ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?
ನೆಲದ ಮೇಲೆ ಬಿದ್ದ ಅನ್ನವನ್ನೇ ತಿನ್ನುವಂತೆ ಒತ್ತಡ ಹೇರಲಾಯಿತಾ ?
ಈ ಬಗ್ಗೆ ಮಠವೇ ವಿವರಣೆ ನೀಡಬೇಕು,, ಮಠದ ಭಕ್ತರೊಬ್ಬರು ಕಳುಹಿಸಿದ ವಿವರ ಇಲ್ಲಿದೆ...
ಇಂದು ಶ್ರೀಕೃಷ್ಣ ಮಠದ ಭೋಜನಾ ಶಾಲೆಯಲ್ಲಿ ಮಾನವ ಕುಲಕ್ಕೆ ಆದ ಹೀನ ಘಟನೆ,(ದಿನಾಂಕ
24-10-2022 ಸಮಯ 2.00PM).
ನಾನು ಸುರೇಶ್ ,ಉಡುಪಿ ಜಿಲ್ಲೆಯ ಹೆಬ್ರಿಯಿಂದ.
ಈ ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯಕ್ಕೆ ನಾನು ,ನನ್ನ ಹೆಂಡತಿ,ಇಬ್ಬರು ಮಕ್ಕಳು ,ತಮ್ಮ ಶ್ರೀ ಕ್ಷೇತ್ರದ ಭೋಜನಾ ಶಾಲೆಗೆ ಊಟ ಮಾಡಲೆಂದು ಹೋಗಿದ್ದೆವು.
ಆ ಸಮಯದಲ್ಲಿ ನನ್ನ ಮಗಳು (10 age) ಅನ್ನಕ್ಕೆ ತಟ್ಟೆ ಹಿಡಿಯುವಾಗ ಅಕಸ್ಮಾತ್ತಾಗಿ ಅನ್ನದ ಬಿಸಿ ತಡೆಯಲಾರದೆ ಅನ್ನದ ಬಟ್ಟಲು ಕೆಳಗೆ ಬಿದ್ದು ಅನ್ನ ಪೂರ್ತಿ ಚೆಲ್ಲಿ ಹೋಯಿತು.
ಇಬ್ಬರು ಅನ್ನ ಬಡಿಸುತ್ತಿದ್ದರು.ಅದರಲ್ಲಿ ಅನ್ನ ಬಡಿಸುತ್ತಿದ್ದ ಒಬ್ಬ ವ್ಯಕ್ತಿ(ಎತ್ತರದ ವ್ಯಕ್ತಿ,ಕೈಯಲ್ಲಿ ಶಂಖದ ಮುದ್ರೆ ಹೊಂದಿದ್ದಾನೆ).ಅವನು ಆ ಸಮಯದಲ್ಲಿ ನನ್ನ ಮಗಳಿಗೆ ಅನ್ನವನ್ನು ಹಾಕದೆ, ಬಿದ್ದ ಅನ್ನವನ್ನು ತಟ್ಟೆಗೆ ಹಾಕಿಕೊಂಡು ಊಟ ಮಾಡಲು ತಾಕೀತು ಮಾಡಿದ.ನಂತರ ಸಾರು ಬಡಿಸುತ್ತಾ ಬಂದ ಸರಿಸುಮಾರು 75 age ಹಿರಿಯರು ನನ್ನ ಮಗಳ ತಟ್ಟೆ ಖಾಲಿ ಇರುವುದನ್ನು ನೋಡಿ ತಟ್ಟೆ ಹಿಡಿಕೊಂಡು ಆತ ಇರುವಲ್ಲಿ ಅನ್ನ ಹಾಕಿ ಕೊಡಲು ಹೇಳಿದ್ದಾರೆ .ಆದರೆ ಅವನು ಅನ್ನವನ್ನು ಹಾಕದೆ ಅವರ ಬಳಿಯೂ ಕೆಳಗೆ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದಾನೆ.ಆ ಹಿರಿಯರು ವಿಧಿ ಇಲ್ಲದೆ ಖಾಲಿ ತಟ್ಟೆಯೊಂದಿಗೆ ಬಂದಿದ್ದಾರೆ.ನಂತರ ಎರಡನೇ ಬಾರಿ ಅವನೇ ಅನ್ನ ತಂದಾಗ ಖಾಲಿ ತಟ್ಟೆ ನೋಡಿ ಅವನು ಅನ್ನ ಹಾಕುವ ರೀತಿ ಇರಲಿಲ್ಲ ನಾವು ಹೇಳಿದ್ದಕ್ಕೆ ಅನ್ನ ಹಾಕಿದ್ದಾನೆ.
ನಂತರ ಅವನ ಬಳಿ ನಿನಗೆ ಮನುಷ್ಯತ್ವ ಇಲ್ವ,ಒಂದು ಮಗುವಿಗೆ ಬಿದ್ದ ಅನ್ನ ತಿನ್ನಲು ಹೇಳುತಿಯಲ್ಲ ಮತ್ತು ಆ ಹಿರಿಯರು ಅಷ್ಟು ದೂರ ನಿನ್ನ ಹತ್ತಿರ ಬಂದು ಅನ್ನ ಹಾಕು ಅಂತ ತಟ್ಟೆ ಕೊಟ್ಟರೂ ನೀನು ಅನ್ನ ಹಾಕದೆ ಅವರನ್ನು ವಾಪಾಸು ಕಳುಸಿದಿಯಲ್ಲ ಅಂತ ನಾವು ಕೇಳಿದಾಗ ಅವನು ನಮಗೂ ಮಾತಾಡೋಕು ಬರುತ್ತೆ ಆ ಮೇಲೆ ಸಿಗಿ ನಿಮ್ಮ ಹತ್ತಿರ ಮಾತಾಡುತ್ತೇನೆ ಅಂತ ಗದರಿಸಿದ್ದಾನೆ.
ನಮಗೆ ತುಂಬಾ ಬೇಜಾರು ಆಗಿ ಭೋಜನಾ ಶಾಲೆಯ ಆಡಳಿತ ಮಂಡಳಿಯಲ್ಲಿ ನಡೆದ ವಿಷಯದ ಬಗ್ಗೆ ಹೇಳಿದ್ದೇವೆ.ಅವರು ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.
ನನ್ನ ಮಗಳೆ ಅನ್ನವನ್ನು ಬೀಳಿಸಿಕೊಂಡು ಕೆಳಗೆ ಹಾಕಿ ಕೊಂಡಿದ್ದಾಳೆ ಅಂದ್ರುನು ನಾನು ಒಪ್ಪಿಕೊಳ್ಳುತ್ತೇನೆ.ಆದರೆ ನನಗೆ ಬೇಜಾರು ಆಗಿದ್ದು ಎಲ್ಲಿ ಎಂದರೆ ಸಾವಿರಾರು ಜನ ಓಡಾಡುವ ಜಾಗದಲ್ಲಿ ಬಿದ್ದ ಅನ್ನವನ್ನು ಬಾಚಿಕೊಂಡು ತಟ್ಟೆಗೆ ಹಾಕಿಕೊಂಡು ತಿನ್ನಲು ಹೇಳಿದ್ದು ಮತ್ತು ಆ ಹಿರಿಯರು ಅಷ್ಟು ದೂರ ಹೋಗಿ ತಟ್ಟೆಗೆ ಅನ್ನ ಹಾಕು ಅಂತ ಹೇಳಿದರೂ ಅವನು ಅನ್ನ ಹಾಕದೇ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದು. ಆ ಸಮಯದಲ್ಲಿ ಎಲ್ಲರೂ ಊಟ ಮಾಡುತ್ತಿದ್ದಳು.ಆದರೆ ನನ್ನ ಮಗಳಿಗೆ ಊಟ ಇಲ್ಲದೇ ಸುಮ್ಮನೆ ಕುಳಿತ್ತಿದ್ದಳು.ಅವನೇ ನನ್ನ ಮಗಳ ಸ್ಥಾನದಲ್ಲಿ ಇದ್ದಿದ್ದರೆ ಅವನು ಸಾವಿರಾರು ಜನರು ಓಡಾಡುವ ಜಾಗದಲ್ಲಿ ಬಿದ್ದ ಅನ್ನವನು ಬಾಚಿ ಹಾಕಿಕೊಂಡು ತಿನ್ನುತ್ತಿದ್ದನೇ? .ಯಾರಿಗೂ ಕೂಡ ಈ ರೀತಿ ಆಗಬಾರದು.ಮನಸ್ಸಿಗೆ ತುಂಬಾ ಬೇಜಾರಾಯಿತು.ಅವನಿಗೆ ಮನುಷ್ಯತ್ವವೇ ಇಲ್ಲ ಅಂತ ಅನಿಸುತ್ತೆ.ಮಠದವರು ಭಕ್ತಾದಿಗಳಿಗೆ ಉತ್ತಮ ಭೋಜನವನ್ನು ನೀಡುತ್ತಿದ್ದಾರೆ ಆದರೆ ಇಂತ ನೀಚ ಮನಸ್ತಿತಿ ಇರುವ ಇವನಿಗೆ ಅನ್ನ ಬಡಿಸುವ ವಿಚಾರದಲ್ಲಿ ಅಹಂಕಾರ ದರ್ಪ.ಇವನ ವರ್ತನೆ ನೋಡಿದರೆ ಇವನ ಮನೆಯ ಊಟ ನಮಗೆ ಬಡಿಸಿದ ಹಾಗೆ ಇದೆ.ಊಟ ಹಾಕುವ ವಿಚಾರದಲ್ಲಿ ಅವನು ನಡೆದುಕೊಂಡಿದ್ದು ತುಂಬಾ ಬೇಜಾರಾಯಿತು.ಅವನ ರೀತಿಯಲ್ಲಿ ನೋಡಿದರೆ ಇದೊಂದು ಪನಿಶ್ಮೆಂಟ್ ರೀತಿ ಇತ್ತು.ಅವನ ಜಾಗದಲ್ಲಿ ಬೇರೆ ಯಾರೂ ಇದ್ದರೂ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ.ಅಲ್ಲಿದ್ದ ಕೆಲವರು ಈ ವಿಷಯ ನೋಡಿದ ಬಳಿಕ ರಾಜ್ಯಸರಕಾರಕ್ಕೆ ,ಪ್ರಧಾನಿಗೆ,ಡಿಸಿ ಗೆ,ಹೈಕೋರ್ಟ್ ಜಡ್ಜ್ ಗೆ ಪತ್ರ ಬರೆಯಿರಿ ಎಂದು ಸಲಹೆ ಕೊಟ್ಟಿದ್ದಾರೆ .ಆದರೆ ನನ್ನ ಮನಸ್ಸಿಗೆ ಆದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.ನನ್ನ ಮಗಳಿಗೆ ಆದ ರೀತಿ ಬೇರೆ ಯಾರಿಗೂ ಆಗೋದು ಬೇಡ.ಅಂತಹ ದುಷ್ಟವ್ಯಕ್ತಿಯನ್ನು ಶ್ರೀಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ನೋಡಿಕೊಳ್ಳಲಿ...............
No comments:
Post a Comment