Tuesday, July 4, 2023

ಕರ್ನಾಟಕದಲ್ಲಿ ಅಜಿತ್ ಪವಾರ್ ಸೃಷ್ಟಿಗೆ ಯತ್ನ ನಡೆಸುತ್ತಿವೆಯೆ ಬಿಜೆಪಿ ಜೆಡಿಎಸ್ ? ಈಶ್ವರಪ್ಪ ಪ್ರಕಾರ ಮೂರು ತಿಂಗಳಲ್ಲಿ ಕರ್ನಾಟಕದ ಅಜಿತ್ ಪವಾರ್ ಪ್ರತ್ಯಕ್ಷ ! ಜನತಂತ್ರ ಮುಗಿಸಲು ಒಂದಾಯಿತೆ ಬಿಜೆಪಿ ಜೆಡಿಎಸ್ ?

 ಕರ್ನಾಟಕದ ರಾಜಕಾರಣ ರಂಗೇರುತ್ತಿದೆ.. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ತಾವೇನು ಎಂಬುದನ್ನು ಮನದಟ್ಟು ಮಾಡಿಕೊಡುತ್ತಿವೆ.. ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳ ಅನುಷ್ಠಾನವನ್ನು ಪ್ರಾರಂಭಿಸಿದೆ, ಶಕ್ತಿ ಯೋಜನೆ ಜಾರಿಗೆ ಬಂದಿದೆ. ಅನ್ನ ಭಾಗ್ಯಕ್ಕೆ ಪ್ರಾರಂಭಿಕ ತೊಡಕು. ಭಾರತ ಆಹಾರ ನಿಗಮ ಅಕ್ಕಿ ನೀಡಲು ನಿರಾಕರಿಸಿರುವದರಿಂದ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ..ಅಕ್ಕಿಯ ಬದಲು ಹಣ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ೪೦ ಪರ್ಸೆಂಟ್ ಕಮೀಷನ್ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಹಾಗೆ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆದೇಶಿಸಿದೆ..

ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಮೇಲೆ ದಾಳಿಯನ್ನು ಪ್ರಾರಂಭಿಸಿವೆ. ಬಿಜೆಪಿ ಸದನದ ಹೊರಗೆ ಗ್ಯಾರಂಟಿಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯಲ್ಲಿ ಯಡಿಯೂರಪ್ಪ ಕಟೀಲ್ ಮೊದಲಾದವರು ಪಾಲ್ಗೊಂಡಿದ್ದರು. ಸದನದ ಒಳಗೆ ಗ್ಯಾರಂಟಿ ದಿನದ ಕಲಾಪವನ್ನೆಲ್ಲ ನುಂಗಿಹಾಕಿತು.. ಬಿಜೆಪಿ ಸದಸ್ಯರು ಸದನದ ಸಭಾಧ್ಯಕ್ಷರ ಮುಂದಿನ ಸ್ಥಾನದಲ್ಲಿ ಧರಣಿ ನಡೆಸಿದರು. ಸಾಕಷ್ಟು ಮಾತಿನ ಚಕಮಕಿಯೂ ನಡೆಯಿತು. ಆದರೂ ಬಿಜೆಪಿಗೆ ತಮ್ಮ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಮಾಡುವುದು ಮಂಗಳವಾರವೂ ಸಾಧ್ಯವಾಗಲಿಲ್ಲ.. ಹೀಗಾಗಿ ಪ್ರತಿ ಪಕ್ಷದ ನಾಯಕರಿಲ್ಲದೇ ಬಿಜೆಪಿಯ ಎಲ್ಲ ಸದಸ್ಯರೂ ಪ್ರತಿ ಪಕ್ಷದ ನಾಯಕರಂತೆ ಕೆಲಸ ಮಾಡಿದರು..

ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ೩೦ ಲಕ್ಷದ ಲಂಚದ ಆರೋಪವನ್ನು ಪುನರುಚ್ಚರಿಸಿದರು. ಈ ಬಗ್ಗೆ ತನಿಖೆ ಮಾಡುವುದು ನಿಮಗೆ ಸಾಧ್ಯವೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಆದರೆ ಈ ಲೇಖನದಲ್ಲಿ ನಾನು ಪ್ರಮುಖವಾಗಿ ಪ್ರಸ್ತಾಪ ಮಾಡಲು ಹೊರಟಿರುವುದು ಬೇರೆ ವಿಚಾರ, ಇವತ್ತು ನಗರದ ಫ್ರೀಡಮ್ ಪಾರ್ಕ್ ನಲ್ಲಿ ಕೆ.ಎಸ್. ಈಶ್ವರಪ್ಪ ಆಡಿದ ಮಾತು. ಕರ್ನಾಟಕದಲ್ಲಿ ಅಜಿತ್ ಪವಾರ್ ಸಿದ್ದವಾಗುತ್ತಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಈ ಸರ್ಕಾರ ಬಿದ್ದು ಹೋಗುತ್ತದೆ. ಈಶ್ವರಪ್ಪ ಒಬ್ಬರೇ ಈ ಮಾತನ್ನು ಆಡಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ನಡೆಯುತ್ತಿತ್ತು. ಆದರೆ ನಿನ್ನೆ ಕುಮಾರಸ್ವಾಮಿಯವರು ಇದೇ ಅಜಿತ್ ಪವಾರ್ ಮಾತನಾಡಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ನ ಈ ಇಬ್ಬರೂ ನಾಯಕರು ಒಂದೇ ರೀತಿ ಮಾತನಾಡಿದ್ದು ಕಾಕತಾಣೀಯವೇ ಅಥವಾ ಎರಡೂ ಪಕ್ಷಗಳು ಒಂದಾಗಿ ನಡೆಸಲಿರುವ ಕಾರ್ಯಾಚರಣೆಯ ಮುನ್ಸೂಚನೆಯೆ ? ಇದು ಕಾಕತಾಳೀಯ ಎಂದು ನನಗೆ ಅನ್ನಿಸುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಕುರಿತು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಎರಡೂ ಪಕ್ಷಗಳ ವರ್ತನೆಯೂ ಇದೆ. ಇವತ್ತಿನ ಬೆಳವಣಿಗೆಯನ್ನೇ ಗಮನಿಸಿ. ಕುಮಾರಸ್ವಾಮಿ ಅವರು ಮಾಡಿದ ೩೦ ಲಕ್ಷ ರೂಪಾಯಿ ಲಂಚದ ಆರೋಪಕ್ಕೆ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯ ಯಡಿಯೂರಪ್ಪ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.. ಹಾಗೆ ತಾವು ಗ್ಯಾರಂಟಿ ಅನುಷ್ಟಾನಕ್ಕೆ ಸಂಬಂಧಿಸಿದ ಹೋರಾಟಕ್ಕೆ ಕುಮಾರಸ್ವಾಮಿ ಅವರ ಬೆಂಬಲವನ್ನು ಕೋರಿದರು. ಕುಮಾರಸ್ವಾಮಿ ಜೊತೆ ಸಮಾಲೋಚನೆ ನಡೆಸಿ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸುವ ಮಾತನ್ನೂ ಯಡಿಯೂರಪ್ಪ ಆಡಿದರು. ಇದರ ಅರ್ಥ ಏನು ? ನಾವು ಇನ್ನು ಮುಂದೆ ಜೊತೆಯಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದೇ ಅಲ್ಲವೆ ? ಹಾಗಿದ್ದರೆ ಕಾಂಗ್ರೆಸ್ ವಿರುದ್ಧದ ಜಂಟಿ ಹೋರಾಟ ಈಗಾಗಲೇ ಪ್ರಾರಂಭವಾಗಿದೆಯೆ ಎಂಬುದು ಈಗಿನ ಪ್ರಶ್ನೆ. ಹಾಗೆ ಕರ್ನಾಟಕದಲ್ಲಿ ಅಜಿತ್ ಪವಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈಶ್ವರಪ್ಪ ಮತ್ತು ಕುಮಾರಸ್ವಾಮಿ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದು ಜಂಟಿ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂಬ ಸೂಚನೆಯನ್ನೇ ನೀಡುತ್ತದೆ,

