Friday, April 26, 2019

ಮೋದಿ ಗಂಗಾರತಿ; ಮತ್ತೆ ಹಿಂದುತ್ವದತ್ತ ಹಿಂತಿರುಗಿದ ಬಿಜೆಪಿ

ವಾರಾಣಸಿ ವಿಶ್ವದ ಅತಿ ಪುರಾತನ ಪಟ್ಟಣಗಳಲ್ಲಿ ಒಂದು. ಪ್ರಾಯಶಃ ಇಲ್ಲಿರುವಷ್ಟು ದೇವಾಲಯಗಳು ದೇಶದ ಬೇರೆ ಪ್ರದೇಶಗಳಲ್ಲಿ ಇಲ್ಲ. ಇಲ್ಲಿ ಬದುಕು ಮತ್ತು ಸಾವು ಸದಾ ಮುಖಾಮುಖಿಯಾಗುತ್ತಲೇ ಇರುತ್ತವೆ. ಇಲ್ಲಿರುವ ಬೇರೆ ಬೇರೆ ಘಾಟ್ ಗಳಲ್ಲಿ ಹೆಣವನ್ನು ಇಟ್ಟುಕೊಂಡು ಕಾಯುವ ಜನ. ತಮ್ಮವರ ಪಾರ್ಥಿವ ಶರೀರಕ್ಕೆ ಅಂತ್ಯ ಸಂಸ್ಕಾರ ಮಾಡಲು ಕಾತುರರಾಗಿರುವವರು. ಅಂತ್ಯ ಸಂಸ್ಕಾರ ಮಾಡಲು ಕಾದು ಕುಳಿತಿರುವ ಪಾಂಡಾಗಳು ಅಥವಾ ವೈದಿಕರು.
ಪಕ್ಕದಲ್ಲಿ ಹರಿಯುವ ಗಂಗೆ. ಬಹಳಷ್ಟು ಸಂದರ್ಭಗಳಲ್ಲಿ ಹೆಣಗಳನ್ನು ಹೊತ್ತು ಸಾಗುತ್ತಾಳೆ ಗಂಗೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಸತ್ತ್ವರು ನೇರವಾಗಿ ಸ್ವರ್ಗ ಸೇರುತ್ತಾರೆ ಎಂಬುದು ನಂಬಿಕೆ. ಬದುಕು ಅಂದರೆ ಹಾಗೆ ತಾನೆ ? ಅದು ನಿಂತಿರುವುದು ನಂಬಿಕೆಯ ಮೇಲೆ. ಶ್ರದ್ಧೆ ಮತ್ತು ಭಕ್ತಿ ಇದಕ್ಕೆ ಆಧಾರ. ಭಾರತೀಯರಿಗೆ ಶ್ರದ್ಧೆ ಮತ್ತು ಭಕ್ತಿ ಹೆಚ್ಚು. ನಂಬಿಕೆ ಅವರ ಬದುಕಿನ ಜೀವಾಳ.ಈ ವಾರಾಣಸಿ ನರೇಂದ್ರ ಮೋದಿ ಅವರಿಂದ ಬದಲಾಗುತ್ತಿದೆ. ೨೦೧೪ ರ ಚುನಾವಣೆಯಲ್ಲಿ ಇಲ್ಲಿಂದ ನರೇಂದ್ರ ಮೋದಿಯವರು ಗೆದ್ದರು. ಈ ಮತ್ತೆ ಇಲ್ಲಿಂದಲೇ ಪುನರಾಯ್ಕೆ ಬಯಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರು ಗೆಲ್ಲುವುದು ಬಹುತೇಕ ನಿಶ್ಚಿತ.
ಮೋದಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ ಮೇಲೆ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗಿವೆ.ವಿಶಾಲ ೂ ಪತ್ತೆಯಾಗಿವೆ.  ಗಂಗೆ ಶುದ್ಧವಾಗುತ್ತಲೂ ಇದ್ದಾಳೆ. ನಮಾಮಿ ಗಂಗೆ ಘೋಷಣೆ ಎಲ್ಲೆಡೆಗೂ ಕೇಳಿ ಬರುತ್ತಿದೆ. ಸಂಜೆ ನಡೆಯುವ ಗಂಗಾರತಿ ವಿಶ್ವ ಪ್ರಸಿದ್ಧವಾಗಿದೆ. ಹರ ಹರ ಮಹಾದೇವ ಘೋಷಣೆಯ ಜೊತೆಗೆ ಹರ ಹರ ಮೋದಿ ಘೋಷಣೆಯೂ ಕೇಳು ಬರುತ್ತಿದೆ. ಪ್ರಧಾನಿಯವರು ಹಿಂದೂ ಧರ್ಮದ ಪುನರ್ ಸ್ಥಾಪಕರಾಗಿ ಕಾಣತೊಡಗಿದ್ದಾರೆ. ವಾರಾಣಸಿ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತಿದೆ. ಮತ್ತೆ ಅದೇ ಹಿಂದೂ ವೈಭವದ ಪುನರ್ ಸ್ಥಾಪನೆ. ಇದು ಸಾಮಾನ್ಯ ಕೆಲಸ ಅಲ್ಲ. ದೇಶವನ್ನು ಮುಂದಕ್ಕೆ ಒಯ್ಯಲು ಎಲ್ಲರೂ ಯತ್ನ ನಡೆಸುತ್ತಾರೆ. ಹಿಂದಕ್ಕೆ ಒಯ್ಯುವುದಕ್ಕೆ ಅಲ್ಲ. ಯಾಕೆಂದರೆ ಅದು ಕಷ್ಟ.
ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸುವುದರ ಹಿಂದಿನ ದಿನ. ಅಲ್ಲಿ ಅವರು ರೋಡ್ ಶೋ ನಡೆಸಿದರು. ನಂತರ ಗಂಗಾರತಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಮೋದಿಯವರ ಜಯಕಾರ ಮುಗಿಲು ಮುಟ್ಟುತ್ತಿತ್ತು. ರಾಷ್ಟ್ರದ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು. ಕನ್ನಡದ ಕೆಲವು ವಾಹಿನಿಗಳು ಜ್ಯೋತಿಷಿಗಳನ್ನು ಕರೆ ತಂದು ಅವರ ಜೊತೆ ವಾರಾಣಸಿಯ ಸ್ಥಳ ಪುರಾಣದ ಬಗ್ಗೆ ಚರ್ಚೆ ನಡೆಸಿದರು. ಇಲ್ಲಿಂದ ಆಯ್ಕೆಯಾದವರು ಹೇಗೆ ವಿಶ್ವ ಮಾನ್ಯರಾಗುತ್ತಾರೆ ಎಂಬುದನ್ನು ಜ್ಯೋತಿಷಿಗಳು ವೀಕ್ಷಕರಿಗೆ ತಿಳಿಸಿಕೊಟ್ಟರು. ಸಾವಿರಾರು ವರ್ಷಗಳ ಹಿಂದಿನ ಭಾರತಕ್ಕೆ ನಾವು ಮರಳುತ್ತಿದ್ದೇವೆ ಎಂಬುದನ್ನು ಇದೆಲ್ಲ ಸಾಭಿತು ಪಡಿಸುವಂತಿತ್ತು. ಇದನ್ನು ನೋಡಿದವರೆಲ್ಲ ಜೈ ಜೈ ಮೋದಿ ಎಂದು ಉದ್ಗಾರ ತೆಗೆಯುವಂತೆ ವಾತಾವರಣ ಇತ್ತು.
ಮೋದಿ ಅವರು ಈ ರೋಡ್ ಶೋ ನಲ್ಲಿ ಕೇಸರಿಯ  ಜುಬ್ಬಾ ಧರಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮಾತ್ರ ಬಿಳಿಯ ಜುಬ್ಬಾ ಹಾಕಿದ್ದರು. ತಮ್ಮ ಸ್ವಚ್ಚ ರಾಜಕೀಯವನ್ನು ಅವರ ಬಟ್ಟೆಯೇ ಹೇಳುವಂತಿತ್ತು. ಮೋದಿ ಅವರ ಜೊತೆ ಸಚಿವ ನಡ್ಡಾ ಅವರೂ ಇದ್ದರು.
ಮೋದಿ ಅವರ ರೋಡ್ ಶೋ ನಲ್ಲಿ ಸುಮಾರು ಐದು ಲಕ್ಷ ಜನ ಇದ್ದರು ಎಂಬುದು ಒಂದು ಅಂದಾಜು. ಐದೇ ಇರಲೀ ಜಾಸ್ತೀನೇ ಇರಲಿ ಒಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಇಡೀ ವಾರಾಣಸಿ ಕೇಸರಿ ಮಯವಾಗಿತ್ತು. ರಸ್ತೆಗಳ ಇಕ್ಕೆಲೆಗಳಲ್ಲಿ ನಿಂತ ಜನ ಮೋದಿಯವರ ಮೇಲೆ ಪುಷ್ಪ ಗಳ ಮಳೆಗೈದರು. ಎಲ್ಲ ವಾಹಿನಿಗಳಲ್ಲೂ ಮೋದಿಯವರ ಗುಣಗಾನ . ಅಲ್ಲಿ ಕಾಣುತ್ತಿದ್ದುದು ಕೇಸರಿ ಸೈನ್ಯ. ವೈರಿಗಳ ಎದೇ ನಡಗಿಸುವಂತೆ ಮಾಡುವ ದೃಶ್ಯ.
ಮೋದಿ ಕೊನೆಗೆ ಬಂದಿದ್ದು ಗಂಗಾರತಿ ನಡೆಯುವ ಸ್ಥಳಕ್ಕೆ ಎಲ್ಲೆಡೆ ದೀಪ. ದೀಪಗಳ ಎದುರು ಮಂತ್ರ ಹೇಳುವ ವೈದಿಕರು. ಒಬ್ಬ ಇಂತಹ ವೈದಿಕರ ಎದುರಿಗೆ ಇಬ್ಬರು ಸುಂದರಿಯರು. ಮೋದಿ ಬಂದರು ತಮಗಾಗಿ ಸಿದ್ಧಪಡಿಸಿದ್ದ ವಿಶೇಷ ಆಸನದಲ್ಲಿ ಕುಳಿತರು. ಎಲ್ಲವೂ ವೈಭವೋಪೇತ.
ಆಗ ಪ್ರಾರಂಭವಾದ ವಿಶ್ಲೇಷಣೆ. ದೇಶದ ಜನ ಮೋದಿಯವರ ಜೊತೆಗಿದ್ದಾರೆ. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ವಾಹಿನಿಗಳೆಲ್ಲ ಹರ ಹರ ಮೋದಿ ಎಂದು ಹೇಳಲು ಪ್ರಾರಂಭಿಸಿದವು. ಮೋದಿ ಈ ದೇಶದ ಪ್ರಶ್ನಾತೀತ ನಾಯಕರು. ದೇಶಕ್ಕೆ ಮೋದಿ ಅನಿವಾರ್ಯ ಎಂಬ ವಾತಾವರಣವನ್ನು ಸೃಷ್ತಿಸಲಾಯಿತು. ಇದಕ್ಕೆ ಸಾಕ್ಷಿ ಎಂಬಂತೆ ಎನ್ ಡಿ ಏ ನಾಯಕರ ಉಪಸ್ಥಿತಿ. ಬಿಹಾರದ ನುಖ್ಯಮಂತ್ರಿ ನಿತೀಶ್ ಕುಮಾರ್ ಮಂಕಾದಂತೆ ಕಂಡು ಬರುತ್ತಿದ್ದರು. ಶಿವಸೇನಾ ಮುಖ್ಯಸ್ಥ  ಉದ್ದವ ಠಾಕ್ರೆ ಮುಖದಲ್ಲಿ ಕಾಂತಿ ಇರಲಿಲ್ಲ. ಮತ್ತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಅವಸ್ರು ಯೋಚಿಸುತ್ತಿದ್ದಂತೆ ಇತ್ತು.
