ಪಾಕಿಸ್ಥಾನ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ದಿನ ನಿತ್ಯದ ಬಳಕೆಗೆ ಬೇಕಾದ ಗೋದಿಯೂ ಸಿಗುತ್ತಿಲ್ಲ. ಕೃಷಿ ಕ್ಷೇತ್ರ ಸಂಪೂರ್ಣವಾಗಿ ಕುಸಿದಿರುವುದರಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಆದರೆ ವಿದೇಶಿ ವಿನಿಮಯದ ಸಮಸ್ಯೆ.. ಡಾಲರ್ ನ ಕೊರತೆ... ವಿಶ್ವ ಬ್ಯಾಂಕ್ ಹಣ ನೀಡುತ್ತಿಲ್ಲ. ಚೀನಾ ಸೌದಿ ಅರೇಬಿಯಾ ಮೊದಲಾದ ದೇಶಗಳಿಂದ ಪಡೆದ ಸಾಲದ ಮೊತ್ತ ಹಿಮಾಲಯದಷ್ಟಿದೆ. ಒಟ್ಟಿನಲ್ಲಿ ಪಾಕಿಸ್ಥಾನ ನಾಶದ ಅಂಚಿಗೆ ಬಂದು ನಿಂತಿದೆ..
ಪಾಕಿಸ್ಥಾನಕ್ಕೆ ಯಾಕೀ ದುರವಸ್ಥೆ ? ನಮ್ಮ ಪಕ್ಕದ ರಾಷ್ಟ್ರದ ಈ ಸ್ಥಿತಿಗೆ ಕಾರಣಗಳೇನು ?
ಭಾರತ ಮತ್ತು ಪಾಕಿಸ್ಥಾನದ ವಿಭಜನೆಯಾದ ಮೇಲೆ ಈ ಎರಡೂ ರಾಷ್ಟ್ರಗಳ ದಾರಿ ಬೇರೆಯಾಯಿತು. ಭಾರತ ಸೆಕ್ಯುಲರ್ ರಾಷ್ಟ್ರವಾದರೆ ಪಾಕಿಸ್ಥಾನ ಧರ್ಮದ ಆಧಾರದ ಮೇಲೆ ನೆಲೆ ನಿಲ್ಲಲು ಯತ್ನಿಸಿತು.. ಭಾರತ ಜನತಂತ್ರದ ಬುನಾದಿಯ ಮೇಲೆ ದೇಶವನ್ನು ಕಟ್ಟುವ ತೀರ್ಮಾನಕ್ಕೆ ಬಂದರೆ ಪಾಕಿಸ್ಥಾನ ಸರ್ವಾಧಿಕಾರಿ ಮಿಲಟರಿ ಆಡಳಿತಕ್ಕೆ ತನ್ನನ್ನು ಒಪ್ಪಿಸಿಕೊಂಡಿತು.. ಪಾಕಿಸ್ಥಾನದ ಜನಕ ಮಹಮ್ಮದ್ ಅಲಿ ಜಿನ್ಹಾ ಪಾಕಿಸ್ಥಾನದಲ್ಲಿ ಎಲ್ಲ ಧರ್ಮದವರಿಗೆ ಅವಕಾಶ ಇದೆ ಎಂದು ಹೇಳಿದರೂ ಅದು ಮುಸ್ಲಿಮ್ ರಾಷ್ಟ್ರವಾಯಿತು. ಧರ್ಮದ ಆಧಾರದ ಮೇಲೆ ದೇಶವನ್ನು ಕಟ್ಟುವುದು ಸಾಧ್ಯವಿಲ್ಲ ಎಂಬ ಅರಿವು ಪಾಕಿಸ್ಥಾನದ ನಾಯಕರಿಗೆ ಇರಲಿಲ್ಲ. ಆ ದೇಶ ಹುಟ್ಟಿದ್ದೇ ಧರ್ಮದ ಆಧಾರದ ಮೇಲೆ ಆಗಿದ್ದರಿಂದ ಎಲ್ಲವನ್ನೂ ಧರ್ಮದ ಕಣ್ಣಿನ ಮೂಲಕವೇ ನೋಡುವಂತಾಯಿತು. ಜೊತೆಗೆ ಭಾರತ ಮತ್ತು ಹಿಂದೂ ಧ್ವೇಷ ಪಾಕಿಸ್ಥಾನದ ಮೂಲ ಮಂತ್ರವಾಯಿತು. ದೇಶ ವಿಭಜನೆಯಾದ ತಕ್ಷಣ ಕಾಶ್ಮೀರವನ್ನು ಕಬಳಿಸುವುದಕ್ಕಾಗಿ ತಂತ್ರಾ ರೂಪಿಸಿದ್ದು ಪಾಕಿಸ್ಥಾನ. ಆದರೆ ಕಾಶ್ಮೀಭಾದ ಒಂದು ಭಾಗವನ್ನು ಮಾತ್ರ ಆಕ್ರಮಿಸಿ ಕಬ ಳಿಸಲು ಮಾತ್ರ ಸಾಧ್ಯವಾಯಿತು, ಭಾರತ ಶಾಂತಿ ಸಹಬಾಳ್ವೆ ಧರ್ಮನಿರಪೇಕ್ಶತೆಯ ಮೇಲೆ ಮುನ್ನಡೆಯತೊಡಗಿದರೆ ಪಾಕಿಸ್ಥಾನ ಕಾಶ್ಮೀರವನ್ನು ಹಿಂಸೆ ಯುದ್ಧದ ಮೂಲಕವಾದರೂ ತನ್ನದಾಗಿಸಿಕೊಳ್ಳಲು ಮುಂದಾಯಿತು, ಇದೇ ಕಾರಣಕ್ಕೆ ನಾಲ್ಕು ಬಾರಿ ಭಾರತದ ಮೇಲೆ ಯುದ್ಧ ಸಾರಿದರೂ ಪ್ರಯೋಜನವಾಗಲಿಲ್ಲ. ನಾಲ್ಕು ಬಾರಿಯೂ ಸೋತು ಸುಣ್ಣವಾಯಿತು. ಈ ಯತ್ನದಲ್ಲಿ ಪ್ರಬಲವಾಗಿದ್ದು ಪಾಕಿಸ್ಥಾನದ ಸೈನ್ಯ ಮಾತ್ರ,, ದೇಶದ ಬಜೆಟ್ ನಲ್ಲಿ ಬಹುಪಾಲು ಹಣವನ್ನು ಸೈನ್ಯವೇ ನುಂಗತೊಡಗಿತು,, ಶಿಕ್ಷಣಕ್ಕೆ, ಆರೋಗ್ಯಕ್ಕೆ ಅಭಿವೃದ್ಧಿಗೆ ಹಣ ಇಲ್ಲದಂತಾಯಿತು.
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಮಿಶ್ರ ಆರ್ಥಿಕತೆಯನ್ನು ಅನುಸರಿಸಿದರು. ಹಸಿರು ಕ್ರಾಂತಿಗೆ ಬುನಾದಿ ಹಾಕಿದರು. ಕೈಗಾರಿಕಾ ಕ್ರಾಂತಿಗೆ ಅಡಿಪಾಯ ಹಾಕಿದರು.. ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದರು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಸಾರ್ವಜನಿಕ ವಲಯದ ಕೈಗಾರಿಕೆಗಳು ಪ್ರಾರಂಭವಾದವು.. ಇಸ್ರೋದಂತಹ ಬಾಹ್ಯಾಕಾಶ ಸಂಸ್ಥೆ ಅಸ್ಥಿತ್ವಕ್ಕೆ ಬಂತು. ನೆಹರೂ ಅವರಿಗೆ ಭ್ಹಾರತ ಎನ್ನುವ ಈ ದೇಶ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಇತ್ತು. ಅವರು ಹಿಂದುತ್ವದ ಬಗ್ಗೆ ಮಾತನಾಡಲಿಲ್ಲ. ಧರ್ಮ ಮತ್ತು ರಾಜಕಾರಣವನ್ನು ಬೇರೆ ಬೇರೆಯಾಗಿ ನೋಡಿದರು..ಧರ್ಮ ನಿರಪೇಕ್ಷ ಮತ್ತು ವೈಜ್ನಾನಿಕ ಮನೋಭಾವನೆಯನ್ನು ಬೆಳೆಸುವಂತಹ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಹಾಗೆ ನೀತನ್ನರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಹೊಸ ಹೊಸ ಆಣೆಕಟ್ಟುಗಳು ನಿರ್ಮಾಣವಾದವು. ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು.
