Tuesday, June 7, 2022

ಬಿಜೆಪಿ ಮತ್ತು ಪ್ರಿಂಜ್ ಎಲೆಮೆಂಟ್ಸ್ ಕ್ರಮ ಕೈಗೊಳ್ಳಬೇಕಾದವರು ಯಾರು ?

 


ಕಳೆದ ಒಂದು ವಾರದಿಂದ ಈಚೆಗೆ ಫ್ರಿಂಜ್ ಎಲಿಮೆಂಟ್ಸ್ ಎಂಬ ಶಬ್ದ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದೆ. ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯೊಂದರಲ್ಲಿ ಈ ಶಬ್ದವನ್ನು ಬಳಸಿತು. ಅದು ನೂಪುರ್ ಶರ್ಮಾ ಎಂಬ ಬೆಜೆಪಿಯ ರಾಷ್ಟ್ರೀಯ ವಕ್ತಾರರು ಟಿವಿಯೊಂದರಲ್ಲಿ ಪ್ರವಾದಿ ಮಹಮ್ಮದ್ ರ ಬಗ್ಗೆ ಟೀಕಿಸಿ ಮುಸ್ಲೀಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾದ ನಂತರ ನೀಡಿದ ಪ್ರಕಟಣೆಯಲ್ಲಿ,,,

ಆಕ್ಸಫರ್ಡ್ ಶಬ್ದಕೋಶದ ಪ್ರಕಾರ ಫ್ರಿಂಜ್ ಎಲಿಮೆಂಟ್ಸ್ ಎಂದರೆ ಬಾರ್ಡರ್ ನಲ್ಲಿ ಇರುವವರು.. ಅವರು ಸಂಪೂರ್ಣವಾಗಿ ಒಳಗೆ ಇರುವವರಲ್ಲ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಲ್ ಅವರನ್ನೂ ಈ ಕೆಟಗರಿಗೆ ವಿದೇಶಾಂಗ ಸಚಿವಾಲಯ ಸೇರಿಸಿಯಾಗಿತ್ತು.. ಇದು ಕೇವಲ ವಿದೇಶಾಂಗ ಸಚಿವಾಲಯದ ಅಭಿಪ್ರಾಯವಾಗಿರದೇ ಸರ್ಕಾರದ ಅಭಿಪ್ರಾಯ ಕೂಡ.. ಜೊತೆಗೆ ವಿದೇಶಾಂಗ ಇಲಾಖೆಯನ್ನು ಪ್ರಿಂಜ್ ಎಲಿಮೆಂಟ್ಸ್ ಎಂದು ಟೀಕಿಸಲು ಸಾಧ್ಯವಿಲ್ಲ..

ವಿದೇಶಾಂಗ ಇಲಾಖೆ ಹಾಗೂ ಸರ್ಕಾರ ಮುಸ್ಲೀಂ ದೇಶಗಳ ಅತೃಪ್ತಿಯನ್ನು ಶಮನಗೊಳಿಸಲು ನೂಪುರ್ ಶರ್ಮ ಅವರ ಜೊತೆಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತು.. ಬಿಜೆಪಿ ಪಕ್ಷ ಕೂಡ ತನ್ನದೇ ರಾಷ್ಟೀಯ ವಕ್ತಾರರಿಂದ ದೂರವನ್ನು ಕಾಪಾಡಿಕೊಂಡು ಬರಲು ಯತ್ನಿಸಿತು. ಮುಸ್ಲೀಂ ರಾಷ್ಟ್ರಗಳ ಕೋಪವನ್ನು ತಣಿಸಲು ಸರ್ಕಾರಕ್ಕೆ ವಿದೇಶಾಂಗ ಇಲಾಖೆಗೆ ಬೇರೆ ಮಾರ್ಗವೂ ಇರಲಿಲ್ಲ.