ಒಟ್ಟಿನಲ್ಲಿ ಹಿಂದೂ ಹೃದಯ ಸಾಮ್ರಾಟ ಎಂಬ ಬಿರುದನ್ನು ತಮ್ಮ ಮುಡೀಗೆ ಏರಿಸಲು ಮೋದಿ ಅವರು ಕಾತುರರಾಗಿದ್ದಂತೆ ಕಂಡು  ಬರುತ್ತಿತ್ತು.  ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡಿದೆ. ಅಭಿವೃದ್ಧಿಯ ಮಂತ್ರ ಪಠಣ ನಿಂತಿದೆ. ಜನರ ಖಾತೆಗಳಿಗೆ ೧೫ ಲಕ್ಷ್ಯ ಹಣ ಹಾಕುವ ಮಾತು ಕೇಳಿ ಬರುತ್ತಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ಮಾತು ಮೌನವಾಗಿದೆ. ಮೇಕಿನ್ ಇಂಡಿಯಾ, ಸ್ವಚ್ಚ ಭಾರತದ ಘೋಷಣೆಗಳು ಕೇಳಿ ಬರುತ್ತಿಲ್ಲ. ಇದಕ್ಕೆ ಬದಲಾಗಿ ಇಡೀ ಬಿಜೆಪಿ ರಾಜಕಾರಣ ಮೋದಿಯವರ ಸುತ್ತ ಸುತ್ತುತ್ತಿದೆ. ಎನ್ ಡಿ ಟಿವಿ ಇತ್ತೀಚೆಗೆ ಪ್ರಸಾರ ಮಾಡಿದ ವರದಿಯೊಂದರ ಪ್ರಕಾರ ಮೋದಿ ಇದುವರೆಗೆ ಮಾಡಿದ ಪ್ರಸಾರ ಭಾಷಣಗಳಲ್ಲಿ ಅತಿ ಹೆಚ್ಚು ಬಳಸಿದ ಶಬ್ದ ಯಾವುದು ಗೊತ್ತಾ ? ಅದು ಮೋದಿ. ಈ ದೇಶದ ರಾಜಕೀಯ ಇತಿಹಾಸದಲ್ಲಿ ಯಾವುದೇ ಒಬ್ಬ ನಾಯಕ ತನ್ನ ಹೆಸರನ್ನೇ ಸಾವಿರಾರು ಬಾರಿ ಹೇಳಿಕೊಂಡ ಇನ್ನೊಂದು ಉದಾಹರಣೆ ಇರಲಿಕ್ಕಿಲ್ಲ. ನಿಮ್ಮ ಒಂದು ಮತ ಅಭ್ಯರ್ಥಿಯ ಖಾತೆಗಲ್ಲ ಮೋದಿ ಖಾತೆಗೆ ಜಮಾ ಆಗುತ್ತದೆ ಎಂದು ಹೇಳುವ ಮೂಲಕ ತಮ್ಮ ಜನಪ್ರಿಯತೆಯನ್ನು ಪಣಕ್ಕಿಟ್ಟು ಪ್ರಧಾನಿ ಚುನಾವಣೆ ದಿಗ್ವಿಜಯಕ್ಕೆ ಹೊರಟಿದ್ದಾರೆ.
ಈಗ ಬಿಜೆಪಿಗೆ ಊಳಿದಿರುವ ಟ್ರಂಪ್ ಕಾರ್ಡ್ ಮೋದಿ ಮಾತ್ರ. ಮೋದಿ ಬಿಟ್ಟರೆ ಬಿಜೆಪಿಯ ಸ್ಥಿತಿಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಮೋದಿ ಸರ್ವಾಂತರ್ಯಾಮಿ ಸರ್ವಶಕ್ತರಾಗಿದ್ದಾರೆ. ಇಂತಹ ಸರ್ವಶಕ್ತ ನಾಯಕ ಹಿಂದೂ ಧರ್ಮದ ಪುನರ್ ಸ್ಥಾಪಕರೂ ಆಗಿದ್ದಾರೆ. ಅವರ ಈ ಕಾರ್ಯದಲ್ಲಿ ಸಹಾಯ ಮಾಡಲು ಸಾಧ್ವಿ ಪ್ರಜ್ನಾಸಿಂಗ್, ಸಾಕ್ಷಿ ಮಹರಾಜ್, ಯೋಗಿ ಆದಿತ್ಯನಾಥ್ ಅವರಂತಹ ಕಾರ್ಯಕರ್ತರ ಪಡೆ ಸಿದ್ಧವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ವಿಚಾರ ಎಂದರೆ ಅದು ಹಿಂದುತ್ವ, ಸೈನ್ಯ ದೇಶಪ್ರೇಮ ಮತ್ತು ಪಾಕಿಸ್ಥಾನ. ಅಂದರೆ ೨೦೧೪ ರ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯವನ್ನು ಚುನಾವಣಾ ಪ್ರಮುಖ ವಿಚಾರವನ್ನಾಗಿ ಮಾಡಿಕೊಂಡಿದ್ದ ಮೋದಿ ಮತ್ತು ಅವರ ಬಿಜೆಪಿ ಯು ಟರ್ನ್ ಹೊಡೆದಿದೆ. ತನ್ನ ಮೂಲರೂಪದಲ್ಲಿ ಅದು ಪ್ರತ್ಯಕ್ಷವಾಗಿದೆ. ಈ ಹಿಂದುತ್ವದ ಇಮೇಜ್ ಅನ್ನು ಬಲಪಡಿಸುವುದಕ್ಕಾಗಿಯೇ ಸಾದ್ವಿ ಪ್ರಜ್ನಾ ಸಿಂಗ್ ರನ್ನು ಬೂಪಾಲ್ ದಿಂದ ಚುನಾವಣಾ ಕಣಕ್ಕೆ ಇಳಿಸಿದ್ದು ಮತ್ತು  ಗಂಗಾರತಿ ಮತ್ತು ರೋಡ್ ಶೋ ನಡೆಸಿದ್ದು. ಈ ಎರಡು ಕ್ರಮಗಳ ಮೂಲಕ ದೇಶದ ಅಲ್ಪಸಂಖ್ಯಾತರಿಗೆ ಎಚ್ಚರಿಕೆಯನ್ನು ರವಾನಿಸಿದೆ. ಹಾಗೆ ಹಿಂದೂ ಮತದ ಬ್ಯಾಂಕ್ ಅನ್ನು ಬಲಪಡಿಸುವ ಯತ್ನ ನಡೆಸಿದೆ.,
ಹಾಗಿಲ್ಲದಿದ್ದರೆ ಸಾದ್ವಿ ಪ್ರಜ್ನಾ ಸಿಂಗ್ ಅವರನ್ನು ಚುನಾವಣಾ ಕಣಕ್ಕೆ ಇಳಿಸುವ ಅಗತ್ಯ ಇರಲಿಲ್ಲ. ಯಾಕೆಂದರೆ ಮಾಲೇಗಾಂವ್ ಹತ್ಯಾಕಾಂಡದಲ್ಲಿ ಆರೋಪಿಯಾಗಿರುವ ಪ್ರಜ್ನಾ ಸಿಂಗ್ ಜಾಮೀನು ಪಡೆದು ಹೊರಬಂದಿದ್ದಾರೆ. ಅವರು ಜಾಮೀನು ಪಡೆಯಲು ನೀಡಿದ ಕಾರಣ ಬ್ರೆಸ್ಟ್ ಕ್ಯಾನ್ಸರ್ ಗೆ ಚಿಕಿತ್ಸೆ. ಆದರೆ ಅವರಿಗೆ ಈಗ ಬ್ರೆಸ್ಟ್ ಕ್ಯಾನ್ಸರ್ ಇಲ್ಲ. ಗೋಮೂತ್ರ ಮತ್ತು ಪಂಚಾಮೃತ ಕುಡಿದು ರೋಗದಿಂದ ಗುಣಮುಖರಾಗಿದ್ದಾರೆ. ಮುಂಬೈ ವೈದ್ಯರ ಪ್ರಕಾರ ಅವರ ದೇಹದಲ್ಲಿ ಕ್ಯಾನ್ಸರ್ ನ ಯಾವ ಲಕ್ಷಣಗಳೂ ಇಲ್ಲ. ಅಂದರೆ ಈ ಸಾಧ್ವಿ ಈಗ ಇರಬೇಕಾದ ಸ್ಥಾನ ಜೈಲು. ಆದರೆ ಅವರೀಗ್ ಬಿಜೆಪಿ ಅಭ್ಯರ್ಥಿ. ಅಂದರೆ ಎಲ್ಲವೂ ಸುಳ್ಳು..
ಇಂತಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಹಿಂದೂ ಮತ ಬ್ಯಾಂಕ್ ಅನ್ನು ಇನ್ನಷ್ಟು ಬಲಪಡಿಸುವುದೇ ಆಗಿದೆ. ಇನ್ನು ವಾರಾಣಸಿಯ ರೋಡ್ ಶೋ ಮತ್ತು ಗಂಗಾರತಿ. ಇದೂ ಸಹ ಹಿಂದೂ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ಯತ್ನವೇ.
ಮೋದಿ ಅವರು ಗಂಗಾರತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಹಣೆಗೆ ಗಂಧ ಮತ್ತು ವಿಭೂತಿಯನ್ನು ಹಚ್ಚಲಾಯಿತು. ಹಾಗೆ ಅಮಿತ್ ಶಾ ಮತ್ತು ನಡ್ಡಾ ಅವರ ಹಣೆಗೂ ಸಹ..ಈ ದೃಶ್ಯ ದೇಶಾದ್ಯಂತ ಲೈವ್ ಪ್ರಸಾರವಾಗುತ್ತಿದ್ದಂತೆ ದೇಶದ ಜನ ತಮ್ಮ ನಾಯಕ ಹಿಂದೂ ಧರ್ಮದ ಉದ್ದಾರಕ್ಕಾಗಿ ಬಂದವರು ಎಂದ್ಉ ಸಂತಸ ಪಟ್ಟರು. ಮೋದಿ ದೇಶದ ಪ್ರಧಾನಿಯಾಗಿ ಕಾಣಿಸಿಕೊಳ್ಳಲಿಲ್ಲ. ಬಹುಸಂಸ್ಕೃತಿಯ ಈ ನಾಡಿನಲ್ಲಿ ತಾವೊಬ್ಬ ಹಿಂದೂ ದೊರೆ ಎಂಬಂತೆ ಅವರು ಕಾಣಿಸಿಕೊಂಡರು.
ಬಿಜೆಪಿಯ ಹಿಂದುತ್ವದ ಹಳೆಯ ಅವತಾರ ಆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತದೆಯೇ ಇಲ್ಲವೇ ಎಂಬುದನ್ನು ಹೇಳಲಾಗದು. ಆದರೆ ಮೋದಿಯವರ ಹಿಂದುತ್ವದ ಮುಖವಾಡ ದೇಶಭಕ್ತಿ ಮತ್ತು ದೇಶವನ್ನು ಕಾಯುವ ಚೌಕಿದಾರ್ ಎಂಬ ಇಮೇಜ್ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬಹುದು.
ಮೋದಿ ಒಬ್ಬ ಜನಪ್ರಿಯ ನಾಯಕ ಎಂಬ ಬಗ್ಗೆ ಯಾರಿಗೂ ಅನುಮಾನ ಬೇಕಾಗಿಲ್ಲ. ಹಾಗೆ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಅದು ಜನರ ಆಯ್ಕೆ. ಅದನ್ನು ಪ್ರಶ್ನಿಸುವುದೂ ಸಾಧ್ಯವಿಲ್ಲ. ಆದರೆ ಸಮಸ್ಯೆ ಇರುವುದು ಅವರ ಸುಳ್ಳುಗಳಲ್ಲಿ. ಸಮಸ್ಯೆ ಇರುವುದು ಅವರ ಹಿಂದುತ್ವದ ಬಗ್ಗೆ. ಸಮಸ್ಯೆ ಇರುವುದು ದೇಶದ ಬಹುಮುಖೀ ಸಂಸ್ಕೃತಿಯನ್ನು ಅವರು ನಾಶಪಡಿಸುತ್ತಿರುವುದರಲ್ಲಿ. ಸಮಸ್ಯೆ ಇರುವುದು ಅವರ ಸರ್ವಾಧಿಕಾರಿ ಪ್ರವೃತ್ತಿಯಲ್ಲಿ. ಸಮಸ್ಯೆ ಇರುವುದು ಅವರ ಕೋಮುವಾದಿ ಮನಸ್ಥಿತಿಯಲ್ಲಿ. ಸಮಸ್ಯೆ ಇರುವುದು ದೇಶವನ್ನು ಸಾವಿರಾರು ವರ್ಷಗಳಷ್ತು ಹಿಂದಕ್ಕೆ ಒಯ್ಯುವ ಅವರ ಹುನ್ನಾರದಲ್ಲಿ. ಸಮಸ್ಯೆ ಇರುವುದು ದೇಶದ ಮುಗ್ದ ಜನರಲ್ಲಿ ದೇಶ ಪ್ರೇಮದಂತಹ ಭಾವನಾತ್ಮಕ ವಿಚಾರಗಳನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವುದರಲ್ಲಿ. ಸುಳ್ಳುಗಳನ್ನು ಹೇಳುತ್ತ ಅದೇ ಸತ್ಯ ಎಂದು ಜನರನ್ನು ಮೋಸಗೊಳಿಸುವ ಅವರ ಪ್ರಾವಿಣ್ಯತೆಯಲ್ಲಿ ಅಪಾಯ ಅಡಗಿದೆ.
ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಗಂಗಾರತಿಯನ್ನು ನೋಡಿ ನಾವು ಸಂತೋಷಡಬೇಕಾಗಿದೆ. ಇದನ್ನು ಬಿಟ್ಟು ಅವರು ದೇಶಕ್ಕೆ ಏನೂ ಕೊಡಲಾರರು.

