Wednesday, June 28, 2023

ಅಕ್ಕಿ ನೀಡದಿರಲು ಕೇಂದ್ರದ ತೀರ್ಮಾನ; ಗ್ಯಾರಂಟಿಯ ಮೇಲೆ ಕೇಂದ್ರದ ಚಪ್ಪಡಿ ಕಲ್ಲು; ಅಕ್ಕಿ ಬದಲು ಹಣ ನೀಡಲು ಮುಂದಾದ ರಾಜ್ಯ ಸರ್ಕಾರ,,


 ಧ್ವೇಷ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣ. ಭಾರತ ಎಂಬ ಈ ದೇಶದಲ್ಲಿ ಇದು ತಾಂಡವವಾಡುತ್ತಿದೆ..ಹೀಗಾಗಿ ಜನ ಕೇಂದ್ರಿತ ರಾಜಕಾರಣ ಎಂಬುದೇ ಮರಿಚಿಕೆಯಾಗಿದೆ.. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿತ್ತು..ಬಡವರ ಹಸಿವು ಮತ್ತು ಬಡತನಕ್ಕೆ ಸಂಬಂಧಿಸಿದ ಯೋಜನೆಗಳು ಇದಾಗಿತ್ತು. ಬಡತನ ರೇಖೆಯಿಂದ ಕೆಳಗೆ ಇರುವವರಿಗೆ ಆರ್ಥಿಕ ಶಕ್ತಿ ತುಂಬುವ ಯೋಜನೆಗಳು.. ಈ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಈಗಾಗಲೇ ಜಾರಿಗೆ ಬಂದಿದೆ.. ಉಳಿದ ಯೋಜನೆಗಳು ಜಾರಿಯಾಗಬೇಕಾಗಿದೆ. ಇವುಗಳಲ್ಲಿ ಅನ್ನ ಭಾಗ್ಯ ಯೋಜನೆಗೆ ಸಮಸ್ಯೆ ಉಂಟಾಗಿದೆ.. ಇದು ಅಕ್ಕಿ ಲಭ್ಯತೆಗೆ ಸಂಬಂಧಿಸಿದ್ದು.. ಸಾಧಾರಣವಾಗಿ ಆಹಾರ ಧಾನ್ಯಗಳನ್ನು ರೈತರಿಂದ ಸಂಗ್ರಹಿಸಿ ಅದನ್ನು ದಾಸ್ತಾನು ಮಾಡುವುದು ಕೇಂದ್ರ ಸರ್ಕಾರ.. ಇದರ ದಾಸ್ತಾನು ಇರುವುದು ಭಾರತ ಆಹಾರ ನಿಗಮದಲ್ಲಿ..

ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಪಡೆದ ಮೇಲೆ ಹೊಸ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಮುಂದಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆಯನ್ನು ನೀಡಲಾಯಿತು.. ತಕ್ಷಣ ಶಕ್ತಿ ಯೋಜನೆಯೂ ಜಾರಿಗೆ ಬಂತು.. ಆದರೆ ಅನ್ನ ಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಪ್ರಾರಂಭಿಕ ತೊಡಕು.. ಭಾರತ ಆಹಾರ ನಿಗಮ ಕಳೆದ ೧೧ ನೆಯ ತಾರೀಕು ರಾಜ್ಯಕ್ಕೆ ಬೇಕಾದ ಅಕ್ಕಿ ನೀಡುವುದಾಗ ಪತ್ರ ಬರೆಯಿತು..ಒಂದೇ ದಿನದಲ್ಲಿ ಇನ್ನೊಂದು ಪತ್ರ ಬರೆದ ಆಹಾರ ನಿಗಮ ಅಕ್ಕಿ ನೀಡಲು ಸಾಧ್ಯವೇ ಇಲ್ಲ ಎಂದು ಕೈತೊಳೆದುಕೊಂಡು ಬಿಟ್ಟಿತು. ಆಗ ರಾಜ್ಯ ಸರ್ಕಾರ ದಾರಿ ಕಾಣದಂತಾಗಿದೆ ರಾಘ್ಹವೇಂದ್ರನೇ ಎಂದು ಭಜನೆ ಮಾಡುವಂತಾಯಿತು. ಆದರೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತೆಲಂಗಾಣ, ಪಂಜಾಬ್, ಚತ್ತೀಸ್ ಗಡ್ ಸೇರಿದಂತೆ ಹಲವು ರಾಜ್ಯಗಳನ್ನು ಸಂಪರ್ಕಿಸಿತು. ಅಕ್ಕಿಯನ್ನು ಈ ರಾಜ್ಯಗಳಿಂದಲಾದರೂ ತರಿಸಿಕೊಳ್ಳಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿತ್ತು. ಈ ಯತ್ನ ಫಲ ನೀಡಲಿಲ್ಲ.. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೇಟಿ ಮಾಡಿಅ ಮಾತುಕತೆ ನಡೆಸಿದರು. ಅಕ್ಕಿ ನೀಡುವಂತೆ ಮನವಿ ಮಾಡಿದರು. ಇದೂ ಪ್ರಯೋಜನವಾಗಲಿಲ್ಲ. ಆಹಾರ ಸಚಿವ ಮುನಿಯಪ್ಪ ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಿದರು. ಈ ಭೇಟಿಗೂ ಕೂಡ ಸಿದ್ದರಿರಲಿಲ್ಲ. ಮೂರು ದಿನ ಮುನಿಯಪ್ಪ ಅವರನ್ನು ಕಾಯಿಸಿ ನಂತರ ಸಂದರ್ಶನ ಭಾಗ್ಯ ನೀಡಿದರು. ಅಕ್ಕಿ ನೀಡಿ ಎಂದರು ಮುನಿಯಪ್ಪ. ಸಾಧ್ಯವಿಲ್ಲ ಎಂದರು ಕೇಂದ್ರ ಸಚಿವರು.. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮುನಿಯಪ್ಪ ಬರಿ ಗೈಯಲ್ಲಿ ವಾಪಸಾದರು..

