Thursday, April 11, 2019

ಮಗಳು ಮತ್ತು ಮಳೆ


ಮಳೆ ಬಂತು ಮಳೆ ಮಳೆ
ಮನೆಗೆ ಮಗಳು ಬಂದಂತೆ
ಮೇಲೆ ಭೋರ್ಗರೆತ ಕೆಳಗೆ ಜಲಪಾತ ನೀರು
ಭರ ಭರ.
ಥೇಟ್ ಮನೆಗೆ ಮಗಳು ಬಂದಂತೆ
ಮನೆಗೆ ಬರುವ ಮಗಳು
ಸುಮ್ಮನಿರುವುದಿಲ್ಲ, ಮಳೆಯ ಹಾಗೆ
ಮಳೆ ಬಂದಿದ್ದು ಮುಚ್ಚಿಡಲು ಸಾಧ್ಯವಿಲ್ಲ
ಮಗಳ ಹಾಗೆ.
ಅಕ್ಕಪಕ್ಕದ ಮನೆಗಳ ಮೇಲೂ ಮಳೆಯ
ಭೋರ್ಗರೆತ.
ಹೌದಾ ಅವರ ಮನೆಯ
ಮಗಳು ಬಂದಳಂತೆ
ಅದೇ ಉದ್ಗಾರ, ಮಾತು ಮಾತು
ಮಳೆಯ ಹಾಗೆ.
ಮಳೆ ಬಂದ ಮೇಲೆ
ನೆಲ ತಂಪು ಹೊಸ ಹುಟ್ಟು ಉಲ್ಲಾಸ ಉನ್ಮಾದ
ಮಗಳ ಹಾಗೆ.
ಹೌದು ಮಗಳು ಬಂದಳು
ಹೌದು ಮಳೆ ಬಂತು
ಮಗಳು ಮತ್ತು ಮಳೆ
ಅಲ್ಲಿ ಹುಟ್ಟಿತು ಹೊಸ ಚಿಗುರು.

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...