Saturday, April 13, 2019

ಮೋದಿ ಚೌಕಿದಾರರೆ ? ಮೋದಿ ಮೋಡಿಗಾರರೆ ? ಮೋದಿ ಕಣ್ಣು ಕಟ್ಟು ವಿದ್ಯೆ ನಿಪುಣರೆ ?

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರವಾಸ ಮಾಡುತ್ತ ದಣಿವರಿಯದೇ ಮತ್ತೆ ಮೋದಿ ಎಂದು ತಾವೇ ಹೇಳಿಕೊಳ್ಳುತ್ತಿದ್ದಾರೆ. ಹಾಗೆ ಸೇರಿದ ಜನ ಸಮೂಹ ಮೋದಿ ಮೋದಿ ಎಂದು ಘೋಷಣೆ ಮಾಡುವಂತೆ ನೋದಿಕೊಂಡಿದ್ದಾರೆ. ಈ ದೃಷ್ಟಿಯಿಂದ ಮೋದಿಯವರು ಒಬ್ಬ ಯಶಸ್ವಿ ಪ್ರಚಾರಕ. ಆರ್ ಎಸ್ ಎಸ್ ಪ್ರಚಾರಕರಾಗಿದ್ದ ಅವರು ಈಗ್ ಬಿಜೆಪಿಯ ಪ್ರಚಾರಕರಾಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅವರು ತಮಗೆ ತಾವೇ ಪ್ರಚಾರಕರಾಗಿದ್ದಾರೆ. ತಮ್ಮನ್ನೇ ತಾವು ಮಾರಾಟಕ್ಕೆ ಇಟ್ಟುಕೊಂಡತೆ.
ಅದೇನೇ ಇರಲಿ ನರೇಂದ್ರ ಮೋದಿಯವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಅಂಶಗಳನ್ನು ಸಾಬೀತು ಪಡಿಸಿದ್ದಾರೆ. ಅದರಲ್ಲಿ ಬಹುಮುಖ್ಯ ಎಂದರೆ ಪಕ್ಷಕ್ಕಿಂತ ಅವರು ದೊಡ್ಡದಾಗಿ  ಬೆಳೆದಿರುವುದು. ಹೌದು ಈಗ ಮೋದಿ ಭಾರತೀಯ ಜನತಾ ಪಾರ್ಟಿಗಿಂತ ದೊಡ್ದವರು.ಆ ಪಕ್ಷದಲ್ಲಿ ಎಲ್ಲ ಜನತಾಂತ್ರಿಕ ಮೌಲ್ಯಗಳನ್ನು ನಾಶಪಡಿಸಿ ವ್ಯಕ್ತಿ ಪೂಜೆ ಮತ್ತು ಭಟ್ಟಂಗಿ ರಾಜಕಾರಣವನ್ನು ಪ್ರಾರಂಭಿಸಿಬಿಟ್ಟಿದ್ದಾರೆ. ಅಲ್ಲಿ ಮೋದಿ ಮತ್ತು ಅಮಿತ್ ಷಾ ಅವರನ್ನು ಪ್ರಶ್ನಿಸಿಲಾಗದ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದ ಇಂದಿರಾ ಗಾಂಧಿ ನರೇಂದ್ರ ಮೋದಿ ಅವರ ಮೈಮೇಲೆ ಬಂದಂತಿದೆ.
ದಕ್ಷಿಣ ಭಾರತದ ತಮಿಳು ನಾಡಿನಲ್ಲಿ ವಿಶೇಷವಾಗಿ ಮೋದಿ ಅವರನ್ನು ಮೋಡಿ ಎಂದು ಕರೆಯುವುದು ಸಾಮಾನ್ಯ. ಹಾಗೆ ಇಂಗ್ಲೀಷ್ ಭಾಷೆಯನ್ನೇ ಮಾತೃ ಭಾಷೆಯನ್ನಾಗಿ ಮಾಡಿಕೊಂಡವರೂ ಸಹ ಮೋದಿ ಅವರನ್ನು ಮೋಡಿ ಎಂದೇ ಕರೆಯುತ್ತಾರೆ. ನಿಜ ನರೇಂದ್ರ ದಾಮೋದರ ಮೋದಿ ಈಗ ಭಾರತದ ಬಹುಸಂಖ್ಯಾತರ ಪಾಲಿಗೆ ಮೋಡಿಯೇ, ಅವರು ೨೦೧೪ ರಲ್ಲಿ ಮೋಡಿ ಮಾಡಿಯೇ ಅಧಿಕಾರಕ್ಕೆ ಬಂದರು. ಈ ಭಾರಿಯೂ ಮೋಡಿ ಮಾಡಲು ಅವರು ಸನ್ನದ್ಧರಾಗಿದ್ದಾರೆ.
ಮೋಡಿ ಕರ್ನಾಟಕ ಆಂಧ್ರ ಗಡಿ ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಒಂದು ಕಲೆ. ಇದನ್ನು ಇಂದ್ರಜಾಲ ಮಹೇಂದ್ರ ಜಾಲ ಎಂದೂ ಕರೆಯಬಹುದು. ಜಾದೂ ಎಂದೂ ಹೇಳಬಹುದು. ಮೋಡಿ ಆಟದ ಸಂದರ್ಭದಲ್ಲಿ ಆಟದ ಅಂಗಳದಲ್ಲಿ ಹಾವುಗಳು ಚೇಳುಗಳು ಪ್ರತ್ಯಕ್ಷವಾಗುತ್ತವೆ/ ಒಬ್ಬರ ಹಿಂಭಾಗ ಇನ್ನೊಬ್ಬರ ಹಿಂಬಾಗಕ್ಕೆ ಅಂಟಿಕೊಳ್ಳುತ್ತದೆ. ಒಬ್ಬ ಕೈ ಬೀಸಿದರೆ ಮತ್ತೊಬ್ಬನ ಮೈ ಮೇಲೆ ಬಾಸುಂಡೆಯ ಗುರುತುಗಳು ಮೂಡುತ್ತವೆ. ಇದು ಒಂದು ರೀತಿಯ ಭ್ರಮಾತ್ಮಕ ಜಗತ್ತು. ಮೋಡಿಗಾರ ಇಂತಹ ಭ್ರಮೆಯೊಂದನ್ನು ಸೃಷ್ಟಿಸಿಬಿಡುತ್ತಾನೆ. ಆಟ ನೋಡುಲು ಸೇರಿದ ಸಾವಿರಾರ ಜನ ಈ ಭ್ರಮೆಯನ್ನೇ ನಿಜ ಎಂದುಕೊಂಡು ಸಂತೋಷ ಪಡುತ್ತಾರೆ. ಇದನ್ನು ಗ್ರಾಮಾಂತರ ಪ್ರದೇಶದ ಭಾಷೆಯಲ್ಲಿ ಕಣ್ಣು ಕಟ್ಟು ಎಂದು ಕರೆಯುತ್ತಾರೆ. ಹೌದು ಅದು ಕಣ್ಣು ಕಟ್ಟು ವಿದ್ಯೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೋಡಿ ಎಂದು ಕರೆಯುವಾಗ ಮೋಡಿ ವಿದ್ಯೆ ನನಗೆ ನೆನಪಾಗುತ್ತದೆ. ಮೋದಿಯವರು ಮೋಡಿ ಎಂಬ ಹೆಸರನ್ನು ಅನ್ವರ್ಥ ನಾಮವಾಗಿ ಪಡೆದಿರುವುದು ಕಾಕತಾಳಿಯ ಎಂದು ನನಗೆ ಅನ್ನಿಸುವುದಿಲ್ಲ. ಅವರು ಮೋಡಿಗಾರರೇ. ಬಂಗಾಳಿ ವಿದ್ಯೆಯಲ್ಲಿ ಪಾರಂಗತರು. ಗೋಬಲ್ಲನ ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತಂದವರೂ ನರೇಂದ್ರ ಮೋದಿಯವರೇ. ಅದನ್ನು ಅವರು ಪ್ರತಿದಿನ ಸಾಬೀತು ಮಾಡುತ್ತಲೇ ಇದ್ದಾರೆ. ಸಾಮಾನ್ಯ ಜನರ ಮುಗ್ದತೆಯನ್ನು ಬಳಸಿಕೊಂಡು ಮೋಡಿ ವಿದ್ಯೆಯ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಆದರೆ ಈ ದೇಶದ ಮುಗ್ದ ಮತದಾರ ಈ ಮೋಡಿ ಆಟವನ್ನು ನೋಡಿ ಸಂತೋಷಪಡುತ್ತಿದ್ದಾನೆ.
ಮೋಡಿಯ ಅಂಗಳದಲ್ಲಿ ಮೋದಿ ಹಲವು ಕೃತಕ ಮತ್ತು ಭ್ರಮಾತ್ಮಕವಾದ ಹಾವು ಚೇಳುಗಳನ್ನು ಬಿಟ್ಟಿದ್ದಾರೆ. ಈ ಹಾವು ಚೇಳುಗಳು ಆಟ ನೋಡುವವರನ್ನು ಭಯದಲ್ಲಿ ಮುಳುಗಿಸುತ್ತಿವೆ.ಅವರು ರಕ್ಷಣೆಗಾಗಿ ಮೋಡಿ ಮಾಡುವವನ ಬಳಿಗೆ ಓಡಬೇಕು. ಅವನಿಗೆ ಶರಣಾಗಬೇಕು. ಹಿಟ್ಲರ್ ಇದೇ ಕೆಲಸ ಮಾಡಿದ್ದ.ಆತ ದೇಶ ಭಕ್ತಿಯ ಮಾತನಾಡುತ್ತ ಜನರನ್ನು ಭಾವನಾತ್ಮಕವಾಗಿ ಸೆರೆ ಹಿಡಿಯುತ್ತಿದ್ದ. ಅವರನ್ನು ವಶಪಡಿಸಿಕೊಳ್ಳುತ್ತಿದ್ದ. ಹಿಟ್ಲರ್ ಸಭೆಗಳಲ್ಲಿ ಅವನ ಪರವಾದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಆತ ಸಮಾನಾಂತರವಾಗಿ ಕೈ ಎತ್ತಿದಾಗ ಸೇರಿದ ಲಕ್ಷಾಂತರ ಜನ ಕೈ ಎತ್ತಿ ಜೈಕಾರ ಕೂಗುತ್ತಿದ್ದರು.
  ಮೋದಿ ಅವರು ಇಂದು ಕರ್ನಾಟಕದ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾಡಿದ ಭಾಷಣವನ್ನು ಕೇಳಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರು ತಮ್ಮ ಭಾಷಣವನ್ನು ಪ್ರಾರಂಭಿಸುವುದು ಭಾರತ ಮಾತಾಕಿ ಜೈ ಎಂಬ ಘೋಷಣೆಯನ್ನು ಕೂಗುವುದರ ಮೂಲಕ. ಇದೇ ಅವರ ಭಾಷಣದ ಕೇಂದ್ರ ಭಿಂದು. ಮುಂದೆ ಭಾಷಣದ ಉದ್ದಕ್ಕೂ ಬೇರೆ ಬೇರೆ ರೀತಿಯಲ್ಲಿ ಭಾರತ ಮಾತೆಯ ಬಗ್ಗೆಯೇ ಮಾತನಾಡುತ್ತಾರೆ. ಮಾತೆಯ ರಕ್ಷಣೆಗೆ ನಿಂತ ತಾವು ಚೌಕೀದಾರ ಎಂದು ಪದೇ ಪದೇ ಉಚ್ಚರಿಸುತ್ತ ಕೇಳುಗರ ಮನಸ್ಸಿನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತಾರೆ.
ಚೌಕೀದಾರ ಎಂದರೆ ಕಾವಲುಗಾರ. ನಮಗೆ ಕಾವಲುಗಾರ ಯಾಕೆ ಬೇಕು ಎಂದರೆ ನಮಗೆ ಕಳ್ಳತನದ ಭಯವಿದ್ದಾಗ ಮಾತ್ರ. ಕಳ್ಳರ ಬಗ್ಗೆ ಭಯವಿದ್ದಾಗ ಮಾತ್ರ. ಇಲ್ಲಿ ಕಳ್ಳರು ಇದ್ದಾರೆ ಮತ್ತು ಕಳ್ಳತನ ನಡೆಯುತ್ತದೆ ಎಂದು ಹೆದರಿಸಿದಾಗ ಮಾತ್ರ ಜನ ಚೌಕೀದಾರರನ್ನು ಹುಡುಕಿಕೊಂಡು ಹೋಗುತ್ತಾರೆ. ಇದು ಮೋದಿಯವರಿಗೆ ಗೊತ್ತು. ಹೀಗಾಗಿ ತಾವೇ ಚೌಕೀದಾರ ಎಂದು ಜನರನ್ನು ನಂಬಿಸುವ ಅವರು ಕಳ್ಳರು ಮತ್ತು ಕಳ್ಳತನ ಮಾಡುವವರು ಕಾಂಗ್ರೆಸ್ ಮತ್ತು ಮತ್ತು ಪ್ರತಿಪಕ್ಷದವರು ಎಂದು ಜನರನ್ನು ನಂಬಿಸಲು ಹೊರಡುವುದು ಎರಡನೆ ಹಂತ.
ಅವರು ಇದಕ್ಕೂ ಮೊದಲು ಚೌಕೀದಾರನ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾರೆ. ಅದಕ್ಕೆ ಅವರು ಬಳಸಿಕೊಳ್ಳುವುದು ದೇಶದ ರಕ್ಷಣೆ, ಭಯೋತ್ಪಾದನೆ, ದೇಶಭಕ್ತಿ ಮೊದಲಾದ ಭಾವನಾತ್ಮಕ ವಿಚಾರಗಳನ್ನು.
ಈ ಕೆಲಸಕ್ಕೆ ಅವರು ದೇಶದ ಸೈನ್ಯವನ್ನು ವಿಜ್ನಾನಿಗಳನ್ನು ಅವರ ಸಾಧನೆಯನ್ನು ಬಳಸಿಕೊಳ್ಳುತ್ತಾರೆ. ಗಡಿ ಕಾಯುವ ಸೈನಿಕರನ್ನು ಹೊಗಳುತ್ತ ತಮ್ಮ ಸಾಧನೆಯನ್ನು ವೈಭವೀಕರಿಸಲು ಪ್ರಾರಂಭಿಸುತ್ತಾರೆ. ಪಾಕಿಸ್ಥಾನದ ಮೇಲೆ ನಡೆಸಿದ ವೈಮಾನಿಕ ಧಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ನ್ನು ಪ್ರಸ್ತಾಪಿಸುತ್ತ  ತಮ್ಮ ತಮ್ಮ ಬೆನ್ನನ್ನೇ ತಾವು ತಟ್ಟಿಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವಾಗಲೂ ಅವರಿಗೆ ಒಂದು ನಿಮಿಷ ಇದು ಆತ್ಮ ವಂಚನೆ ಎಂದು ಅನ್ನಿಸುವುದಿಲ್ಲ. ಇಸ್ರೋ ವಿಜ್ನಾನಿಗಳ ಸಾಧನೆಯ ಕಿರೀಟವನ್ನು ತಮ್ಮದೇ ಎಂದು ತಲೆಯ ಮೇಲೆ ಧರಿಸಿ ನಗತೊಡಗುತ್ತಾರೆ ಮೋದಿ.
ತಾವು  ಮಾಡಿದ ವೈಮಾನಿಕ ಧಾಳಿ  ಎಂದು ಹೇಳುತ್ತ ಇದನ್ನೇ ಮಾಡುವ ಧೈರ್ಯ ಕಾಂಗ್ರೆಸ್ ಗೆ ಯಾಕೆ ಬಂದಿರಲಿಲ್ಲ ಅವರಿದ್ದಾಗ ಯಾಕೆ ಉಪಗ್ರಹ ವಿಧ್ವಂಸಕ ತಂತ್ರಜ್ನಾನ ಉಪಯೋಗವಾಗಿಲ್ಲ ಎಂದು ಪ್ರಶ್ನಿಸುತ್ತ ತಾವೇ ಈ ದೇಶದನ್ನು ಉಳಿಸುವ ಕಾವಲುಗಾರ ಎಂದು ಸಾಬೀತು ಪಡಿಸಲು ಹೊರಡುತ್ತಾರೆ. ಜೊತೆಗೆ ಕಾಶ್ಮೀರ ನೀತಿಯನ್ನು ತಾವು ವಿಫಲವಾದ ಬಗ್ಗೆ ಅವರು ಮಾತನಾಡುವುದಿಲ್ಲ. ಮುಂದೇನು ಎಂಬ ಪ್ರಶ್ನೆಗೆ ಅವರು ಉತ್ತರ ನೀಡುವುದಿಲ್ಲ. ಇದಕ್ಕೆ ಬದಲಾಗಿ ಕಾಶ್ಮೀರ ಸಮಸ್ಯೆ ಬಗೆ ಹರಿಸಲು ಪ್ರತ್ಯೇಕತವಾದಿಗಳ ಜೊತೆ ಮಾತುಕತೆಗೆ ಸಿದ್ಧ ಎಂಬ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾದ ಅಂಶಗಳನ್ನು ಎತ್ತಿ ಆಡಲು ಪ್ರಾರಂಭಿಸುತ್ತಾರೆ. ಹಾಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ದೇಶಪ್ರೇಮವನ್ನು ಅವರು ಲೇವಡಿ ಮಾಡುತ್ತಾರೆ. ಆದರೆ ಕಾಶ್ಮೀರ ಸಮಸ್ಯೆಗೆ ತಮ್ಮ ಬಳಿ ಇರುವ ಪರಿಹಾರ ಏನು ಎಂಬುದನ್ನು ಮಾತ್ರ ಅವರು ಹೇಳುವುದಿಲ್ಲ.
ಭಾರತಮಾತಾಕಿ ಜೈ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸುವ ಮೋದಿ ಅಲ್ಲಿಯೇ ಗಿರಕಿ ಹೊಡೆಯುತ್ತಾರೆ.
ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ದೇಶದ ಅಭಿವೃದ್ಧಿಯ ಪ್ರಶ್ನೆಯನ್ನು ಅವರು ಪ್ರಮುಖ ವಿಚಾರವಾಗಿ ಪ್ರಸ್ತಾಪಿಸುವುದಿಲ್ಲ. ದೇಶ ಎದುರಿಸುತ್ತಿರುವ ಬಡತನ, ಅಸಮಾನತೆ, ಕೋಮುವಾದ ಜಾತೀಯತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕುಸಿಯುತ್ತಿರುವ ಗ್ರಾಮೀಣ ಆರ್ಥಿಕತೆ ವಿಚಾರಗಳಿಗೆ ಅವರ ಭಾಷಣದಲ್ಲಿ ಸ್ಥಾನವೇ ಇಲ್ಲ. ಇದನ್ನೆಲ್ಲ ನೋಡಿದಾಗ ಅನ್ನಿಸುವುದು ಇವರೊಬ್ಬ ಗಂಭೀರ ರಾಜಕಾರಣಿ ಅಲ್ಲ. ದೇಶದ ಬಗ್ಗೆ ಕನಸಿರುವ ರಾಜನೀತಿಜ್ನರೂ ಅಲ್ಲ. ಮೋದಿ ಒಬ್ಬ ಮೋಡಿಗಾರ. ಬಂಗಾಲಿ ಜಾದೂ ಅನ್ನು ನಂಬಿರುವವರು. ಕಣ್ಣು ಕಟ್ಟು ವಿದ್ಯೆಯಲ್ಲಿ ನಿಪುಣರು..
ಈ ವಿದ್ಯೆ ಅವರನ್ನು ಇನ್ನೊಮ್ಮೆ ಅಧಿಕಾರಕ್ಕೂ ತರಬಹುದು.. ಆದರೆ ಕಣ್ಣಿನ ಪೊರೆ ಕಳಚಲೇ ಬೇಕು. ಭ್ರಮೆ ಅಳಿಯಲೇ ಬೇಕು. ಅದು ಯಾವಾಗ ಎಂದು ಹೇಳುವುದು ಕಷ್ಟ.