ಅಜಿತ್ ಪವಾರ್ ಯಾರಾಗುತ್ತಾರೆ ನೋಡಬೇಕು ಎಂದು ಕುಮಾರಸ್ವಾಮಿ ಹೇಳಿರುವುದು, ಮೂರು ತಿಂಗಳಲ್ಲಿ ಈ ಸರ್ಕಾರ ಬೀಳುತ್ತದೆ ಎಂದು ಈಶ್ವರಪ್ಪ ಹೇಳಿರುವ ಮಾತನ್ನು ಜೊತೆಗಿಟ್ಟು ನೋಡಿ. ಆಗ ಇನ್ನೂ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ,, ಕರ್ನಾನಟಕದಲ್ಲಿ ಮಹಾರಾಷ್ಟ್ರ ಮಾದರಿಯ ರಾಜಕೀಯ ವಿಪ್ಲವವನ್ನು ಉಂಟು ಮಾಡುವುದು ಈ ಎರಡೂ ಪಕ್ಷಗಳ ಉದ್ದೇಶ, ಈ ಯತ್ನ ಈಗಲೇ ಆರಂಭವಾಗಿದ್ದರೂ ಅದು ನಿಜವಾಗಲು ಎರಡೂ ತಿಂಗಳು ಬೇಕು ಎಂಬುದನ್ನು ಈ ಮಾತುಗಳು ಸೂಚಿಸುತ್ತವೆ

ಅಜಿತ್ ಪವಾರ್ ಗಾಗಿ ಕುಮಾರಸ್ವಾಮಿ ಮತ್ತು ಈಶ್ವರಪ್ಪ ಹುಡುಕುತ್ತಿದ್ದಾರೆ. ಅಂತಹ ವ್ಯಕ್ತಿ ಅವರಿಗೆ ಸಿಕ್ಕಿದ್ದಾರೋ ಇಲ್ಲವೋ ಅವರನ್ನು ಸಿದ್ದಪಡಿಸಲು ಕನಿಷ್ಠ ಮೂರು ತಿಂಗಳು ಬೇಕು ಎಂಬುದು ಈಶ್ವರಪ್ಪ ಅವರ ನಿರೀಕ್ಷೆಯಾಗಿದೆ. ಅಂದರೆ ಈ ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕದ ಅಜಿತ್ ಪವಾರ್ ರನ್ನು ಕೇಂದ್ರೀಯ ಎಜೆನ್ಸಿಗಳನ್ನು ಬಳಸಿ ಬಗ್ಗಿಸಬೇಕು. ಇದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಪ್ರಭಲ ನಾಯಕರೆಂದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾತ್ರ, ಡಿ ಕೆ ಶಿವಕುಮಾರ್ ಅವರ ಮೇಲೆ ಎಲ್ಲ ಅಸ್ತ್ರಗಳನ್ನು ಬಳಸಿದರೂ ಅವರು ಬಗ್ಗಲಿಲ್ಲ. ಅವರ ಕಾಂಗ್ರೆಸ್ ನಿಷ್ಟೆ ಪ್ರಶ್ನಾತೀತ. ಇನ್ನೂ ಬೇರೆ ಯಾರಿಗೂ ಅಜಿತ್ ಪವಾರ್ ಆಗುವ ಶಕ್ತಿ ಇಲ್ಲ.. 

ಆದರೂ ಬಿಜೆಪಿ ಮತ್ತು ಜೆಡಿಎಸ್ ಈ ಯತ್ನ ಬಿಡುವ ಸ್ಥಿತಿಯಲ್ಲೂ ಇಲ್ಲ.

ಕುಮಾರಸ್ವಾಮಿ ಮತ್ತು ಈಶ್ವರಪ್ಪ ಮಹಾರಾಷ್ಟ್ರ ಕಾರ್ಯಾಚರಣೆ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಹೇಳುವಾಗ ಸ್ವಲ್ಪವಾದರೂ ಲಜ್ಜೆಯನ್ನು ಪ್ರದರ್ಶಿಸಬೇಕಾಗಿತ್ತು.. ಮಹಾರಾಷ್ಟ್ರದಲ್ಲಿ ನಡೆದಿದ್ದು ಜನತಂತ್ರ ಕುಸಿಯುತ್ತಿರುವ ಲಕ್ಷಣ, ಜನಾದೇಶವನ್ನೂ ಹೇಗೆ ಬೇಕಾದರೂ ಬದಲಿಸಬಹುದು ಎಂಬ ದುರಹಂಕಾರ.. ಮತ ನೀಡಿದ ಸಾಮಾನ್ಯ ಮತದಾರಿಗೆ ಮಾಡುವ ದ್ರೋಹ..

ಇದನ್ನು ಕುಮಾರಸ್ವಾಮಿ ಅಪ್ರತ್ಯಕ್ಷವಾಗಿ ಬೆಂಬಲಿಸುತ್ತಿರುವ ಭಾರತದ ಕರ್ನಾಟಕ ರಾಜಕಾರಣದ ಅತಿ ದೊಡ್ಡ ದುರಂತ,, 


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...