ವಾರಾಣಸಿ ವಿಶ್ವದ ಅತಿ ಪುರಾತನ ಪಟ್ಟಣಗಳಲ್ಲಿ ಒಂದು. ಪ್ರಾಯಶಃ ಇಲ್ಲಿರುವಷ್ಟು ದೇವಾಲಯಗಳು ದೇಶದ ಬೇರೆ ಪ್ರದೇಶಗಳಲ್ಲಿ ಇಲ್ಲ. ಇಲ್ಲಿ ಬದುಕು ಮತ್ತು ಸಾವು ಸದಾ ಮುಖಾಮುಖಿಯಾಗುತ್ತಲೇ ಇರುತ್ತವೆ. ಇಲ್ಲಿರುವ ಬೇರೆ ಬೇರೆ ಘಾಟ್ ಗಳಲ್ಲಿ ಹೆಣವನ್ನು ಇಟ್ಟುಕೊಂಡು ಕಾಯುವ ಜನ. ತಮ್ಮವರ ಪಾರ್ಥಿವ ಶರೀರಕ್ಕೆ ಅಂತ್ಯ ಸಂಸ್ಕಾರ ಮಾಡಲು ಕಾತುರರಾಗಿರುವವರು. ಅಂತ್ಯ ಸಂಸ್ಕಾರ ಮಾಡಲು ಕಾದು ಕುಳಿತಿರುವ ಪಾಂಡಾಗಳು ಅಥವಾ ವೈದಿಕರು.
ಪಕ್ಕದಲ್ಲಿ ಹರಿಯುವ ಗಂಗೆ. ಬಹಳಷ್ಟು ಸಂದರ್ಭಗಳಲ್ಲಿ ಹೆಣಗಳನ್ನು ಹೊತ್ತು ಸಾಗುತ್ತಾಳೆ ಗಂಗೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಸತ್ತ್ವರು ನೇರವಾಗಿ ಸ್ವರ್ಗ ಸೇರುತ್ತಾರೆ ಎಂಬುದು ನಂಬಿಕೆ. ಬದುಕು ಅಂದರೆ ಹಾಗೆ ತಾನೆ ? ಅದು ನಿಂತಿರುವುದು ನಂಬಿಕೆಯ ಮೇಲೆ. ಶ್ರದ್ಧೆ ಮತ್ತು ಭಕ್ತಿ ಇದಕ್ಕೆ ಆಧಾರ. ಭಾರತೀಯರಿಗೆ ಶ್ರದ್ಧೆ ಮತ್ತು ಭಕ್ತಿ ಹೆಚ್ಚು. ನಂಬಿಕೆ ಅವರ ಬದುಕಿನ ಜೀವಾಳ.ಈ ವಾರಾಣಸಿ ನರೇಂದ್ರ ಮೋದಿ ಅವರಿಂದ ಬದಲಾಗುತ್ತಿದೆ. ೨೦೧೪ ರ ಚುನಾವಣೆಯಲ್ಲಿ ಇಲ್ಲಿಂದ ನರೇಂದ್ರ ಮೋದಿಯವರು ಗೆದ್ದರು. ಈ ಮತ್ತೆ ಇಲ್ಲಿಂದಲೇ ಪುನರಾಯ್ಕೆ ಬಯಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರು ಗೆಲ್ಲುವುದು ಬಹುತೇಕ ನಿಶ್ಚಿತ.
ಮೋದಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ ಮೇಲೆ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗಿವೆ.ವಿಶಾಲ ೂ ಪತ್ತೆಯಾಗಿವೆ. ಗಂಗೆ ಶುದ್ಧವಾಗುತ್ತಲೂ ಇದ್ದಾಳೆ. ನಮಾಮಿ ಗಂಗೆ ಘೋಷಣೆ ಎಲ್ಲೆಡೆಗೂ ಕೇಳಿ ಬರುತ್ತಿದೆ. ಸಂಜೆ ನಡೆಯುವ ಗಂಗಾರತಿ ವಿಶ್ವ ಪ್ರಸಿದ್ಧವಾಗಿದೆ. ಹರ ಹರ ಮಹಾದೇವ ಘೋಷಣೆಯ ಜೊತೆಗೆ ಹರ ಹರ ಮೋದಿ ಘೋಷಣೆಯೂ ಕೇಳು ಬರುತ್ತಿದೆ. ಪ್ರಧಾನಿಯವರು ಹಿಂದೂ ಧರ್ಮದ ಪುನರ್ ಸ್ಥಾಪಕರಾಗಿ ಕಾಣತೊಡಗಿದ್ದಾರೆ. ವಾರಾಣಸಿ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತಿದೆ. ಮತ್ತೆ ಅದೇ ಹಿಂದೂ ವೈಭವದ ಪುನರ್ ಸ್ಥಾಪನೆ. ಇದು ಸಾಮಾನ್ಯ ಕೆಲಸ ಅಲ್ಲ. ದೇಶವನ್ನು ಮುಂದಕ್ಕೆ ಒಯ್ಯಲು ಎಲ್ಲರೂ ಯತ್ನ ನಡೆಸುತ್ತಾರೆ. ಹಿಂದಕ್ಕೆ ಒಯ್ಯುವುದಕ್ಕೆ ಅಲ್ಲ. ಯಾಕೆಂದರೆ ಅದು ಕಷ್ಟ.
ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸುವುದರ ಹಿಂದಿನ ದಿನ. ಅಲ್ಲಿ ಅವರು ರೋಡ್ ಶೋ ನಡೆಸಿದರು. ನಂತರ ಗಂಗಾರತಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಮೋದಿಯವರ ಜಯಕಾರ ಮುಗಿಲು ಮುಟ್ಟುತ್ತಿತ್ತು. ರಾಷ್ಟ್ರದ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು. ಕನ್ನಡದ ಕೆಲವು ವಾಹಿನಿಗಳು ಜ್ಯೋತಿಷಿಗಳನ್ನು ಕರೆ ತಂದು ಅವರ ಜೊತೆ ವಾರಾಣಸಿಯ ಸ್ಥಳ ಪುರಾಣದ ಬಗ್ಗೆ ಚರ್ಚೆ ನಡೆಸಿದರು. ಇಲ್ಲಿಂದ ಆಯ್ಕೆಯಾದವರು ಹೇಗೆ ವಿಶ್ವ ಮಾನ್ಯರಾಗುತ್ತಾರೆ ಎಂಬುದನ್ನು ಜ್ಯೋತಿಷಿಗಳು ವೀಕ್ಷಕರಿಗೆ ತಿಳಿಸಿಕೊಟ್ಟರು. ಸಾವಿರಾರು ವರ್ಷಗಳ ಹಿಂದಿನ ಭಾರತಕ್ಕೆ ನಾವು ಮರಳುತ್ತಿದ್ದೇವೆ ಎಂಬುದನ್ನು ಇದೆಲ್ಲ ಸಾಭಿತು ಪಡಿಸುವಂತಿತ್ತು. ಇದನ್ನು ನೋಡಿದವರೆಲ್ಲ ಜೈ ಜೈ ಮೋದಿ ಎಂದು ಉದ್ಗಾರ ತೆಗೆಯುವಂತೆ ವಾತಾವರಣ ಇತ್ತು.
ಮೋದಿ ಅವರು ಈ ರೋಡ್ ಶೋ ನಲ್ಲಿ ಕೇಸರಿಯ ಜುಬ್ಬಾ ಧರಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮಾತ್ರ ಬಿಳಿಯ ಜುಬ್ಬಾ ಹಾಕಿದ್ದರು. ತಮ್ಮ ಸ್ವಚ್ಚ ರಾಜಕೀಯವನ್ನು ಅವರ ಬಟ್ಟೆಯೇ ಹೇಳುವಂತಿತ್ತು. ಮೋದಿ ಅವರ ಜೊತೆ ಸಚಿವ ನಡ್ಡಾ ಅವರೂ ಇದ್ದರು.
ಮೋದಿ ಅವರ ರೋಡ್ ಶೋ ನಲ್ಲಿ ಸುಮಾರು ಐದು ಲಕ್ಷ ಜನ ಇದ್ದರು ಎಂಬುದು ಒಂದು ಅಂದಾಜು. ಐದೇ ಇರಲೀ ಜಾಸ್ತೀನೇ ಇರಲಿ ಒಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಇಡೀ ವಾರಾಣಸಿ ಕೇಸರಿ ಮಯವಾಗಿತ್ತು. ರಸ್ತೆಗಳ ಇಕ್ಕೆಲೆಗಳಲ್ಲಿ ನಿಂತ ಜನ ಮೋದಿಯವರ ಮೇಲೆ ಪುಷ್ಪ ಗಳ ಮಳೆಗೈದರು. ಎಲ್ಲ ವಾಹಿನಿಗಳಲ್ಲೂ ಮೋದಿಯವರ ಗುಣಗಾನ . ಅಲ್ಲಿ ಕಾಣುತ್ತಿದ್ದುದು ಕೇಸರಿ ಸೈನ್ಯ. ವೈರಿಗಳ ಎದೇ ನಡಗಿಸುವಂತೆ ಮಾಡುವ ದೃಶ್ಯ.
