ಪ್ರಧಾನಿ ನರೇಂದ್ರ ಮೋದಿ..ಭಾರತದಲ್ಲಿ ಅತಿ ಹೆಚ್ಚಿನ ಜನ ಮನ್ನಣೆ ಪಡೆದ ನಾಯಕ..೨೦೦೨೪ ರ ಜೂನ್ ಹೊತ್ತಿಗೆ ಅವರು ೧೦ ವರ್ಷಗಳನ್ನು ಪೂರೈಸಲಿದ್ದಾರೆ. ಮುಂದಿನ ಅವಧಿಗೂ ಅವರು ಆಯ್ಕೆಯಾಗುವ ಎಲ್ಲ ಸಾಧ್ಯತೆಯೂ ಇದೆ..ಹಾಗಿದ್ದರೆ ಅವರ ಈ ಯಶಸ್ಸಿಗೆ ಕಾರಣಗಳೇನು ? ಅತಿ ಹೆಚ್ಚಿನ ಭಾರತೀಯರು ಮೋದಿ ಅವರನ್ನು ಇಷ್ಟಪಡುಉದು ಯಾಕೆ ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಜೊತೆಗೆ ಅವರ ಯಶಸ್ಸಿಗೆ ಇದೇ ಕಾರಣ ಎಂದು ಹೇಳುವುದು ಕಷ್ಟ..ಆದರೆ ಮೋದಿ ಭಾರತದ ಜನಪ್ರಿಯ ಹಿಂದೂ ನಾಯಕ..ಅವರ ರಾಜಕೀಯ ಲೆಕ್ಕಾಚಾರಗಳು ಫಲ ನೀಡಿವೆ.. ಬಹುಸಂಖ್ಯಾತ ಭಾರತೀಯರನ್ನು ಹಿಂದೂ ಅವರು ಒಟ್ಟೂಗೊಡಿಸಿದ್ದಾರೆ. ಅದನ್ನು ತಮ್ಮ ಮತ ಬ್ಯಾಂಕ್ ಆಗಿಯೂ ಪರಿವರ್ತಿಸಿದ್ದಾರೆ/ ಇದರಲ್ಲಿ ಯಾವ ಅನುಮಾನವೂ ಬೇಕಾಗಿಲ್ಲ.
೨೦೦೨ರಲ್ಲಿ ಗುಜರಾತ್ ಗಲಭೆ ಮತ್ತು ಹತ್ಯಾಕಾಂಡ ಅವರ ರಾಜಕೀಯ ಬದುಕಿನ ಪ್ರಾರಂಭದಲ್ಲಿ ನಡೆದ ದುರಂತ. ಬಿಜೆಪಿಯ ಅಂದಿನ ಸರ್ವೋಚ್ಚ ನಾಯಕ ಅಟಲ್ ಬಿಹಾರಿ ವಾಜಪೇಯಿ ಮೋದಿ ಅವರಿಗೆ ರಾಜಧರ್ಮದ ಪಾಠವನ್ನು ಮಾಡಿದ್ದರು. ಗುಜರಾತ್ ನ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಬದಲಿಸುವ ಒತ್ತಾಯ ಕೂಡ ಆ ಸಂದರ್ಭದಲ್ಲಿ ಕೇಳಿ ಬಂದಿತ್ತು.. ಆದರೆ ಬಿಜೆಪಿಯ ಐರನ್ ಮ್ಯಾನ್ ಲಾಲಕೃಷ್ಣ ಅಡ್ವಾಣಿ ಮೋದಿ ಅವರ ರಕ್ಷಣೆ ಮಾಡಿದರು.. ಕೊನೆಗೆ ಅಡ್ವಾಣಿ ಅವರ ರಾಜಕೀಯ ಬದುಕು ಕೊನೆಗೊಂಡಿದ್ದು ಮೋದಿ ಅವರಿಂದಲೇ ಎಂಬುದು ರಾಜಕಾರಣದ ಕ್ರೂರ ವ್ಯಂಗ್ಯಗಳಲ್ಲಿ ಒಂದು.