Thursday, April 11, 2019

ಕಾಂಗ್ರೆಸ್ ಪಕ್ಷದ ಐತಿಹಾಸಿಕ ತಪ್ಪುಗಳು: ಬಿಜೆಪಿಗೆ ವರದಾನವಾಯಿತೇ ? ಭಾಗ ೨

ತುರ್ತು ಪರಿಸ್ಥಿತಿಯ ಕರಾಳ ದಿನಗಳು. ಭಾರತೀಯ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಎಂದೂ ಮರೆಯಲಾಗದ ದಿನಗಳು. ಶ್ರೀಮತಿ ಇಂದಿರಾ ಗಾಂಧಿ ತಾವು ದೇಶಕ್ಕಿಂತಲೂ ದೊಡ್ಡವರು ಎಂಬ ಭ್ರಮೆಗೆ ಒಳಗಾಗಿದ್ದರು. ಇಂದಿರಾ ಈಸ್ ಇಂಡಿಯಾ ಎಂಭ ಘೋಷಣೆಗಳು ಎಲ್ಲೆಡೆಗೂ ಮೊಳಗತೊಡಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಬಟ್ಟಂಗಿಗಳ ಕಾರುಬಾರು ಜೋರಾಗಿತ್ತು. ಕಾಂಗ್ರೆಸ್ ರಾಜಕಾರಣ ಎಂದರೆ ನೆಹರೂ ಕುಟುಂಬದ ರಾಜಕಾರಣವಾಗಿ ಮಾರ್ಪಾಡಾಗಿತ್ತು. ಇಂದಿರಾ ಗಾಂಧಿ ಅವರ ಮನೆಯ ನಾಯಿಗಳಿಗೂ ಅತಿ ಹೆಚ್ಚಿನ ಬೇಡಿಕೆ ಬಂದು ಬಿಟ್ಟಿತ್ತು. ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿ ಅವರ ದರ್ಶನವಾಗದಿದ್ದರೆ ಅವರ್ ಮನೆಯ ನಾಯಿಯ ದರ್ಶನ ಮಾಡಿ ಬಿಸ್ಕೀಟ್ ಹಾಕಿ ಬರುವದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಮಾಡಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕತ್ವವಾಗಲೀ ನಾಯಕರಾಗಲೀ ಇರಲಿಲ್ಲ. ಒಂದು ರಾಜಕೀಯ ಪಕ್ಷದ ಜನತಾಂತ್ರಿಕ ಗುಣ ಅಲ್ಲಿ ಮಾಯವಾಗಿತ್ತು. ಹೊಸ ರಾಜಕೀಯ ಶಕ್ತಿ ಉದ್ಭವಿಸುವುದಕ್ಕೆ ಮಣ್ಣು ಹದವಾಗಿದ್ದ ಕಾಲ. ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಒಂದು ಆಂದೋಲನವಾಗಿ ರೂಪಗೊಂಡಿತ್ತು. ದೇಶದ ಯುವ ಜನತೆ ಬದಲಾವಣೆಯ ಕನಸು ಕಾಣತೊಡಗಿದ್ದರು. ಚಂಬಲ್ ಕಣಿವೆಯ ಡಕಾಯಿತರಿಂದ ನಗರ ಪಟ್ಟಣಗಳಲ್ಲಿ ಇರುವ ಡಕಾಯಿತರೂ ಬದಲಾವಣೆಗೆ ತಮ್ಮನ್ನು ಒಡ್ಡಿಕೊಂಡಿದ್ದರು.
ಇಂದಿರಾ ಗಾಂಧಿ ಅವರ ಭ್ರಮೆ ಕಳಚಿ ಬೀಳುವ ಸಂದರ್ಭ ಅದು. ಹಳೆಯದು ನಾಶವಾಗಿ ಹೊಸದು ಚಿಗುರುವ ಸಂದರ್ಭ ಕೂಡ.
ದೇಶದಲ್ಲಿ ಕಾಂಗ್ರೆಸ್ ವಿರೋಧಿ ಮನಸ್ಥಿತಿ ಮನೆ ಮಾಡಿತ್ತು. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ನೆಲ ಕಚ್ಚಿದ್ದು ಮುಂದಿನ ಬೆಳವಣಿಗೆ. ಹೊಸ ಕನಸುಗಳೊಂದಿಗೆ ಮುರಾರ್ಜಿ ದೇಸಾಯಿ ಸರ್ಕಾರ ಅಧಿಕಾರ ಸ್ವೀಕರಿಸಿತು. ಆದರೆ ಕಾಂಗ್ರೆಸ್ ವಿರೋಧವನ್ನು ಬಿಟ್ಟರೆ, ಈ ಕಾಂಗ್ರೆಸ್ ವಿರೋಧಿ ಪಕ್ಷಗಳಲ್ಲಿ ಸಮಾನವಾದ ಅಂಶಗಳೇ ಇರಲಿಲ್ಲ. ರಾಜನಾರಾಯಣ್ ಅವರಂತಹ ಭಫೂನ್ ಗಳು ಇಂದಿರಾ ವಿರೋಧಿ ಅಲೆಯಲ್ಲಿ ಆರಿಸಿ ಬಂದು ತಮ್ಮ ಭಫೂನ್ ರಾಜಕಾರಣವನ್ನು ಪ್ರಾರಂಭಿಸಿ ಬಿಟ್ಟಿದ್ದರು. ಹಾಗೆ ಸಂಸ್ಥಾ ಕಾಂಗ್ರೆಸ್ ಮೂಲದ ನಾಯಕರುಗಳು ತಮ್ಮ ಹಳೇ ಛಾಳಿಯನ್ನು ಮುಂದುವರಿಸಿದ್ದರು. ಸಮಾಜವಾದಿಗಳು ಮಜಾವಾದಿಗಳಾಗಿ ಪರಿವರ್ತನೆಯಾಗಿದ್ದರು. ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಸರ್ಕಾರ ಉಳಿಯುವುದಿಲ್ಲ ಎಂದು ಅನ್ನಿಸತೊಡಗಿತ್ತು.
ಆದರೆ ಜನತಾ ಪರಿವಾರದಲ್ಲಿ ಜನ ಸಂಘದ ನಾಯಕರು ಮೊದಲ ಬಾರಿ ಅಧಿಕಾರದ ಗದ್ದುಗೆ ಏರಿದ್ದರು. ಅವರ ಹಿಂದಿರುವ ಸಂಘ ಪರಿವಾರ ತನ್ನ ರಾಜಕೀಯ ಮುಖಕ್ಕೆ ಬಣ್ಣ ಹಚ್ಚುವ ಕೆಲಸದಲ್ಲಿ ನಿರತವಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಜನತಾ ಪರಿವಾರದ ಉಳಿದ ನಾಯಕರು ಇರಲಿಲ್ಲ.
ಒಡಕಿನಲ್ಲೇ ಹುಟ್ಟಿ ಒಡಕಿನಲ್ಲೇ ಮುಂದುವರಿಯುತ್ತಿದ್ದ ಜನತಾ ಪರಿವಾರ ಕೆಲವೇ ತಿಂಗಳಿನಲ್ಲಿ ಆಂತರಿಕ ಭಾರದಿಂದ ಜರ್ಜರಿತವಾಗತೊಡಗಿತ್ತು. ಆಗಲೇ ಭಾರತೀಯ ಜನತಾ ಪಾರ್ಟಿಯ ಹುಟ್ಟಿಗೆ ವೇದಿಕೆ ಸಿದ್ಡವಾಗತೊಡಗಿತ್ತು. ಸಂಘ ಪರಿವಾರ ಜನತಾ ಪರಿವಾರದ ಜೊತೆ ಮುಂದುವರಿಯುವುದು ಬೇಡ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜನತಾ ಪರಿವಾರ ಒಡೆಯಿತು. ಆಗ  ಹುಟ್ಟಿದ್ದು ಭಾರತೀಯ ಜನತಾ ಪಾರ್ಟಿ.ಆಗಲೇ ವಾಜಪೇಯಿ ಆಡ್ವಾಣಿಯಂತಹ ಬಿಜೆಪಿ ನಾಯಕರು ಅಧಿಕಾರದ ಅನುಭವ ಪಡೆದಿದ್ದು ಮಾತ್ರವಲ್ಲ, ತಾವು ಉಳಿದ ಪಕ್ಷಗಳ ನಾಯಕರಿಗಿಂತ ಬೇರೆ ಎಂದು ತೋರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಜನರಲ್ಲಿ ವಿಶ್ವಾಸ ತುಂಬುವುದರಲ್ಲೀ ಅವರಿಗೆ ಜಯ ಸಿಕ್ಕಿತು.ಈ ಪಕ್ಷದ ಮೂಲ ಜೀವಾಳವಾದ ಹಿಂದುತ್ವ ಮೇಲೆಕ್ಕೆ ಕಾಣುತ್ತಿರಲಿಲ್ಲ. ಆಗಿನ ಸಂಘ ಮತ್ತು ಬಿಜೆಪಿ ನಾಯಕತ್ವ ಹಿಂದುತ್ವದ ಅಜೆಂಡಾವನ್ನು ನೇರವಾgi ಅನುಷ್ಟಾನಗೊಳಿಸುವಲ್ಲಿ ಆಸಕ್ತಿಯನ್ನು ಪ್ರಕಟಿಸಲಿಲ್ಲ. ಬದಲಾಗಿ ಸಂಘದ ಕಾರ್ಯಾಚರಣೆಯ ಮೂಲ ಸಿದ್ಧಾಂತದಂತೆ ಗುಪ್ತವಾಗಿ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಾರ್ಯಾಚರಣೆ.
ಆ ಸಂದರ್ಭದಲ್ಲಿ ಬಿಜೆಪಿ ಇಂದಿನ ಮಟ್ಟದಲ್ಲಿ ಬೆಳೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕತ್ವಕ್ಕೆ ಇರಲಿಲ್ಲ. ನೆಹರೂ ಕುಟುಂಬದ ಸುತ್ತಲೂ ಗಿರಿಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಇಂದಿರಾ ಗಾಂಧಿ ಅವರ ಬಡವರ ಪರವಾದ ಕೆಲಸಗಳು ತಮ್ಮನ್ನು ಕೈ ಹಿಡಿಯುತ್ತದೆ ಎಂದು ನಂಬಿಕೊಂಡಿತ್ತು. ಹೊಸ ಆಲೋಚನೆಗಳು ಇರಲಿಲ್ಲ. ನೆಹರೂ ಕುಟುಂಬದ ವಿರೋಧಿ ಪ್ರಾದೇಶಿಕ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಮುಂದುವರಿಸಿತು. ತಮಗೆ ಮತ ತರಲು ನೆಹರೂ ಕುಟುಂಬ ಮಾತ್ರ ಸಾಕು ಎಂದು ಈ ಪುರಾತನ ಪಕ್ಷ ನಂಬಿಕೊಂಡಿತ್ತು. ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ನಾಯಿ ನಿಂತರೂ ಆಯ್ಕೆಯಾಗುತ್ತದೆ ಎಂದು ನಂಬಿದ ದಿನಗಳು ಅವು.
ಈ ಹಂತದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ತಮ್ಮ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತವನ್ನು ಒಗ್ಗೂಡಿಸಿ ಹೊಸ ಭರವಸೆಯ ರಥ ಯಾತ್ರೆ ಪ್ರಾರಂಭಸಿದವು. ಹಿದುಂತ್ವ ಬಹುಮುಖ್ಯವಾದ ಅಜೇಂಡಾ ಆಗಿ ಮುನ್ನೆಲೆಗೆ ಬಂತು. ಬಿಜೆಪಿ ಥಿಂಕ್ ಟ್ಯಾಂಕ್ ಈ ಉದ್ದೇಶಕ್ಕಾಗಿ ಎರಡು ಮುಖಗಳನ್ನು ಯಶಸ್ವಿಯಾಗಿ ಬಳಸತೊಡಗಿತು.ಒಂದು ಆಡ್ವಾಣಿ ಅವರ ಉಗ್ರ ಮುಖ. ಈ ಉಗ್ರ ಮುಖ ಪಕ್ಷದ ಉದ್ದೇಶವನ್ನು ನಾಶಪಡಿಸದಿರಲಿ ಎಂದು ವಾಜಪೇಯಿ ಅವರ ಶಾಂತ ಮುಖ. ಹಾಗೇ ನೋಡಿದರೆ ಇವರಿಬ್ಬರ ನಡುವೆ ಅಂತಹ ವ್ಯತ್ಯಾಸ ಇರಲಿಲ್ಲ ಇಬ್ಬರ ಉದ್ದೇಶವೂ ಒಂದೇ. ದಾರಿ ಮಾತ್ರ ಬೇರೆ ಬೇರೆ.
೯೦ ರದಶಕದಲ್ಲಿ ಬಿಜೆಪಿ ತನ್ನ ಉಗ್ರ ಹಿಂದುತ್ವವನ್ನು ಪ್ರದರ್ಶಿಸತೊಡಗಿತು. ಒಂದು ದೇಶದಲ್ಲಿ ಪ್ರತಿಶತ ೯೦ ಕ್ಕಿಂತ ಹೆಚ್ಚಿರುವ ಜನಸಮುದಾಯಕ್ಕೆ ಅನ್ಯಾಯವಾಗುತ್ತದೆ ಅವರ ಧರ್ಮ ಅಪಾಯದಲ್ಲಿದೆ ಎಂಬುದನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಆದರೆ ಬಿಜೆಪಿ ತನ್ನ ರಾಜಕೀಯ ಉದ್ದೇಶಕ್ಕಾಗಿ ಆಯೋಧ್ಯೆ ವಿವಾದವನ್ನು ಕೈಗೆತ್ತಿಕೊಂಡಿತು. ಆಡ್ವಾಣಿ ರಥ ಯಾತ್ರೆ ನಡೆಸಿದರು. ಅವರು ರಾಮನಂತೆ ಬಿಲ್ಲು ಬಾಣ ಹಿಡಿದು ಕಿರೀಟ ಧರಿಸಿದ ಬೃಹತ್ ಕಟ್ ಔಟ್ ಗಳು ದೇಶಾದ್ಯಂತ ವಿಜ್ರುಂಭಿಸತೊಡಗಿದವು. ರಾಮನ ಜಪ ಮಾಡುತ್ತ ಮಸೀದಿಯನ್ನು ಉರುಳಿಸಲಾಯಿತು. ಎಲ್ಲೆಡೆ ಕೇಸರಿ. ಕೈಯಲ್ಲಿ ಆಯುಧ ದೊಣ್ಣೆ. ಇದೆಲ್ಲ ನಿಜವಾದ ಹಿಂದೂಗಳ ಭಯಪಡುವಂತಾಯಿತು. ಧಾರ್ಮಿಕ ಭಯೋತ್ಪಾದನೆ ಅದು. ಕೇಸರಿ ಬಣ್ಣ ನೋಡಿದರೆ ಭಯ ಪಡುವ ಸ್ಥಿತಿ ಅದು.
ಬಾಬ್ರೀ ಮಸೀದಿ ಉರುಳಿದ ಮೇಲೆ ಈ ದೇಶ ತನ್ನ ಧರ್ಮ ನಿರಪೇಕ್ಷ ಗುಣಧರ್ಮ ಕಳೆದುಕೊಂಡು ಉಗ್ರ ಹಿಂದುತ್ವದ ಫಸಲು ಬೆಳೆಯಲು ಹದಗೊಂಡಿತು. ಈ ನೆಲದಲ್ಲೇ ತನ್ನ ರಾಜಕೀಯ ಬೆಳೆ ಬೆಳೆಯಲು ಸನ್ನದ್ಧಗೊಂಡಿದ್ದು ಬಿಜೆಪಿ. ಅಲ್ಪಸಂಖ್ಯಾತರನ್ನು ದೇಶ ವಿರೋಧಿಗಳು ಎಂದು ಪ್ರತಿಬಿಂಬಿಸುತ್ತ ಬಹುಸಂಖ್ಯಾತರನ್ನು ತನ್ನತ್ತ ಸೆಳೆದುಕೊಳ್ಳುವ ಅಪಾಯಕಾರಿ ರಾಜಕಾರಣವನ್ನು ಬಿಜೆಪಿ ಪ್ರಾರಂಭಿಸಿಯಾಗಿತ್ತು. ಆದರೆ ಇದರ ಅಪಾಯ ಕಾಂಗ್ರೆಸ್ ಪಕ್ಷಕ್ಕೆ ಅರಿವಾಗಲೇ ಇಲ್ಲ. ಜೊತೆಗೆ ರಾಮಜನ್ಮ ಭೂಮಿ ಬಾಬ್ರಿ ಮಸೀದಿ ವಿವಾದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟತೆ ಇರಲಿಲ್ಲ. ಸೈಧ್ದಾಂತಿಕ ನಿಲುವು ತೆಗೆದುಕೊಳ್ಳುವುದಕ್ಕೂ ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಇಂದೂ ಕೂಡ ಕಾಂಗ್ರೆಸ್ ಪಕ್ಷದ್ದು ಅದೇ ಸ್ಥಿತಿ. ಇದು ಮತ ರಾಜಕಾರಣದ ಪರಿಣಾಮ.
ಕಾಂಗ್ರೆಸ್ ಪಕ್ಷದ ಈ ಇಬ್ಬಂದಿ ನೀತಿಯಿಂದಾಗಿ ಬಿಜೆಪಿ ಉಗ್ರ ಹಿಂದುತ್ವದ ಪ್ರತಿಪಾದನೆ ಮಾಡುತ್ತ ಅವರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತ ತನ್ನ ರಾಜಕೀಯ್ ಬೇಳೆ ಬೆಯಿಸಕೊಳ್ಳತೊಡಗಿತು. ಅಲ್ಪಸಂಖ್ಯಾತರ ತುಷ್ಟೀಕರಣದ ಮಾತನಾಡುತ್ತ ಅವರಿಗೆ ಸಿಗಬೇಕಾದ ನ್ಯಾಯಬದ್ಧವಾದ ಹಕ್ಕನ್ನು ನಿರಾಕರಿಸುವ ರಾಜಕಾರಣವೂ ಪ್ರಾರಂಭವಾಯಿತು. ಆಗಲೇ ಬಿಜೆಪಿಯ ಅಜೆಂಡಾ ಸ್ಪಷ್ಟವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಅಜೆಂಡಾವೇ ಇರಲಿಲ್ಲ. ಬಿಜೆಪಿ ಯಾರು ಒಪ್ಪಲೀ ಬಿಡಲಿ ಬಹುಸಂಖ್ಯಾತರನ್ನು ಒಗ್ಗೂಡಿಸಿ ರಾಜಕೀಯ ಲಾಭ ಪಡೆಯುವ ಸಿದ್ಧಾಂತವನ್ನು ಬಹಿರಂಗವಾಗಿ ಪ್ರತಿಪಾದಿಸತೊಡಗಿತು. ಆದರೆ ಕಾಂಗ್ರೆಸ್ ಪಕ್ಷ ಯಾವುದೇ ಸಿದ್ಧಾಂತ ಇಲ್ಲದ ಎಡಬಿಡಂಗಿ ರಾಜಕಾರಣಕ್ಕೆ ಕಟ್ಟು ಬಿತ್ತು. ಕಾಂಗ್ರೆಸ್ ಪಕ್ಷದ ಎಡಬಿಡಂಗಿ ಮತ್ತು ನೆಹರೂ ಕುಟುಂಬ ರಾಜಕಾರಣದ ಹೊಲಸಿನಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣದ ಕಮಲ ಅರಳತೊಡಗಿತು. ಬಿಜೆಪಿ ರಾಮನ ಜೊತೆ ದೇಶ ಭಕ್ತಿ ಮತ್ತು ದೇಶದ ರಕ್ಷಣೆಯಂತಹ ಭಾವನಾತ್ಮಕ ವಿಚಾರಗಳನ್ನು ತನ್ನ ಅಜೆಂಡಾದ ಪ್ರಮುಖ ವಿಚಾರವನ್ನಾಗಿ ಸೇರಿಸಿಕೊಂಡಿತು.
೨೦೧೪ ರಲ್ಲಿ ಗುಜರಾಥ್ ರಾಜಕಾರಣವನ್ನು ದೇಶದ ಬಿಜೆಪಿ ರಾಜಕಾರಣವನ್ನಾಗಿ ಪರಿವರ್ತಿಸಿ ಅದನ್ನೆ ಪ್ರಮುಖ ಅಸ್ತ್ರವನ್ನಾಗಿ ಬಳಸತೊಡಗಿದ್ದು ಇನ್ನೊಂದು ಮಹತ್ತರ ಘಟ್ಟ. ರಾಜ್ಯ ರಾಜಕಾರಣದಿಂದ ದೇಶದ ರಾಜಕಾರಣಕ್ಕೆ ಆಮದಾದ ಮೋದಿ ಮತ್ತು ಅವರ ಜೊತೆಗಾರ ಅಮಿತ್ ಶಾ ಗುಜಾರಾಥ್ ರಾಜಕಾರಣದ ಮಾಧರಿಯನ್ನು ಅನುಷ್ಟಾನಗೊಳಿಸತೊಡಗಿದರು. ಅದು ಒಂದು ರೀತಿಯಲ್ಲಿ ಇಂದಿರಾ ರಾಜಕಾರಣದ ಮಾಧರಿಯೇ. ಈ ಮಾಧರಿಯಲ್ಲಿ ಇಂದಿರಾ ಗಾಂಧಿ ಬಡವರು, ಅಲ್ಪಸಂಖ್ಯಾತರ ಭಾವನೆಗಳನ್ನು ಬಳಸಿಕೊಂಡಿದ್ದರೆ ಮೋದಿ ಷಾ ಜೋಡಿ ಬಹುಸಂಖ್ಯಾತರನ್ನು ಬಳಸಿಕೊಂಡು ಸಂಘ ಪರಿವಾರದ ಮೂಲ ತತ್ವಕ್ಕೆ ಅನುಗುಣವಾಗಿ ಮತ ಬ್ಯಾಂಕ್ ರಾಜಕಾರಣವನ್ನು ಪ್ರಾರಂಭಿಸಿತು. ಈ ಮಾಧರಿಯಲ್ಲಿ ಅಭಿವೃದ್ಧಿಯ ಮುಖವಾಡ ಪ್ರಮುಖವಾಗಿತ್ತು. ಅಭಿವೃದ್ಧಿಯ ಬಗ್ಗೆ ಮಾತನಾಡುತ್ತ ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನು ಹಿಂದುತ್ವದ ಅಜೆಂಡಾದ ಅನುಷ್ಟಾನಕ್ಕೆ ಬಳಸಿಕೊಳ್ಳುವ ಹುನ್ನಾರ ಅದಾಗಿತ್ತು. ಇದೌ ೨೦೧೪ ರ ಚುನಾವಣೆಯಲ್ಲಿ ಬಿಜೆಪಿಗೆ ಫಲ ನೀಡಿತು.
ಈಗ ೨೦೧೯ ರಲ್ಲಿ ಬಿಜೆಪಿ ಹೊಸ ರೂಪ ತಾಳಿದೆ. ಅಭಿವೃದ್ಧಿಯ ಮಾತು ೫ ವರ್ಷಗಳ ವಿಫಲ ಆಡಳಿತದಿಂದಾಗಿ ಮತ ನೀಡುವುದಿಲ್ಲ ಎಂದು ಅರಿತುಕೊಂಡ ಬಿಜೆಪಿ ನಾಯಕತ್ವ ದೇಶ ಭಕ್ತಿ ಮತ್ತು ದೇಶದ ರಕ್ಷಣೆಯ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿದೆ. ಭಾರತೀಯರಲ್ಲಿ ಇರಬಹುದಾದ ಮುಸ್ಲೀಂ ಮತ್ತು ಪಾಕಿಸ್ಥಾನ ವಿರೋಧವನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಸೈನ್ಯ ಮತ್ತು ದೇಶ ಭಕ್ತಿ ಎಂದರೆ ಮೋದಿ ಎಂದು ಸಮೀಕರಿಸಿ ಮೋದಿ ಅವರ ವೈಫಲ್ಯವನ್ನು ಮುಚ್ಚಿ ಹಾಕುವ ಯತ್ನ ನಡೆಸುತ್ತಿದೆ. ಈ ಯತ್ನದಲ್ಲಿ ಬಿಜೆಪಿ ಯಶಸ್ವಿಯಾದರೂ ಆಗಬಹುದುಆಅದರೆ ಕೊನೆಗೆ ಅನ್ನಿಸುವುದು ಕಾಂಗ್ರೆಸ್ ಬದಲಾಗಬೇಕು. ಅದು ದೇಶದ ದೃಷ್ಟಿಯಿಂದ ಬಹುಮುಖ್ಯ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಅರಿವು ಇದ್ದಂತಿಲ್ಲ. ಇದು ದೇಶದ ಅತಿ ದೊಡ್ಡ ದುರಂತ.