ಆದರೆ ಪಾಕಿಸ್ಥಾನ ಧರ್ಮರದ ಆಧಾರದ ಮೇಲೆ ರಚನೆಯಾದ ದೇಶವಾದ್ದರಿಂದ ಅಲ್ಲಿ ವೈಜ್ನಾನಿಕ ಮನೋಭಾವನೆಗೆ ಅವಕಾಶ ಇರಲಿಲ್ಲ. ಶಿಕ್ಷಣ ಎಂದರೆ ಧರ್ಮದ ಆಧಾರದ ಮೇಲೆ ಇರುವ ಮದ್ರಸಾ ಶಿಕ್ಷಣ ಎಂಬಂತಾಯಿತು. ಧಾರ್ಮಿಕ ಅಲ್ಪ ಸಂಖ್ಯಾತರನ್ನು ಹತ್ತಿಕ್ಕಲಾಯಿತು. ಧಾರ್ಮಿಕ ಸ್ವಾತಂತ್ರ್ಯ ಮರೆಯಾಗತೊಡಗಿತು. ಅಲ್ಪಸಂಖ್ಯಾತ ಹಿಂದೂಗಳು ಕ್ರಿಶ್ಚಿಯನ್ನರು ಎರಡನೆ ದರ್ಜೆ ಪ್ರಜೆಯಾದರು. ಇದರಿಂದಾಗಿ ಪಾಕಿಸ್ಥಾನ ಒಳಗಿನಿಂದಲೇ ಕುಸಿಯತೊಡಗಿತ್ತು. ಶಿಕ್ಷಣವನ್ನು ತಿರುಚಿ ಬೋದಿಸಲು ಪ್ರಾರಂಭಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣದ ಪಠ್ಯ ಕ್ರಮದಲ್ಲಿ ಭ್ಹಾರತ ಮತ್ತು ಹಿಂದೂ ವಿರೋಧಿ ಪಠ್ಯಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಪಾಕಿಸ್ಥಾನದ ಇತಿಹಾಸವನ್ನು ಮೊಗಲ್ ಆಡಳಿತ ಕಾಲದಿಂದ ಬೋಧಿಸುವುದರ ಜೊತೆಗೆ ಸಂಪೂರ್ಣಾಅಗಿ ತಿರುಚಿದ ಇತಿಹಾಸ. ಈಗಲೂ ಸಹ ಭಾರತ ಪಾಕಿಸ್ಥಾನದ ಮೇಲೆ ನಾಲ್ಕು ಬಾರಿ ದಾಳಿ ನಡೆಸಿ ಸೋತು ಹೋಯಿತು ಎನ್ನುತ್ತದೆ ಆವರ ಪಠ್ಯ ಪುಸ್ತಕಗಳು !
ಭಾರತ ತನ್ನ ತನ್ನ ಶೈಕ್ಷಣಿಕ ಗುಣ ಮಟ್ಟದಿಂದಾಗಿ ವಿಶ್ವ ಮಾನ್ಯತೆ ಪಡೆಯುತ್ತಿದ್ದರೆ ಸುಳ್ಳು ಇತಿಹಾಸ ಮತ್ತು ಕಳಪೆ ಶೈಕ್ಷಣಿಕ ಗುಣ ಮಟ್ಟದಿಂದ ಗೋರಿಯನ್ನು ತಾನೇ ತೋಡಿಕೊಂಡಿತು.. ಪಾಕಿಸ್ಥಾನದಲ್ಲಿ ಪದವಿ ಪಡೆದವರಿಗೆ ವಿದೇಶಗಳಲ್ಲಿ ಯಾವ ಉದ್ಯೋಗಾವಕಾಶವೂ ದೊರಕಲಿಲ್ಲ. ಭಾರತೀಯರು ವಿದೇಶದ ಐಟಿ ಬಿಟಿ ಕಂಪನಿಗಳಲ್ಲಿ ಸಿಇಓ ಹುದ್ದೆಗಳನ್ನು ಪಡೆದು ಆಳತೊಡಗಿದರೆ ಪಾಕಿಸ್ಥಾನಿಗಳು ವಾಹನ ಚಾಲಕರು ಟೆಕ್ನಿಷಿಯನ್ ಗಳು ಆಗಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಯಿತು. ಪಾಕಿಸ್ಥಾನದಲ್ಲಿನ ಶಿಕ್ಷಣಕ್ಕೆ ಯಾವ ಮಾನ್ಯತೆಯೂ ಸಿಗಲಿಲ್ಲ. ಅವರ ಪಾಸ್ ಪೋರ್ಟ್ ಗೆ ಯಾವ ಗೌರವೂ ಇಲ್ಲದಂತಾಯಿತು.. ಮಿಲಟರಿ ಆಡಳಿತ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿತು.. ಸತ್ಯವನ್ನು ಜನರಿಗೆ ತಿಳಿಸುವ ಯಾವ ದಾರಿಯೂ ಇರದಂತೆ ನೋಡಿಕೊಳ್ಳಲಾಯಿತು..