Thursday, June 29, 2023

ಭಾರತದ ಸಂವಿಧಾನ; ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಮತ್ತು ರಾಜ್ಯಪಾಲರ ಹುದ್ದೆ.


 ಭಾರತದ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎಂದು ಹೇಳಲು ಕಾರಣಗಳಿವೆ. ಭಾರತದ ಜನತಂತ್ರ ಯಶಸ್ವಿಯಾಗಲು ಬೇಕಾದ ಫೆಡರಲ್ ವ್ಯವಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಹಾಗೆ ಈ ವ್ಯವಸ್ಥೆಯ ಸಂವರಕ್ಷಿಸುವ ನಿಯಮಾವಳಿಗಳನ್ನು ನಾವು ಸಂವಿಧಾನದಲ್ಲಿ ನೋಡಬಹುದಾಗಿದೆ.. 

ಭಾರತ ಸಾಂಶ್ಕೃತಿಕವಾಗಿ ಸಾಮಾಜಿಕವಾಗಿ ಹಲವು ದೇಶಗಳನ್ನು ಒಳಗೊಂಡ ಒಕ್ಕೂಟ. ಉನೈಟೇಡ್ ಸ್ಟೇಟ್ ಆಫ್ ಆಮೇರಿಕಾ ಇದ್ದಹಾಗೆ.. ಇಲ್ಲಿನ ಪ್ರತಿ ರಾಜ್ಯ ತನ್ನದೇ ಆದ ಭಾಷೆ ಸಂಸ್ಕೃತಿ ಪರಂಪರೆ ಸಾಹಿತ್ಯವನ್ನು ಹೊಂದಿದೆ.. ಉತ್ತರ ಭಾರತದ ಒಂದು ರಾಜ್ಯವನ್ನು ದಕ್ಷಿಣದ ರಾಜ್ಯದ ಜೊತೆ ಹೋಲಿಸುವುದು ಸಾಧ್ಯವಿಲ್ಲ. ಈಶಾನ್ಯ ರಾಜ್ಯಗಳು ದೇಶದ ಬೇರೆ ರಾಜ್ಯಗಳಿಗಿಂತ ಭಿನ್ನ. ಪೂರ್ವ ಮತ್ತು ಪಶ್ಚಿಮ ರಾಜ್ಯಗಳ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ.. ಇವೆಲ್ಲವನ್ನು ಒಂದಾಗಿ ಉಳಿಸಿಕೊಂಡು ಹೋಗುವುದು ಸುಲಭವಾದ ಕೆಲಸವಲ್ಲ. ಈ ಕಾರಣಕ್ಕಾಗಿ ಇದು ಹಲವು ದೇಶಗಳನ್ನು ಒಳಗೊಂಡ ಒಕ್ಕೂಟ ಎಂದು ಹೇಳಬಹುದಾಗಿದೆ.

ನಮ್ಮ ದೇಶದ ಸಂವಿಧಾನವನ್ನು ರಚಿಸುವಾಗ ಡಾ. ಅಂಬೇಡ್ಕರ್ ಇದೆಲ್ಲವನ್ನು ಗಂಭಿರವಾಗಿ ಪರಿಗಣಿಸಿದ್ದರು. ಜೊತೆಗೆ ಅಂಬೇಡ್ಕರ್ ಸಮಾಜ ವಿಜ್ನಾನಿ, ಭಾರತಿಯ ಸಂಸ್ಕೃತಿ ಪರಂಪರೆಯ ಜೊತೆ ಇಲ್ಲಿನ ಬೌಗೋಲಿಕ ಮತ್ತು ಸಾಂಸ್ಕೃತಿಕ ವೈವಿದ್ಯತೆಯನ್ನು ಅಧ್ಯಯನ ಮಾಡಿದವರೂ ಅವರಾಗಿದ್ದರು. 

ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಇಲ್ಲಿನ ರಾಜಕೀಯ ವ್ಯವಸ್ಥೆ ಹೇಗಿರಬೇಕು ಎಂಬ ಪ್ರಶ್ನೆಯೂ ಅಂದಿನ ರಾಜಕಾರಣಿಗಳ ನಡುವೆ ಇತ್ತು. ಈ ವಿಚಾರದಲ್ಲಿ ಜವಾಹರಲಾಲ್ ನೆಹರೂ, ಮಹಾತ್ಮಾ ಗಾಂಧಿ ಸರ್ದಾರ್ ಪಟೇಲ್ ಅವರೂ ಸಹ ವೈವಿದ್ವ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬರಬೇಕು ಎನ್ನುವುದಕ್ಕೆ ಬದ್ಧರಾಗಿದ್ದರು. ಈ ದೇಶದ ವೈವಿದ್ಯತೆಯನ್ನು ಉಳಿಸಿಕೊಂಡು ಬರದಿದ್ದರೆ ಏಕತೆಯನ್ನು ಕಾಪಾಡಿಕೊಂಡು ಬರುವುದು ಸಾಧ್ಯವಿಲ್ಲ ಎಂಬ ನಂಬಿಕೆಯೂ ಅವರದಾಗಿತ್ತು. ಈ ಸಂದರ್ಭದಲ್ಲಿ ಮೂಡಿದ ಬಹುದೊಡ್ಡ ಪ್ರಶ್ನೆ ಮತ್ತು ಸವಾಲು ಎಂದರೆ ರಾಜ್ಯ ಮತ್ತು ಕೇಂದ್ರದ ಸಂಬಂಧ ಹೇಗಿರಬೇಕು ಎಂಬುದು. ಕೇಂದ್ರ ಸರ್ಕಾರದ ಅಧಿಕಾರ ಮತ್ತು ಕರ್ತವ್ಯ ಮತ್ತು ರಾಜ್ಯ ಸರ್ಕಾರದ ಅಧಿಕಾರ  ಮತ್ತು ಕರ್ತವ್ಯದ ಬಗ್ಗೆ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳುವ ಅಗತ್ಯ ಇತ್ತು. ಈ ಕಾರಣದಿಂದಲೇ ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ ಮತ್ತು ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಸೇರಿದ ಕಾಂಕರೆಂಟ್ ಪಟ್ಟಿಯನ್ನು ಸಿದ್ದಪಡಿಸಲಾಯಿತು. ಇದರ ಮೂಲ ಉದ್ದೇಶ ಎಂದರೆ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬಂದ ಸರ್ಕಾರ ಸ್ವತಂತ್ರವಾಗಿ ಕೆಲಸ ಮಾಡುವಂತಿರಬೇಕು. ಕೇಂದ್ರದಿಂದ ಚುನಾಯಿತ ಸರ್ಕಾರದ ಮೇಲೆ ದಬ್ಬಾಳಿಕೆ ನಡೆಸುವಂತೆ ಆಗಬಾರದು. ಅದರಂತೆ ಕೇಂದ್ರದ ನಿಗಾ ರಾಜ್ಯಗಳಲ್ಲಿ ಆಯ್ಕೆಯಾದ ಚುನಾಯಿತ ಸರ್ಕಾರದ ಮೇಲೆ ಇರಬೇಕು.. ರಾಜ್ಯಗಳು ದೇಶದ ಹಿತಾಸಕ್ತಿಗೆ ವಿರುದ್ಧವಾದ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಆಗಕೂಡದು.. ಹೀಗಾಗಿ ರಾಷ್ಟ್ರಪತಿಗಳು ನೇಮಿಸುವ ರಾಜ್ಯಪಾಲರು ಆಯಾ ರಾಜ್ಯಗಳ ಪ್ರಥಮ ಪ್ರಜೆಯಾಗಿರಬೇಕು.. ಆದರೆ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರ ಇಲ್ಲ.  ಆಯಾ ರಾಜ್ಯಗಳ ಸಚಿವರನ್ನು ನೇಮಿಸುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲಾಗಿದೆಯಾದರೂ ಚುನಾಯಿತ ಮುಖ್ಯಮಂತ್ರಿಯ ಶಿಫಾರಸಿನಂತೆ ಅವರು ಈ ನೇಮಕ ಮಾಡಬೇಕೇ ಹೊರತೂ ತಾವು ಸ್ವತಂತ್ರವಾಗಿ ಈ ಕೆಲಸ ಮಾಡುವಂತಿಲ್ಲ. ರಾಜ್ಯ ಸರ್ಕಾರದ ಎಲ್ಲ ಆದೇಶಗಳು ರಾಜ್ಯಪಾಲರ ಹೆಸರಲ್ಲಿ ನಡೆಯುವುದಾದರೂ ಇದರಲ್ಲಿ ರಾಜ್ಯಪಾಲರ ಪಾತ್ರ ಇಲ್ಲ.

ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕ ಸಮಸ್ಯೆಗಳಿಗೆ ಒಳಗಾಗಬೇಕಾಯಿತು.. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಇರುವಾಗ ಯಾವ ಸಮಸ್ಯೆಯೂ ಬರಲಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಸರ್ಕಾರ ಇರುವಾಗ ? ಆಗಲೇ ಕೇಂದ್ರ ರಾಜ್ಯಪಾಲರ ಹುದ್ದೆಯನ್ನು ದುರೂಪಯೋಗ ಪಡಿಸಿಕೊಳ್ಳುವ ಸಮಸ್ಯೆ ಪ್ರಾರಂಭವಾಗಿದ್ದು..ರಾಜ್ಯಗಳಲ್ಲಿ ಇರುವ ತಮ್ಮ ವಿರೋಧಿ ಪಕ್ಷದ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ಮ ಕೂಡ ಪ್ರಾರಂಭವಾಗಿದ್ದು ಆಗಲೇ.. ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಈ ಸಂವಿಧಾನಿಕ ಹುದ್ದೆಯನ್ನು ಕೇಂದ್ರಕ್ಕೆ ಬೇಕಾದಂತೆ ಬಳಸಿಕೊಂಡಿದ್ದು ಈಗ ಇತಿಹಾಸ, 

ಅದು ಎಲ್ಲೈಯವರೆಗೆ ತಲುಪಿತ್ತೆಂದರೆ ರಾಜ್ಯಪಾಲರು ಕೇಂದ್ರದ ರಬ್ಬರ್ ಸ್ಟಾಂಪ್ ಎಂದು ಟೀಕಿಸಬೇಕಾದ ಹಂತವನ್ನು ಇದು ತಲುಪಿತ್ತು.. ಕಾಂಗ್ರೆಸ್ ಸರ್ಕಾರಗಳ ಈ ರೀತಿಯ ವರ್ತನೆಯಿಂದಾಗಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗ್ಗೆ ತೀವ್ರ ರೂಪದ ಚರ್ಚೆಗಳು ನಡೆದವು.. ರಬ್ಬರ್ ಸ್ಟಾಂಪ್ ರಾಜ್ಯಪಾಲರು ಬೇಕೆ ಎಂದು ಪ್ರಶ್ನಿಸುವ ಹಂತಕ್ಕೂ ಇದು ತಲುಪಿಬಿಟ್ಟಿತ್ತು, ಕಾಂಗ್ರೆಸ್ ನ ಆಡಳಿತಾವಧಿಯಲ್ಲಿ ಜನರು ಆಯ್ಕೆ ಮಾಡಿದ ರಾಜಯ್ ಸರ್ಕಾರಗಳನ್ನು ಉರುಳಿಸರು ರಾಜಯ್ಪಾಲರನ್ನು ಬಳಸಿಕೊಂಡ ಹಲವು ಉದಾಹರಣೆಗಳೂ ಇವೆ. ಆದರೆ ಅಧಿಕಾರ ಕೇಂದ್ರಿತ ರಾಜಕಾರಣವನ್ನು ಈ ದೇಶದಲ್ಲಿ ಪ್ರಾರಂಬಿಸಿದ ಕಾಂಗ್ರೆಸ್ ತಮ್ಮದು ಸಂವಿಧಾನ ವಿರೋಧಿ ನಡೆ ಎಂದು ಎಂದೂ ಯೋಚನೆ ಮಾಡಲೇ ಇಲ್ಲ. ಸಂವಿಧಾನಕ್ಕೆ ಅಪಚಾರವಾಗುತ್ತಿದೆ ಎಂದು ಯೋಚಿಸಲೇ ಇಲ್ಲ.

ಈಗ ಬಿಜೆಪಿಯ ವಿಚಾರಕ್ಕೆ ಬರೋಣ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ  ಈ ಬಗ್ಗೆ ಯೋಚಿಸಬೇಕಾದಆನಿವಾರ್ಯತೆ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಯಾದ ರಾಜ್ಯಪಾಲರ ಹುದ್ದೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಿರೋಧ ಪಕ್ಷ ಆಡಳಿತ ನಡೆಸುವ ರಾಜ್ಯಗಳ ಮೇಲೆ ರಾಜ್ಯಪಾಲರನ್ನೂ ಚೂ ಬಿಟ್ಟು ನಿಯಂತ್ರಿಸುವ ಸಂಪ್ರದಾಯ ಇನ್ನೊಂದು ಹಂತವನ್ನು ತಲುಪಿಬಿಟ್ಟಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ನಾವು ನೀಡಬಹುದು.. ಆದರೆ ಇಂದು ನಾನು ಕೇವಲ ತಮಿಳುನಾಡಿನ ಉದಾಹರಣೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೇನೆ.

