Sunday, June 5, 2022

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೆಡ್ಡಿ ಸುಡುವ ಚಳವಳಿಯ ಪ್ರಸ್ತಾಪ ಈಗ ಚೆಡ್ಡಿ ಜಗಳವಾಗಿದೆ.. ಸಿದ್ದರಾಮಯ್ಯ  ಅವರ ಈ ಹೇಳಿಕೆಗೆ ಬಿಜೆಪಿ ನಾಯಕರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ,,,ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕ ದಾಳಿಯೂ ಪ್ರಾರಂಭವಾಗಿದೆ. ಸಿದ್ದರಾಮಯ್ಯನವರ ಮಾಜಿ ಸಹೋದ್ಯೋಗಿಗಳು ಈಗ ಬಿಜೆಪಿಯಲ್ಲಿ ಆಶ್ರಯ ಪಡೆದಿರುವವರು ತಿರುಗಿಬಿದ್ದಿದ್ದಾರೆ,, 

ಸಿದ್ದರಾಮಯ್ಯ ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗಲೂ ಇದೇ 


ಆಗಿತ್ತು.. ಬಿಜೆಪ್ಪಿಯ ಹಲವು ನಾಯಕರು ತಿರುಗಿಬಿದ್ದಿದ್ದರು..ಆರ್ಯ ಮತ್ತು ದ್ರಾವಿಡ ಪ್ರಶ್ನೆ ಬಂದಾಗಲು ಕೂಡ ಸಿದ್ದರಾಮಯ್ಯ ಟಿಕೆಗೆ ಗುರಿಯಾಗಿದ್ದರು,,

ಕಳೆದ ಒಂದೆರಡು ತಿಂಗಳಿನಿಂದ ಈಚೆಗೆ ಸಿದ್ದರಾಮಯ್ಯ ಹೆಚ್ಚು ಆಕ್ರಮಣಕಾರಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಸ್ಪಷ್ಟ ನಿಲುವು ಹೊಂದಿದ್ದಾರೆ. ಈ ವಿಚಾರದಲ್ಲಿ ಅವರಿಗೆ ವೈಚಾರಿಕ ಸ್ಪಷ್ಟತೆ ಇದೆ. ಆದರೆ ಅವರು ಈ ವಿಚಾರದಲ್ಲಿ ಅವರು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು ಕಡಿಮೆ.. ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳದಿದ್ದರು ಮಾತಿನಲ್ಲಿ ಕೆಲವೊಮ್ಮೆ ಮೃದು ನಿಲುವು ತಳೆದಿದ್ದೂ ಉಂಟು.. ಆದರೆ ಈ ಬಾರಿ ಹಾಗಿಲ್ಲ. ಅವರು ಹೆಚ್ಚು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು..

ಇದಕ್ಕೆ ಮುಖ್ಯ ಕಾರಣ ಬಹುಸಂಖ್ಯಾತರ ಮನಸ್ಸನ್ನು ನೋಯಿಸಬಾರದು ಎಂಬ ಮತ ಬ್ಯಾಂಕ್ ರಾಜಕಾರಣದಿಂದ ಅವರು ಸಂಫೂರ್ಣವಾಗಿ ಹೊರಗೆ ಬಂದಿದ್ದೂ ಕಾರಣವಿರಬಹುದು. ಇದಕ್ಕೆ ಕಾಂಗ್ರೆಸ್ ವರಿಷ್ಠ್ರರು ಗ್ರೀನ್ ಸಿಗ್ನಲ್ ನೀಡಿರಲೂ ಬಹುದು.. ಜೊತೆಗೆ ಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ಸಿದ್ಧಾಂತಿಕವಾಗಿ ಸ್ಫಷ್ಟ ನಿಲುವು ಹೊಂದುದುವುದು ಅಗತ್ಯ ಎಂಬ ಅರಿವಾಗಿರುವುದು ಇರಬಹುದು,, ಯಾಕೆಂದರೆ ಬಹುಸಂಖ್ಯಾತರ ಮನಸ್ಸಿಗೆ ನೋವಾಗಬಾರದು ಎಂಬ ನಿಲುವಿನಿಂದ ಕಾಂಗ್ರೆಸ್ ಗೆ ಯಾವ ರೀತಿಯ ಲಾಭ ಕೂಡ ಇಲ್ಲ.. ಈಗಾಗಲೇ ಬಹುಸಂಖ್ಯಾತ ಮತಗಳ ಕ್ರೋಡೀಕರಣದ ರಾಜಕಾರಣದಲ್ಲಿ ಬಿಜೆಪಿ ಯಶಸ್ವಿಯಾಗಿದೆ.. ಈಗ ಕಾಂಗ್ರೆಸ್ ಗೆ ಉಳಿದಿರುವುದು ತಮ್ಮ ಸೈದ್ಧಾಂತಿಕ ನಿಲುವಾದ ಅಲ್ಪಂಸಖ್ಯಾತರು, ದಲಿತರು ಮತ್ತು ಹಿಂದುಳಿದವರ ಮತವನ್ನು ಗಟ್ಟಿಗೊಳಿಸುವ ದಾರಿ ಮಾತ್ರ.

ಈ ಕಾರಣದಿಂದ ಸಿದ್ದರಾಮಯ್ಯ ಹೆಚ್ಚು ಆಕ್ರಮಣಶೀಲ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರಬಹುದು.

ಈಗ ಸಿದ್ದರಾಮಯ್ಯ ಚೆಡ್ದಿಗೆ ಬೆಂಕಿ ಹಚ್ಚುವ ಅಥವಾ ಸುಡುವ ಮಾತನಾಡಿದ್ದಾರೆ..ಚೆಡ್ಡಿ ಸುಡುವುದು ಎಂದರೇನು ? ಎಲ್ಲೆಡೆ ಚಡ್ಡಿಯನ್ನು ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆಯೆ ?

ಅಥವಾ ಚೆಡ್ಡಿ ಸುಡುವುದು ಎನ್ನುವುದು ಒಂದು ಸಾಂಕೇತೇಕ ನಿಲುವು ಮಾತ್ರವೆ ? ಚೆಡ್ಡಿ ಎನ್ನುವುದು ಸಂಘ ಪರಿವಾರವನ್ನು ಸಂಕೇತಿಸುತ್ತದೆ, ಸಂಘ ಪರಿವಾರದ ಮನುಷ್ಯ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯನ್ನು ಸಂಕೇತಿಸುತ್ತದೆ.. ಹಾಗೆ, ಮನುವಾದ ಈ ಮನಸ್ಥಿತಿಯ ಭಾಗವಾಗಿದೆ.. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಚಡ್ಡಿ ಸುಡುವುದನ್ನು ಅರ್ಥ ಮಾಡಿಕೊಳ್ಳಬೇಕು,,

ಬಿಜೆಪಿಯ ಹಲವು ನಾಯಕರಿಗೆ ಇದೆಲ್ಲ ಅರ್ಥವಾಗುವುದಿಲ್ಲ..ಅವರಿಗೆ ಸಂಘಪರಿವಾರದ ಅಪಾಯದ ಅರಿವಿಲ್ಲ. ಅರಿವಿದ್ದರೂ ಅವರು ಬಯಸುವುದು ಸಂಘ ಪರಿವಾರ ಬಯಸುವ ಪ್ರತಿಪಾದಿಸುವ ಸಮಾಜವನ್ನೇ. ಅದೇ ಅವರ ರಾಜಕೀಯ ಮೌಲ್ಯ..

ಇತ್ತೀಚಿಗೆ ಅಧಿಕಾರಕ್ಕಾಗಿ ಬಿಜೆಪಿ ಸೇರಿರುವ ಸೋಮಶೇಖರ್ ಅಂತವರಿಂದ ಈ ಮಟ್ಟದ ಬೌದ್ದಿಕತೆಯನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ..

