Wednesday, June 28, 2023

ನರೇಂದ್ರ ಮೋದಿ ಅವೇರಿಕ ಪ್ರವಾಸದ ಇನ್ನೊಂದು ಮುಖ: ಮಳೆ ಸುರಿದ ಮೇಲೆ.....!



ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕ ಪ್ರವಾಸ ಯಶಸ್ವಿಯಾಗಿ ಮುಗಿದಿದೆ. ಮಾಧ್ಯಮಗಳ ವರದಿಗಳನ್ನು ನೋಡಿ ಅಭಿಪ್ರಾಯ ರೂಪಿಸಿಕೊಳ್ಳುವ ಈ ಕಾಲ ಘಟ್ಟದಲ್ಲಿ  ಭಾರತದ ಪ್ರಧಾನಿಗಳ ಅಮೇರಿಕ ಪ್ರವಾಸ ಯಶಸ್ವಿ ಪ್ರವಾಸ ಎಂದು ನಾವೆಲ್ಲ ನಂಬಿದ್ದೇವೆ. ಮಾಧ್ಯಗಳು ನಮ್ಮನ್ನು ನಂಬಿಸಿವೆ. ನರೇಂದ್ರ ಮೋದಿ ಯವರು ಅಮೇರಿಕ ಪ್ರವಾಸಕ್ಕೆ ಹೊರಟು ವಿಮಾನದಿಂದ ಕೈಬೀಸಿದ್ದರಿಂದ ಪ್ರಾರಂಭವಾಗಿ ಅವರ ವಾಪಸ್ ಬಂದು ಇಳಿಯುವವರೆಗೆ ಪ್ರತಿ ಕ್ಷಣವನ್ನು ನೋಡುವ ಸೌಭಾಗ್ಯವನ್ನು ನಮಗೆ ಒದಗಿಸಿದ ಮಾಧ್ಯಮಗಳಿಗೆ ನಾನು ಕೃತಜ್ನನಾಗಿದ್ದೇನೆ.

ಶ್ವೇತ ಭವನದಲ್ಲಿ ನಮ್ಮ ಪ್ರಧಾನಿಗಳಿಗೆ ಸಿಕ್ಕ ಭವ್ಯ ಸ್ವಾಗತ ಮನಸ್ಸು ತುಂಬುವಂತಿತ್ತು. ಹಾಗೆ ಅಲ್ಲೇ ನಡೆಸಿದ ಔತಣ ಕೂಟ.. ನರೇಂದ್ರ ಮೋದಿಯವರು ಸಸ್ಯಾಹಾರಿ ಎನ್ನುವ ಕಾರಣಕ್ಕೆ ಸಸ್ಸ್ಯಾಹಾರದ ಊಟವನ್ನ್ಉ ಸಿದ್ದಪಡಿಸಿದ್ದನ್ನು ನಾನು ಭಾರತದ ವಿಜಯ ಎಂದೇ ನಂಬಿದ್ದೇನೆ. ಹಾಗೆ ಇದು ಅಮೇರಿಕದ ಸೋಲು.

ಮೂರು ದಿನಗಳ ಕಾಲ ಅಮೇರಿಕದಲ್ಲಿದ್ದ ಮೋದಿಯವರು ಭಾರತಿಯ ಡೈಯೋಸ್ಪೋರಾದ ಸ್ವಾಗತ ನೋಡಿ ಖುಷಿಯಾಗಿದ್ದರೆ ಅದು ತುಂಬಾ ಸಹಜ. ಅಮೇರಿಕದಂತಹ ಅಮೇರಿಕದಲ್ಲಿ ಮೋದಿ ಮೋದಿ ಎಂಬ ಜಯಘೋಷ ಕೇಳಿ ಬಂದಿದ್ದು ಸಾಮಾನ್ಯವಲ್ಲ. ಹಾಗೆ ಹಲವಾರು ಒಪ್ಪಂದಗಳಿಗೆ ಅಮೇರಿಕ ಭಾರತ ಸಹಿ ಹಾಕಿದವು.  ಇದೆಲ್ಲ ಸರಿ. ಆದರೆ ಸ್ವಲ್ಪ ಎಡವಟ್ಟಾಗಿದ್ದು ಈ ಪ್ರವಾಸದ ಕೊನೆಯ ಹಂತದಲ್ಲಿ. ಅದೂ ಮೋದಿ ಮತ್ತು ಬೈಡನ್ ಅವರ ಜಂಟಿ ಪತ್ರಿಕಾಗೋಷ್ಟಿಯಲ್ಲಿ.. ಸುಮಾರು ೯ ವರ್ಷಗಳ ನಂತರ ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದು ಐತಿಹಾಸಿಕ. ಆದರೆ ಈ ಪತ್ರಿಕಾಗೋಷ್ಟಿಯಲ್ಲಿ ಮೋದಿಯವರಿಗೆ ಕೇಳಲಾದ ಎರಡು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಸಮಸ್ಯೆಯನ್ನು ತಂದೊಡ್ಡಿತು.. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದ ಪ್ರಶ್ನೆ ಅದು. ಇದರಿಂದ ಮೋದಿ ಅವರಿಗೆ ಮುಜುಗರವಾಗಿದ್ದು ನಿಜ.. ಅವರ ಮುಖ ಭಾವ ಅವರಿಗೆ ಮುಜುಗರವಾಗಿದ್ದನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ.. ಆದರೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಮೋಡಿ ತಮ್ಮ ಜಾಣತನವನ್ನು ಪ್ರದರ್ಶಿಸಿದರು.. ಜೊತೆಗೆ ಕಳೆದ ೯ ವರ್ಷಗಳಲ್ಲಿ ತಾವು ಪತ್ರಿಕಾಗೋಷ್ಟಿಯನ್ನು ಕರೆದಿಲ್ಲ ಎಂಬುದನ್ನು  ಮನವರಿಕೆ ಮಾಡಿಕೊಡುವಂತಿತ್ತು ಆಗಿನ ಪರಿಸ್ಥಿತಿ.