ಮೋದಿ ಕೊನೆಗೆ ಬಂದಿದ್ದು ಗಂಗಾರತಿ ನಡೆಯುವ ಸ್ಥಳಕ್ಕೆ ಎಲ್ಲೆಡೆ ದೀಪ. ದೀಪಗಳ ಎದುರು ಮಂತ್ರ ಹೇಳುವ ವೈದಿಕರು. ಒಬ್ಬ ಇಂತಹ ವೈದಿಕರ ಎದುರಿಗೆ ಇಬ್ಬರು ಸುಂದರಿಯರು. ಮೋದಿ ಬಂದರು ತಮಗಾಗಿ ಸಿದ್ಧಪಡಿಸಿದ್ದ ವಿಶೇಷ ಆಸನದಲ್ಲಿ ಕುಳಿತರು. ಎಲ್ಲವೂ ವೈಭವೋಪೇತ.
ಆಗ ಪ್ರಾರಂಭವಾದ ವಿಶ್ಲೇಷಣೆ. ದೇಶದ ಜನ ಮೋದಿಯವರ ಜೊತೆಗಿದ್ದಾರೆ. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ವಾಹಿನಿಗಳೆಲ್ಲ ಹರ ಹರ ಮೋದಿ ಎಂದು ಹೇಳಲು ಪ್ರಾರಂಭಿಸಿದವು. ಮೋದಿ ಈ ದೇಶದ ಪ್ರಶ್ನಾತೀತ ನಾಯಕರು. ದೇಶಕ್ಕೆ ಮೋದಿ ಅನಿವಾರ್ಯ ಎಂಬ ವಾತಾವರಣವನ್ನು ಸೃಷ್ತಿಸಲಾಯಿತು. ಇದಕ್ಕೆ ಸಾಕ್ಷಿ ಎಂಬಂತೆ ಎನ್ ಡಿ ಏ ನಾಯಕರ ಉಪಸ್ಥಿತಿ. ಬಿಹಾರದ ನುಖ್ಯಮಂತ್ರಿ ನಿತೀಶ್ ಕುಮಾರ್ ಮಂಕಾದಂತೆ ಕಂಡು ಬರುತ್ತಿದ್ದರು. ಶಿವಸೇನಾ ಮುಖ್ಯಸ್ಥ ಉದ್ದವ ಠಾಕ್ರೆ ಮುಖದಲ್ಲಿ ಕಾಂತಿ ಇರಲಿಲ್ಲ. ಮತ್ತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಅವಸ್ರು ಯೋಚಿಸುತ್ತಿದ್ದಂತೆ ಇತ್ತು.
