ಈಗ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಚರ್ಚೆಯನ್ನು ಹುಟ್ಟಿ ಹಾಕಿದವರು ಪ್ರಧಾನಿ ನರೇಂದ್ರ ಮೋದಿ. ಅಮೇರಿಕದ ಪ್ರವಾಸದಿಂದ ವಾಪಸ್ ಬಂದ ಅವರು ಪಕ್ಷದ ಅಧ್ಯಕ್ಷ ನಡ್ಡಾ ಅವರನ್ನು ದೇಶದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರಂತೆ. ಈ ಪ್ರಶ್ನೆಗೆ ನಡ್ಡಾ ಯಾವ ಉತ್ತರ ನೀಡಿದರು ಎಂಬುದು ಭಹಿರಂಗವಾಗಿಲ್ಲ. ಎಲ್ಲಾ ಚೆನ್ನಾಗಿದೆ ಎಂಬ ಉತ್ತರ ಅವರಿಂದ ಬಂದಿರಬಹುದು. ಆದರೆ ಎಲ್ಲವೂ ಚೆನ್ನಾಗಿಲ್ಲ ಎಂಬುದು ಪ್ರಧಾನಿ ಮೋದಿ ಅವರಿಗೂ ಗೊತ್ತಿತ್ತು..
ಅವರ ಅಮೇರಿಕ ಪ್ರವಾಸದ ಬಗ್ಗೆ ಮಾಧ್ಯಮಗಳು ಭಾರಿ ಪ್ರಚಾರ ನೀಡಿದರೂ ಒಟ್ಟಾರೆ ಪ್ರವಾಸ ಪ್ರಧಾನಿಯವರ ಪಾಲಿಗೆ ಸಂತಸದಾಯಕವಾಗಿರಲಿಲ್ಲ. ಅಮೇರಿಕದ ಅಧ್ಯಕ್ಷರ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ತೂರಿ ಬಂದ ಆ ಪ್ರಶ್ನೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ್ದಾಗಿತ್ತು.. ಅದರಂತೆ ಅಮೇರಿಕದ ಮಾನವ ಹಕ್ಕುಗಳ ಸಂಘಟನೆಗಳು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ಮಾಡುವಂತೆ ಅಮೇರಿಕ ಅಧ್ಯಕ್ಷರನ್ನು ಒತ್ತಾಯಿಸಿದ್ದವು. ಈ ಬಗ್ಗೆ ಬೈಡನ್ ಅವರು ಮೋದಿ ಅವರ ಚರ್ಚೆ ಮಾಡಿದ್ದರೆ ಎಂಬುದು ಬಹಿರಂಗವಾಗಿಲ್ಲ. ಆದರೆ ಶ್ವೇತ ಭವನದ ವಕ್ತಾರರು ಇದು ವೈಯಕ್ತಿಕ ಚರ್ಚೆ . ಆದ್ದರಿಂದ ವಿವರ ನೀಡಲು ಸಾಧ್ಯವಿಲ್ಲ ಎಂದು ಕೈತೊಳೆದುಕೊಂಡರು.. ಆದರೆ ಅವರು ಇದು ಗಂಭೀರ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಲು ಮರೆಯಲಿಲ್ಲ.