ಅಲ್ಲಿಂದ ಹೊರಟ ಮೋದಿ ಈಜಿಪ್ತ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳಿದರು.. ಆದರೆ ಅಮೇರಿಕದ ಪತ್ರಿಕಾಗೋಷ್ಟಿ ಮತ್ತು ವಾಲ್ ಸ್ಟೀಟ್ ಜರ್ನಲ್ ನ ಆ ವರದಿಗಾರ್ತಿ ಕೇಳಿದ ಪ್ರಶ್ನೆಯನ್ನು ಸುಲಭವಾಗಿ ಮರೆಯುವಂತಿರಲಿಲ್ಲ. ಮೋದಿಯವರಿಗೆ ಬೇಸರವಾಗಿತ್ತು.. ಅವರ ಶಿಷ್ಯರಿಗೆ ಅವರಿಗಿಂತ ಹೆಚ್ಚು ಬೇಸರವಾಗಿತ್ತು..

ಮೋದಿ ಭಾರತಕ್ಕೆ ಮರಳುವ ಹೊತ್ತಿಗೆ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ್ ಅಮಿತ್ ಮಾಲವೀಯ ಈ ಪತ್ರಕರ್ತೆಯ ಇತಿಹಾಸವನ್ನು ಜಾಲಾಡಿದ್ದರು. ಆಗ ಅವರಿಗೆ ಸಿಕ್ಕ ಮಹತ್ವದ ಮಾಹಿತಿ ಎಂದರೆ ಈ ಪತ್ರಕರ್ತೆ ಮುಸ್ಲೀಂ.. ಈಕೆಯ ತಂದೆ ಪಾಕಿಸ್ಥಾನದ ಮೂಲದವರು.. ಮಾಲವೀಯ ಅವರಿಗೆ ಇಷ್ಟೇ ಸಾಕಾಗಿತ್ತು. ಮರಭೂಮಿಯಲ್ಲಿ ಓಯಾಸಿಸ್ ದೊರಕಿದಂತೆ ಅವರು ಹಿಗ್ಗಿದರು. ಪತ್ರಕರ್ತೆ ಮುಸ್ಲೀಂ ಆಗಿರುವುದರಿಂದ ಇದನ್ನು ಹಿಂದೂ ಮುಸ್ಲೀಮ್ ಎಂದು ವಿಭಾಗಿಸುವುದು ಸುಲಭ ಅನ್ನಿಸಿ ಅವರಿಗೆ ಸಂತೋಶವೋ ಸಂತೋಷ,,

ಅವರು ತಮ್ಮ ಟ್ವಿಟರ್ ಖಾತೆಯನ್ನು ಒಪನ್ ಮಾಡಿದರು. ಈ ಪತ್ರಕರ್ತೆ ಇಂತಹ ಪ್ರಶ್ನೆ ಕೇಳುವುದರ ಹಿಂದೆ ದುರುದೇಶವಿದೆ, ಯಾಕೆಂದರೆ ಆಕೆ ಪಾಕಿಸ್ಥಾನ ಮೂಲದವಳು..ಇಸ್ಲಾಮಿಸ್ಟ್ !. ಮಾಲವೀಯಾ ಹೀಗೆ ಟ್ವೀಟ್ ಮಾಡುತ್ತಿದ್ದಂತೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಆ ಪತ್ರಕರ್ತೆಯನ್ನು ಕೋಮುವಾದಿ ಅಸ್ತ್ರಗಳ ಮೂಲಕ ಹಿಂಸಿಸತೊಡಗಿದರು.. ಇದೇ ಅಸ್ತ್ರದಿಂದ ಬರಾಖ್ ಒಬಾಮಾ ಅವರನ್ನು ಹಿಂಸಿಸಿದ್ದ ಪಡೆ ಈಗ ಪತ್ರಕರ್ತೆಯ ಬೆನ್ನು ಬಿದ್ದರು.