ಈ ನಡುವೆ ಪ್ರಧಾನಿ ಮೋದಿ ಗ್ಯಾರಂಟಿಗಳ ಕುರಿತು ಸಾರ್ವಜನಿಕವಾಗಿ ಟೀಕೆ ಮಾಡತೊಡಗಿದರು. ಬಿಜೆಪಿ ರಾಜ್ಯ ನಾಯಕರು ಗ್ಯಾರಂಟಿಗಳನ್ನು ಈಡೇರಿಸುವಂತೆ ಒತ್ತಡ ಹೇರತೊಡಗಿದರು. ಗ್ಯಾರಂಟಿಗಳನ್ನು ಈಡೆರುಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದರು.. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲೇ ಧರಣಿ ನಡೆಸುವ ಎಚ್ಚರಿಕೆ ನೀಡಿದರು.. ಯಾವಾಗ ಗ್ಯಾರಂಟಿಗಳನ್ನು ಈಡೇರಿಸುತ್ತಿರಿ ಎಂದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸತೊಡಗಿದರು. ಬಿಜೆಪಿ ರಾಗಕ್ಕೆ ಪಕ್ಕ ವಾದ್ಯ ನುಡಿಸತೊಡಗಿದ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಮೇಲೆ ದಾಳಿ ನಡೆಸತೊಡಗಿದವು..ಇದರಿಂದ ಎಂತಹ ಸ್ಥಿತಿ ನಿರ್ಮಾಣವಾಯಿತು ನೋಡಿ.

ಬಿಜೆಪಿ ಗ್ಯಾರಂಟಿಗಳ ಪರವಾಗಿದೆಯೇ ಅಥವಾ ವಿರೋಧಿಸುತ್ತಿದೆಯೆ ? ಈ ಪ್ರಶ್ನೆಗೆ ಉತ್ತರ ಗೊಂದಲ.. ಪ್ರಧಾನಿ ಮೋದಿ ಗ್ಯಾರಂಟಿಗಳಿಗೆ ತಾವು ವಿರೋಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.. ಹೀಗಿರುವಾಗ ರಾಜ್ಯ ನಾಯಕರು ಗ್ಯಾರಂಟಿಗಳಾನ್ನು ಅನುಷ್ಠಾನಗೊಳಿಸದಿದ್ದರೆ ಹೋರಾಟ ಮಾಡುವುದಾಗಿ ಮಾಡಿರುವ ಪ್ರಕಟಣೆ ಮತ್ತು ಎಚ್ಚರಿಕೆ ಮೋದಿ ಅವರ ನಿಲುವಿಗೆ ವಿರುದ್ಧವಾಗಿಲ್ಲವೆ ? ರಾಜ್ಯ ಬಿಜೆಪಿ ಮೋದಿ ಅವರ ನಿಲುವಿಗೆ ವಿರುದ್ಧವಾಗಿದೆಯೆ ? ಈ ಪ್ರಶ್ನೆಗಳು ಮೂಡುತ್ತವೆ. ಆದರೆ ಶಸ್ವಿಯಾಗಿಹೇಳಿಕೆಯ ಹಿಂದ ಬಿಜೆಪಿಯ ರಾಜಕಾರಣವಿದೆ.