ದೇವರು ಪಾಠ ಕಲಿಸಿದ..




ಆತ ತುಂಟ ಮಹಾನ್ ಕಿಲಾಡಿ..
ಒಮ್ಮೆ ಸೊಂಡಿಲು ಎತ್ತಿ ಬಡಿಯುತ್ತಾನೆ.
ಮತ್ತೊಮ್ಮೆ ಅದೃಶ್ಯ ರೂಪದಲ್ಲಿ ನಾನೇ ಅಲ್ಲಾ ಎನ್ನುತ್ತಾನೆ.
ಇನ್ನೊಮ್ಮೆ ಶಿಲುಬೆಯನೇರಿ ನಗುತ್ತಾನೆ.
ಆತ ಮಹಾನ್ ತುಂಟ..

ಆತ ಹೆಣ್ಣೋ ಗಂಡೋ ಗೊತ್ತಿಲ್ಲ.
ಒಮ್ಮೆ ಅಮ್ಮನಾಗುತ್ತಾನೆ, ಮತ್ತೊಮ್ಮೆ
ತಲೆ ನೇವರಿಸುತ್ತಾನೆ. ಹಾಗೆ ಬಂದು
ಅಪ್ಪಿ ಮುದ್ದಾಡಿಬಿಡುತ್ತಾನೆ.
ಯಾಕೆಂದರೆ ಆತ ಮಹಾನ್ ತುಂಟ.

ಆತ ವಿಶ್ವಂಬರ, ವಿಶ್ವರೂಪಿ,
ಆತ ಸಾಕಾರ ರೂಪ ನಿರಾಕಾರ
ಆತ ಎಲ್ಲವೂ, ಆದರೆ ಏನೂ ಅಲ್ಲ.
ಆತ ಬೆಳಗಿನ ನಮಸ್ಕಾರ, ನಮಾಜು
ಪ್ರಾರ್ಥನೆ..
ಯಾಕೆಂದರೆ ಆತ ಮಹಾನ್ ತುಂಟ..


ಅತ ದೇವಾಲಯ ಕೆಡವಿದರೆ ನಗುತ್ತಾನೆ.
ಮಸೀದಿ ಈಗರ್ಜಿಗಳನ್ನು ಕೆಡವಿದರೆ
ತುಂಟ ನಗೆ ಬೀರುತ್ತಾನೆ.
ಆತನಿಗೆ ವಿಶ್ವವೇ ಮನೆಯಾಗಿರುವಾಗ
ವಿಶ್ವವೇ ಅವನಾಗಿರುವಾಗ
ಮನೆ  ಯಾಕೆ ಬೇಕು ?
ಆತ ತುಂಟ ನಗೆ ಬೀರುತ್ತಾನೆ.

ಆತ ಮಸೀದಿ ಕೆಡವಿದಾಗ ಆಲ್ಲಿಂದ ಹೊರಟ
ದೇವಾಲಯಗಳನ್ನು ಉರುಳಿಸಿದಾಗ ಅಲ್ಲಿಂದ
ನಡೆದು ಬಿಟ್ಟ.
ಈಗರ್ಜಿಗಳನ್ನು ಧ್ಚಂಸ ಮಾಡಿದಾಗ
ನಕ್ಕು ಬಿಟ್ಟ..
ಆತನಿಗೆ ಸಿಟ್ಟಿತ್ತು, ಮಸೀದಿ ದೇವಾಲಯಗಳ
ಕೆಡುವವರ ಮೇಲೆ.
ಆತನಿಗೆ ಸಿಟ್ಟಿತ್ತು ತನ್ನ ಹೆಸರಿನಲ್ಲಿ
ಬಂದೂಕು ಹಿಡಿಯುವವರ ಬಗ್ಗೆ.
ಆದರೂ ಆತ ತುಂಟ.

ಆತ ಮಾಂಸ ಹಾರ ವಿರೋಧಿಸುವವರ ಮುಂದೆ
ಮಾಂಸ ತಿಂದ.
ಮಾಂಸಾಹಾರಿಗಳ ಮುಂದೆ
ಸಸ್ಯಾಹಾರಿಯಾದ.
ಆತನ ಕೈಯಲ್ಲಿ ತ್ರಿಶೂಲ ವಿತ್ತು.
ಹಸಿರು ಅರ್ಧ ಚಂದ್ರ ರಾರಾಜಿಸುತ್ತಿತ್ತು.
ಆತನ ಮೈ ಮೇಲೆ ಶಿಲುಬೆಗೆರಿದ ರಕ್ತದ ಗುರುತುಗಳಿದ್ದವು.
ಆತ ನಗುತ್ತಿದ್ದ ತನ್ನನ್ನು ಕಟ್ಟಿ ಹಾಕುವವರ ಕುರಿತು.
ನಾಲ್ಕು ಗೋಡೆಗಳ ನಡುವೆ ಬಂಧಿಸುವ ಹುನ್ನಾರದ ಕುರಿತು
.
ಆತ  ನೋಡುವವರ ನೋಟವಾದ
ಆಡುವವರ ಮಾತಾದ.
ಓದುವವರ ಅಕ್ಷರವಾದ.
ಬಡವರ ಪ್ರಾಮಾಣಿಕತೆಯಾದ.
ಶ್ರೀಮಂತರ ಹಣವಾದ.
ಹೀಗೆ ಎಲ್ಲರಿಗೂ ಪಾಠ ಕಲಿಸಿದ.
ಆತ ಬಲು ತುಂಟ..

ಮಗಳು ಮತ್ತು ಮಳೆ


ಮಳೆ ಬಂತು ಮಳೆ ಮಳೆ
ಮನೆಗೆ ಮಗಳು ಬಂದಂತೆ
ಮೇಲೆ ಭೋರ್ಗರೆತ ಕೆಳಗೆ ಜಲಪಾತ ನೀರು
ಭರ ಭರ.
ಥೇಟ್ ಮನೆಗೆ ಮಗಳು ಬಂದಂತೆ
ಮನೆಗೆ ಬರುವ ಮಗಳು
ಸುಮ್ಮನಿರುವುದಿಲ್ಲ, ಮಳೆಯ ಹಾಗೆ
ಮಳೆ ಬಂದಿದ್ದು ಮುಚ್ಚಿಡಲು ಸಾಧ್ಯವಿಲ್ಲ
ಮಗಳ ಹಾಗೆ.
ಅಕ್ಕಪಕ್ಕದ ಮನೆಗಳ ಮೇಲೂ ಮಳೆಯ
ಭೋರ್ಗರೆತ.
ಹೌದಾ ಅವರ ಮನೆಯ
ಮಗಳು ಬಂದಳಂತೆ
ಅದೇ ಉದ್ಗಾರ, ಮಾತು ಮಾತು
ಮಳೆಯ ಹಾಗೆ.
ಮಳೆ ಬಂದ ಮೇಲೆ
ನೆಲ ತಂಪು ಹೊಸ ಹುಟ್ಟು ಉಲ್ಲಾಸ ಉನ್ಮಾದ
ಮಗಳ ಹಾಗೆ.
ಹೌದು ಮಗಳು ಬಂದಳು
ಹೌದು ಮಳೆ ಬಂತು
ಮಗಳು ಮತ್ತು ಮಳೆ
ಅಲ್ಲಿ ಹುಟ್ಟಿತು ಹೊಸ ಚಿಗುರು.