ತಮಿಳು ನಾಡಿನ ರಾಜ್ಯಪಾಲರಾಗಿ ಕೇಂದ್ರದಿಂದ ನೇಮಕಗೊಂಡವರು ಆರ್ ಎನ್ ರವಿ.. ಇವರು ತೆಗೆದುಕೊಂಡ ಹಲವಾರು ತೀರ್ಮಾನಗಳು ವಿವಾದಕ್ಕೆ ಕಾರಣವಾಗಿದೆ. ರಾಜ್ಯಪಾಲರ ಹುದ್ದೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಯೆ ರವಿ ? ರಾಜ್ಯ ಸರ್ಕಾರ ವಿಧಾನ ಸಭೆಯಲ್ಲಿ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆ ಕಳುಹಿಸಿದ ವಿಧೆಯಕ ಗಳಿಗೆ ಅವರು ಒಪ್ಪಿಗೆಯನ್ನೇ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಸಂಬಂಧ ತಮಿಳುನಾಡು ವಿಧಾನ ಸಭೆ ನಿರ್ಣವನ್ನು ಅಂಗೀಕರಿಸಬೇಕಾಯಿತು. ಗುಪ್ತಚಾರ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ರವಿ ಅವರು ರಾಜ್ಯಪಾಲರಾದ ಮೇಲೂ ಕೇಂದ್ರ ಸರ್ಕಾರದ ಗುಪ್ತಚಾರರಂತೆ ಕೆಲಸ ಮಾಡುತ್ತಿದ್ದಾರೆಯೆ ಎಂದು ಪ್ರಶ್ನೆ ಕೇಳುವಂತಾಯಿತು..

ಇತ್ತಿಚಿನ ಬೆಳವಣಿಗೆಯಂತೂ ಇನ್ನೂ ಆಘಾತಕಾರಿ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ ಪ್ರಕರಣ.. ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಅವರ ಸಂಪುಟದ ಸದಸ್ಯರಾಗಿದ್ದವರು ವಿ. ಸೆಂಥಿಲ್ ಬಾಲಾಜಿ. ಇವರ ಮೇಲೆ ಆರೋಪವಿದೆ ಎಂಬ ಕಾರಣ ನೀಡಿ ಅವರನ್ನು ಸಂಪುಟದ ವಜಾ ಮಾಡಿಯೇ ಬಿಟ್ಟರು ರಾಜಯಪಾಲ ರವಿ. ಆದರೆ ಸಂವಿಧಾನದ ೧೬೪ (೧) ನೆಯ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಯನ್ನು ಸಚಿವರನ್ನಾಗಿ ತೆಗೆದುಕೊಳ್ಳುವುದು ಅಥವಾ ತೆಗೆದುಹಾಕುವುದು ಮುಖ್ಯಮಂತ್ರಿಗಳ ಪರಮಾಧಿಕಾರ.. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಮಂತ್ರಿಗಳನ್ನು ನೇಮಕ ಮಾಡುವುದು ಅಥವಾ ತೆಗೆದು ಹಾಕುವುದು ರಾಜ್ಯಪಾಲರ ಕೆಲಸ. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲ ರವಿ ಸಂವಿಧಾನದ ವಿಧಿ ವಿಧಾನಗಳನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಈ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ತೀರ್ಮಾನ ತೆಗೆದುಕೊಳ್ಳಬೇಕು.ಈಗ ಉಳಿದಿರುವುದು ಇದೊಂದೇ ದಾರಿ.. ಹಾಗೆ ರಾಜ್ಯಪಾಲರಿಗೆ ಇರುವ ಅಧಿಕಾರ ಎಂದರೆ ಸಚಿವ ಸಂಪುಟಕ್ಕೆ ಸಲಹೆ ನೀಡುವುದು ಮಾತ್ರ. ತಾವೇ ತೀರ್ಮಾನ ತೆಗೆದುಕೊಳ್ಳುವುದಲ್ಲ,

ರವಿ ಅವರು ಸಿಬಿಐ ನಲ್ಲಿ ಕೆಲಸ ಮಾಡಿದವರು.. ಅವರು ರಾಜ್ಯಪಾಲರಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಮೇಲೆ ಭಾರತದ ಸಂವಿಧಾನ, ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧ, ರಾಜ್ಯಪಾಲರು ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ವರ್ತಿಸಬೇಕಾಗಿತ್ತು.. ಆದರೆ ಅವರು ಹಾಗೆ ಮಾಡಿಲ್ಲ.

ಇಂತಹ ಸನ್ನಿವೇಶದಲ್ಲಿ ಸಂವಿಧಾನ ಅಡಿಯಲ್ಲಿ ರಾಜ್ಯಪಾಲರ ಹುದ್ದೆಯ ಗೌರವವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.. ಇಲ್ಲದಿದ್ದರೆ ಭಾರತದ ಸಂವಿಧಾನ ಕೇವಲ ಬರವಣಿಗೆಯಲ್ಲಿ ಇರುವ ಗ್ರಂಥವಾಗಿ ಮಾತ್ರ ಉಳಿದುಕೊಳ್ಳುತ್ತದೆ,,


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...