ಈ ಹೇಳಿಕೆಯ ಮೂಲಕ ನೂಪುರ್ ಶರ್ಮಾ ಅವರು ಮಾಡಿದ್ದು ಹೇಳಿದ್ದು ತಪ್ಪು ಎಂದು ಸರ್ಕಾರ ಒಪ್ಪಿಕೊಂಡಂತೆ ಆಗಿದೆ. ಅದಕ್ಕಾಗಿ ಶಿಕ್ಷೆಯನ್ನೂ ವಿಧಿಸಲಾಗಿದೆ.. ಹಾಗಿದ್ದರೆ ಇದೇ ತಪ್ಪು ಮಾಡಿದವರು ಬಿಜೆಪಿಯಲ್ಲಿ ಇಲ್ಲವೆ ? ಕೇವಲ ನೂಪುರ್ ಶರ್ಮಾ ತಪ್ಪು ಮಾಡಿದ ಮೊದಲ ವ್ಯಕ್ತಿಯೇ ? ಒಂದೊಮ್ಮ್ರೆ ಬೇರೆಯವರೂ ಇದ್ದರೆ ಅವರಿಗೂ ಶಿಕ್ಜ್ಷೆಯಾಗಬೇಕು ಅಲ್ಲವೆ ?

ಕಳೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಪ್ರಚಾರ ಬಹುಸಂಖ್ಯಾತ ಮತಗಳ ಕ್ರೋಡೀಕರಣಕ್ಕಾಗಿ ಮುಸ್ಲಿಂ ವಿರೋಧ ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುವ ಕೆಲಸ ಸತತವಾಗಿ ನಡೆಯಿತು,,ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರು ತಮ್ಮ ಭಾಷಣದಲ್ಲಿ ಈ ವಿಚಾರವನ್ನೇ ಚುನಾವಣೆಯ ಪ್ರಮುಖ ವಿಷಯವನ್ನಾಗಿ ಮತದಾರರ ಮುಂದಿಟ್ಟರು.. ಅಲಸಂಖ್ಯಾತರ ವಿರೋಧ ಅವರಿಗೆ ಹಿಂದೂ ಮತಗಳನ್ನಉ ಕ್ರೋಡೀಕರಿಸಲು ಸಹಾಯ ಮಾಡಿತು.. ಈಗ ಅವರೆಲ್ಲರನ್ನು ಫ್ರೀಂಜ್ ಎಲಿಮೆಂಟ್ಸ್ ಎಂದು ಪರಿಗಣಿಸಬೇಕಲ್ಲವೆ ? ಹಾಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ನುಪೂರ್ ಶರ್ಮ ಅವರ ವಿರುದ್ಧ ಕ್ರಮ ಕೈಗೊಂಡರೆ ಅದು ಹಿಪಾಕ್ರಸಿ ಅನ್ನಿಸಿಕೊಳ್ಳುತ್ತದೆ.

ಯೋಗಿ ಆದಿತ್ಯನಾಥ್ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ ೩೪ ಭಾಷಣಗಳು ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಸಿಗುತ್ತವೆ. ಈ ಎಲ್ಲ ಭಾಷಣಗಳೂ ಹೇಟ್ ಸ್ಪೀಚ್ ಗೆ ಉದಾಹರಣೆಗಳಾಗಿವೆ.. ನಾಯಿ ಕೂಗುತ್ತಿರುತ್ತದೆ ಎಂದು ಅವರು ಹೇಳಿದ್ದು ಯಾರ ವಿರುದ್ಧ ಎಂದು ಹೇಳಲು ಹೆಚ್ಚಿನ ಬುದ್ದಿವಂತಿಗೆ ಬೇಕಾಗಿಲ್ಲ..ಹಾಗೂ ಹಲವು ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್, ಮುಸ್ಲಿಂ ಸಮುದಾಯಕ್ಕೆ ತಾಲಿಬಾನಿಗಳ ಪಟ್ಟ ಕಟ್ಟಿದರು, ಬುಲ್ಡೋಜರ್ ಶಬ್ದವನ್ನು ಬೆದರಿಕೆ ಅಸ್ತ್ರವನ್ನಾಗಿ ಬಳಸಲಾಯಿತು,, ಹಾಗೆ ೮೦ ಪರ್ಸೆಂಟ್ ವರ್ಸಸ್ ೨೦ ಪರ್ಸೆಂಟ್ ಎಂದು ಮತದಾರರಿಗೆ ಕರೆ ನೀಡಿದರು, ಇದೆಲ್ಲ ಏನು ?