ಇವತ್ತು ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಲು ಹೊರಟೀರುವ ನಾರಾಯಣಸ್ವಾಮಿ ಅವರ ಹೇಳಿಕೆಯನ್ನೂ ನೋಡಬೇಕು.. ವರು ಸಿದ್ದರಾಮಯ್ಯ ತಿಕ್ಕಲು ಎಂದಿದ್ದಾರೆ. ತಿಕ್ಕಲು ಎಂದರೆ ತಲೆ ಸರಿಯಿಲ್ಲ ಎಂಬ ಅರ್ಥವಿವರಣೆಯನ್ನೂ ಅವರೇ ನೀಡಿದ್ದಾರೆ.. ಆದರೆ ಸಿದ್ದರಾಮಯ್ಯನವರ ಸೈದ್ಧಾಂತಿಕ ನಿಲುವು ಹೇಗೆ ತಪ್ಪು ಎಂದು ವಿವರಿಸಿದ್ದರೆ ಅವರ ಮಾತಿಗೆ ಬೆಲೆ ಬರುತ್ತಿತ್ತು. ಅದರ ಬದಲಿಗೆ ಅವರಿಗೆ ತಲೆ ಸರಿ ಇಲ್ಲ ಎಂದು ಹೇಳುವುದು ತುಂಬಾ ಸುಲಭ. ಇದಕ್ಕೆ ಯಾವುದೇ ಓದು ತಿಳುವಳಿಕೆ ಬೇಕಾಗಿಲ್ಲ. ಮಾತನ್ನು ಬಟ್ಟೆ ಒಗೆಯುವಂತೆ ಇಗೆಯುವುದು ಅಷ್ಟೇ. ಇದರಿಂದ ಕೊಳೆ ಹೋಗುವುದಕ್ಕೆ ಬದಲು ಮತ್ತಷ್ಟು ಕೊಳೆಯಾಗುತ್ತದೆ. ಹೀಗೆ ಕೊಳೆಯಾದ ರಾಜಕಾರಣದಲ್ಲಿ ಇವರೆಲ್ಲ ಈಜಾಡಬೇಕು.. ಅದನ್ನೇ ಇವರೆಲ್ಲ ಮಾಡುತ್ತಿದ್ದಾರೆ.

ಮಾತು ಮುತ್ತಿನ ಹಾರದಂತಿರಬೇಕು ಎಂದು ಹೇಳಿದವರು ಬಸವಣ್ಣ. ಆದರೆ ಇವರ ಮಾತುಗಳು ಮುತ್ತಿನ ಹಾರದಂತಿಲ್ಲ. ಬದಲಾಗಿ ರಾಜಕೀಯ ಮೌಲ್ಯಗಳ ಉರುಳಿನಂತಿದೆ.. ಅದು ರಾಜಕಾರಣವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ.. ಕಲುಷಿತಗೊಂಡ ರಾಜಕಾರಣದಲ್ಲಿ ತಮ್ಮ ಅಧಿಕಾರ ರಾಜಕಾರಣದ ಭಗವಾ ಝೇಂಡಾವನ್ನು ಹಾರಿಸುವುದು ಇವರ ಉದ್ದೇಶ,,

ಒಟ್ಟಾರೆಯಾಗಿ ಇವತ್ತಿನ ರಾಜಕಾರಣ ಮೌಲ್ಯವನ್ನು ಕಳೆದುಕೊಂಡಿದೆ..ಕೇವಲ ಅಧಿಕಾರವೇ ರಾಜಕಾರಣದ ಪರಮ ಗುರಿ ಎಂಬಂತಾಗಿದೆ,,

ಇಲ್ಲಿ ಮಾತುಗಳಿಗೆ ಬೆಲೆ ಇಲ್ಲ. ಘನತೆ ಇಲ್ಲ..ಇದಕ್ಕೆ ಎಲ್ಲ ರಾಜಕಾರಣಿಗಳೂ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ,

ಸಿದ್ದರಾಮಯ್ಯನವರ ಮೂಲ ಹೇಳಿಕೆಗೆ ಬರೋಣ.. ಅವರು ಯಾವ ಉದ್ದೇಶದಿಂದ ಚಡ್ಡಿ ಸುಡುವ ಕಾರ್ಯಕ್ರಮದ ಬಗ್ಗೆ ಮಾತನಾಡಲಿ, ಅವರು ಹೇಳಬೇಕಾದ್ದನ್ನು ಇನ್ನಷ್ಟು ಗೌರವದಿಂದ ಹೇಳಬಹುದಿತ್ತು..ಆದರೆ ಅವರೂ ಸಹ ತಮ್ಮ ಮಾತನ್ನು ಹೇಳಿದ ರೀತಿ ಸರಿಯಿರಲಿಲ್ಲ...

ಕರ್ನಾಟಕದ ಹಿರಿಯ ರಾಜಕಾರಣಿ ಆಗಿರುವ ಸಿದ್ದರಾಮಯ್ಯನವರಾದರೂ ಈ ಬಗ್ಗೆ ಯೋಚಿಸಲಿ.. ಮಾತನ್ನು ಒಮ್ಮೆ ಆಡಿದ ಮೇಲೆ ಮುಗಿಯಿತು ಅದನ್ನು ವಾಪಸ್ಸು ಪಡೆಯುವುದು ಸಾಧ್ಯವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ

 

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...