ಇಂತಹ ಮುಜುಗರವನ್ನು ಎದುರಿಸಿ ದೇಶಕ್ಕೆ ಹಿಂತಿರುಗಿದ ಪ್ರಧಾನಿ ಮೋದಿ ಕೇಳಿದ ಪ್ರಶ್ನೆ ಎಂದರೆ ಇಲ್ಲಿ ಎಲ್ಲ ಸರಿಯಿದೆಯೆ ಎಂದು.. ಆದರೆ ಇಲ್ಲಿ ಎಲ್ಲವೂ ಸರಿ ಇರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಜಯಬೇರಿಯ ನೋವು ಬಿಜೆಪಿ ನಾಯಕರನ್ನು ಕಾಡುತ್ತಿತ್ತು.. ಕಾಂಗ್ರೆಸ್ ಗ್ಯಾರಂಟಿ ದೇಶದ ಬೇರೆ ರಾಜ್ಯಗಳಿಗೂ ಹಬ್ಬಿದರೆ ಎನು ಮಾಡಬೇಕು ಎಂಬ ಚಿಂತೆಯೂ ಇತ್ತು. ಇನ್ನು ಮಣಿಪುರದ ಹಿಂಸಾಚಾರ ನಿಂತಿರಲಿಲ್ಲ. ಅಲ್ಲಿ ಆಡಳಿತ ಇದೆಯೇ ಎಂಬ ಅನುಮಾನ ಮೂಡುವಂತಾಗಿತ್ತು.. ಅಲ್ಲಿ ಯಾವ ಮ್ಯಾಜಿಕ್ ಕೂಡ ವರ್ಕ್ ಆಗುವ ಲಕ್ಷಣ ಕಾಣುತ್ತಿರಲಿಲ್ಲ.
ವೈಯಕ್ತಿಕ ಕಾನೂನು ಧರ್ಮದ ಆಧಾರದ ಮೇಲೆ ರೂಪಗೊಂಡಿವೆ.. ಆಯಾ ಧರ್ಮದವರಿಗೆ ಆಯಾ ಕಾನೂನು ಅನ್ವಯವಾಗುತ್ತದೆ, ಆಂದರೆ ಆಯಾ ಧರ್ಮಗಳು ಏನು ಹೇಳುತ್ತವೆಯೋ ಆ ಆಧಾರದ ಮೇಲೆ ಕಾನೂನು ಮಾಡಲಾಗಿದೆ,, ಇದು ಸಂಫೂರ್ಣವಾಗಿ ಧಾರ್ಮಿಕ ಸ್ವಾತಂತ್ರದ ಆಧಾರದ ಮೇಳೆ ರೂಪಗೊಂಡ ಕಾನೂನು. ಈ ಕಾನೂನುನನ್ನು ಬಹು ಕಾಲದಿಂದ ಆಯಾ ಧರ್ಮದವರು ಅನುಸರಿಸಿಕೋಂಡು ಬರುತ್ತಿದ್ದಾರೆ, ಇದರ ಆಧಾರ ಧಾರ್ಮಿಕ ನಂಬಿಕೆಗಳೇ ಆಗಿವೆ,
ಹಿಂದೂ ವೈಯಕ್ತಿಕ ಕಾನೂನು
ಹಿಂದೂ ಕಾನೂನು ಪುರಾತನವಾದ ಕಾನೂನು,, ೧೯೫೬ ರ ಹಿಂದೂ ಸಕ್ಷೇಶನ್ ಅಥವಾ ಉತ್ತರಾಧಿಕಾರ ಕಾನೂನಿನ ಮೇಲೆ ರೂಪಿಸಲಾದ ಕಾನೂನು,. ಮೂಲಭೂತವಾಗಿ ಆಸ್ತಿ ಹಂಚಿಕೆ ಹೇಗೆ ಯಾವಾಗ ಯಾವ ಮಾನದಂಡದ ಮೂಲಕ ಮಾಡಬೇಕು ಎಂಬುದನ್ನು ಇದು ಹೇಳುತ್ತದೆ. ಹಾಗೆ ಮಹಿಳೆಯರಿಗೆ ಆಸ್ತಿ ಮೇಲಿನ ಅಧಿಕಾರಕ್ಕೂ ಇದು ಸಂಬಂಧಿಸಿದೆ. ಈ ಕಾನೂನಿನಲ್ಲಿ ಸಾಕ್ಷಟು ತಿದ್ದುಪಡಿಯೂ ಆಗಿದೆ. ಮೊದಲು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರಲಿಲ್ಲ. ಗಂಡು ಮಕ್ಕಳಿಗೆ ಆಸ್ತಿ ಮೇಲೆ ಇದ್ದ ಧಿಕಾರ ಹೆಣ್ಣು ಮಕ್ಕಳಿಗೆ ಇರಲಿಲ್ಲ.. ಆದರೆ ಈಗ ಹಾಗಿಲ್ಲ. ಗಂಡು ಮಕ್ಕಳಿಗೆ ಇರುವ ಅಧಿಕಾರ ಹೆಣ್ಣು ಮಹ್ಹಳಿಗೂ ಇದೆ..ಹಾಗೆ ಹಿಂದೂ ಕಾನೂನಿನ ಅಡಿಯಲ್ಲಿ ಮದುವೆ, ವಿವಾಹ ವಿಚ್ಚೇಧನ, ಉತ್ತರಾಧಿಕಾರ, ದತ್ತು ಸ್ವೀಕಾರ ಮೊದಲಾದ ಕಾನೂನುಗಳು ಬರುತ್ತವೆ. ಈ ಕಾನೂನುಗಳನ್ನು ಹಿಂದೂ ನಂಬಿಕೆ ಮತ್ತು ಸಂಪ್ರದಾಯದ ಆಧಾರದ ಮೇಲೆ ರಚಿಸಲಾಗಿದೆ.
ಹಾಗೆ ಮಕ್ಕಳ ಪಾಲಕತ್ವ.. ೧೮ ವರ್ಷದ ಒಳಗಿನ ಮಕ್ಕಳನ್ನು ಮೈನರ್ ಎಂದು ಕಾನೂನು ಪ್ರಕಾರ ಪರಿಗಣಿಸಲಾಗಿದೆ. ಈ ಕಾನೂನಿನ ಪ್ರಕಾರ ತಂದೆ ಮೊದಲ ಗಾರ್ಡಿಯನ್. ಇದಾದ ಮೇಲೆ ತಾಯಿ. ಆದರೆ ನಗುವಿಗೆ ೫ ವರ್ಶ್ಃಅಕ್ಕಿಂತ ಕಡಿಮೆ ಆಗಿದ್ದರೆ ತಾಯಿಯೇ ಮೊದಲ ಗಾರ್ಡಿಯನ್,,
ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆಯೂ ಕಾನೂನು ಕೆಲವೊಂದು ನಿಯಮಗಳನ್ನು ರೂಪಿಸಿದೆ. ಅದರ ವಿವರಗಳನ್ನು ನಾನಿಲ್ಲ ನೀಡುತ್ತಿಲ್ಲ.. ಅದರ ಅಗತ್ಯ ಕೂಡ ಇಲ್ಲಿಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಇನ್ನು
ವಿವಾಹ ವಿಚ್ಚೇದನ,, ಇದಕ್ಕೆ ಸಂಬಂಧಿಸಿದಂತೆ ಹಿಂದೂ ಮ್ಯಾರೇಜ್ ಯಾಕ್ಟ್ ಇದೆ,,ಈ ಕಾನೂನು ರಚನೆಯಾಗಿದ್ದು ೧೮೬೯ ರಲ್ಲಿ. ಈ ಕಾನೂನಿನ ಪ್ರಕಾರ ಹೆಂಡತಿ ವಿವಾಹ ವಿಚ್ಚೇದನ ಕ್ಕೆ ಅರ್ಜಿ ಸಲ್ಲಿಸಲು ಕಾನೂನು ಪ್ರಕಾರ ಬೇರೆಯಾಗಲು ಕಾರಣಗಳೇನಾಗಿರಬೇಕು ಎಂಬುದನ್ನು ವಿವರಿಸಲಾಗಿದೆ. ವಿವಾಹವನ್ನು ಅನೂರ್ಜಿತಗೊಳಿಸುವದ ಹೇಗೆ ಎಂಬುದನ್ನು ವಿವರಿಸಲಾಗಿದೆ. ಈಗ ಮುಸ್ಲೀಂ ವೈಯಕ್ತಿಕ ಕಾನೂನಿನ ವಿಚಾರಕ್ಕೆ ಬರೋಣ.
ಮುಸ್ಲೀಂ ಶರಿಯತ್ ಅಧಾರದ ಮೇಲೆ ಈ ಕಾನೂನು ರಚಿಸಲಾಗಿದೆ. ಇದು ವಿವಾಹ್ಅ ವಿಚ್ಚೇದನ, ನಿರ್ವಹಣಾ ವೆಚ್ಚ, ಉತ್ತರಾಧಿಕತ್ವ ಮೊದಲಾದ ವಿಷಯಗಳಿಗೆ ಇದು ಸಂಬಂಧಿಸಿದೆ,, ಇದು ಕುರಾನ್ ಆಧಾರಿತ ವಾಗಿದ್ದರೂ ಮುಸ್ಲೀಮ್ ರನ್ನು ಶಿಯಾ ಮತ್ತು ಸುನ್ನಿ ಎಂದು ವಿಭಜಿಸಲಾಗಿದೆ. ಶಿಯಾ ಮತ್ತು ಸುನ್ನಿಗಳ ನಂಬಿಕೆಯ ನಡುವೆ ಇರುವ ವ್ಯಾತ್ಯಾಸವನ್ನು ಗಮನಿಸಿ ಈ ವರ್ಗೀಕರಣ ಮಾಡಲಾಗಿದೆ. ಹಿಂದೂ ವೈಯಕ್ತಿಕ ಕಾನೂನು ಮತ್ತು ಮುಸ್ಲೀಂ ವೈಯಕ್ತಿಕ ಕಾನೂನಿನ ನಡುವೆ ಸಾಕಷ್ಟು ವ್ಯತ್ಯಾಸಗಳೂ ಇವೆ. ಇದಕ್ಕೆ ಬಹುಮುಖ್ಯ ಕಾರಣ ಈ ಎರಡೂ ಧಾರ್ಮಿಕ ನಂಬಿಕೆಗಳಲ್ಲಿ ಇರುವ ವ್ಯತ್ಯಾಸಗಳು. ಉದಾಹರಣೆಗೆ ದತ್ತು ಸ್ವೀಕಾರದ ವಿಚಾರವನ್ನೇ ತೆಗೆದುಕೊಳ್ಳಬಹುದು.
ಇಸ್ಲಾಮ್ ದತ್ತು ಸ್ವೀಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಹೀಗಾಗಿ ಯಾವುದೇ ಮುಸ್ಲೀಂ ಧರ್ಮಾನುಯಾಯಿ ಮಗುವನ್ನು ತಂದು ಸಾಕಿದರೂ ಸಾಕಿದವನು ತಂದೆಯಾಗಲಾರ,, ಆತ ಕೇವಲ ಮಗುವಿನ ಪಾಲಕ. ಹೀಗಾಗಿ ಗಾರ್ಡಿಯನ್ ಆಗಿ ಇರಬಹುದು ಎಂದು ನ್ಯಾಯಾಲಯದ ತೀರ್ಪುಗಳು ತಿಳಿಸಿವೆ. ಇದು ಖುರಾನ್ ಮತ್ತು ಶರಿಯತ್ ಪ್ರಕಾರ ಮಾಡಿದ ಕಾನೂನು. ಆದರೆ ಹಿಂದೂ ಧರ್ಮದಲ್ಲಿ ಹಾಗಲ್ಲ. ಅಲ್ಲಿ ದತ್ತು ಸ್ವೀಕಾರಕ್ಕೆ ಅವಕಾಶ ಇದೆ.. ಇನ್ನು ಗಾರ್ಡಿಯನ್ ಗೆ ಸಂಬಂಧಿಸಿದಂತೆ ಮುಸ್ಲೀಂ ವೈಯಕ್ತಿಕ ಕಾನೂನಿನಲ್ಲಿ ಹಲವು ಅಂಶಗಳಿವೆ. ಅವುಗಳನ್ನು ವಿವರಿಸಲು ನಾನು ಹೋಗುವುದಿಲ್ಲ, ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಮುಸ್ಲೀಂ ವೈಯಕ್ತಿಕ ಕಾನೂನು ಹೆಚ್ಚು ಸರಳವಾಗಿತ್ತು.. ಮೂರು ಬಾರಿ ತಲಾಖ್ ಹೇಳಿ ವಿವಾಹವನ್ನು ರದ್ದು ಪಡಿಸಬಹುದಾಗಿತ್ತು.. ಆದರೆ ಇದರಿಂದ ಮುಸ್ಲೀಮ್ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣವನ್ನು ನೀಡಿ ಭಾರತ್ರ ಸರ್ಕಾರ ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯ ಇಲ್ಲ.
