಗುತ್ತಿತ್ತು.. ಯಾಕೆಂದರೆ ಇವರ ದೆಹದ ಆಕಾರ ಇದಕ್ಕೆ ಕಾರಣ. ದೇಹದ ಮೇಲ್ಬಾಗ ದೊಡ್ಡದಾಗಿ ಇದ್ದು ಕಾಲುಗಳು ಸಣಕಲಾಗಿದ್ದವರು ಈ ಸಮವಸ್ತ್ರದಲ್ಲಿ ವಿಚಿತ್ರವಾಗಿ ಕಾಣುತ್ತಿದ್ದರು. ಅವರ ಕಾಲುಗಳು ಸಣ್ಣದಾಗಿದ್ದು ದೊಡ್ಡ ಚಡ್ದಿ ಆ ಕಡೆಯಿಂದ  ಈ ಕಡೆಗೆ ನರ್ತನ ಮಾಡುವಾಗ ಬೇಸರವಾಗುತ್ತಿತ್ತು.. ಜೊತೆಗೆ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿತ್ತು..ಪ್ಯಾಂಟಿಗೆ ಬದಲಾದ ಮೇಲೆ ಈ ಸಮಸ್ಯೆ ಬಗೆಹರಿಯಿತು.

ಜೋತೆಗೆ ಇತ್ತೀಚಿನ ದಿನಗಳಲ್ಲ್ಲಿ ಸಂಘಪರಿವಾರದ ಕಾರ್ಯಕರ್ತರು ಶಸ್ತ್ರಾಭ್ಯಾಸವನ್ನು ಮಾಡುವುದರಿಂದ ಅವರಿಗೆ ಪ್ಯಾಂಟೇ ಹೆಚ್ಚು ಅನುಕೂಲ..ಪ್ಯಾಂಟಿನ ಎರಡೂ ಕಿಸೆಯಲ್ಲಿ ಮದ್ದು ಗುಂಡುಗಳನ್ನು ಇಟ್ಟುಕೊಳ್ಳಬಹುದು.. ಶ್ರೀರಾಮ ಸೇನೆ, ಬಜರಂಗದಳದ ಕಾರ್ಯಕರ್ತರು ಇಂಥ ಸಶಸ್ತ್ರ ತರಬೇತಿ ಪಡೆಯುವಾಗ ಅವರು ಖುಶಿಯಿಂದ ಇರುವುದನ್ನು ನಾನು ಗಮನಿಸಿದ್ದೇನೆ..

ಚಡ್ಡಿ ಬಗ್ಗೆ ಜಗಳ ತೆಗೆದವರು ಈ ಬಗ್ಗೆ ಯೋಚಿಸಲಿ.. ಚಡ್ದಿಗಳು ಈಗ ಪ್ಯಾಂಟು ಹಾಕುತ್ತಿದ್ದರೂ ಚೆಡ್ಡಿಗೆ ಇರುವ ಸಾಂಕೇತಿಕ ಅರ್ಥ ಪ್ಯಾಂಟಿಗೆ ಇಲ್ಲ..ಜೊತೆಗೆ ಈಗಲೂ ಚಡ್ದಿಯನ್ನು ಒಳಗೆ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕೆ ಗುಪ್ತತೆ ಇದೆ..ಪ್ಯಾಂಟಿಗೆ ಇಲ್ಲ. ಪ್ಯಾಂಟನ್ನು ಮುಚ್ಚಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂಡ ಸಂಘ ಪರಿವಾರ ಮತ್ತೆ ಚೆಡ್ಡಿಗೆ ಹಿಂತಿರುಗುದು ಒಳ್ಳೆಯದು.

ಆಗ ಅವರಿಗೂ ಗೌರವ ಚಡ್ಡಿ ಆಂದೋಲನ ನಡೆಸುವುದು ಅರ್ಥಪೂರ್ಣ ಅನ್ನಿಸಿಕೊಳ್ಳುತ್ತದೆ. ಎಲ್ಲರೂ ಈ ಬಗ್ಗೆ ಯೋಚಿಸಲಿ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...