ಆದರೆ ಅಷ್ಟರಲ್ಲಿ ಅಮೇರಿಕದಲ್ಲಿ ಮೋದಿ ಅವರ ಎರಡನೆಯ ಇನ್ನಿಂಗ್ಸ್ ಪ್ರಾರಂಭವಾಗಿತ್ತು..ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸುತ್ತಿರುವವರಿಗೆ ಮಾಲವೀಯ ಮತ್ತು ಟೀಂ ತಾನಾಗಿಯೇ ಅವರ ಆಕ್ಷೇಪಗಳಿಗೆ ಸಾಕ್ಷ್ಯಾಧಾರವನ್ನು ಒದಗಿಸಿ ಬಿಟ್ಟಿತ್ತು,

ಇನ್ನೊಂದೆಡೆ ಸಿ ಎನ್ ಎನ್ ಗೆ ನೀಡಿದ ಸಂದರ್ಶನದಲ್ಲಿ ಒಬಾಮಾ ಆಡಿರುವ ಮಾತುಗಳಿಂದ ಮೋದಿ ಸಂಪುಟದ ಹಲವು ಸದಸ್ಯರು ಕೋಪಗೊಂಡಿದ್ದರು,, ಹಲವು ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ಪಕ್ಷದ ಕಚೇರಿಗೆ ಬಂದು ಒಬಾಮಾ ಅವರನ್ನು ತರಾಟೆಗೆ ತೆಗೆದುಕೊಂಡರು

ಅಮೇರಿಕದಲ್ಲಿ ಅನಿಯಂತ್ರಿತ ಪತ್ರಿಕೋದ್ಯಮ...ಪತ್ರಿಕೋದ್ಯಮದ ಮೇಲೆ ನಿಯಂತ್ರಣ ಇಲ್ಲ.. ಎಂದರು ವಿದೇಶಾಂಗ ಸಚಿವ ಜಯಶಂಕರ್ . ಅಂದರೆ ಪ್ರಭುತ್ವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬೇಕು ಎನ್ನುವುದು ಈ ಮಾಜಿ ಬ್ಯುರಾಕ್ರೇಟ್ ಅವರ ಮಾತಿನ ಅರ್ಥವಾಗಿತ್ತು.

ಇದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕ ಪ್ರವಾಸದ ಎರಡನೆಯ ಇನ್ನಿಂಗ್ಸ್. ಇಲ್ಲಿ ಮೋದಿ ಮತ್ತು ಬಿಜೆಪಿ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬಾರದು ಎಂದು ಬಯಸಿದ್ದರೋ ಅದೇ ವಿಚಾರದ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ.. ಇಲ್ಲಿ ಜಯಕಾರವಿಲ್ಲ. ಭವ್ಯ ಸ್ವಾಗತ ಇಲ್ಲ.. ಇಲ್ಲಿನ ಬಹುಮುಖ್ಯ ಪ್ರಶ್ನೆ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಇದೆಯೆ ಎಂಬುದೇ ಆಗಿದೆ.. ಈ ಬಗ್ಗೆ ಚರ್ಚೆ ನಡೆಸುವುದೇ ಬಿಜೆಪಿ ಪ್ರಭುತ್ವಕ್ಕೆ ಬೇಕಾಗಿರಲಿಲ್ಲ. 

ಮೋದಿ ಅಭಿಮಾನಿ ಪಡೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಿರುಕುಳ ನೀಡದಿದ್ದರೆ ಈ ವಿಚಾರ ಈ ಹಂತ ತಲುಪುತ್ತಿರಲಿಲ್ಲ. ಆದರೆ ಅಮಿತ್ ಮಾಲವೀಯ ಮತ್ತು ಭಕ್ತ ಪಡೆ ಹಲವು ವರ್ಷಗಳಿಂದ ಭಾರತದಲ್ಲಿ ಇದೇ ಕೆಲಸವನ್ನು ಮಾಡುತ್ತ ಬಂದಿದೆ. ಆದರೆ ಈಗ ಇವರ ಎಂತವರು ಎಂಬುದು ಅಂತರಾಷ್ಟೀಯ ಮಟ್ಟದಲ್ಲಿ ಗೊತ್ತಾಗ ತೊಡಗಿದೆ.. ಇದು ಮೋದಿ ಅಮೇರಿಕ ಪ್ರವಾಸದ ನಂತರದ ಎರಡನೆ ಇನ್ನಿಂಗ್ಸ್..  ಮುಖವಾಡ ಕಳಚುವ ಇನ್ನಿಂಗ್ಸ್.. 

ನಿಜ ಕಳಚುತ್ತಿದೆ ಮುಖವಾಡ.






No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...