ಹಿಂದೂ ವೈಯಕ್ತಿಕ ಕಾನೂನು ಮತ್ತು ಮುಸ್ಲೀಮ್ ವೈಯಕ್ತಿಕ ಕಾನೂನಿನ ನಡುವೆ ಇರುವ ವ್ಯತ್ಯಾಸವೇನು ಎಂಬುದನ್ನು ನಾವು ನೋಡಬೇಕಾದ್ದು ಮುಖ್ಯ. ಯಾಕೆಂದರೆ ಸಮಾನ ನಾಗರಿಕ ಸಂಹಿತೆಯ ಬದಲಾವಣೆಯ ಕುರಿತು ಚರ್ಚಿಸಲು ಇದು ಅತ್ಯಗತ್ಯ
ಹಿಂದೂ ಕಾನೂನು ಮುಸ್ಲಿಂ ಕಾನೂನು
ಬಹುಪತ್ನಿತ್ವ ಇಲ್ಲ.. ಬಹುಪತ್ನಿತ್ವ ಇದೆ,
ದತ್ತು ಸ್ವೀಕಾರ ಇದೆ.. ದತ್ತು ಸ್ವೀಕಾರ ಇಲ್ಲ
ಕೊಡೀಫೈಡ್ ಮಾಡಲಾಗಿದೆ.. ಮಾಡಲಾಗಿಲ್ಲ.
ಹಿಂದೂ ಕಾನೂನಿನ ಪ್ರಕಾರ ಪ್ರತ್ಯೇಕ
ಮತ್ತು ಎನ್ಸೆಸ್ಟರಲ್ ಪ್ರಾಪರ್ಟಿ ಇದೆ ಮುಸ್ಲೀಂ ಪ್ರಕಾರ ಹಾಗಿಲ್ಲ..