ಈ ಗ್ಯಾರಂಟಿಗಳ ಯಶಸ್ಸು ಎಂದರೆ ಮೋದಿ ಅವರ ಬಿಜೆಪಿ ಧರ್ಮಾ ರಾಜಕಾರಣದ ಸೋಲು.. ಇದು ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು. ಅದಕ್ಕಾಗಿ ಈ ಯೋಜನೆ ಅನುಷ್ಠಾನವಾಗದಂತೆ ನೋಡಿಕೊಳ್ಳುಬೇಕು. ಕಾಂಗ್ರೆಸ್ ಸರ್ಕಾರ ಯಾವ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಕೂಡದು. ಒಂದೊಮ್ಮೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಕಾಂಗ್ರೆಸ್ ಕೈಗೆ ಒಂದು ಹೊಸ ಅಸ್ತ್ರ ದೊರಕುತ್ತದೆ. ಈ ಗ್ಯಾರಂಟಿ ಅಸ್ತ್ರವನ್ನು ಮುಂಬರುವ ರಾಜಸ್ಥಾನ, ಮಧ್ಯ ಪ್ರದೇಶ, ಚತ್ತಿಸಗಡ ಮತ್ತು ತೆಲಂಗಾಣ ಚುನಾವಣೆಯಲ್ಲೂ ಯಶಸ್ವಿಯಾಗಿ ಬಳಸಬಹದು.. ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಜನ ಗ್ಯಾರಂಟಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದು.. ಆಗ ಹಸಿವಿನ ಪ್ರಶ್ನೆ, ಬಡತನ ಚುನಾವಣಾ ಇಶ್ಯೂ ಆದರೆ ? ಆಗ ಧರ್ಮ ರಾಜಕಾರಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆಗ ಹಿಜಾಬ್ ಹಲಾಲ್ ಹಿಂದುತ್ವ ಹಿಂದೂ ಭಾರತ, ಪಾಕಿಸ್ಥಾನ ದೇಶದ್ರೋಹ ಮೊದಲಾದ ವಿಚಾರಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ. ಬಿಜೆಪಿಗೆ ಯುದ್ಧ ಮಾಡಲು ಅಸ್ತ್ರಗಳೇ ಇರುವುದಿಲ್ಲ..ಇದಾಗಂತೆ ತಡೆಯುವುದೇ ಈಗ ಬಿಜೆಪಿಯ ಆದ್ಯತೆ. ಅದಕ್ಕಾಗಿ ಕೇಂದ್ರ ಮಟ್ಟದ ನಾಯಕರು ಗ್ಯಾರಂಟಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ರಾಜ್ಯ ನಾಯಕರು ಕಾಂಗ್ರೆಸ್ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸುತ್ತ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ, ಅಂದರೆ ಬಿಜೆಪಿ ಗ್ಯಾರಂಟಿಗಳು ಅನುಷ್ಠಾನಗೊಳ್ಳದಂತೆ ತಡೆಯೊಡ್ಡುತ್ತಿದೆ.

ಈ ನಡುವೆ ರಾಜ್ಯದ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕವಾಗಿ ಅಕ್ಕಿಯ ಬದಲು ಹಣ ನೀಡುವ ತೀರ್ಮಾನ ಕೈಗೊಂಡಿದೆ.. ಜೊತೆಗೆ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಪಡೆದುಕೊಳ್ಳುವ ಯತ್ನವನ್ನು ಮುಂದುವರಿಸಲಿದೆ. ಹಾಗೆ ರಾಜ್ಯದಲ್ಲಿ ಟೆಂದರ್ ಕರೆವ ಮೂಲಕ ಅಕ್ಕಿಯನ್ನು ಖರೀದಿಸುವ ಬಗ್ಗೆಯೂ ಯೋಚಿಸುತ್ತಿದೆ.

ಇದರಲ್ಲಿ  ಮೋದಿ ಮತ್ತು ಅವರ ಬಿಜೆಪಿ ಪಡೆ ಗೆಲ್ಲುತ್ತದೆಯೆ ? ಅಥವಾ ಕಾಂಗ್ರೆಸ್ ಗೆಲ್ಲುತ್ತದೆಯೆ ಎಂಬುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...