ಕಾಂಗ್ರೆಸ್ ಪಕ್ಷದ ಐತಿಹಾಸಿಕ ತಪ್ಪುಗಳು’ ಬಿಜೆಪಿಗೆ ವರದಾನವಾಯಿತೆ ?




ಕಾಂಗ್ರೆಸ್ ಒಂದು ಪುರಾತನ ಪಕ್ಷ, ಭಾರತೀಯ್ ರಾಜಕಾರಣದ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಮಾತನಾಡಲು ಸಾಧ್ಯವಾಗುವುದೇ ಇಲ್ಲ. ಭಾರತೀಯ ರಾಜಕಾರಣದ ಅವಿಭಾಜ್ಯ ಅಂಗ ಕಾಂಗ್ರೆಸ್. ಆದ್ದರಿಂದ ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಘೋಷಣೆಗೆ ಯಾವ ಅರ್ಥವೂ ಇಲ್ಲ. ಅಂತಹ ಮಾತುಗಳು ಇತಿಹಾಸವನ್ನು ನಿರಾಕರಿಸುವ ಮತ್ತು ವರ್ತಮಾನದಲ್ಲಿ ಇತಿಹಾಸವನ್ನು ಬದಲಿಸುವ ಮನಸ್ಥಿತಿಯ ಪ್ರತೀಕ. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಕೇಳುವುದು ತಪ್ಪಲ್ಲ. ಆದರೆ ಈ ಪ್ರಶ್ನೆ ಕೇಳುವಾಗ ಒಂದು ನಿಷ್ಕಲ್ಮಷ ಮನೋಭಾವನೆ ಬೇಕು. ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವುದಾಗಲೀ ಭಾರಿ ಸಾಧನೆ ಮಾಡಿದೆ ಎನ್ನುವುದಾಗಲೀ ಸತ್ಯದ ಒರೆಗಲ್ಲಿಗೆ ಹಚ್ಚಬೇಕಾದ ವಿಚಾರಗಳು.
ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ದೋಣಿಯಲ್ಲಿ ಸಾಗುತ್ತಿರುವ ಪಕ್ಷಗಳು. ಇವುಗಳ ನಡುವೆ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಕಾಂಗ್ರೆಸ್ ಗತ ವೈಭವದ ಮೇಲೆ ವರ್ತಮಾನವನ್ನು ಕಟ್ಟುವ ಯತ್ನ ನಡೆಸುತ್ತಿದೆ. ಬಿಜೆಪಿ ಭೂತಕಾಲದ ಎಲ್ಲ ಕುರುಹುಗಳನ್ನು ನಾಶಪಡಿಸಿ ವರ್ತಮಾನದ ಯಶಸ್ಸಿನ್ ಗೋಪುರ ನಿರ್ಮಾಣದಲ್ಲಿ ತೊಡಗಿದೆ. ಯಾಕೆಂದರೆ ಬಿಜೆಪಿಗೆ ಭೂತಕಾಲ ಅಪಾಯಕಾರಿ. ಭೂತಕಾಲದ ಸಾಧನೆಗಳ ಬಗ್ಗೆ ಆ ಪಕ್ಷಕ್ಕೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಬಿಜೆಪಿಯ ನಿಯಂತ್ರಣ ಕೊಠಡಿಯಾದ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ ಸ್ವಾತಂತ್ರ ಸಂಗ್ರಾಮ ಮತ್ತು ನಂತರದ ದಿನಗಳಲ್ಲಿ ಭಾರತದ ಇತಿಹಾಸದ ಬಗ್ಗೆ ಮಾತನಾಡುತ್ತಲೇ ಈ ದೇಶದ ಮೂಲವನ್ನು ನಾಶಪಡಿಸುವ ಕೆಲಸವನ್ನೇ ಮಾಡಿವೆ. ಹೀಗಾಗಿ ಅವರಿಗೆ ಇತಿಹಾಸ ಬೇದ. ಅವರಿಗೆ ಬೇಕಾದ್ದು ವರ್ತಮಾನದಲ್ಲಿ ವಿಕೃತಗೊಳಿಸಿದ ಇತಿಹಾಸವೇ.
ಮೋದಿ ಮತ್ತು ಅವರ ಬಿಜೆಪಿ ಪಕ್ಷ ಸತತವಾಗಿ ವರ್ತಮಾನದಲ್ಲಿ ಭೂತಕಾಲವನ್ನು ಬದಲಿಸುವ ಯತ್ನವನ್ನು ನಡೆಸುತ್ತಲೇ ಬಂದಿವೆ. ಬಾಬ್ರಿ ಮಸೀದಿಯ ಧ್ವಂಸದಿಂದ ಭಾರತೀಯ ಪ್ರಮುಖ ನಗರಗಳ ಹೆಸರುಗಳನ್ನು ಬದಲಿಸುವ ವರೆಗೆ ಇದು ಮುಂದುವರಿದಿದೆ. ಕೇವಲ ಹೆಸರು ಬದಲಿಸುವುದರಿಂದ ಪೂಜಾ ಸ್ಥಾನಗಳನ್ನು ನಾಶಪಡಿಸುವುದರಿಂದ ದೇಶದ ಇತಿಹಾಸವನ್ನು ಬದಲಿಸಲಾಗದು. ಇತಿಹಾಸವನ್ನು ಇತಿಹಾಸವಾಗಿ ಸ್ವೀಕರಿಸುತ್ತಲೇ ವರ್ತಮಾನವನ್ನು ಭವಿಷ್ಯವನ್ನು ರೂಪಿಸಬೇಕಾದ್ದು ಅತ್ಯಗತ್ಯ. ಆದರೆ ಬಿಜೆಪಿ ಮತ್ತು ಸಂಘ ಪರಿವಾರದ ಗುಪ್ತ ಅಜೆಂಡಾ ಬೇರೆಯದ್ದೇ ಆಗಿದೆ.
ಇಂತಹ ಬಿಜೆಪಿಯನ್ನು ಎದುರಿಸುವುದು ಹೇಗೆ ? ಅದಕ್ಕೆ ಬಳಸಬೇಕಾದ ಶಸ್ತ್ರಾಸ್ತ್ರಗಳು ಯಾವುದು ಎಂಬುದು ಕಾಂಗ್ರೆಸ್ ಗೆ ತಿಳಿದಿಲ್ಲ. ಕಾಂಗ್ರೆಸ್ ಎಂದೂ ಇತಿಹಾಸದಿಂದ ಪಾಠ ಕಲಿತೇ ಇಲ್ಲ.
ನಿನ್ನೆ ನಾನೂ ಸಲೂನ್ ಒಂದಕ್ಕೆ ಹೋಗಿದ್ದೆ. ಟಿವಿಯಲ್ಲಿ ನನ್ನನ್ನು ನೋಡಿದ್ದ ಸಲೂನ್ ಮಾಲೀಕ ನನ್ನ ಜೊತೆ ರಾಜಕೀಯ ಮಾತನಾಡಲು ಪ್ರಾರಂಭಿಸಿದ.
ಸಾರ್ ಯಾರಿಗೆ ಮತ ಹಾಕಬೇಕು ಎಂದು ಗೊತ್ತಾಗದೇ ಗೊಂದಲದಲ್ಲಿದ್ದೇನೆ ಎಂದ ಆತ.
ಯಾಕೆ ಎಂದು ನಾನು ಪ್ರಶ್ನಿಸಿದೆ.
ಸಾರ್ ಮೋದಿ ನಾಟಕ ಸಾಕು. ಕಾಂಗ್ರೆಸ್ ಗೆ ಓಟು ಹಾಕಬೇಕು ಎಂದು ಕೊಂಡಿದ್ದೆ. ಆದರೆ ಕಾಂಗ್ರೆಸ್ ಪ್ರಣಾಳಿಕೆ ನೋಡಿದ ಮೇಲೆ ಯಾಕೋ ಕಾಂಗ್ರೆಸ್ ಗಿಂತ ಮೋದಿ ಬೆಟರ್ ಎಂದು ಅನ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ದೇಶಧ್ರೋಹದ ಕಾನೂನು ತೆಗೆದು ಹಾಕುವುದಾಗಿ ಹೇಳಲಾಗಿದೆ. ಇದೇನು ಸಾರ್ ? ಕೊನೆ ಪಕ್ಷ ಮೋದಿ ಸುಳ್ಳು ಹೇಳಿದರೂ ದೇಶದ ರಕ್ಷಣೆ ಮಾಡ್ತಾರೆ. ಪಾಕಿಸ್ಥಾನಕ್ಕೆ ಬುದ್ದಿ ಕಲಿಸ್ತಾರೆ ಎಂದ ಆತ.
ಇದು ಒಂದು ಪ್ರಾತಿನಿಧಿಕ ಹೇಳಿಕೆ ಮಾತ್ರ. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಯಾವ ರೀತಿಯ ರಾಜಕಾರಣ ಮಾಡುತ್ತಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ. ದೇಶ ಭಕ್ತಿ ಎಂಬುದನ್ನು ಸುಳ್ಳುಗಳ ಮೇಲೆ ಹೇಗೆ ಕಟ್ಟಲಾಗಿದೆ. ಈ ಸುಳ್ಳಿನ ಮೇಲೆ ಕಟ್ಟಲಾದ ದೇಶ ಭಕ್ತಿಯ ಭ್ರಮೆಯಿಂದ ಜನರನ್ನು ಹೊರತರಲು ಕಾಂಗ್ರೆಸ್ ಪಕ್ಷಕ್ಕೆ ಸಾಢ್ಯವಾಗುತ್ತಿಲ್ಲ. ಯಾಕೆಂದರೆ ದೇಶಭಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟತೆ ಇಲ್ಲ. ಯಾಕೆಂದರೆ ದೇಶ ಭಕ್ತಿ ಪರಿಕಲ್ಪನೆ ಹೊಸ ರೂಪದಲ್ಲಿ ಹೊಸ ಅವತಾರದಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗಿದೆ.
ಹಾಗೇ ನೋಡಿದರೆ ಕಾಂಗ್ರೆಸ್ ಪಕ್ಷ ಜನ್ಮ ತಾಳಿದ್ದೇ ದೇಶ ಭಕ್ತಿಯ ಆಧಾರದ ಮೇಲೆ. ಆದರೆ ಕಾಂಗ್ರೆಸ್ ಹುಟ್ಟಿದ ಸಂದರ್ಭದಲ್ಲಿ ದೇಶ ಭಕ್ತಿಯ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಬ್ರಿಟೀಷರ ವಿರುದ್ಧದ ಹೋರಾಟ, ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಳ್ಳುವುದು ಪರಕೀಯರ ಗುಲಾಮಗಿರಿಯಿಂದ ಹೊರಕ್ಕೆ ಬರುವುದು ಹೀಗೆ ಎಲ್ಲವೂ ಸರಳ ಮತ್ತು ನೇರವಾಗಿದ್ದವು. ಕಾಂಗ್ರೆಸ್ ದೇಶವನ್ನು ಪ್ರತಿನಿಧಿಸುವ ಏಕಮೇವ ಪಕ್ಷವಾದ್ದರಿಂದ ಅದನ್ನು ಪ್ರಶ್ನಿಸುವ ಪರಿಸ್ಥಿತಿಯೂ ಇರಲಿಲ್ಲ. ದೇಶೀಯತೆ ಎನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಗುಣಧರ್ಮವೇ ಆಗಿದ್ದರಿಂದ ಸಂಘ ಪರಿವಾರದ ದೇಶೀಯತೆಗೆ ಯಾರು ಪುರಸ್ಕಾರ ನೀಡುವ ಸ್ಥಿತಿ ಕೂಡ ಇರಲಿಲ್ಲ. ಜೊತೆಗೆ ಉಗ್ರ ಹಿಂದುತ್ವವಾದ ಸಮಾಜದ ಮುಂದೆ ಬಹುಮುಖ್ಯವಾದ ಪ್ರಶ್ನೆ ಆಗಿರಲಿಲ್ಲ. ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ ದೇಶೀಯತೆಯೆ ಒಳಗೆ ಸಾಫ್ಟ್ ಹಿಂದುತ್ವವೂ ಅಡಕವಾದ್ದರಿಂದ ಹಿಂದುತ್ವ ಭಹುಮುಖ್ಯ ಪ್ರಶ್ನೆಯಾಗಿ ಮುನ್ನೆಲೆಗೆ ಬರಲು ಅವಕಾಶವಾಗಲೇ ಇಲ್ಲ.