ಒಟ್ಟಿನಲ್ಲಿ ಹಿಂದೂ ಹೃದಯ ಸಾಮ್ರಾಟ ಎಂಬ ಬಿರುದನ್ನು ತಮ್ಮ ಮುಡೀಗೆ ಏರಿಸಲು ಮೋದಿ ಅವರು ಕಾತುರರಾಗಿದ್ದಂತೆ ಕಂಡು ಬರುತ್ತಿತ್ತು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡಿದೆ. ಅಭಿವೃದ್ಧಿಯ ಮಂತ್ರ ಪಠಣ ನಿಂತಿದೆ. ಜನರ ಖಾತೆಗಳಿಗೆ ೧೫ ಲಕ್ಷ್ಯ ಹಣ ಹಾಕುವ ಮಾತು ಕೇಳಿ ಬರುತ್ತಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ಮಾತು ಮೌನವಾಗಿದೆ. ಮೇಕಿನ್ ಇಂಡಿಯಾ, ಸ್ವಚ್ಚ ಭಾರತದ ಘೋಷಣೆಗಳು ಕೇಳಿ ಬರುತ್ತಿಲ್ಲ. ಇದಕ್ಕೆ ಬದಲಾಗಿ ಇಡೀ ಬಿಜೆಪಿ ರಾಜಕಾರಣ ಮೋದಿಯವರ ಸುತ್ತ ಸುತ್ತುತ್ತಿದೆ. ಎನ್ ಡಿ ಟಿವಿ ಇತ್ತೀಚೆಗೆ ಪ್ರಸಾರ ಮಾಡಿದ ವರದಿಯೊಂದರ ಪ್ರಕಾರ ಮೋದಿ ಇದುವರೆಗೆ ಮಾಡಿದ ಪ್ರಸಾರ ಭಾಷಣಗಳಲ್ಲಿ ಅತಿ ಹೆಚ್ಚು ಬಳಸಿದ ಶಬ್ದ ಯಾವುದು ಗೊತ್ತಾ ? ಅದು ಮೋದಿ. ಈ ದೇಶದ ರಾಜಕೀಯ ಇತಿಹಾಸದಲ್ಲಿ ಯಾವುದೇ ಒಬ್ಬ ನಾಯಕ ತನ್ನ ಹೆಸರನ್ನೇ ಸಾವಿರಾರು ಬಾರಿ ಹೇಳಿಕೊಂಡ ಇನ್ನೊಂದು ಉದಾಹರಣೆ ಇರಲಿಕ್ಕಿಲ್ಲ. ನಿಮ್ಮ ಒಂದು ಮತ ಅಭ್ಯರ್ಥಿಯ ಖಾತೆಗಲ್ಲ ಮೋದಿ ಖಾತೆಗೆ ಜಮಾ ಆಗುತ್ತದೆ ಎಂದು ಹೇಳುವ ಮೂಲಕ ತಮ್ಮ ಜನಪ್ರಿಯತೆಯನ್ನು ಪಣಕ್ಕಿಟ್ಟು ಪ್ರಧಾನಿ ಚುನಾವಣೆ ದಿಗ್ವಿಜಯಕ್ಕೆ ಹೊರಟಿದ್ದಾರೆ.
ಈಗ ಬಿಜೆಪಿಗೆ ಊಳಿದಿರುವ ಟ್ರಂಪ್ ಕಾರ್ಡ್ ಮೋದಿ ಮಾತ್ರ. ಮೋದಿ ಬಿಟ್ಟರೆ ಬಿಜೆಪಿಯ ಸ್ಥಿತಿಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಮೋದಿ ಸರ್ವಾಂತರ್ಯಾಮಿ ಸರ್ವಶಕ್ತರಾಗಿದ್ದಾರೆ. ಇಂತಹ ಸರ್ವಶಕ್ತ ನಾಯಕ ಹಿಂದೂ ಧರ್ಮದ ಪುನರ್ ಸ್ಥಾಪಕರೂ ಆಗಿದ್ದಾರೆ. ಅವರ ಈ ಕಾರ್ಯದಲ್ಲಿ ಸಹಾಯ ಮಾಡಲು ಸಾಧ್ವಿ ಪ್ರಜ್ನಾಸಿಂಗ್, ಸಾಕ್ಷಿ ಮಹರಾಜ್, ಯೋಗಿ ಆದಿತ್ಯನಾಥ್ ಅವರಂತಹ ಕಾರ್ಯಕರ್ತರ ಪಡೆ ಸಿದ್ಧವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ವಿಚಾರ ಎಂದರೆ ಅದು ಹಿಂದುತ್ವ, ಸೈನ್ಯ ದೇಶಪ್ರೇಮ ಮತ್ತು ಪಾಕಿಸ್ಥಾನ. ಅಂದರೆ ೨೦೧೪ ರ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯವನ್ನು ಚುನಾವಣಾ ಪ್ರಮುಖ ವಿಚಾರವನ್ನಾಗಿ ಮಾಡಿಕೊಂಡಿದ್ದ ಮೋದಿ ಮತ್ತು ಅವರ ಬಿಜೆಪಿ ಯು ಟರ್ನ್ ಹೊಡೆದಿದೆ. ತನ್ನ ಮೂಲರೂಪದಲ್ಲಿ ಅದು ಪ್ರತ್ಯಕ್ಷವಾಗಿದೆ. ಈ ಹಿಂದುತ್ವದ ಇಮೇಜ್ ಅನ್ನು ಬಲಪಡಿಸುವುದಕ್ಕಾಗಿಯೇ ಸಾದ್ವಿ ಪ್ರಜ್ನಾ ಸಿಂಗ್ ರನ್ನು ಬೂಪಾಲ್ ದಿಂದ ಚುನಾವಣಾ ಕಣಕ್ಕೆ ಇಳಿಸಿದ್ದು ಮತ್ತು ಗಂಗಾರತಿ ಮತ್ತು ರೋಡ್ ಶೋ ನಡೆಸಿದ್ದು. ಈ ಎರಡು ಕ್ರಮಗಳ ಮೂಲಕ ದೇಶದ ಅಲ್ಪಸಂಖ್ಯಾತರಿಗೆ ಎಚ್ಚರಿಕೆಯನ್ನು ರವಾನಿಸಿದೆ. ಹಾಗೆ ಹಿಂದೂ ಮತದ ಬ್ಯಾಂಕ್ ಅನ್ನು ಬಲಪಡಿಸುವ ಯತ್ನ ನಡೆಸಿದೆ.,
ಹಾಗಿಲ್ಲದಿದ್ದರೆ ಸಾದ್ವಿ ಪ್ರಜ್ನಾ ಸಿಂಗ್ ಅವರನ್ನು ಚುನಾವಣಾ ಕಣಕ್ಕೆ ಇಳಿಸುವ ಅಗತ್ಯ ಇರಲಿಲ್ಲ. ಯಾಕೆಂದರೆ ಮಾಲೇಗಾಂವ್ ಹತ್ಯಾಕಾಂಡದಲ್ಲಿ ಆರೋಪಿಯಾಗಿರುವ ಪ್ರಜ್ನಾ ಸಿಂಗ್ ಜಾಮೀನು ಪಡೆದು ಹೊರಬಂದಿದ್ದಾರೆ. ಅವರು ಜಾಮೀನು ಪಡೆಯಲು ನೀಡಿದ ಕಾರಣ ಬ್ರೆಸ್ಟ್ ಕ್ಯಾನ್ಸರ್ ಗೆ ಚಿಕಿತ್ಸೆ. ಆದರೆ ಅವರಿಗೆ ಈಗ ಬ್ರೆಸ್ಟ್ ಕ್ಯಾನ್ಸರ್ ಇಲ್ಲ. ಗೋಮೂತ್ರ ಮತ್ತು ಪಂಚಾಮೃತ ಕುಡಿದು ರೋಗದಿಂದ ಗುಣಮುಖರಾಗಿದ್ದಾರೆ. ಮುಂಬೈ ವೈದ್ಯರ ಪ್ರಕಾರ ಅವರ ದೇಹದಲ್ಲಿ ಕ್ಯಾನ್ಸರ್ ನ ಯಾವ ಲಕ್ಷಣಗಳೂ ಇಲ್ಲ. ಅಂದರೆ ಈ ಸಾಧ್ವಿ ಈಗ ಇರಬೇಕಾದ ಸ್ಥಾನ ಜೈಲು. ಆದರೆ ಅವರೀಗ್ ಬಿಜೆಪಿ ಅಭ್ಯರ್ಥಿ. ಅಂದರೆ ಎಲ್ಲವೂ ಸುಳ್ಳು..
ಇಂತಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಹಿಂದೂ ಮತ ಬ್ಯಾಂಕ್ ಅನ್ನು ಇನ್ನಷ್ಟು ಬಲಪಡಿಸುವುದೇ ಆಗಿದೆ. ಇನ್ನು ವಾರಾಣಸಿಯ ರೋಡ್ ಶೋ ಮತ್ತು ಗಂಗಾರತಿ. ಇದೂ ಸಹ ಹಿಂದೂ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ಯತ್ನವೇ.