ಮೇ ತಿಂಗಳಿನಲ್ಲಿ ಮಧ್ಯ ಪ್ರದೇಶದಲ್ಲಿ ಬವರಲಾಲ್ ಜೈನ್ ಎಂಬ ೬೫ ವರ್ಷದ ವ್ಯಕ್ತಿ ಮದುವೆ ಮುಗಿಸಿ ಮನೆಗೆ ಬರುತ್ತಿದ್ದರು,  ಬಿಜೆಪಿ ಕಾರ್ಯಕರ್ತ ಹರಿಭೂಷಣ್ ಕುಶ್ವಾ ಅವರ ಮೇಲೆ ಹಲ್ಲೆ ನಡೆಸಿದ.. ನೀನು ಮಹಮ್ಮದ ಅಲ್ಲವೆ ಎಂದು ಪ್ರಶ್ನೆ ಮಾಡಿ ಹಲ್ಲೆ ಮಾಡಿದ,,

ಬಿಹಾರದ ಬಿಜೆಪಿ ಶಾಸಕ ಮುಸ್ಲೀಂ ಮತದಾನದ ಹಕ್ಕನ್ನು ವಾಪಸ್ ಪಡೆದು ಅವರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಬೇಕು ಎಂದು ಕರೆ ನೀಡಿದ,,ಅಶ್ವಿನ್ ಉಪಾದ್ಯಾಯ ಎಂಬ ಬಿಜೆಪಿ ನಾಯಕನ ವಿರುದ್ಧ ಹೇಟ್ ಸ್ಪೀಚ್ ಕಾರಣಕ್ಕಾಗಿ ಪ್ರಕರಣ ದಾಖಲಾಯಿತು,

೨೦೨೧ ರ ಡಿಸೆಂಬರ್ ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ರೋಹಿಂಗ್ಯಾ ಮುಸ್ಲೀಂ ರಂತೆ ಭಾರತದ ಮುಸ್ಲೀಂರಿಗೂ ಶಿಕ್ಷೆ ನೀಡಬೇಕು ಎಂಡು ಕರೆ ನೀಡಲಾಯಿತು, ಪೂಜಾ ಶಕಿನ್ ಪಾಂಡೆ ಎಂಬವರು ಮುಸ್ಮಿಂರ ಹತ್ಯೆಗೆ ಕರೆ ನೀಡಿದ್ದರು. ಹಾಗೆ ಉತ್ತರ ಪ್ರದೇಶದ ಮಯಾಂಕೇಶ್ವರ್ ಸಿಂಗ್ ಎಂಬ ಸ್ಬಿಜೆಪಿ ಶಾಸಕರು ತಮ್ಮನ್ನು ಎರಡನೆಯ ಬಾರಿ ಆರಿಸಿದರೆ ಮುಸ್ಲೀಂ ರ ಗಡ್ಡ ಕತ್ತರಿಸುವುದಾಗಿ ಹೇಳಿದ್ದರು.. ನಾನು ಮೊದಲ ಬಾರಿ ಆಯ್ಕೆ ಆದಾಗ ಮುಸ್ಲೀಂ ರು ಹೆಸರಿ ಸ್ಕಲ್ ಕ್ಯಾಪ್ ಹಾಕುವುದನ್ನು ನಿಲ್ಲಿಸಿದ್ದರು. ನಾನು ಎರಡನೆಯ ಬಾರಿ ಆಯ್ಕೆ ಮಾಡಿದರೆ ಅವರ ಹಣೆಯ ಮೇಲೆ ತಿಲಕ ಬರುತ್ತದೆ ಎಂದಿದ್ದರು !