ಮುಂದಿನ ದಿನಗಳಲ್ಲಿ ಮೋದಿ ಚುನಾವಣೆ ಗೆಲ್ಲುವ ತಂತ್ರವನ್ನು ಕರಗತ ಮಾಡಿಕೊಂಡರು.. ಅವರ ಜೊತೆಗೆ ಈ ಕಾರ್ಯದಲ್ಲಿ ಕೈಜೊಡಿಸಿದವರು ಅಮಿತ್ರ್ ಶಾ. ಅಷ್ಟರಲ್ಲಿ ಮೋದಿ ಕಣ್ಣು ಸನ್ನೆ ಮಾಡಿದರೆ ಸಾಕು ಅಮಿತ್ ಬಾಯಿ ಅದನ್ನು ತಲೆಯ ಮೇಲೆ ಹೊತ್ತು ಅನುಷ್ಠಾನಗೊಳಿಸುತ್ತಿದ್ದರು. ಇವರಿಬ್ಬರ ರಾಜಕೀಯ ಕಾರ್ಯಾಚರಣೆ ತಂತ್ರಗಳು ಯಶಸ್ವಿ ರಾಜಕಾರಣದ ಮಾದರಿ ಎಂಬಂತೆ ಪ್ರತಿಬಿಂಬಿಸಲಾಯಿತು.. ಇವರಿಬ್ಬರೂ ದೇಶವನ್ನು ಅಲ್ಪಸಂಖ್ಯಾತ ರಾಜಕಾರಣದಿಂದ ಬಹುಸಂಖ್ಯಾತ ರಾಜಕಾರಣದತ್ತ ಕೊಂಡೊಯ್ದಿದ್ದರು. ಅಲ್ಲಿಯವರೆಗೆ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕಿನ ಬಗ್ಗೆ, ಅವರನ್ನು ಸಮಾನವಾಗಿ ನಡೆಸಿಕೊಳ್ಳುವ ಬಗ್ಗೆ, ದಲಿತರು ಮತ್ತು ಹಿಂದುಳಿದವರಿಗೆ ಸಮಾನತೆ ನೀಡುವ ಬಗ್ಗೆ ಮೀಸಲಾತಿಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ ಅಲ್ಪಸಂಖ್ಯಾತರು ದಲಿತರು ಮತ್ತು ಹಿಂದುಳಿದವರ ಹಿತ ರಕ್ಷಣೆ ಮಾಡುವ ಪಕ್ಷ ಎಂದು ಗುರುತಿಸಲ್ಪಡುತ್ತಿತ್ತು. ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡವರು ಮೋದಿ ಮತ್ತು ಅಮಿತ್ ಶಾ,,,
ಮೋದಿ ಮತ್ತು ಅಮಿತ್ ಶಾ ಗುಜರಾತ್ ನಲ್ಲಿ ಅಧಿಕಾರ ನಡೆಸುವಾಗಲೇ ದೇಶದ ರಾಜಕಾರಣಕ್ಕೆ ಹೊಸ ಮಾದರಿಯೊಂದನ್ನು ಸಿದ್ಧಪಡಿಸಿದ್ದರು.. ಈ ಮಾದರಿ ಕಾಂಗ್ರೆಸ್ ವೈಫಲ್ಯಗಳನ್ನು ಅಥವಾ ಕಾಂಗ್ರೆಸ್ ಸಾಧನೆಯ ನಿಜ ಇತಿಹಾಸವನ್ನು ವೈಫಲ್ಯದ ಇತಿಹಾಸವನ್ನಾಗಿ ಪ್ರತಿಬಿಂಬಿಸಿ ಜನರಿಗೆ ತಲುಪಿಸುವುದು,,ಇದಕ್ಕೆ ಪೂರಕವಾಗಿ ಜವಾಹರ್ ಲಾಲ್ ನೆಹರೂ ಅವರನ್ನು ಗುರಿಯಾಗಿಸಿ, ಸರ್ದಾರ್ ಪಟೇಲ್ ಅವರಿಗೆ ಅನ್ಯಾಯವಾಗಿದೆ ಎಂದು ನೆಹರೂ ಸ್ಥಳದಲ್ಲಿ ಯಶಸ್ಸಿನ ಇನ್ನೊಂದು ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕೆಲಸವೂ ಈ ಮಾದರಿಯ ಭಾಗವಾಗಿತ್ತು.. ನೆಹರೂ ಅವರ ಪ್ರತಿಮೆಯನ್ನು ಉರುಳಿಸಿದರೆ ಕಾಂಗ್ರೆಸ್ ಉರುಳಿದಂತೆ ಎಂಬ ಅರಿವಿನಿಂದ ರೂಪಿಸಿದ ತಂತ್ರ ಇದಾಗಿತ್ತು. ಬಿಜೆಪಿಯನ್ನು ನಿಯಂತ್ರಿಸುವ ಆರ್ ಎಸ್ ಎಸ್ ಮತ್ತು ಸಂಘಪರಿವಾರಕ್ಕೂ ಇದು ಅಪ್ಯಾಯಮಾನವಾದ ವಿಚಾರವಾಗಿತ್ತು..ಯಾಕೆಂದರೆ ನೆಹರೂ ಅವರ ಪ್ರತಿಮೆಗೆ ಬದಲಾಗಿ ಇವರಿಗೆ ತಮ್ಮದೇ ಆದ ಪ್ರತಿಮೆ ಇರಲಿಲ್ಲ..ಯಾಕೆಂದರೆ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದಿದ್ದ ಸಂಘಪರಿವಾರಕ್ಕೆ ಹೆಡ್ಗೆವಾರ್ ಸಾವರ್ಕರ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇವರೆಂದೂ ನೆಹರೂರವರಿಗೆ ಪರ್ಯಾಯವಾದ ನಾಯಕರಾಗಿರಲಿಲ್ಲ. ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಯಶಸ್ಸು ಪಡೆಯುವುದು ಸಾಧ್ಯವಿರಲಿಲ್ಲ. ಹೀಗಾಗಿ ಇವರು ಹಿಡಿದುಕೊಂಡಿದ್ದು ಸರ್ದಾರ್ ಪಟೇಲ್ ಅವರನ್ನು..
ಇದರ ಜೊತೆಗೆ ಗುಜರಾತ್ ಗಲಭೆ ಅವರಿಗೆ ಬಹುಸಂಖ್ಯಾತರ ರಾಜಕಾರಣಕ್ಕೆ ಬೇಕಾದ ವೇದಿಕೆಯೊಂದನ್ನು ಸೃಷ್ಟಿಸಿಕೊಟ್ಟಿತ್ತು..ರಾಜಕಾರಣವನ್ನು ಧರ್ಮದ ಜೊತೆಗೆ ಬೆರಸಿ ಬಹುಸಂಖ್ಯಾತರ ರಕ್ಷಕರು ನಾವೇ, ನಾವು ಮಾತ್ರ ಎಂದು ಪ್ರಚಾರಾಂದೋಲನ ಕೈಗೊಳ್ಳಲು ಇದು ಸಹಕಾರಿಯಾಗಿತ್ತು. ಆಷ್ಟರಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಹುಸಂಖ್ಯಾತ ಬಲಪಂಥೀಯ ರಾಜಕಾರಣ ಯಶಸ್ಸು ಪಡೆಯುತ್ತಿತ್ತು. ಈ ಮಾದರಿ ಮೋದಿ ಅಮಿತ್ ಶಾ ಅವರ ಗುಜರಾತ್ ಮಾದರಿಯಾಗಿ ಈ ದೇಶದಲ್ಲಿ ಯಶಸ್ಸು ಪಡೆಯಲು ಪ್ರಾರಂಭಿಸಿತು. ಈ ಮಾದರಿಯ ಗುಣ ಧರ್ಮ ಯಾವುದು ಎಂಬುದನ್ನು ನೋಡೋಣ.. ಮೊದಲನೇಯದಾಗಿ ದೇಶದ ಬಹುಸಂಖ್ಯಾತರ ಮನಸ್ಸಿನಲ್ಲಿ ಭಯದ ಬೀಜವನ್ನು ಬಿತ್ತುವುದೇ ಆಗಿದೆ. ಹೀಗೆ ಭಯಗ್ರಸ್ತರಾದ ಬಹುಸಂಖ್ಯಾತರಿಗೆ ನಾವೇ ನಿಮ್ಮ ರಕ್ಷಕರು, ನಮ್ಮಿಂದ ಮಾತ್ರ ಅಲ್ಪಸಂಖ್ಯಾತರಿಂದ, ಭಯೋತ್ಪಾದಕರಿಂದ, ದೇಶದ್ರೋಹಿಗಳಿಂದ ನಿಮ್ಮ ರಕ್ಷಣೆ ಸಾಧ್ಯ ಎಂಬ ಹುಸಿ ವಾತಾವರಣ ಸೃಷ್ಟಿಸುವುದು ಮುಂದಿನ ಭಾಗ. ಗುಜರಾತ್ ಹಿಂಸಾಚಾರ ಮೋದಿ ಮತ್ತು ಅಮಿತ್ ಶಾ ಅವರಿಗೆ ಇಂತಹ ನೆರೇಟಿವ್ ಅನ್ನು ಎಲ್ಲೆಡೆ ಬಿತ್ತಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಬಿಟ್ಟಿತ್ತು
ಇದಕ್ಕೆ ಪೂರಕವಾಗಿಯೇ ನೆಹರೂ ಅವರ ವ್ಯಕ್ತಿತ್ವವನ್ನು ನಾಶಪಡಿಸುವ ಕೆಲಸವೂ ನಡೆಯಿತು. ನೆಹರೂ ಅವರಿಂದಾಗಿ ಚೀನಾ ಯುದ್ಧದಲ್ಲಿ ಭಾರತ ಸೋಲಬೇಕಾಯಿತು, ನೆಹರೂ ಏನೂ ಮಾಡಿಲ್ಲ, ಅವರು ಸ್ತ್ರೀ ವ್ಯಾಮೋಹಿಯಾಗಿದ್ದರು ಎಂದು ವ್ಯವಸ್ಥಿತ ಅಪಪ್ರಚಾರವನ್ನು ನಡೆಸಲಾಯಿತು.. ನೆಹರೂ ಅವರು ಈ ದೇಶದ ಧರ್ಮ ನಿರಪೇಕ್ಶವಾದ, ಸಮಾಜವಾದ, ಮಿಶ್ರ ಆರ್ಥಿಕತೆಯ ರೂವಾರಿಯಾಗಿದ್ದರು. ನೆಹರೂ ಅವರ ಇಮೇಝ್ ಅನ್ನು ನಾಶಪಡಿಸದೇ ದೇಶದಲ್ಲಿ ಬಹುಸಂಖ್ಯಾತ ರಾಜಕಾರಣ ಮತ್ತು ಕೋಮುವಾದಿ ರಾಜಕಾರಣವನ್ನು ಮಾಡುವುದು ಸಾಧ್ಯವೇ ಇರಲಿಲ್ಲ. ಇದರ ಜೊತೆಗೆ ಮಹಾತ್ಮಾ ಗಾಂಧಿ ಅವರ ಕುರಿತು ದೇಶದ ಜನರಲ್ಲಿ ಇದ್ದ ಗೌರವದ ಭಾವನೆಯನ್ನು ನಾಶಪಡಿಸುವುದು ಇವರಿಗೆ ಮುಖ್ಯವಾಗಿತ್ತು..ಆದರೆ ಇದು ಅಷ್ಟು ಸುಲಭವಾಗಿರಲಿಲ್ಲ. ವಿಶ್ವದಾದ್ಯಂತ ಎಲ್ಲರಿಗೆ ಗೌರವಕ್ಕೆ ಪಾತ್ರರಾದವರೆಂದರೆ ಮಹಾತ್ಮಾ ಗಾಂಧಿ..ಈ ದೇಶದ ನಿಜವಾದ ವಿಶ್ವ ಗುರು ಮಹಾತ್ಮ ಗಾಂಧಿ,, ಇದರಿಂದ ಗಾಂಧಿ ಮುಸ್ಲೀಂ ರ ಪರ, ಅವರಿಂದಾಗಿ ದೇಶ ಒಡೆಯಿತು ಎಂಬ ಪ್ರಚಾರವನ್ನು ಸಂಘದ ಕಾಲಾಳುಗಳು ನಡೆಸತೊಡಗಿದರು.. ಗೋಡ್ಸೆ ದೇವಾಲಯ ನಿರ್ಮಿಸಲು ಮುಂದಾದರು..ಈ ಮೂಲಕ ದೇಶದ ಜನರಲ್ಲಿ ಗಾಂಧಿ ವಿರೋಧಿ ಭಾವನೆಯನ್ನು ಮೂಡಿಸುವ ಆಂದೋಲನವನ್ನು ಗುಪ್ತವಾಗಿ ನಡೆಸತೊಡಗಿದರು.. ಇದಕ್ಕೆ ಮೌನ ಬೆಂಬಲ ನೀಡಿದವರು ಗುಜರಾತ್ ಮಾದರಿಯ ರೂವಾರಿಗಳು.