ಈಗ ಮೂಲ ವಿಚಾರಕ್ಕೆ ಬರೋಣ.. ಹಿಂದೂ ಮತ್ತು ಮುಸ್ಲೀಂ ರಿಗೆ ಪ್ರತ್ಯೇಕವಾದ ವೈಯಕ್ತಿಕ ಕಾನೂನಿದೆ. ಇದರ ಉದ್ದೇಶ ಯಾವ ಕಾರಣಕ್ಕೂ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ಬರಬಾರದು ಎಂಬುದೇ ಆಗಿತ್ತು.. ಯಾಕೆಂದರೆ ಪ್ರತಿಯೊಬ್ಬ ಯಾವುದೇ ಧಾರ್ಮಿಕ ನಂಬಿಕೆಯವನೇ ಆಗಿರಲಿ, ಅವರ ಧಾರ್ಮಿಕ ನಂಬಿಕೆಯನ್ನು ಧಿಕ್ರ್ಕಾರ್ರಿಸದೇ ನಾಗರಿಕ ಕಾನೂನನ್ನು ರಚಿಸುವ ಉದ್ದೇಶದಿಂದ ಹಿಂದೂ ಮುಸ್ಲೀಂ ರಿಗೆ ಪ್ರತ್ಯೇಕ ಕಾನೂನು ರಚಿಸಲಾಗಿತ್ತು.. ಈಗ ಏಕರೂಪ ನಾಗರಿಕ ಸಂಹಿತೆಯನ್ನು ಹೇಗೆ ರಚಿಸುತ್ತೀರಿ ? ಹಿಂದೂ ನಂಬಿಕೆಗಳ ಆಧಾರದ ಮೇಲೆ ಈ ಕಾನೂನು ರಚನೆಯಾಗುತ್ತದೆಯೆ ? ನನಗೆನ್ನಿಸುವ ಹಾಗೆ ಕೇಂದ್ರ ಸರ್ಕಾರದ ಉದ್ದೇಶ ಇದೇ ಆಗಿದೆ, ಹಿಂದೂ ವೈಯಕ್ತಿಕ ಕಾನೂನೇ ಏಕ ರೂಪ ನಾಗರಿಕ ಸಂಹಿತೆಯಾಗಿ ಜಾರಿಗೆ ತರುವ ಉದ್ದೇಶ ಮೋದಿ ಸರ್ಕಾರಕ್ಕೆ ಇದ್ದಂತೆ... ಮುಸ್ಲೀಂ ವೈಯಕ್ತಿಕ ಕಾನೂನಿನಲ್ಲಿ ಇರುವ ಯಾವುದೇ ಅಂಶಗಳು ನೂತನ ಏಕರೂಪ ನಾಗರಿಕ ಸಂಹಿತೆಯಲ್ಲಿ ಇರದಿದ್ದರೆ ಅವರ ಧಾರ್ಮಿಕ ಹಕ್ಕುಗಳನ್ನು ತಿರಸ್ಕರಿಸಿದಂತೆ ಅಲ್ಲವೇ ? ಅಂದರೆ ಮುಸ್ಲೀಂ ರ ಶರಿಯತ್ ಕಾನೂನು ಸಂಪೂರ್ಣ ಅಸ್ಥಿತ್ವವನ್ನು ಕಳೆದುಕೊಳ್ಳುತ್ತದೆ. ಅಂದರೆ ಧಾರ್ಮಿಕ ನಂಬಿಕೆಯನ್ನು ನಿರಾಕರಿಸುವ ಕಾನೂನು ಇದಾಗಲಿದೆ. ಜೊತೆಗೆ ಹಿಂದೂ ರಾಷ್ಘ್ರ ನಿರ್ಮಾಣದತ್ತ ಇಡುವ ಇನ್ನೊಂದು ಹೆಜ್ಜೆ ಆಗಲಿದೆ..
ಈಗಿನ ಸರ್ಕಾರದ ಚಿಂತನೆಯ ಪ್ರಕಾರ ಈ ದೇಶದಲ್ಲಿ ಒಂದೇ ಧರ್ಮ ಇರಬೇಕು. ದೇಶದ ಜನ ಒಂದೇ ಭಾಷೆಯನ್ನು ಜನ ಮಾತನಾಡಬೇಕು. ಒಂದೇ ಆಹಾರ ಪದ್ಧತಿ ಇರ ಬೇಕು. ಒಂದೇ ರೀತಿಯ ಬಟ್ಟೆಯನ್ನು ಧರಿಸಬೇಕು.. ಒಂದೇ ರೀತಿ ಮಾತನಾಡಬೇಕು.. ಅಂದರೆ ಬಹುತ್ವದ ನಾಶದ ಅಜೆಂಡಾದ ನಾಶ ಕೂಡ ಇದರ ಹಿಂದಿರುವ ಗುಪ್ತ ಅಜೆಂಡಾ ಆಗಿದೆ.
No comments:
Post a Comment