ಇಂತಹ ಸಾವಿರಾರು ಉದಾಹರಣೆಗಳು ಇವೆ. ಬಿಜೆಪಿ ಮತ್ತು ಸಂಘಪರಿವಾರ ಕೋಮು ಧ್ವೇಶವನ್ನು ಬಿತ್ತಿ ಅಧಿಕಾರಕ್ಕೆ  ಏರುವ ಮಾರ್ಗವನ್ನು ಕಂಡುಕೊಂಡಿವೆ. ಹಾಗೆ ನೋಡಿದರೆ ಇದೆಲ್ಲ ಪ್ರಾರಂಭವಾಗಿದ್ದು ೨೦೦೧ ಮತ್ತು ೨೦೦೨ರಲ್ಲಿ.. ಗುಜರಾಥ್ ನಲ್ಲಿ ನಡೆದ ಹತ್ಯಾಕಾಂಡ ಅವರಿಗೆ ಅಧಿಕಾರಕ್ಕೆ ಏರಲು ಹೊಸ ಆಯುಧವನ್ನು ನೀಡಿತ್ತು. ಈ ಆಯುಧವನ್ನು ನಂತರದ ದಿನಗಳಲ್ಲಿ ಎಲ್ಲೆಡೆ ಬಳಸಲಾಯಿತು.

ಈಗ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈಗ ಕೆಲವು ತಿಂಗಳುಗಳ ಹಿಂದೆ ಕೊಡಗಿನಲ್ಲಿ ಭಜರಂಗದಳದ ತರಬೇತಿ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಈ ತರಬೇತಿಯಲ್ಲಿ ಏರ್ ಗನ್ ಮತ್ತು ತ್ರಿಶೂಲವನ್ನು ನೀಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮೂರು ಶಾಸಕರು ಪಾಲ್ಗೊಂಡಿದ್ದರು..

ಈಗ ಗುಜರಾತ್ ನಲ್ಲಿ ಪ್ರಾರಂಭಿಸಿದ ಕೋಮುವಾದದ ಆಯುಧವನ್ನು ದೇಶದ ಎಲ್ಲೆಡೆ ಬಳಸಲಾಗುತ್ತಿದೆ. ಧರ್ಮ ನಿರಪೇಕ್ಷಗಳೂ ಸಾಫ್ಟ್ ಹಿಂದುತ್ವದ ಬಗ್ಗೆ ಮಾತನಾಡುವಂತಾಗಿದೆ,

ಈಗ ನೂಪುರ್ ಶರ್ಮಾ ಪ್ರಕರಣದತ್ತ ಬರೋಣ.. ಈ ಪ್ರಕರಣದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ತೀವ್ರ್ ಪ್ರತಿರೋಧವನ್ನು ವ್ಯಕ್ತಪಡಿಸಿದವು.. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಕರೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇದು ಭಾರತವನ್ನು ಆತಂಕಕ್ಕೆ ದೂಡಿತು.. ಈ ಪ್ರತಿರೋಧವನ್ನು ಶಮನಗೊಳಿಸುವುದಕ್ಕಾಗಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮೇಲೆ ಕ್ರಮಕೈಗೊಳ್ಳಲಾಯಿತು... ಅದರೆ ಇದೇ ಕೆಲಸದಲ್ಲಿ ನಿರತರಾದವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೆ ?

ಜೊತೆಗೆ ಇದೆಲ್ಲವುದರ ಬೀಜ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿದೆ ? ಹೀಗಿರುವಾಗ ಯಾರು ಯಾರ ಮೇಲೆ ಕ್ರಮಕೈಗೊಳ್ಳಬೇಕು ?


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...