ಆತ ತುಂಟ ಮಹಾನ್ ಕಿಲಾಡಿ..
ಒಮ್ಮೆ ಸೊಂಡಿಲು ಎತ್ತಿ ಬಡಿಯುತ್ತಾನೆ.
ಮತ್ತೊಮ್ಮೆ ಅದೃಶ್ಯ ರೂಪದಲ್ಲಿ ನಾನೇ ಅಲ್ಲಾ ಎನ್ನುತ್ತಾನೆ.
ಇನ್ನೊಮ್ಮೆ ಶಿಲುಬೆಯನೇರಿ ನಗುತ್ತಾನೆ.
ಆತ ಮಹಾನ್ ತುಂಟ..
ಆತ ಹೆಣ್ಣೋ ಗಂಡೋ ಗೊತ್ತಿಲ್ಲ.
ಒಮ್ಮೆ ಅಮ್ಮನಾಗುತ್ತಾನೆ, ಮತ್ತೊಮ್ಮೆ
ತಲೆ ನೇವರಿಸುತ್ತಾನೆ. ಹಾಗೆ ಬಂದು
ಅಪ್ಪಿ ಮುದ್ದಾಡಿಬಿಡುತ್ತಾನೆ.
ಯಾಕೆಂದರೆ ಆತ ಮಹಾನ್ ತುಂಟ.
ಆತ ವಿಶ್ವಂಬರ, ವಿಶ್ವರೂಪಿ,
ಆತ ಸಾಕಾರ ರೂಪ ನಿರಾಕಾರ
ಆತ ಎಲ್ಲವೂ, ಆದರೆ ಏನೂ ಅಲ್ಲ.
ಆತ ಬೆಳಗಿನ ನಮಸ್ಕಾರ, ನಮಾಜು
ಪ್ರಾರ್ಥನೆ..
ಯಾಕೆಂದರೆ ಆತ ಮಹಾನ್ ತುಂಟ..
ಅತ ದೇವಾಲಯ ಕೆಡವಿದರೆ ನಗುತ್ತಾನೆ.
ಮಸೀದಿ ಈಗರ್ಜಿಗಳನ್ನು ಕೆಡವಿದರೆ
ತುಂಟ ನಗೆ ಬೀರುತ್ತಾನೆ.
ಆತನಿಗೆ ವಿಶ್ವವೇ ಮನೆಯಾಗಿರುವಾಗ
ವಿಶ್ವವೇ ಅವನಾಗಿರುವಾಗ
ಮನೆ ಯಾಕೆ ಬೇಕು ?
ಆತ ತುಂಟ ನಗೆ ಬೀರುತ್ತಾನೆ.
ಆತ ಮಸೀದಿ ಕೆಡವಿದಾಗ ಆಲ್ಲಿಂದ ಹೊರಟ
ದೇವಾಲಯಗಳನ್ನು ಉರುಳಿಸಿದಾಗ ಅಲ್ಲಿಂದ
ನಡೆದು ಬಿಟ್ಟ.
ಈಗರ್ಜಿಗಳನ್ನು ಧ್ಚಂಸ ಮಾಡಿದಾಗ
ನಕ್ಕು ಬಿಟ್ಟ..
ಆತನಿಗೆ ಸಿಟ್ಟಿತ್ತು, ಮಸೀದಿ ದೇವಾಲಯಗಳ
ಕೆಡುವವರ ಮೇಲೆ.
ಆತನಿಗೆ ಸಿಟ್ಟಿತ್ತು ತನ್ನ ಹೆಸರಿನಲ್ಲಿ
ಬಂದೂಕು ಹಿಡಿಯುವವರ ಬಗ್ಗೆ.
ಆದರೂ ಆತ ತುಂಟ.
ಆತ ಮಾಂಸ ಹಾರ ವಿರೋಧಿಸುವವರ ಮುಂದೆ
ಮಾಂಸ ತಿಂದ.
ಮಾಂಸಾಹಾರಿಗಳ ಮುಂದೆ
ಸಸ್ಯಾಹಾರಿಯಾದ.
ಆತನ ಕೈಯಲ್ಲಿ ತ್ರಿಶೂಲ ವಿತ್ತು.
ಹಸಿರು ಅರ್ಧ ಚಂದ್ರ ರಾರಾಜಿಸುತ್ತಿತ್ತು.
ಆತನ ಮೈ ಮೇಲೆ ಶಿಲುಬೆಗೆರಿದ ರಕ್ತದ ಗುರುತುಗಳಿದ್ದವು.
ಆತ ನಗುತ್ತಿದ್ದ ತನ್ನನ್ನು ಕಟ್ಟಿ ಹಾಕುವವರ ಕುರಿತು.
ನಾಲ್ಕು ಗೋಡೆಗಳ ನಡುವೆ ಬಂಧಿಸುವ ಹುನ್ನಾರದ ಕುರಿತು
.
ಆತ ನೋಡುವವರ ನೋಟವಾದ
ಆಡುವವರ ಮಾತಾದ.
ಓದುವವರ ಅಕ್ಷರವಾದ.
ಬಡವರ ಪ್ರಾಮಾಣಿಕತೆಯಾದ.
ಶ್ರೀಮಂತರ ಹಣವಾದ.
ಹೀಗೆ ಎಲ್ಲರಿಗೂ ಪಾಠ ಕಲಿಸಿದ.
ಆತ ಬಲು ತುಂಟ..
No comments:
Post a Comment