ಸುಳ್ಳಿನ ಸಾಮ್ರಾಜ್ಯದಲ್ಲಿ ದಿನ ಕಳೆಯುತ್ತಿರುವ ಪಾಕಿಸ್ಥಾನ ದಿವಾಳಿ ಹಂತಕ್ಕೆ ಬಂದು ನಿಂತಿತು.. ಕಾಶ್ಮೀರ್ ಬನೇಗಾ ಪಾಕಿಸ್ಥಾನ್ ಎಂಬ ಘೋಷಣೆಯನ್ನು ಪರಮ ಮಂತ್ರವಾಗಿ ಪಠಿಸುತ್ತಲೇ ಬಂದ ಪಾಕಿಸ್ಥಾನ ಭಾರತದ ಜೊತೆಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿತು..ವ್ಯಾಪಾರ ಒಹಿವಾಟು ನಿಲ್ಲಿಸಿತು. ಇದರಿಂದಾಗಿ ಭಾರತದಿಂದ ಸುಲಭವಾಗಿ ಪಡೆಯಬಹುದಾಗಿದ್ದ ಗೋದಿ, ಟೊಮೆಟೋ ಮೊದಲಾದ ವಸ್ತುಗಳನ್ನು ದುಬೈ ಮೂಲಕ ತರಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿತು. ಇದರಿಂದಾಗಿ ಆ ದೇಶದ ಹಣದುಬ್ಬರದ ಪ್ರಮಾಣ ಪ್ರತಿಶತ ೪೦ ಅನ್ನು ದಾಟಿತು..ಸಾಮಾನ್ಯ ಜನ ದಿನಬಳಕೆಯ ವಸ್ತುಗಳಿಗಾಗಿ ಒದ್ದುದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.. ಈ ಇಂತಹ ಸರತಿ ಸಾಲಿನಲ್ಲಿ ಗಲಾಟೆ ಜಗಳ ರಕ್ತಪಾತ ಕೂಡ ನಡೆಯಿತು..
ದಿನದಿಂದ ದಿನಕ್ಕೆ ಪಾಕಿಸ್ಥಾನದ ಸ್ಥಿತಿ ಬಿಗಡಾಯಿಸುತ್ತಿದೆ, ಈ ನಡುವೆ ಭ್ಹಾರತದ ಜೊತೆ ಸಂಬಂಧ ಸುಧಾರಿಸಿಕೊಳ್ಳಿ ಅವರತ್ತ ಸ್ನೇಹ ಹಸ್ತ ಚಾಚಿ ಎಂಬ ಕೂಗು ಪಾಕಿಸ್ಥಾನದ ಒಂದು ವಲಯದಿಂದ ಕೇಳಿ ಬರುತ್ತಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರ, ಬಲೂಚಿ ಸ್ಥಾನ ಖೈಬರ್ ಫಕ್ತುನ್ ಕ್ವಾ ಪ್ರದೇಶದಲ್ಲಿ ನಾವು ಪಾಕಿಸ್ಥಾನದ ಜೊತೆ ಇರುವುದಿಲ್ಲ ಎಂದು ಜನ ಹೇಳತೊಡಗಿದ್ದಾರೆ. ಪಾಕಿಸ್ಥಾನವ್ಏ ಬೆಳಸಿದ ಉಗ್ರಗಾಮಿ ಚಟುವಟಿಕೆಗಳು ಅವರಿಗೆ ಉರುಲಾಗುತ್ತಿದೆ.. ಇಂತಹ ಸ್ಥಿತಿಯಲ್ಲಿ ಪಾಕಿಸ್ಥಾನ ದಿವಾಳಿ ಸ್ಥಿತಿಯಿಂದ ಹೊರಕ್ಕೆ ಬರುವುದೂ ಕಷ್ಟ
No comments:
Post a Comment