ಮೋದಿ ಅವರು ಗಂಗಾರತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಹಣೆಗೆ ಗಂಧ ಮತ್ತು ವಿಭೂತಿಯನ್ನು ಹಚ್ಚಲಾಯಿತು. ಹಾಗೆ ಅಮಿತ್ ಶಾ ಮತ್ತು ನಡ್ಡಾ ಅವರ ಹಣೆಗೂ ಸಹ..ಈ ದೃಶ್ಯ ದೇಶಾದ್ಯಂತ ಲೈವ್ ಪ್ರಸಾರವಾಗುತ್ತಿದ್ದಂತೆ ದೇಶದ ಜನ ತಮ್ಮ ನಾಯಕ ಹಿಂದೂ ಧರ್ಮದ ಉದ್ದಾರಕ್ಕಾಗಿ ಬಂದವರು ಎಂದ್ಉ ಸಂತಸ ಪಟ್ಟರು. ಮೋದಿ ದೇಶದ ಪ್ರಧಾನಿಯಾಗಿ ಕಾಣಿಸಿಕೊಳ್ಳಲಿಲ್ಲ. ಬಹುಸಂಸ್ಕೃತಿಯ ಈ ನಾಡಿನಲ್ಲಿ ತಾವೊಬ್ಬ ಹಿಂದೂ ದೊರೆ ಎಂಬಂತೆ ಅವರು ಕಾಣಿಸಿಕೊಂಡರು.
ಬಿಜೆಪಿಯ ಹಿಂದುತ್ವದ ಹಳೆಯ ಅವತಾರ ಆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತದೆಯೇ ಇಲ್ಲವೇ ಎಂಬುದನ್ನು ಹೇಳಲಾಗದು. ಆದರೆ ಮೋದಿಯವರ ಹಿಂದುತ್ವದ ಮುಖವಾಡ ದೇಶಭಕ್ತಿ ಮತ್ತು ದೇಶವನ್ನು ಕಾಯುವ ಚೌಕಿದಾರ್ ಎಂಬ ಇಮೇಜ್ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬಹುದು.
ಮೋದಿ ಒಬ್ಬ ಜನಪ್ರಿಯ ನಾಯಕ ಎಂಬ ಬಗ್ಗೆ ಯಾರಿಗೂ ಅನುಮಾನ ಬೇಕಾಗಿಲ್ಲ. ಹಾಗೆ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಅದು ಜನರ ಆಯ್ಕೆ. ಅದನ್ನು ಪ್ರಶ್ನಿಸುವುದೂ ಸಾಧ್ಯವಿಲ್ಲ. ಆದರೆ ಸಮಸ್ಯೆ ಇರುವುದು ಅವರ ಸುಳ್ಳುಗಳಲ್ಲಿ. ಸಮಸ್ಯೆ ಇರುವುದು ಅವರ ಹಿಂದುತ್ವದ ಬಗ್ಗೆ. ಸಮಸ್ಯೆ ಇರುವುದು ದೇಶದ ಬಹುಮುಖೀ ಸಂಸ್ಕೃತಿಯನ್ನು ಅವರು ನಾಶಪಡಿಸುತ್ತಿರುವುದರಲ್ಲಿ. ಸಮಸ್ಯೆ ಇರುವುದು ಅವರ ಸರ್ವಾಧಿಕಾರಿ ಪ್ರವೃತ್ತಿಯಲ್ಲಿ. ಸಮಸ್ಯೆ ಇರುವುದು ಅವರ ಕೋಮುವಾದಿ ಮನಸ್ಥಿತಿಯಲ್ಲಿ. ಸಮಸ್ಯೆ ಇರುವುದು ದೇಶವನ್ನು ಸಾವಿರಾರು ವರ್ಷಗಳಷ್ತು ಹಿಂದಕ್ಕೆ ಒಯ್ಯುವ ಅವರ ಹುನ್ನಾರದಲ್ಲಿ. ಸಮಸ್ಯೆ ಇರುವುದು ದೇಶದ ಮುಗ್ದ ಜನರಲ್ಲಿ ದೇಶ ಪ್ರೇಮದಂತಹ ಭಾವನಾತ್ಮಕ ವಿಚಾರಗಳನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವುದರಲ್ಲಿ. ಸುಳ್ಳುಗಳನ್ನು ಹೇಳುತ್ತ ಅದೇ ಸತ್ಯ ಎಂದು ಜನರನ್ನು ಮೋಸಗೊಳಿಸುವ ಅವರ ಪ್ರಾವಿಣ್ಯತೆಯಲ್ಲಿ ಅಪಾಯ ಅಡಗಿದೆ.
ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಗಂಗಾರತಿಯನ್ನು ನೋಡಿ ನಾವು ಸಂತೋಷಡಬೇಕಾಗಿದೆ. ಇದನ್ನು ಬಿಟ್ಟು ಅವರು ದೇಶಕ್ಕೆ ಏನೂ ಕೊಡಲಾರರು.

No comments:
Post a Comment