ಹೀಗೆ ಸಿದ್ಧಗೊಂಡ ಗುಜರಾತ್ ಮಾದರಿ ಒಳಗೆ ದುಷ್ಟ ಮತ್ತು ಕೋಮುವಾದಿ ರಾಜಕಾರಣ ಇತ್ತು. ಬಹುಸಂಖ್ಯಾತ ರಾಜಕಾರಣದ ತಂತ್ರಗಳು ಅಡಗಿದ್ದವು, ಮೇಲ್ನೋಟಕ್ಕೆ ಇದು ಅಭಿವೃದ್ದಿ ರಾಜಕಾರಣದ ಮಾದರಿ ಎಂಬಂತೆ ಬಿಂಬಿಸಲಾಗುತ್ತಿತ್ತು.. ಗುಜರಾತ್ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಪ್ರಚಾರ ಮಾಡಲಾಯಿತು. ಮೋದಿ ಅವರು ಅಭಿವೃಸ್ಧಿಯ ಹರಿಕಾರ ಎಂದೂ ಅವರ ಇಮೇಜ್ ಅನ್ನು ರೂಪಿಸಲಾಯಿತು.. ಆದರೆ ಒಳಗಿರುವ ಕೋಮು ರಾಜಕಾರಣ ಅಲ್ಲಿಯೇ ತಾಂಡವವಾಡುತ್ತಿತ್ತು,
೨೦೧೪ ರ ಹೊತ್ತಿಗೆ ಬಹುಸಂಖ್ಯಾತ ರಾಜಕಾರಣವನ್ನು ಅನುಷ್ಠಾನಗೊಳಿಸಲು ಎಲ್ಲವೂ ಸಿದ್ದವಾಗಿತ್ತು.. ಮೋದಿ ಭ್ರಷ್ಟಾಚಾರವನ್ನು ದೇಶದಿಂದ ಒದ್ದೋಡಿಸುವ ಕ್ರಾಂತಿಕಾರಿ ನಾಯಕನಂತೆ ಪೋಸು ನೀಡತೊಡಗಿದರು. ಕಪ್ಪು ಹಣವನ್ನು ವಿದೇಶದಿಂದ ತಂದು ಎಲ್ಲ ಭಾರತಿಯರಿಗೆ ಹಂಚುವ ಮಾತನ್ನಾಡಿದರು.. ಜೊತೆಗೆ ದೇಶ ಭಕ್ತಿಯನ್ನು ಇದಕ್ಕೆ ಹದವಾಗಿ ಬೆರೆಸಿ ಮಾರಾಟ ಮಾಡತೊಡಗಿದರು...ಹೊಸ ಅಭಿವೃದ್ಧಿಯ ಕನಸನ್ನು ಮಾರಾಟ ಮಾಡಲಾಯಿತು. ಅಲ್ಪಸಂಖ್ಯಾತರ ಬೆರಚಪ್ಪ ನನ್ನು ತೋರಿಸಿ ಬೆದರಿಸಲಾಯಿತು.
ಈ ಮಾದರಿ ಬಿಜೆಪಿಗೆ ಮೋದಿ ಅವರಿಗೆ ಜಯವನ್ನು ತಂದುಕೊಟ್ಟಿತು.. ಮುಂದೇನಾಯಿತು ಎಂಬುದನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ..
No comments:
Post a Comment