ಈ ಸಂದರ್ಭದಲ್ಲಿ ಉಗ್ರ ಹಿಂದುತ್ವವಾದಿಗಳು ಸಂಘ ಪರಿವಾರ ಕೇಂದ್ರಿತವಾಗಿ ಬಲಗೊಳ್ಳಲು ಹುನ್ನಾರ ನಡೆಸುತ್ತಲೇ ಇದ್ದರು. ಗಾಂಧಿಯನ್ನು ವಿರೋಧಿಸುವ ಮೂಲಕ ಈ ದೇಶದ ಧರ್ಮ ನಿರಪೇಕ್ಷ ಗುಣಧರ್ಮವನ್ನು ನಾಶಪಡಿಸುವ ಕೆಲಸವನ್ನು ಅವರು ಪ್ರಾರಂಭಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರುವುದು ಈ ಸಂಘ ಪರಿವಾರದ ಜನರಿಗೆ ಬೇಕಾಗಿರಲಿಲ್ಲ. ಅವರಿಗೆ ದಾಸ್ಯದಿಂದ ಹೊರಕ್ಕೆ ಬರುವುದಕ್ಕಿಂತ ಅವರ ವೈದಿಕ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು ಹೆಚ್ಚು ಮುಖ್ಯವಾಗಿತ್ತು. ಇವರು ತಮ್ಮ ಎಜೆಂಡಾವನ್ನು ಜಾರಿಗೊಳಿಸುವುದಕ್ಕೆ ಮೊದಲು ಬಳಸಿಕೊಂಡಿದ್ದು ದೇಶದ ವಿಭಜನೆಯನ್ನು. ದೇಶದ ವಿಭಜನೆ ಮತ್ತು ಆ ಸಂದರ್ಭದಲ್ಲಿ ರಕ್ತಪಾತ ಮತ್ತು ಮಾರಣ ಹೋಮವನ್ನು ಗಾಂಧೀಜಿಯವರ ವಿರುದ್ಧ ಎತ್ತಿಕಟ್ಟುವುದಕ್ಕೆ ಈ ಜನ ಬಳಸಿಕೊಂಡರು. ಗಾಂಧಿಜಿ ಇರುವ ತನಕ ಈ ದೇಶದ ಧರ್ಮ ಸಹಿಷ್ಣತೆಯ ಗುಣ ಧರ್ಮವನ್ನು ವೈದಿಕ ಗುಣಧರ್ಮವಾಗಿ ಬದಲಿಸುವುದು ಸಾಧ್ಯವಿಲ್ಲ ಎಂಬುದು ಸಂಘದ ಸ್ಪಷ್ಟ ಅಭಿಪ್ರಾಯವಾಗಿತ್ತು. ಗಾಂಧೀಜಿಯವರನ್ನು ದೈಹಿಕವಾಗಿ ಮುಗಿಸುವುದರ ಜೊತೆಗೆ ಗಾಂಧಿಯವರ ಮಹಾತ್ಮ ಮತ್ತು ರಾಷ್ಟ್ರಪಿತ ಇಮೇಜ್ ಅನ್ನು ಹತ್ಯೆ ಮಾಡುವುದು ಅತ್ಯಗತ್ಯ ಎಂಬುದನ್ನು ಸಂಘ ಮನವರಿಕೆ ಮಾಡಿಕೊಂಡಿತ್ತು. ಮಹಾತ್ಮಾ ಗಾಂಧಿ ಈ ದೇಶದ ಆದರ್ಶ ಆಗಿರುವ ವರೆಗೆ ತಮ್ಮ ಅಜೆಂಡಾವನ್ನು ಜಾರಿಗೆ ತರುವುದು ಸಾಧ್ಯವಿಲ್ಲ ಎನ್ನುವುದು ಅವರ ಅರಿವಿಗೆ ಬಂದಿತ್ತು..ಹೀಗಾಗಿ ಮಹಾತ್ಮಾ ಗಾಂಧಿ ಅವರನ್ನು ದೈಹಿಕವಾಗಿ ಮತ್ತು ಚಿಂತನೆಯಾಗಿ ಹತ್ಯೆ ಮಾಡಲು ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ ಸಂಘದ ರಾಜಕೀಯವಾದ ಮುಖವಾದ ಜನಸಂಘಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಅನ್ನು ಎದುರಿಸುವ ಶಕ್ತಿ ಇರಲಿಲ್ಲ. ಅದು ಪೇಟೆ ಪಟ್ಟಣಗಳ ವ್ಯಾಪಾರಿಗಳ ಪಕ್ಷವಾಗಿ ಮಾತ್ರ ಉಳಿದುಕೊಂಡಿತ್ತು. ಆದರೆ ಶ್ರೀಮತಿ ಇಂದಿರಾ ಗಾಂಧಿ ಅವರು ಮಾಡಿದ ಐತಿಹಾಸಿಕ ಪ್ರಮಾಧ ಸಂಘ ಪರಿವಾರಕ್ಕೆ ಹೊಸ ಅವಕಾಶವನ್ನು ಸೃಷ್ಟಿಸಿಬಿಟ್ಟಿತು. ಅದು ತುರ್ತು ಪರಿಸ್ಥಿತಿಯ ಹೇರಿಕೆ.೭೦ ದಶಕದ ಆ ಅವಧಿಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿ ಬೆಳೆಯಲು ಪ್ರಾರಂಭಿಸಿಬಿಟ್ಟಿದ್ದರು. ದೇಶಕ್ಕಿಂತ ತಾವು ದೊಡ್ಡವರು ಎಂಬ ಭ್ರಮೆ ಅವರನ್ನು ಆವರಿಸಿಬಿಟ್ಟಿತ್ತು. ಅಲಹಾಬಾದ್ ನ್ಯಾಯಾಲಯದ ತೀರ್ಪು ಬರುವ ಹೊತ್ತಿಗೆ ಅವರು ನ್ಯಾಯಾಲಯಗಳೂ ತಮ್ಮ ಅಡಿಯಾಳಾಗಿರಬೇಕು ಎಂಬ ಸರ್ವಾಧಿಕಾರಿ ಮನೋವೄತ್ತಿಯನ್ನು ಬಹಿರಂಗವಾಗಿ ಪ್ರಕಟಿಸುವ ಹಂತ ತಲುಪಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟ ಮತ್ತು ನಂತರ ಜನತಾ ಪಕ್ಷದ ಸ್ಥಾಪನೆಯ ಸಂದರ್ಭದಲ್ಲಿ ಮಹತ್ವದ ಪಾತ್ರ ಒಹಿಸಿದ ಸಂಘ ಮತ್ತು ಜನಸಂಘ ರಾಜಕೀಯ ಶಕ್ತಿಯಾಗಿ ಬೆಳೆಯಲು ತುರ್ತು ಪರಿಸ್ಥಿತಿ ಮತ್ತು ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಗುಣವನ್ನ ಜನತ ಪಕ್ಷದ ಹುಟ್ಟಿನ ಚಾರಿತ್ರಿಕ ಸಂದರ್ಭವನ್ನು ಯಶಸ್ವಿಯಾಗಿ ಬಳಸಿಕೊಂಡರು...ದೇಶದ ರಾಜಕೀಯ ಭೂಪಟದ ಮೇಲೆ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಲು ಅದ್ಭುತ ಅವಕಾಶ ಅವರಿಗೆ ದೊರಕಿತು..ಹೀಗಾಗಿ ಇಂದಿನ ಬಿಜೆಪಿಯ ಬೀಜ ಮೊಳಕೆ ಒಡೆಯುವುದಕ್ಕೆ ಕಾರಣರಾದವರು ಶ್ರೀಮತಿ ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ. ಜನತಾ ಪಕ್ಷ ದ್ವಿಸದಸ್ಯತ್ವದ ಕಾರಣದಿಂದ ಒಡೆದಾಗ ಹುಟ್ಟಿಕೊಂಡ ಭಾರತೀಯ ಜನತಾ ಪಾರ್ಟಿ ಆಗಲೇ ತನ್ನ ಅಖಾಡಾವನ್ನು ಸಿದ್ಧಪಡಿಸಿಕೊಂಡಾಗಿತ್ತು. ಕಾಂಗ್ರೆಸ್ ವಿರೋಧಿ ಶಕ್ತಿಗಳು ಬಹುಕಾಲ ಒಂದಾಗಿ ಇರುವುದು ಸಾಧ್ಯವಿಲ್ಲ ಎಂಬ ಅರಿವು, ಪ್ರಾದೇಶಿಕ ಪಕ್ಷಗಳ ಹೆಚ್ಚುತ್ತಿದ್ದ ಪ್ರಾಭಲ್ಯ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ಬೆಳೆಯಲು ಸೂಕ್ತ ವೇದಿಕೆಯನ್ನು ಕಲ್ಪಿಸಿಬಿಟ್ಟಿತ್ತು. ಜೊತೆಗೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಬದಲಾಗಿದ್ದು ಕೂಡ ಬಿಜೆಪಿಗೆ ವರದಾನವಾಯಿತು. ರಾಜಕಾರಣ ಮತ್ತು ಧರ್ಮ ಕಾರಣವನ್ನು ಒಂದು ಮಾಡಿ ಭಾರತದ ಹಿಂದೂಗಳನ್ನು ಪ್ರತಿನಿಧಿಸುವ ಏಕ ಮೇವ ಪಕ್ಷ ಬಿಜೆಪಿ ಎಂದು ವ್ಯವಸ್ಥಿತವಾಗಿ ಬಿಂಬಿಸುವ ಕೆಲಸ ಕೂಡ ಪ್ರಾರಂಭವಾಯಿತು. ಆಗಲೇ ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಒಳಗೇ ಇದ್ದ ಸಾಫ್ಟ್ ಹಿಂದುತ್ವ ಬದಲಾಗ ತೊಡಗಿತ್ತು, ಇಂದಿರಾ ತಾವು ಪಕ್ಷಕ್ಕಿಂತ ದೊಡ್ದವರು ಎಂದು ಪ್ರತಿಪಾದಿಸುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರನ್ನು ದೂರ ಮಾಡಿದ್ದರು. ನಾನೇ ಗಾಂಧಿ ಎಂದು ಹೇಳುತ್ತ ಭಾರತೀಯ ಜನ ಮಾನಸದಿಂದ ಮೋಹನ್ ದಾಸ್ ಕರಮಚಂದ್ ಗಾಂಧಿ ದೂರವಾಗುವಂತೆ ಮಾಡಿದರು. ಬಿಜೆಪಿಗೆ ಬೇಕಾದ್ದು ಇದೇ ಆಗಿತ್ತು. ಮಹಾತ್ಮಾ ಗಾಂಧಿಯನ್ನು ಮರೆತಿದ್ದು ಡುಪ್ಲಿಕೇಟ್ ಗಾಂಧಿಗಳು ದೇಶದ ರಾಜಕಾರಣದಲ್ಲಿ ಮುಖ್ಯರಾಗತೊಡಗಿದ್ದು ಬಿಜೆಪಿಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಬಿಟ್ಟಿತು.೯೦ ರ ದಶಕ ಬಿಜೆಪಿ ಪಾಲಿಗೆ ಅತಿ ಮಹತ್ವದ ದಶಕ,.ಬಾಬ್ರಿ ಮಸೀದಿಯನ್ನು ಕೆಡವಿದ್ದು, ಆಡ್ವಾಣಿ ಅವರ ರಥಯಾತ್ರೆ ಕಾಂಗ್ರೆಸ್ ಗೆ ಬಿಜೆಪಿ ಪರ್ಯಾಯ ಪಕ್ಷವಾಗಿ ಬಲ ಪಡಯಲು ಕಾರಣವಾಯಿತು..ಆಗಲೇ ಕಾಂಗ್ರೆಸ್ ತನ್ನ ವೈರುದ್ಧ್ಯಗಳಿಂದ ಶಿಥಿಲಗೊಳ್ಳಲು ಪ್ರಾರಂಭವಾಗಿತ್ತು. ಪಕ್ಷದ ಪ್ರಾದೇಶಿಕ ನಾಯಕತ್ವ ಬೆಳಯಲೇ ಇಲ್ಲ. ಗಾಂಧಿ ಕುಟುಂಬ ಪ್ರಬಲ ನಾಯಕರನ್ನು ಹತ್ತಿಕ್ಕಲು ಪ್ರಾರಂಭಿಸಿತ್ತು. ಸೋನಿಯಾ ಮನೆ ಮುಂದೆ ಕಾಯುವವರು ಜೈ ಹುಜೂರ್ ಎನ್ನುವವರು ಮಾತ್ರ ನಾಯಕರು ಅನ್ನಿಸಿಕೊಂಡರು. ಸ್ವಾಭಿಮಾನ ಇರುವ ನಾಯಕರು ಜನರ ನಡುವೆ ಇರುವವರು ಕಾಂಗ್ರೆಸ್ ಪಕ್ಷದಲ್ಲಿ ಅನಾಥರಾದರು. ಆದರೆ ಕಾಂಗ್ರೆಸ್ ನಾಯಕತ್ವಕ್ಕೆ ಇದು ಅರ್ಥವಾಗಲೇ ಇಲ್ಲ...ಕಾಂಗ್ರೆಸ್ ಹೇಗೆ ಆತ್ಮಹತ್ಯೆ ಮಾದಿಕೊಳ್ಳಲು ಪ್ರಾರಂಭಿಸಿತು ? ಬಿಜೆಪಿ ಹೇಗೆ ಈ ಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿತು ಎಂಬುದನ್ನು ಮುಂದಿನ ಭಾಗದಲ್ಲಿ ಹೇಳುತ್ತೇನೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...